ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯದ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಅನುಭವಿಸುತ್ತಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಉದ್ಯೋಗಕ್ಕಾಗಿ ಸಲ್ಲಿಸುವ ಪ್ರತಿ ಅರ್ಜಿಯ ಹಿಂದೆ ಒಂದು ಕನಸಿರುತ್ತದೆ, ಕುಟುಂಬದ ನಿರೀಕ್ಷೆ, ವರ್ಷಗಳ ಕಠಿಣ ಪರಿಶ್ರಮ ಮತ್ತು ನಾಡಿಗಾಗಿ ಸೇವೆ ಸಲ್ಲಿಸುವ ಆಕಾಂಕ್ಷೆ ಇರುತ್ತದೆ. ಯುವಜನರ ಆತಂಕ - ಅಹವಾಲುಗಳು ನನ್ನನ್ನು ತಲುಪಿದೆ. ಅವರ ಭವಿಷ್ಯ ನಮಗೂ ಅತ್ಯಂತ ಮಹತ್ವದ್ದಾಗಿದೆ.
ನಾವು ಅಧಿಕಾರಕ್ಕೆ ಬಂದಾಗ, 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ಇದು ಒಂದೆರೆಡು ದಿನಗಳಲ್ಲಿ ಸೃಷ್ಟಿಯಾದುದಲ್ಲ; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಕಾಲದಲ್ಲಿ ನೇಮಕಾತಿಗಳನ್ನು ಆರಂಭಿಸದಿರುವುದು ಮತ್ತು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯಾವುದೇ ಸೂಕ್ತ ಯೋಜನೆಯನ್ನು ರೂಪಿಸದಿರುವುದರಿಂದ ಇಷ್ಟು ದೊಡ್ಡ ಸಂಖ್ಯೆಯ ಸರ್ಕಾರಿ ಹುದ್ದೆಗಳು ಖಾಲಿಯಿದ್ದವು. ವಿರೋಧ ಪಕ್ಷದ ನಾಯಕರು ನಿರಪರಾಧಿ ವಿದ್ಯಾರ್ಥಿಗಳಿಗೆ ತಪ್ಪು ಮಾರ್ಗದರ್ಶನ ಮಾಡಿ ತಮ್ಮ ರಾಜಕೀಯ ಸ್ವಾರ್ಥದ ಈಡೇರಿಕೆಗಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ.
ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನರನ್ನು ಉಜ್ವಲ ಭವಿಷ್ಯದ ಕಡೆ ಯೋಚಿಸಲು ಪ್ರೇರೇಪಿಸುವ ಬದಲು, ಅವರ ಮೂಲಕ ಅಶಾಂತಿಯನ್ನು ಉಂಟುಮಾಡಲು ಹೊರಟಿರುವ ವಿಪಕ್ಷ ನಾಯಕರ ನಡೆ ಖಂಡನೀಯ.
ಇಂದಿನ ಈ ದುಸ್ಥಿತಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ 2019ರಿಂದ 2023ರವರೆಗಿನ ನೇಮಕಾತಿಯಲ್ಲಿ ನಡೆದ ಅಕ್ರಮಗಳು ಮತ್ತು ಭ್ರಷ್ಟಾಚಾರಗಳು ಕಾರಣ; ಇದು ಯುವಜನರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದು ಮಾತ್ರವಲ್ಲ, ದೊಡ್ಡ ಪ್ರಮಾಣದ ಖಾಲಿ ಹುದ್ದೆಗಳ ಸೃಷ್ಟಿಗೆ ಕಾರಣವಾಯಿತು. ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ಬದ್ಧವಾಗಿದೆ.
ಇದೇ ವೇಳೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿದ್ದ ಕಾರಣದಿಂದ ಹಲವು ನೇಮಕಾತಿ ಪ್ರಕ್ರಿಯೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಂವಿಧಾನದ ಪಾಲನೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾದ ಸರ್ಕಾರವಾಗಿ, ಸಾವಿರಾರು ಅಭ್ಯರ್ಥಿಗಳ ವೃತ್ತಿಜೀವನಕ್ಕೆ ಧಕ್ಕೆ ತರುವಂತಹ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳದೆ ಕಾನೂನಿನ ಚೌಕಟ್ಟಿನೊಳಗೆ ಜವಾಬ್ದಾರಿಯುತವಾಗಿ ವರ್ತಿಸಲು ನಾವು ನಿರ್ಧರಿಸಿದ್ದೇವೆ.
ಈ ರಚನಾತ್ಮಕ ಮತ್ತು ಕಾನೂನು ಅಡೆತಡೆಗಳ ಹೊರತಾಗಿಯೂ, ನಮ್ಮ ಸರ್ಕಾರವು ದೃಢಸಂಕಲ್ಪ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ನಡಸಲಾಗಿದೆ. ವರ್ಷಗಳ ಕಾಲ ಕಾಯಬೇಕಾದ ಅನೇಕ ಅಭ್ಯರ್ಥಿಗಳ ಕಷ್ಟವನ್ನು ನಾವು ಅರಿತಿದ್ದೇವೆ. ಈ ಕಷ್ಟವನ್ನು ಗುರುತಿಸಿ, ಮುಂಬರುವ ನೇಮಕಾತಿಗಳಿಗೆ ಗರಿಷ್ಠ ವಯೋಮಿತಿಯನ್ನು 5 ವರ್ಷ ಸಡಿಲಗೊಳಿಸಲಾಗಿದೆ; ಇದರಿಂದ ನೇಮಕಾತಿಯಲ್ಲಾದ ವಿಳಂಬದಿಂದ ಅರ್ಹ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗದಂತೆ ತಡೆಯಲಾಗಿದೆ.
ಉಳಿದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಪಾರದರ್ಶಕ, ವ್ಯವಸ್ಥಿತ ಮತ್ತು ಕಾಲಮಿತಿಯೊಳಗೆ ಇವೆಲ್ಲವನ್ನು ಭರ್ತಿ ಮಾಡಲಾಗುವುದು ಎಂಬ ವಾಗ್ದಾನ ನೀಡುತ್ತಿದ್ದೇನೆ. ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳ ನೇಮಕಾತಿಗಾಗಿ ಎಲ್ಲಾ ಅಗತ್ಯ ಆಡಳಿತಾತ್ಮಕ ಮತ್ತು ನೀತಿ ನಿರೂಪಣೆ ಮಾನದಂಡಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರೀ ಸಂಖ್ಯೆಯಲ್ಲಿ ಖಾಲಿ ಹುದ್ದೆಗಳು ಬಾಕಿ ಉಳಿಯದಂತೆ ತಡೆಯಲು ನೇಮಕಾತಿ ಸಂಸ್ಥೆಗಳನ್ನು ಬಲಪಡಿಸಲಾಗುತ್ತಿದೆ.
ಇದು ಕೇವಲ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಮಾತ್ರವಲ್ಲ; ಆಡಳಿತ ಯಂತ್ರದ ಸಾಮರ್ಥ್ಯವನ್ನು ಮರು ನಿರ್ಮಾಣ ಮಾಡುವುದು, ನೇಮಕಾತಿಯಲ್ಲಿ ನ್ಯಾಯವನ್ನು ಮರುಸ್ಥಾಪಿಸುವುದು ಮತ್ತು ಪ್ರತಿ ಅರ್ಹ ಅಭ್ಯರ್ಥಿಗೆ ಸಮುದಾಯ ಅಥವಾ ಪ್ರದೇಶದ ಬೇಧಭಾವವಿಲ್ಲದೆ ಸಮಾನ ಅವಕಾಶವನ್ನು ಖಚಿತಪಡಿಸುವುದಾಗಿದೆ.
ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನರಲ್ಲಿ ನನ್ನದೊಂದು ಮನವಿ; ನಿಮ್ಮ ಶಿಕ್ಷಣ, ಕೌಶಲ್ಯ ಮತ್ತು ಪೂರ್ವತಯಾರಿಯ ಮೇಲೆ ಆತ್ಮವಿಶ್ವಾಸ ಮತ್ತು ಭರವಸೆಯನ್ನಿಡಿ. ನಾಡಿನ ಯುವಜನರೇ ನಮ್ಮ ಭವಿಷ್ಯದ ವಾಸ್ತುಶಿಲ್ಪಿಗಳು. ನಮ್ಮ ಸರ್ಕಾರ ನಿಮ್ಮೊಂದಿಗೆ ದೃಢವಾಗಿ ನಿಂತಿದೆ, ಮುಂದೆಯೂ ನಿಲ್ಲಲಿದೆ. ಇದು ಬರೀ ಬಾಯಿಮಾತಲ್ಲ, ನಮ್ಮ ನಡೆಯಲ್ಲಿಯೂ ಇದನ್ನು ಪಾಲಿಸುತ್ತಿದ್ದೇವೆ.
ಸರ್ಕಾರಿ ಉದ್ಯೋಗ ಪಡೆಯಬೇಕು, ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಮತ್ತು ಸಮಾಜಕ್ಕಾಗಿ ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯ ಆಸೆ - ಆಕಾಂಕ್ಷೆಯನ್ನು ರಕ್ಷಿಸಿ, ಪ್ರತಿ ಅರ್ಹ ವ್ಯಕ್ತಿಗೆ ಸೂಕ್ತ ಉದ್ಯೋಗವನ್ನು ಖಚಿತಪಡಿಸಲು ನಾವು ಬದ್ಧರಿದ್ದೇವೆ.
👉ಯುವಕರು ಸರ್ಕಾರಿ
ಕೆಲಸಕ್ಕಾಗಿ ಬೀದಿಗಿಳಿದಿದ್ದಾರೆ
👉ಸರ್ಕಾರಿ ನೌಕರರು
ಸಂಬಳವಿಲ್ಲದೆ ಪರದಾಡುತ್ತಿದ್ದಾರೆ
👉ಬೆಂಬಲ ಬೆಲೆ, ಪರಿಹಾರ
ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ
👉ಬೆಲೆ ಏರಿಕೆಗೆ ಜನರು
ಬೇಸತ್ತಿದ್ದಾರೆ
ನಾಡಿನ ಜನತೆ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರೂ..
✅ಕಾಂಗ್ರೆಸ್ ಶಾಸಕರು
ಫಾರಿನ್ ಟೂರ್ಗೆ ತೆರಳಿದ್ದಾರೆ
✅ಅಧಿಕಾರಕ್ಕಾಗಿ ದೆಹಲಿ
ಯಾತ್ರೆ ಕೈಗೊಂಡಿದ್ದಾರೆ
✅ಕುರ್ಚಿಗಾಗಿ ಕಚ್ಚಾಟದಲ್ಲಿ
ಮುಳುಗಿದ್ದಾರೆ
ಜನವಿರೋಧಿ @INCKarnataka ಸರ್ಕಾರದ ಶಾಸಕರು ಕ್ಷೇತ್ರದ ಜನರ ಸಮಸ್ಯೆ ಕಡೆಗಣಿಸಿ ವಿದೇಶಿ ಪ್ರವಾಸಕ್ಕೆ ತೆರಳಿ ಮೋಜು, ಮಸ್ತಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ.
#CongressFailsKarnataka
ಸಾವಿರಾರು ಯುವಕರು... ನೇಮಕಾತಿ ಇಲ್ಲ..
ಯುವಜನರ ನಿರುದ್ಯೋಗ ಸಮಸ್ಯೆ ಆಲಿಸಲು ಸರ್ಕಾರಕ್ಕೆ ಕಣ್ಣು ಕಿವಿ ಇಲ್ಲ..
@INCKarnataka ಅಧಿಕಾರಕ್ಕೆ ಬಂದು ಕಳೆಯಿತು ಮೂರು ವರ್ಷ...
ನೀಡಿದ ಭರವಸೆಯಂತೆ ರಾಜ್ಯದ ಯುವಕರಿಗೆ ಕೊಡಲಿಲ್ಲ ನೇಮಕಾತಿ ಹರ್ಷ...
ಅತಂತ್ರ ಸ್ಥಿತಿಯಲ್ಲಿ ವಿದ್ಯಾವಂತ ಯುವಜನರ ಭವಿಷ್ಯ..
@BJP4Karnataka ..@JanataDal_S ..
ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಬಂಡಲ್ ಬಿಟ್ಟಿದ್ದ ಕಾಂಗ್ರೆಸ್ ನಾಯಕರು, ಈಗ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಹುದ್ದೆಗಳನ್ನು ಭರ್ತಿ ಮಾಡುವತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ.
ಉದ್ಯೋಗಾಕಾಂಕ್ಷಿಗಳು ತಮ್ಮ ಹಕ್ಕಿಗಾಗಿ ಫ್ರೀಡಂ ಪಾರ್ಕ್ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಮಾತ್ರ ಇವರನ್ನು ಮಾತನಾಡಿಸುವ ಗೋಜಿಗೂ ಹೋಗದಿರುವುದು ದುರಂತವೇ ಸರಿ.
ವಿವಿಧ ಸರ್ಕಾರಿ ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಬಾಕಿ ಇದ್ದರೂ ಸರ್ಕಾರ ಮಾತ್ರ ಸಿಎಂ ಕುರ್ಚಿ ಎಂಬ ʼಒಂದು ಹುದ್ದೆʼ ಯ ಸುತ್ತಲೂ ಗಿರಕಿ ಹೊಡೆಯುತ್ತಿದೆ.
#CongressFailsKarnataka
ಮಾನ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ನೇಮಕಾತಿ ಪ್ರಾರಂಭಿಸಲೇಬೇಕು.
1) PSI ಸಿವಿಲ್ 600 ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಿ.
2) Police Constable ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದಿರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಪ್ರಾರಂಭಿಸಿ.
3) KSRP, RSI, KSISF, Wireless & IB ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
4) SOCO ನೇಮಕಾತಿ ಪ್ರಾರಂಭಿಸಿ.
5) PSTR, GPSTR, HSTR ಕೂಡಲೇ ನೇಮಕಾತಿ ಪ್ರಾರಂಭಿಸಬೇಕು.
6) PU Lecturer & Assistant Professor ಕೂಡಲೇ ನೇಮಕಾತಿ ಪ್ರಾರಂಭಿಸಿ.
7) ದೈಹಿಕ ಶಿಕ್ಷಕರು & ಕಂಪ್ಯೂಟರ್ ಆಪರೇಟರ್ & ವಾರ್ಡನ್ ಕೂಡಲೇ ನೇಮಕಾತಿ ಪ್ರಾರಂಭಿಸಿ.
8) 384 KAS ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ.
9) 2000 FDA & 2000 SDA ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
10) EXCISE ಸಬ್ ಇನ್ಸ್ಪೆಕ್ಟರ್ 247 ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
11) EXCISE POLICE ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
12) SUB REGISTER ಮತ್ತು REVENUE ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
13) CTI & RTO ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
14) PDO, Grade 1 & Grade 2 FDA & SDA, VAO ಕೂಡಲೇ ನೇಮಕಾತಿ ಪ್ರಾರಂಭಿಸಲೇಬೇಕು.
15) OBC, SWD, Minority dept, DMO &Taluk Welfare Officerಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
16) Food & Civil Supply ಇಲಾಖೆಯ Food Inspector ಹೊಸ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಲೇಬೇಕು.
17) Land Surveyor, AO & AAO ಹುದ್ದೆಗಳನ್ನು ಕೂಡಲೇ KEA ಮೂಲಕ ನೇಮಕಾತಿ ಪ್ರಾರಂಭಿಸಲೇಬೇಕು.
18) ACF, RFO, ಮತ್ತು DRFO ಕೊಡಲೇ ನೇಮಕಾತಿ ಪ್ರಾರಂಭಿಸಬೇಕು.
19) ಭ್ರಷ್ಟಾಚಾರ ಮುಕ್ತ ನೇಮಕಾತಿ ನಡೆಸಬೇಕು.
20) ಪ್ರತಿ ವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳು ಕಡ್ಡಾಯವಾಗಿ ಆಗಬೇಕು.
21) UPSC ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು.
22) ಪೊಲೀಸ್ ಕಾನ್ಸ್ಟೇಬಲ್ ವಯೋಮಿತಿಯನ್ನು (SC/ST/OBC 33 ವರ್ಷ, GM ಗೆ 30 ವರ್ಷ) ಖಾಯಂಗೊಳಿಸಬೇಕೆಂದು ವಿನಂತಿ.
23) AC SAAD ಮುಖ್ಯ ಪರೀಕ್ಷೆಯ ಫಲಿತಾಂಶ ಬಿಟ್ಟು ಕೂಡಲೇ ನೇಮಕಾತಿಯನ್ನು ಪೂರ್ಣಗೊಳಿಸಬೇಕೆಂದು ವಿನಂತಿ.
24) 1200 Staff Nurse ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ (ರಿ)ದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಬೆಂಗಳೂರಿನ ನಮ್ಮ ಕಛೇರಿಗೆ ಬೇಟಿ ನೀಡಿ ವಿಧ್ಯಾರ್ಥಿಗಳ ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ತಿಗಳ ವಿಚಾರವಾಗಿ ಮನವಿ ಸಲ್ಲಿಸಿದರು.
ಪರೀಕ್ಷಾ ವೇಳಾಪಟ್ಟಿಯನ್ನು ನಿಗದಿ ಮಾಡುವಾಗ ಇತರೆ ಪರೀಕ್ಷಾ ಪ್ರಾಧಿಕಾರ, ಸಕ್ಷಮ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ ನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ಪರೀಕ್ಷಾ ಪ್ರಾಧಿಕಾರಗಳಿಗೆ ಹಲವು ಬಾರಿ ಆಗ್ರಹಿಸಿದ್ದೇನೆ. ಸದನದಲ್ಲೂ ಇದರ ಬಗ್ಗೆ ಚರ್ಚೆಯಾಗಿದೆ. ಇಷ್ಟೆಲ್ಲಾ ಮನವಿ ಮಾಡಿದರೂ ಸಹ ಸರ್ಕಾರ ಪರೀಕ್ಷಾರ್ಥಿ ವಿರೋಧಿ ಧೋರಣೆಯನ್ನು ಮುಂದುವರೆಸಿದೆ.
ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜನವರಿ 10 ಮತ್ತು 11 ರಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಯಾಗಿದೆ. ಎರಡೂ ಪರೀಕ್ಷೆಗಳಿಗೆ ಅರ್ಜಿ ಹಾಕಿದ ಪರೀಕ್ಷಾರ್ಥಿಗಳಿಗೆ ಯಾವುದಾದರೂ ಒಂದು ಪರೀಕ್ಷೆ ಬಿಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಲಕ್ಷ, ಲಕ್ಷ ಸಂಬಳ ತೆಗೆದುಕೊಳ್ಳುವ ಅಧಿಕಾರಿಗಳಿಗೆ ಒಂದು ಪರೀಕ್ಷೆಯನ್ನು ನಿಗದಿ ಮಾಡಲು ಬರದೇ ಇರುವುದು ಆಡಳಿತದ ದೊಡ್ಡ ವೈಫಲ್ಯ. ಇವರ incompetence ಇಂದ ತಿಂಗಳುಗಟ್ಟಲೆಯಿಂದ ಪರೀಕ್ಷೆಗೆ ತಯಾರಾದ ಪರೀಕ್ಷಾರ್ಥಿಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಹಾಗೆಯೇ, ಅಧಿಕಾರಿಗಳು ಬೇಕಾ ಬಿತ್ತಿ ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳದೇ, ಪರೀಕ್ಷಾರ್ಥಿಗಳು ಅನುಭವಿಸುತ್ತಿರುವ ಪಾಡಿಗೂ ನಮಗೂ ಸಂಬಂಧವಿಲ್ಲ ಎಂದು ಸುಮ್ಮನೆ ಕೂತಿರುವ ಸರ್ಕಾರದ ನಿಲುವು ಖಂಡನೀಯ.
ಸರ್ಕಾರ ಕೂಡಲೇ ವೇಳಾಪಟ್ಟಿಯನ್ನು ಬದಲಿಸಿ ಎರಡೂ ಪರೀಕ್ಷೆಗೆ ಕಟ್ಟಿರುವ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ವಹಿಸಲಿ.
@AKSSAofficial I @prajavani I
ಮಾನ್ಯ CM @siddaramaiah ರವರೆ& @KpscSecretary,ಮಾನ್ಯ HC ಮಾಧ್ಯಂತರ ಆದೇಶ ನೀಡಿದೆ,ಅಂತಿಮ ತೀರ್ಪುಲ್ಲ,i openly challenge to KPSC exam control board,we ll defeat KPSC in court hall n we ll prove,QP ನಲ್ಲಿ min 12 Q ಪ್ರಶ್ನೆಗಳೆ ಸಂರ್ಪೂಣ ತಪ್ಪಾಗಿವೆ.@Nishkama_Karma1 @BJP4Karnataka@INCKarnataka
ನೇಮಕಾತಿ ಆರಂಭಿಸದ ಭ್ರಷ್ಟ @INCKarnataka ಸರ್ಕಾರದ ನಡೆಗೆ ಬೇಸತ್ತಿರುವ ಉದ್ಯೋಗಾಕಾಂಕ್ಷಿಗಳು
➡️ ಆತ್ಮಹತ್ಯೆಗೆ
ಶರಣಾಗುತ್ತಿದ್ದಾರೆ
➡️ ರೈಲು ಹಳಿಗೆ
ಬೀಳುತ್ತಿದ್ದಾರೆ
➡️ ಬದುಕುವ ಭರವಸೆ
ಕಳೆದುಕೊಂಡಿದ್ದಾರೆ
❎ಸಿಎಂ @siddaramaiah ನವರಿಂದ
❌ ಯುವಕರ ಸಮಸ್ಯೆಗೆ
ಸ್ಪಂದನೆ ಇಲ್ಲ
❌ ನೇಮಕಾತಿ ಆರಂಭಿಸುವ
ಭರವಸೆ ಇಲ್ಲ
ನಾಡಿನ ಉದ್ಯೋಗಾಕಾಂಕ್ಷಿಗಳ ಸರ್ಕಾರಿ ಕೆಲಸದ ಕನಸಿನ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರವಿರಲಿ.
#CongressFailsKarnataka
ಉದ್ಯೋಗಕ್ಕಾಗಿ ನಿರಂತರವಾಗಿ ಕಾಯುತ್ತಾ ಅನೇಕ ಯುವಕರು / ಯುವತಿಯರು ಆತ್ಮಹತ್ಯೆಗೆ ಶರಣಾದರೂ, ಅವರ ಸಾವಿಗೂ ನ್ಯಾಯ ಸಿಗದಂತಹ ಭಯಾನಕ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ.
ಉದ್ಯೋಗಾಕಾಂಕ್ಷಿಗಳು ಪ್ರತಿಭಟಿಸುವ ಹಕ್ಕನ್ನೇ ಕಳೆದುಕೊಂಡು ನ್ಯಾಯಾಲಯಗಳ ಅಂಗಲಾಚುವ ಸ್ಥಿತಿಯಲ್ಲಿ ಇದ್ದಾಗಲೂ, ರಾಜ್ಯದಲ್ಲಿ ವಿರೋಧ ಪಕ್ಷ ನಿರ್ಲಕ್ಷ್ಯದಿಂದ ಸುಮ್ಮನೆ ನಿದ್ರಿಸಿದೆ.
ಈ ಸಾವುಗಳಿಗೆ ನ್ಯಾಯವೇ ಇಲ್ಲವೇ?
@AKSSAofficial