ಕರ್ನಾಟಕ ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯಲ್ಲಿ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರನ್ನು ಸರ್ಕಾರಿ ಉದ್ಯೋಗಗಳಿಂದ ದೂರವಿಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಪರಭಾಷಾ ಐಎಎಸ್ ಲಾಬಿ ಇರುವುದು ಸ್ಪಷ್ಟ. ಸರ್ಕಾರ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ಇಲ್ಲವಾದಲ್ಲಿ ಇಂಥ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಬೇಕಾಗುತ್ತದೆ.
ಕನ್ನಡವೇ ಕರ್ನಾಟಕ ಸರ್ಕಾರದ ಆಡಳಿತ ಭಾಷೆ. ಸರ್ಕಾರದ ಕಚೇರಿಗಳಲ್ಲಿ ಆಡಳಿತ, ಕಡತ ವಿಲೇವಾರಿ, ಪತ್ರ ವ್ಯವಹಾರ ಹಾಗೂ ಸಾರ್ವಜನಿಕ ಸೇವೆಗಳು ಕನ್ನಡದಲ್ಲೇ ನಡೆಯಬೇಕೆಂಬುದು ಸರ್ಕಾರದ ನೀತಿಯಾಗಿದೆ. ಹೀಗಿರುವಾಗ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡುವಾಗ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಅಗತ್ಯವಾದರೂ ಏನು? ಐ ಎಎಸ್ ಬಾಬುಗಳಿಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರಲ್ಲವೇ?
ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಪಡೆಯಬೇಕಾದ ಕನ್ನಡಿಗನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮ. ಇದು ಗ್ರಾಮೀಣ ಪ್ರದೇಶದ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಜನರು ಹಾಗೂ ಇಂಗ್ಲಿಷ್ ಶಿಕ್ಷಣದ ಅವಕಾಶ ಸಿಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸರ್ಕಾರದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಸರ್ಕಾರಿ ಸೇವೆಗೆ ಅಗತ್ಯವಿರುವ ಭಾಷಾ ಜ್ಞಾನ ಕನ್ನಡವಾಗಿರಬೇಕು. ಯಾವುದೇ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಇಂಗ್ಲಿಷ್ನಲ್ಲಿರುವ ಮಾಹಿತಿಯ ಅಗತ್ಯವಿದ್ದರೆ, ಸರ್ಕಾರದಲ್ಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುವಾದ ಇಲಾಖೆಯ ಮೂಲಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಲು ಅವಕಾಶವಿದೆ. ಅನುವಾದ ವ್ಯವಸ್ಥೆ ಇರುವಾಗ ಸರ್ಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವುದು ಅರ್ಥಹೀನ.
ಕರ್ನಾಟಕ ಸರ್ಕಾರವು ಒಂದು ಕಡೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ, ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವುದು ದ್ವಂದ್ವ ನೀತಿಯಾಗಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸರ್ಕಾರದ ಘೋಷಣೆ ಕೇವಲ ಕಡತಗಳಿಗೆ ಸೀಮಿತವಾಗದೆ, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು.
ಕನ್ನಡಿಗರಿಗೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಯ ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಕೇವಲ ಇಂಗ್ಲಿಷ್ ಜ್ಞಾನದ ಕೊರತೆಯ ಕಾರಣಕ್ಕೆ ತಿರಸ್ಕರಿಸುವ ಯಾವುದೇ ನಿಯಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಒಪ್ಪುವುದಿಲ್ಲ.
ಆದ್ದರಿಂದ ಮುಖ್ಯಮಂತ್ರಿ @DKShivakumar ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ನೇಮಕಾತಿ ಪರೀಕ್ಷೆಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಸಬೇಕು. ಸರ್ಕಾರಿ ಉದ್ಯೋಗಗಳಿಗೆ ಅನಗತ್ಯವಾಗಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೈಬಿಟ್ಟು, ಕನ್ನಡಕ್ಕೆ ಸೂಕ್ತ ಮತ್ತು ನ್ಯಾಯಯುತ ಸ್ಥಾನಮಾನ ಕಲ್ಪಿಸಬೇಕು.
ಮಾನ್ಯ CM ಅವರೇ ಕನ್ನಡಕ್ಕೆ ಮೊದಲ ಆದ್ಯತೆ ಅಂತ ಕೇವಲ ಕಾಯ್ದೆ ಮಾಡಿ ಉಪಯೋಗ ಇಲ್ಲ ಅದನ್ನು ಸ್ಪರ್ಧಾತ್ಮಕ ಪರೀಕ್ಷೆ ಅಲ್ಲಿ ಜಾರಿಗೆ ತನ್ನಿ ಕನ್ನಡಕ್ಕೆ 60 ಅಂಕಗಳು,ಕಂಪ್ಯೂಟರ್&ಇಂಗ್ಲಿಷ್ ಗೆ 20 ಅಂಕಗಳು ನಿಗದಿ ಮಾಡಿ,ಎಲ್ಲಾ ರಾಜ್ಯದಲ್ಲಿ ಆಯಾ ಮಾತೃಭಾಷೆಗಳಿಗೆ ಹೆಚ್ಚಿನ ಆದ್ಯತೆ ಇರುವಾಗ ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಯಾಕೆ ಆದ್ಯತೆ ಇಲ್ಲ.
ನನ್ನ ವಿರುದ್ಧ ದಾಖಲಾಗಿರುವ FIR ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೂಲ್ಯವಾದ ಕಾನೂನು ಸಹಾಯ, ಮಾರ್ಗದರ್ಶನ ಮತ್ತು ಬೆಂಬಲ ನೀಡಿದ ಗೌರವಾನ್ವಿತ ವಕೀಲ @Girishbdwj ಸರ್ ಹಾಗೂ ವಿವೇಕ್ ಸರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಪ್ರಕರಣದ ಪ್ರತಿಯೊಂದು ಹಂತದಲ್ಲೂ ನಿಮ್ಮ ಪ್ರಯತ್ನ ಮತ್ತು ಮಾರ್ಗದರ್ಶನ ನನಗೆ ಬಹಳ ಧೈರ್ಯ ನೀಡಿದೆ. ಮಾನ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಮಹತ್ವದ ಕಾನೂನು ಪರಿಹಾರ ದೊರೆತಿದೆ. ವಿದ್ಯಾರ್ಥಿ ಸಮುದಾಯದ ಪರವಾಗಿ ಸದಾ ಬೆಂಬಲವಾಗಿ ನಿಂತಿರುವ ನಿಮ್ಮ ಬದ್ಧತೆ ಮತ್ತು ಸಹಕಾರಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
Sincere gratitude to Advocate @Girishbdwj sir and Vivek sirfor their support and assistance in connection with the FIRs against me. I’m grateful for their efforts and guidance throughout the proceedings. The stay granted by the Hon’ble High Court has provided significant relief. Thank you for your support and commitment to the student community.
BJP, JDs ಮಾಡಬೇಕಾದ ಕೆಲಸ @AKSSAofficial@kanthakumarr ಮಾಡುತ್ತಿದ್ದಾರೆ.
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಸ್ಥಾಪಿಸಲು
ಕನ್ನಡಿಗರು ಬೆಂಬಲ ನೀಡಬೇಕು!
ಪ್ರತಿಭಟನೆಯ ದನಿಯನ್ನೇ ಅಡಗಿಸುವ ಕಾಂಗ್ರೆಸ್ ಸರ್ಕಾರದ 'ಹಿಟ್ಲರ್' ಆಡಳಿತ!
ದೆಹಲಿಯಲ್ಲಿ ಕುಳಿತು ಪ್ರಜಾಪ್ರಭುತ್ವದ ಬಗ್ಗೆ, ಸಂವಿಧಾನದ ಬಗ್ಗೆ, 'Gen Z' ಯುವಕರ ಹಕ್ಕಿನ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ @RahulGandhi ಅವರೇ, ಒಮ್ಮೆ ಕರ್ನಾಟಕದ ನಿಮ್ಮದೇ ಸರ್ಕಾರದ ಈ ಸರ್ವಾಧಿಕಾರಿ ಆಡಳಿತವನ್ನು ನೋಡಿ!
❌ಬೆಳಗ್ಗೆಯಿಂದಲೇ ಲಾಠಿ ಹಿಡಿದು ನಿಂತ ಪೊಲೀಸರು: ತಮ್ಮ ಭವಿಷ್ಯಕ್ಕಾಗಿ, ಸಿವಿಲ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯ ಅಕ್ರಮದ ವಿರುದ್ಧ ಧ್ವನಿ ಎತ್ತಲು ಬಂದ ವಿದ್ಯಾರ್ಥಿಗಳನ್ನೇ ಅಪರಾಧಿಗಳಂತೆ ಬಂದು ಬಂಧಿಸಿರುವುದು ಯಾವ ಸೀಮೆ ನ್ಯಾಯ?
❌ಪ್ರತಿಭಟನೆಗೂ ಮುನ್ನವೇ ಬಂಧನ: ನ್ಯಾಯಕ್ಕಾಗಿ ಹೋರಾಡಲು ಬರುವ ವಿದ್ಯಾರ್ಥಿಗಳನ್ನು, ಹೋರಾಟಗಾರರನ್ನು ಪ್ರತಿಭಟನಾ ಸ್ಥಳಕ್ಕೂ ಬರದಂತೆ ತಡೆದು, ಬಲವಂತವಾಗಿ ಎಳೆದುಕೊಂಡು ಹೋಗುವುದು ನಿಮ್ಮ 'ಪ್ರಜಾಪ್ರಭುತ್ವ'ವೇ?
ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದು ನಾಟಕ ಮಾಡುವ ನಿಮಗೆ, ಯುವಕರ ಕೂಗು ಕೇಳಿಸುವುದಿಲ್ಲವೇ? ನೇಮಕಾತಿ ಅಕ್ರಮದ ಬಗ್ಗೆ ಪ್ರಶ್ನಿಸಿದರೆ ಉತ್ತರ ನೀಡುವ ಬದಲು, ಹೋರಾಟಗಾರರನ್ನು ಜೈಲಿಗೆ ತಳ್ಳುವ ಈ ಹೇಡಿತನದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಸಿಎಂ @DKShivakumar ಅವರೇ,
ನೀವು ಯುವಕರ ಧ್ವನಿಯನ್ನ ಎಷ್ಟು ದಮನ ಮಾಡಿದರೂ ಸತ್ಯವನ್ನು ಅಡಗಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ನೀವು ನಿಮ್ಮ ಸರ್ವಾಧಿಕಾರಿ ಮುಖವಾಡವನ್ನು ಅನಾವರಣಗೊಳಿಸಿದ್ದೀರಿ. ತಕ್ಷಣವೇ ಬಂಧಿತ ಹೋರಾಟಗಾರರನ್ನು ಬಿಡುಗಡೆ ಮಾಡಿ, ಯುವಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಎದುರಿಸಬೇಕಾದೀತು!
#CongressFailsKarnataka
#CivilPoliceRecruitment:
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಆಗಸ್ಟ್ 2ರಂದು ನಡೆಸಿದ್ದ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು #KEA ಪ್ರಕಟಿಸಿದೆ.
ಅಭ್ಯರ್ಥಿಗಳು ಪಡೆದ ಅಂಕಗಳನ್ನು ಪ್ರಕಟಿಸಲಾಗಿದೆ.
ಈ ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳು ಏನಾದರು ಇದ್ದರೆ ಆಗಸ್ಟ್ 17ರಂದು ಮಧ್ಯಾಹ್ನ 12.30ರೊಳಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೂಲಕ ಸಲ್ಲಿಸಬಹುದು.
ಆಕ್ಷೇಪಣೆ ಸಲ್ಲಿಸಲು ಲಿಂಕ್:
https://t.co/STecjHaLq4
-ಹೆಚ್.ಪ್ರಸನ್ನ ಐಎಎಸ್
ಕಾರ್ಯನಿರ್ವಾಹಕ ನಿರ್ದೇಶಕರು
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಸನ್ಮಾನ್ಯ @PriyankKharge SOCO ಹುದ್ದೆಗಳ ನೇಮಕಾತಿಯಲ್ಲಿ https://t.co/aaeVr8ww3l ವಿಜ್ಞಾನ ಪದವೀಧರರಿಗೂ ಅವಕಾಶ ಕಲ್ಪಿಸಬೇಕೆಂದು ಸಾವಿರಾರು ವಿದ್ಯಾರ್ಥಿಗಳ ಮನವಿ
ಮುಂಬರುವ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (SOCO) ಹುದ್ದೆಗಳ ನೇರ ನೇಮಕಾತಿಯಲ್ಲಿ https://t.co/aaeVr8ww3l ವಿಜ್ಞಾನ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು
https://t.co/aaeVr8ww3l ಪದವಿಯಲ್ಲಿ Chemistry, Biotechnology, Zoology, Biochemistry ಸೇರಿದಂತೆ ವಿವಿಧ ವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿರುವುದರಿಂದ, ಅಪರಾಧ ಸ್ಥಳದಿಂದ ಸಂಗ್ರಹಿಸುವ ಭೌತಿಕ ಹಾಗೂ ಜೈವಿಕ ಸಾಕ್ಷ್ಯಗಳ ಪರಿಶೀಲನೆಗೆ ಅಗತ್ಯವಾದ ಮೂಲಭೂತ ವೈಜ್ಞಾನಿಕ ಜ್ಞಾನವನ್ನು ನಾವು ಹೊಂದಿದ್ದೇವೆ.
ಈ ಹಿಂದೆ Finger Print PSI ಸೇರಿದಂತೆ ವಿವಿಧ ಹುದ್ದೆಗಳಲ್ಲಿ ವಿಜ್ಞಾನ ಪದವೀಧರರಿಗೆ ಅವಕಾಶ ನೀಡಲಾಗಿದೆ. ಆದ್ದರಿಂದ ಸಮಾನ ಅವಕಾಶದ ತತ್ವದಡಿ https://t.co/aaeVr8ww3l ವಿಜ್ಞಾನ ಪದವೀಧರರನ್ನೂ SOCO ನೇಮಕಾತಿಗೆ ಪರಿಗಣಿಸಬೇಕು. ಅಗತ್ಯವಿದ್ದಲ್ಲಿ ನೇಮಕಾತಿಯ ನಂತರ Forensic Science Diploma/ತರಬೇತಿ ಪಡೆಯಲು ಅವಕಾಶ ನೀಡಬಹುದು.
ಸಾವಿರಾರು ವಿಜ್ಞಾನ ಪದವೀಧರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಮನವಿಯನ್ನು ಸನ್ಮಾನ್ಯ ಗೃಹ ಸಚಿವರರಾದ @PriyankKharge ಅವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಮ್ರವಾಗಿ ಮನವಿ ಮಾಡುತ್ತೇವೆ.
@DKShivakumar@INCKarnataka@suryamukundaraj@SANDEEPRAI@BJP4Karnataka@vinaygb
@INCKarnataka ಸರ್ಕಾರಕ್ಕೆ ವಿದ್ಯಾರ್ಥಿಗಳ ಗಡುವು!
ಸರ್ಕಾರವೇ ಘೋಷಿಸಿರುವಂತೆ ಇನ್ನೂ 15 ದಿನಗಳೊಳಗಾಗಿ 72,000 ಹುದ್ದೆಗಳಿಗೂ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಬೃಹತ್ ಹೋರಾಟಕ್ಕೆ #KSVS ಶತಸಿದ್ಧ!
ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಜನರ ಭವಿಷ್ಯದೊಂದಿಗೆ ಇನ್ನೆಷ್ಟು ದಿನ ಆಟವಾಡುತ್ತೀರಿ?
📢 ಎಲ್ಲಾ 72,000 ಹುದ್ದೆಗಳ ನೇಮಕಾತಿ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ, ಯಾವುದೇ ವಿಳಂಬವಿಲ್ಲದೆ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಸರ್ಕಾರವನ್ನು ಆಗ್ರಹಿಸುತ್ತದೆ.
ಒಂದು ವಿಷಯ ಸರ್ಕಾರದ ಗಮನದಲ್ಲಿರಲಿ...
ದೇಶಾದ್ಯಂತ ವಿದ್ಯಾರ್ಥಿ ಹೋರಾಟದ ಕಿಚ್ಚು ಹಬ್ಬಿಸಿದವರು ಕರ್ನಾಟಕದ ವಿದ್ಯಾರ್ಥಿಗಳು! 🔥
ವಿದ್ಯಾರ್ಥಿಗಳ ತಾಳ್ಮೆಯನ್ನು ಪರೀಕ್ಷಿಸಬೇಡಿ.
ನೇಮಕಾತಿ ನೀಡಿ — ಇಲ್ಲವಾದರೆ ಹೋರಾಟ ಎದುರಿಸಿ!
✊ ವಿದ್ಯಾರ್ಥಿಗಳ ಹಕ್ಕಿಗಾಗಿ KSVS ಸದಾ ಮುಂಚೂಣಿಯಲ್ಲಿ!
@vinaygb@hd_kumaraswamy@sandeeprai@DKShivakumar
#KSVS #72KRecruitment #StudentsProtest #KarnatakaJobs #Recruitment #YouthPower
ಇಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನನ್ನನ್ನು ಭೇಟಿಯಾಗಿ, ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ತಮ್ಮ ಮನವಿಯನ್ನು ಸಲ್ಲಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಲಾದ ನಿಯಮಗಳ ತಿದ್ದುಪಡಿಯಿಂದಾಗಿಯೇ ಇಂದು ಕೃಷಿ ಪದವೀಧರರಿಗೆ ಈ ಸಮಸ್ಯೆ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳ ಅಳಲು ಹಾಗೂ ಭವಿಷ್ಯದ ಆತಂಕದ ಮಾತುಗಳನ್ನು ಆಲಿಸಿದ್ದೇನೆ. ಕೃಷಿ ಪದವೀಧರರ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗದಂತೆ, ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಹಾಗೂ ಸಕಾರಾತ್ಮಕವಾಗಿ ಆದಷ್ಟು ಬೇಗ ಬಗೆಹರಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿಎಂ @DKShivakumar ಅವರೇ, ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಮೇಲೆ ಸುಖಾಸುಮ್ಮನೆ ಆರೋಪ ಮಾಡಬೇಡಿ.
ಅಧಿಕಾರದಲ್ಲಿರುವುದು ನಿಮ್ಮದೇ ಕಾಂಗ್ರೆಸ್ ಸರ್ಕಾರ, ಆದೇಶ ಹೊರಡಿಸಿದ್ದು ನೀವೇ.. ಆದರೂ ಪ್ರತಿಯೊಂದಕ್ಕೂ ಹಳೆಯ ಸರ್ಕಾರವನ್ನು ಆರೋಪಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವುದು ನಿಮ್ಮ ಆಡಳಿತಾತ್ಮಕ ದಿವಾಳಿತನಕ್ಕೆ ಸಾಕ್ಷಿ.
ದಿನಾಂಕ 30.05.2026 ರಂದು ಹೊರಡಿಸಲಾದ ಮೂಲ ನೇಮಕಾತಿ ಅಧಿಸೂಚನೆಯಲ್ಲಿ ಎಲ್ಲಿಯೂ ನಿಮ್ಮ ಸರ್ಕಾರ B.E. Biotechnology ಕೋರ್ಸ್ ಕುರಿತಾಗಲಿ ಅಥವಾ Rai Technology University ಪಾಲ್ಗೊಳ್ಳುವಿಕೆಯ ಕುರಿತಾಗಲಿ ಯಾವುದೇ ಉಲ್ಲೇಖ ಮಾಡಿರಲಿಲ್ಲ. ಆದರೆ, ತದನಂತರ ಅಂದರೆ 01.06.2026 ರಂದು Rai Technology Universityಯನ್ನು ಸೇರ್ಪಡೆಗೊಳಿಸಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ 20.06.2026 ರಂದು B.E. Biotechnology ಕೋರ್ಸ್ಗೂ ಅವಕಾಶ ಕಲ್ಪಿಸಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಈಗ ನಿಮ್ಮ ಆಡಳಿತಾತ್ಮಕ ಲೋಪ ಬಯಲಾಗುತ್ತಿದ್ದಂತೆ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಿಜೆಪಿ ಕಡೆಗೆ ಬೆರಳು ತೋರಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಿಮಗೆ ನಿಜವಾಗಿಯೂ ಯುವಜನರ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ, ಈ ರಾಜಕೀಯ ನಾಟಕವನ್ನು ನಿಲ್ಲಿಸಿ. ಕಳೆದ 20 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವ ಕೃಷಿ ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಿ, ಅವರಿಗೆ ತಕ್ಷಣವೇ ನ್ಯಾಯ ಒದಗಿಸಿ.
#DKExpose
#CongressLies
#CongressFailsKarnataka
ಮಾನ್ಯರೇ... @KEA_karnataka , ಇತ್ತ ಗಮನಿಸಿ.
#KREIS ಅರ್ಜಿ ಸಲ್ಲಿಸುವಾಗ ಈ ತರ ಬ್ಲಾಂಕ್ ಪೇಜ್ ಬರ್ತಿದೆ. ದಯವಿಟ್ಟು ಇದನ್ನ ಸರಿಪಡಿಸಿ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ತೊಂದರೆಯಾಗುತ್ತಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/08/2026 ಇದೆ. ಈ ತರ ತೊಂದರೆ ಆದರೆ ಕಷ್ಟ ಆಗುತ್ತದೆ.
@CMofKarnataka#KEA
ಹಾಸನದಲ್ಲೂ ಎಡವಟ್ಟು... ನೇಮಕಾತಿ ಪರೀಕ್ಷೆಯ ಅವ್ಯವಸ್ಥೆಗೆ ಮತ್ತೊಂದು ಸಾಕ್ಷಿ!
ವಿಜಯಪುರ, ಹಾವೇರಿ ಬಳಿಕ ಇದೀಗ ಹಾಸನದಲ್ಲೂ OMR ಶೀಟ್ ಮತ್ತು ಪ್ರಶ್ನೆಪತ್ರಿಕೆ ಬದಲಾವಣೆ ಕುರಿತು ಗಂಭೀರ ಗೊಂದಲ ನಡೆದಿದೆ ಎಂಬುದನ್ನು ಮಾಧ್ಯಮಗಳು ಸಾಕ್ಷಿ ಸಮೇತ ವರದಿ ಮಾಡುತ್ತಿವೆ.
ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿರುವ ಈ ಅವ್ಯವಸ್ಥೆಗಳ ನಡುವೆಯೂ ಗೃಹ ಸಚಿವರು ಕಣ್ಮುಚ್ಚಿ ಕುಳಿತಿರುವುದು ಅತ್ಯಂತ ಖಂಡನೀಯ.
ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವ ಈ ಸಂಪೂರ್ಣ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಶ್ರೀ @PriyankKharge ಅವರು ತಕ್ಷಣ ರಾಜೀನಾಮೆ ನೀಡಬೇಕು.
ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರೇ ಯುವಕರಿಗೆ ನ್ಯಾಯ ದೊರಕಿಸಿಕೊಡಿ. ರಾಜ್ಯ ಸರ್ಕಾರ ಕೂಡಲೇ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
#JusticeForAspirants #CongressFailsKarnataka
@BJP4Karnataka
ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ - ಪಾರದರ್ಶಕತೆಯೇ ನಮ್ಮ ಬದ್ಧತೆ.
ವಿದ್ಯಾರ್ಥಿಗಳ ಭವಿಷ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ, ಈ ಬಾರಿಯ ಪರೀಕ್ಷಾ ಆಯೋಜನೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಮರೋಪಾದಿಯಲ್ಲಿ ಸಿದ್ದತೆ ನಡೆಸಿದೆ.
ಪರೀಕ್ಷಾ ಕೇಂದ್ರಕ್ಕೆ ತರಬಹುದಾದ ಹಾಗೂ ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್ ನಲ್ಲಿ ವಿವರವಾಗಿ ನೀಡಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಿಲು ಕೋರಿದೆ.
ಧಾರ್ಮಿಕ ಉಡುಪು ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸುವವರು, ಪರೀಕ್ಷೆ ಆರಂಭಕ್ಕೆ2:30 ಗಂಟೆ ಮೊದಲು ಕೇಂದ್ರದಲ್ಲಿ ಹಾಜರಿದ್ದು ತಪಾಸಣೆಗೆ ಒಳಪಟ್ಟು ಪರೀಕ್ಷೆ ಬರಯಲು ಅವಕಾಶ ಕಲ್ಪಿಸಲಾಗಿದೆ.
ಯಾವುದೇ ಗೊಂದಲಕ್ಕೆ ಒಳಗಾಗದೇ, ಆತ್ಮವಿಶ್ವಾಸದಿಂದ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಪರೀಕ್ಷೆಯನ್ನು ಎದುರಿಸುವಂತೆ ಕೋರುತ್ತೇನೆ.