ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರು, ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ್ ಯತ್ನಾಳರು, ಸಂಸದರಾದ ಶ್ರೀ ರಮೇಶ ಜಿಗಜಿಣಗಿ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
2017-18ನೇ ಸಾಲಿನ ಎಸ್ ಸಿ ಪಿ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ವಿಜಯಪುರ ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಸಮಾರಂಭದಲ್ಲಿ ಭಾಗಿಯಾದ ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಬಬಲೇಶ್ವರ ಶಾಸಕರಾದ ಮಾನ್ಯ ಎಂ.ಬಿ.ಪಾಟೀಲರು.
ಎಂಬಿಪಿ ಅವರನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸುತ್ತಿರುವ ದೇಶದ ಪ್ರಧಾನಿ
ರಾಜ್ಯದ ಮಾಜಿ ಗೃಹ ಸಚಿವರು ಹಾಗೂ ಜನಪ್ರಿಯ ನಾಯಕರಾದ ಮಾನ್ಯ ಎಂ.ಬಿ.ಪಾಟೀಲರನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸುತ್ತಿರುವ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿ
#ನಮ್ಮ_ಹೆಮ್ಮೆ_ನಮ್ಮ_ಎಂಬಿಪಿ
Wishing all my fellow Indians a very happy Republuc day! Let us celebrate the occassion by igniting the spark of constitution within us.
#RepublicDay#republicday2021
ಅದ್ದೂರಿಯಾಗಿ ನಡೆದ ವಿಧಾನಪರಿಷತ್ ಸದಸ್ಯರಾದ ಲೆಹರ್ ಸಿಂಗ್ ಅವರ ಮಗಳ ನಿಶ್ಚಿತಾರ್ಥ ಸಮಾರಂಭ :
ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹಾಗೂ ಮಾಜಿ ಗೃಹ ಸಚಿವರಾದ ಮಾನ್ಯ ಎಂ.ಬಿ.ಪಾಟೀಲರು ಕಾರ್ಯಕ್ರಮದಲ್ಲಿ ಭಾಗಿ.
#mbpatil
ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಆ ಮಹಾನ್ ನಾಯಕನಿಗೆ ಕೋಟಿ ಕೋಟಿ ನಮನಗಳು
ನೀವು ನನಗೆ ರಕ್ತ ಕೊಡಿ... ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ...' ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅದೆಷ್ಟೋ ಜನರಿಗೆ ಸ್ಫೂರ್ತಿ ತುಂಬಿದ ಮಾತಿದು. 🙏
ಬೆಳಗಾವಿ ನಮ್ಮದು ಎಂದು ಗುಡುಗಿದ ಮಾಜಿ ಗೃಹ ಸಚಿವ ಎಂಬಿಪಿ.
ಕರ್ನಾಟಕ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆ ಖಂಡಿಸಿದ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲರು. ನಮ್ಮ ನೆಲ, ಜಲಕ್ಕಾಗಿ ನಮ್ಮ ಹೋರಾಟ ನಿರಂತರ.
ಬಬಲೇಶ್ವರ ಕ್ಷೇತ್ರದ ಹೊನವಾಡ ಗ್ರಾಮದಲ್ಲಿ ಮಾತೋಶ್ರಿ ಈರಮ್ಮ ಶರಣಮ್ಮನವರ ಜನ್ಮ ಶತಮಾನೋತ್ಸವ ಹಾಗೂ ತುಲಾಬಾರ ಕಾರ್ಯಕ್ರಮ ಉದ್ಘಾಟನೆಗೊಳಿಸಿದ ಮಾಜಿ ಸಚಿವರು ಹಾಗೂ ಶಾಸಕರಾದ ಮಾನ್ಯ ಎಂ.ಬಿ.ಪಾಟೀಲರು. ಕಾರ್ಯಕ್ರಮದಲ್ಲಿ ಹಲವು ಶ್ರೀ ಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
@INCVijayapurBij
ಬಬಲೇಶ್ವರ ಕ್ಷೇತ್ರದ ಅರಕೇರಿ ಬಳಿ ರಿಜರ್ವ ಬಟಾಲಿಯನ್ ಆಡಳಿತ ಭವನ ವಚ್ರ್ಯುವಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲರು,ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಅನುಪಮ್ ಅಗರವಾಲ್, ಶ್ರೀಹರಿ ಗೊಳಸಂಗಿ, ಐ.ಆರ್.ಬಿ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು
ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭವನ್ನು @siddaramaiah ಅವರು ಉದ್ಘಾಟಿಸಿದರು. ಮಾಜಿ ಸಚಿವರಾದ ಎಂ.ಬಿ.ಪಾಟೀಲರು, ಶಾಸಕ ರಾಮಪ್ಪ ಮತ್ತಿತರರು ಹಾಜರಿದ್ದರು.
@INCKarnataka@INCVijayapurBij@IYCVijayapura@INCIndia
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಸಂಕ್ರಾಂತಿ ಹಬ್ಬವು ಎಲ್ಲರ ಬಾಳು ಬೆಳಗಲಿ, ದೇವರು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ & ಆರೋಗ್ಯ ಕೊಟ್ಟು ಸದಾ ಕಾಲ ಖುಷಿಯಿಂದ ಕಾಪಾಡಲಿ ಎಂದು ಹಾರೈಸುತ್ತೇನೆ.
#Sankranthi#HappyMakarSankranti
ಕ್ಷೇತ್ರದ ಬಬಲೇಶ್ವರ ಪಟ್ಟಣದ ಪ್ರಗತಿಪರ ರೈತರಾದ ಧರ್ಮರಾಜ ಬಿಳ್ಳೂರ ಅವರ ದ್ರಾಕ್ಷಿ ತೋಟದಲ್ಲಿ ನೂತನ ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿದ ಮಾಜಿ ಗೃಹ ಸಚಿವರು, ಶಾಸಕ ಎಂ.ಬಿ.ಪಾಟೀಲರು ಹಾಗೂ ಶ್ರೀಮತಿ ಆಶಾ ಎಂ.ಬಿ.ಪಾಟೀಲರು.
ವಿಶ್ವ ಮಾನವ ದಿನಾಚರಣೆಯ ಶುಭಾಶಯಗಳು
ರಾಷ್ಟ್ರಕವಿ ಕುವೆಂಪು ನಮ್ಮನ್ನಗಲಿ ದಶಕಗಳಾದರೂ ಅವರ ಅಕ್ಷರದ ಕಂಪು ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ಕನ್ನಡ ಜನತೆ ಕುವೆಂಪು ಅವರನ್ನು ಮರೆತಿಲ್ಲ.ರಾಷ್ಟ್ರಕವಿ ಕುವೆಂಪು ಅವರ ಹುಟ್ಟು ಹಬ್ಬದಂದು ಅವರಿಗೆ ನಮ್ಮ ನಮನ