@VVV_University ಯು ಬಾಲಕರಿಗಾಗಿ #ಸಾರ್ವಭೌಮ ಮತ್ತು ಬಾಲಕಿಯರಿಗಾಗಿ #ರಾಜರಾಜೇಶ್ವರೀ ಎಂಬ #ಗುರುಕುಲ ಗಳನ್ನು ಸಂಸ್ಥಾಪಿಸುತ್ತಿದೆ; ೪ನೆಯ ತರಗತಿಯಿಂದ PUCಯ ವರೆಗಿನ ಮಕ್ಕಳಿಗೆ ಪ್ರವೇಶಾವಕಾಶ.
ಯಾರಿಗೂ ಕಡಿಮೆಯಿಲ್ಲದಂತೆ ಸಮಕಾಲೀನ ಶಿಕ್ಷಣ ಮತ್ತು ಎಲ್ಲಿಯೂ ಇಲ್ಲದ ಭಾರತೀಯ ಸಂಸ್ಕೃತಿ-ವಿದ್ಯೆ-ಕಲೆಗಳ ಶಿಕ್ಷಣಗಳು ಇಲ್ಲಿಯ ಹೆಗ್ಗುರುತುಗಳು.
ನಿನ್ನೆಯ ವಿವಿವಿ-ಗುರುಕುಲ ಸಂಪರ್ಕ ಅಭಿಯಾನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಕನಿಷ್ಠ ೧೨ ಜನರ ಸಂಪರ್ಕದ ಗುರಿ ನೀಡಲಾಗಿತ್ತು.
ಹೊಸನಗರ ಸಮೀಪದ ಹೆದ್ಲಿಯ ಛಾಯಾ ರಾಮಮೂರ್ತಿ ಸಂಪರ್ಕಿಸಿದ ಮನೆಗಳೆಷ್ಟು ಗೊತ್ತೇ?
233!
ಎಂದರೆ- ನೀಡಲಾದ ಗುರಿಯ ಸುಮಾರು ಇಪ್ಪತ್ತು ಪಟ್ಟು ಅಧಿಕ!
@VVV_University @ShankaraPeetha
ಗೌರವ ಪುರಸ್ಕಾರ
@vitlavalaya, ವಿಟ್ಲ ಸೀಮೆ ಗುರಿಕ್ಕಾರರೂ ಆಗಿರುವ
ಕೆ.ಟಿ.ವೆಂಕಟೇಶ್ವರ ನೂಜಿ ಇವರಿಗೆ
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇಗುಲ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ ರೂವಾರಿಯಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದುದಕ್ಕಾಗಿ ಕುಳ ವಿಟ್ಲ ಮುಡ್ನೂರು ಗ್ರಾಮಸ್ಥರು ಜತೆಗೂಡಿ ಗೌರವಿಸಿದರು
@HMahamandala@mangalurumandal
ಶತಮಾನಗಳ ಬಳಿಕ ವಿಟ್ಲದ ಅರಸರ ‘ರಾಜದರ್ಬಾರ್’ ನಿನ್ನೆ ಕುಂಡಡ್ಕದಲ್ಲಿ ಮತ್ತೊಮ್ಮೆ ನಡೆಯಿತು; ಐತಿಹಾಸಿಕವಾದ ಈ ಮಹಾಕಾರ್ಯಕ್ರಮದಲ್ಲಿ ನಾವು ನಿನ್ನೆ ರಾಜಗುರುವಿನ ಸ್ಥಾನದಲ್ಲಿ ಭಾಗವಹಿಸಿದಾಗ- ಬಹುಕಾಲದ ಹಿಂದೆ ಕಡಿದು ಹೋಗಿದ್ದ ಶ್ರೀಮಠ ಮತ್ತು ವಿಟ್ಲದ ಅರಸೊತ್ತಿಗೆಯ ಕೊಂಡಿಯು ಪುನಃ ಕೂಡಿತು!
#ರಾಜದರ್ಬಾರ್
ಗೋಕರ್ಣ ಕ್ಷೇತ್ರದಲ್ಲಿ ಯಾತ್ರಿಗಳಿಗೆ ವಸತಿಯ ವ್ಯವಸ್ಥೆಯ ಕೊರತೆಯನ್ನು ನಿವಾರಿಸಲಿದೆ ಶ್ರೀರಾಮಚಂದ್ರಾಪುರ ಮಠದ #ಈಶಾವಾಸ್ಯಂ ಯೋಜನೆ; ಸುಸಜ್ಜಿತ ವಸತಿಗೃಹವೊಂದು ದೇಗುಲದ ಸಮೀಪದ ಶ್ರೀಮಠದ ಭೂಮಿಯಲ್ಲಿ ಸಜ್ಜುಗೊಳ್ಳುತ್ತಿದೆ!
ತಮ್ಮಲ್ಲಿಗೆ ಬಂದ ಸಂತರನ್ನು ತಮ್ಮಿಂದಲೂ ಕೆಳಗೆ ಕೂರಿಸಿ ಅಪಮಾನಿಸುವ ಸಂತರುಂಟು;
ಸಮಾನಾಸನ ನೀಡಿ ಸತ್ಕರಿಸುವ ಸಂತರೂ ಉಂಟು; ಆದರೆ ಶ್ರೀಶೈಲದ ಜಗದ್ಗುರುಗಳು ತಮ್ಮ ಮಠಕ್ಕೆ ಬಂದ ನಮ್ಮನ್ನು ಅರ್ಧಾಸನದಲ್ಲಿ ಕುಳ್ಳಿರಿಸಿಕೊಂಡಾಗ ಶಿವಾದ್ವೈತವೇ ಸಾಕಾರಗೊಂಡಿತು!
#ಎತ್ತರವಿದ್ದೂ_ಹತ್ತಿರವಿರುವನು_ನಿಜವಾದ_ಜಗದ್ಗುರು