Warm birthday wishes to AICC President and Karnataka's pride Shri @kharge avaru.
Over the years, I have witnessed your deep commitment to the people and to the ideals of the Congress Party. Your journey from the grassroots to national leadership is an inspiration to all of us in public life. For Karnataka and for India, you remain a pillar of strength and wisdom. Wishing good health and many more years in the service of the nation.
ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಮಹತ್ವದ ಪಾತ್ರ ವಹಿಸಿದ,
ಕೇಂದ್ರ ಸಚಿವರಾಗಿ, ಲೋಕಸಭೆಯ ಪ್ರತಿಪಕ್ಷ ನಾಯಕರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುತ್ಸದ್ದಿ ರಾ��ಕಾರಣಿ,
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು.
ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣದ ರೂವಾರಿಗಳು, 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್' ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದ, ಮಾಜಿ ಮುಖ್ಯಮಂತ್ರಿಗಳಾದ 'ಕರ್ನಾಟಕ ರತ್ನ' ಎಸ್. ನಿಜಲಿಂಗಪ್ಪ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವದ ನಮನಗಳು.
#SNijalingappa
ನವ ಕರ್ನಾಟಕದ ನಿರ್ಮಾತೃ, ಪ್ರಬುದ್ಧ ರಾಜಕಾರಣಿ, ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ ಶ್ರೀ ಎಸ್ ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ರಾಜ್ಯದ ಮುಖ್ಯ ಮಂತ್ರಿಗಳಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಅವರ ಸೇವೆ ಅಪಾರ.
#SNijalingappa
ಇಂದು ಹುಬ್ಬಳ್ಳಿಯ ಬುದರ್ಶಿಂಗಿ ಗ್ರಾಮದಲ್ಲಿರುವ ಮದನಿ ಮಿಯಾ ಅರೇಬಿಕ್ ಕಾಲೇಜಿಗೆ ಭೇಟಿ ನೀಡಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಸಮಿತಿಯ ಮುಖ್ಯಸ್ಥರು ಮತ್ತಿತರರೊಂದಿಗೆ ಸಮಾಲೋಚನೆ ನಡೆಸಲಾಯಿತು.
𝟐𝟎𝟐𝟓ರ ವೇಳೆಗೆ ಬೆಂಗಳೂರಿನಲ್ಲಿ ಕೆಇಬಿ ಹಾನಾ ಬ್ಯಾಂಕ್ ನ ಶಾಖೆಯ ಕಾರ್ಯಾರಂಭ
ಜಾಗತಿಕ ಮನ್ನಣೆ ಗಳಿಸಿರುವ ಬೆಂಗಳೂರಿನಲ್ಲಿ ಶಾಖೆ ತೆರೆಯುವ ಕುರಿತಂತೆ ದಕ್ಷಿಣ ಕೊರಿಯಾದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಕೆಇಬಿ ಹಾನಾ ಬ್ಯಾಂಕ್ ನ ಪ್ರಮುಖರೊಂದಿಗೆ ಮಹತ್ವದ ಮಾತುಕತೆ ನಡೆಸಿದೆ.
ಬೆಂಗಳೂರಿನಲ್ಲಿ ಶಾಖೆ ಆರಂಭವಾದರೆ ಭಾರತಕ್ಕೆ ಬ��ಲಿರುವ ಕೊರಿಯನ್ ಕಂಪೆನಿಗಳಿಗೂ ಪ್ರಯೋಜನಕಾರಿಯಾಗಲಿದೆ ಎಂಬ ಅಂಶವನ್ನು ತಿಳಿಸಿಕೊಡಲಾಯಿತು.
ಹಾನಾ ಬ್ಯಾಂಕ್ 2025ರ ವೇಳೆಗೆ ನಗರದಲ್ಲಿ ಶಾಖೆ ಆರಂಭಿಸುವ ಸಲುವಾಗಿ RBIಗೆ ಅನುಮತಿ ಕೋರಿ ಪತ್ರ ಸಲ್ಲಿಸಿದೆ.
#HanaBank ಕಾರ್ಯಾಚರಣೆಗಳಿಗೆ ಅನುಮೋದನೆಗಳನ್ನು ಪಡೆಯಲು ಅಗತ್ಯವಿರುವ ಎಲ್ಲ ಬೆಂಬಲ, ಸಹಕಾರ ನೀಡಲಾಗುವುದು.
#kebhanabank
#InvestKarnataka2025 #GIM2025 #ReimaginingGrowth #Karnataka
#KarnatakaDelegationAtSouthKorea
ರಾಜ್ಯದಲ್ಲಿ ಡೆಂಗಿ ನಿಯಂತ್ರಣ ಕುರಿತು ಆರೋಗ್ಯ ಸಚಿವರಾದ ಶ್ರೀ @dineshgrao ಅವರು ದಿಟ್ಟ ಕ್ರಮ ತೆಗೆದುಕೊಂಡಿದ್ದು, ಡೆಂಗಿ ಹೆಚ್ಚಿರುವ ಕಡೆ ಫೀವರ್ ಕ್ಲಿನಿಕ್ ಸ್ಥಾಪಿಸುವುದು & ಜ್ವರದ ಲಕ್ಷಣ ಕಂಡುಬರುವ ಎಲ್ಲರಿಗೂ ಡೆಂಗಿ ಪತ್ತೆ ಪರೀಕ್ಷೆ ಹಾಗು ಅಗತ್ಯ ಚಿಕಿತ್ಸೆ ನೀಡಲು ಕ್ರಮವಹಿಸಿರುವುದು ಅವರ ಉತ್ತಮ ಆಡಳಿತ ನಿರ್ವಹಣೆಗೆ ಸಾಕ್ಷಿಯಾಗಿದೆ.
#DengueAlert
ಬೆಂಗಳೂರಿನ ಗೃಹ ಕಚೇರಿಯಲ್ಲಿ ಇಂದು ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದ್ದು, ಉಳಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರ್ಗಾಯಿಸಿದ್ದೇನೆ.
#Bengaluru
“ಉಪಮುಖ್ಯಮಂತ್ರಿಗಳ ಕಾರ್ಯಕರ್ತರ ಭೇಟಿ ಕಾರ್ಯಕ್ರಮ“
06/07/2024
ಶನಿವಾರದಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಕಾರ್ಯಕರ್ತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಲಿದ್ದಾರೆ.
ಉಪಮುಖ್ಯಮಂತ್ರಿಗಳ ಭೇಟಿಯ ನೋಂದಣಿಗಾಗಿ 7899116899 ನಂಬರ್ ಗೆ ತಮ್ಮ ಹೆಸರು, ಕ್ಷೇತ್ರ, ಪಕ್ಷದ ಹುದ್ದೆಯ ವಿ��ರಗಳನ್ನು ವಾಟ್ಸಾಪ್ ಸಂದೇಶ ಕಳಿಸಿ.
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ.ಸೋಮಣ್ಣ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ, ಅವರಿಗೆ ಅಭಿನಂದನೆ ಸಲ್ಲಿಸಿದೆ.
ಇದೇ ವೇಳೆ ರಾಜ್ಯದ ಬಾಕಿ ರೈಲ್ವೆ ಹಾಗೂ ಜಲ ಮಿಷನ್ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ನೂತನ ಕೇಂದ್ರ ಸಚಿವರಲ್ಲಿ ಮನವಿ ಮಾಡಿದೆ.
#Karnataka#DKSuresh
ಇಡೀ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಿರುವುದು ನಮ್ಮ ಸರ್ಕಾರ ಮಾತ್ರ. ಎಸ್ಸಿ.ಎಸ್.ಪಿ / ಟಿ.ಎಸ್.ಪಿ ಗೆ ಬಜೆಟ್ನಲ್ಲಿ ಘೋಷಿಸಿದ ಅನುದಾನವನ್ನು ಆಯಾಯ ವರ್ಷವೇ ಶೇ 100 ���ಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ.
ಅನುದಾನ ಬಳಕೆ ಮಾಡದೆ ಯಾರು ನಿರ್ಲಕ್ಷ್ಯ ಮಾಡುತ್ತಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶೋಷಿತ ವರ್ಗದ ಜನರ ಬದುಕಲ್ಲಿ ಬದಲಾವಣೆ ತರುವುದೇ ನಮ್ಮ ಆದ್ಯತೆ. ಇದರಲ್ಲಿ ಯಾವ ರಾಜಿಯಿಲ್ಲ.
ಇಂದು ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಹಂಚಿಕೆ ರಾಜ್ಯ ಪರಿಷತ್ ಸಭೆಯಲ್ಲಿ ಅಧಿ���ಾರಿಗಳಿಗೆ ನಾನು ನೀಡಿದ ಸಲಹೆ - ಸೂಚನೆಗಳು ನಿಮ್ಮ ಗಮನಕ್ಕೆ
#ಪ್ರಗತಿಪರಿಶೀಲನಾಸಭೆ
ಬರದಿಂದ ರಾಜ್ಯದ ರೈತರಿಗಾದ ನಷ್ಟ ರೂ.35,000 ಕೋಟಿಗೂ ಅಧಿಕ. ನಾವು ಈ ನಷ್ಟದಲ್ಲಿ ಅರ್ಧದಷ್ಟು ಅಂದರೆ ರೂ.18,000 ಕೋಟಿ ಪರಿಹಾರ ಕೇಳಿದರೆ ಕೇಂದ್ರ ಸರ್ಕಾರ ನಮಗೆ ನೀಡಿದ್ದು ರೂ. 3,454 ಕೋಟಿ.
ಈ ಪರಿಹಾರ ಪಡೆಯಲು ನಾವು ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ನ ಕದ ತಟ್ಟಬೇಕಾಯಿತು. ಕೇಂದ್ರ ಸರ್ಕಾರಕ್ಕೆ ತನ್ನ ಕರ್ತವ್ಯವನ್ನು ನೆನಪು ಮಾಡಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕಾಗಿ ಬಂದದ್ದು ದುರಂತ.
#ಬರಪರಿಹಾರ #DroughtReliefFund