“ಡಿಜಿಟಲ್ ಅರೆಸ್ಟ್” ಎಂಬ ಸೈಬರ್ ವಂಚನೆಗಳಿಂದ ಜಾಗ್ರತೆ ವಹಿಸಿ! 🚨
ಪೊಲೀಸರು ಅಥವಾ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ.
ಭಾರತದಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಕಾನೂನು ಅಸ್ತಿತ್ವದಲ್ಲೇ ಇಲ್ಲ.
⚠️ ವಂಚಕರು ಸಾಮಾನ್ಯವಾಗಿ:
• ಪೊಲೀಸರಂತೆ ಅಥವಾ ಅಧಿಕಾರಿಗಳಂತೆ ನಟಿಸುತ್ತಾರೆ
• ನಿಮ್ಮನ್ನು ಹೆದರಿಸಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಾಯಿಸುತ್ತಾರೆ
💡 ಸುರಕ್ಷಿತವಾಗಿರಿ:
• ಅಪರಿಚಿತ ಕರೆಗಳು/ವಿಡಿಯೋ ಕಾಲ್ಗಳಿಗೆ ನಂಬಿಕೆ ಇಡಬೇಡಿ
• OTP, ಬ್ಯಾಂಕ್ ವಿವರಗಳು ಅಥವಾ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ
• ಯಾವುದೇ ಒತ್ತಡಕ್ಕೆ ಒಳಗಾಗದೆ ಕರೆಗಳನ್ನು ತಕ್ಷಣ ಕಡಿತಗೊಳಿಸಿ
• ತಕ್ಷಣ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ
• ಅಥವಾ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಜಾಗೃತರಾಗಿ – ಸುರಕ್ಷಿತರಾಗಿ! 🔐 @DgpKarnataka@BlrCityPolice@jt_cpeastbcp #DigitalArrestScam #CyberSafety #OnlineSafety #StopCyberCrime #FraudAwareness #ThinkBeforeYouClick #SouthEastDivision
🚨 ಆನ್ಲೈನ್ ಉದ್ಯೋಗ ವಂಚನೆ ಎಚ್ಚರಿಕೆ 🚨
ವಂಚಕರು ಪ್ರಸಿದ್ಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳ ಹೆಸರಿನಲ್ಲಿ ವೈಯಕ್ತಿಕ ಇಮೇಲ್ಗಳನ್ನು ಕಳುಹಿಸುತ್ತಾರೆ. ಒಮ್ಮೆ ನೀವು ನಂಬಿದರೆ, ನೋಂದಣಿ ಶುಲ್ಕ ಹಾಗೂ ಇತರ ಕ್ರಮಗಳ ಹೆಸರಿನಲ್ಲಿ ಹಣವನ್ನು ಕೇಳುತ್ತಾರೆ. ⚠️
💡 ಸುರಕ್ಷಿತವಾಗಿರಿ:
• ಉದ್ಯೋಗಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಡಿ
• ವೈಯಕ್ತಿಕ ಮಾಹಿತಿ, ದಾಖಲೆಗಳು ಹಾಗೂ OTPಗಳನ್ನು ಯಾರಿಗೂ ನೀಡಬೇಡಿ
• ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ
• ಅಪರಿಚಿತ ಇಮೇಲ್ಗಳು ಮತ್ತು ಆಫರ್ಗಳ ಬಗ್ಗೆ ಎಚ್ಚರಿಕೆಯಿಂದಿರಿ
• ಸಂಶಯಾಸ್ಪದ ಚಟುವಟಿಕೆಗಳನ್ನು ತಕ್ಷಣ 1930ಕ್ಕೆ ಕರೆ ಮಾಡಿ ಅಥವಾ https://t.co/ls7iPglLFn ನಲ್ಲಿ ದೂರು ದಾಖಲಿಸಿ
🔒 ಎಚ್ಚರಿಕೆಯಿಂದಿರಿ. ಸುರಕ್ಷಿತವಾಗಿರಿ. @DgpKarnataka@KarnatakaCops@BlrCityPolice@jt_cpeastbcp #CyberSafety #OnlineFraud #JobScam #StayAlert #StaySafe #SouthEastDivision
ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಆಗ್ನೇಯ ವಿಭಾಗದ @adugodips & @hsrlayoutps ತಂಡವು ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಗಾಂಜಾ, ಚರಸ್ ಮತ್ತು ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದು, ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಮತ್ತು ಹಿರಿಯ ಅಧಿಕಾರಿಗಳು ಆಗ್ನೇಯ ವಿಭಾಗದ ಪೊಲೀಸರು ನಿಷೇಧಿತ ಮಾದಕ ವಸ್ತುಗಳ ವಿರುದ್ದ ನಡೆಸುತ್ತಿರುವ ಪರಿಣಾಮಕಾರಿ ಕಾರ್ಯಾಚರಣೆಯನ್ನು ಪ್ರಶಂಸಿಸಿರುತ್ತಾರೆ. ಸಭೆಯಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕವನ್ನು ನಿರ್ಮಿಸಲು ಕರೆ ನೀಡಿರುತ್ತಾರೆ. @DgpKarnataka@KarnatakaCops@BlrCityPolice@jt_cpeastbcp #DrugFreeKarnataka #SayNoToDrugs #StaySafe #DrugAwareness #SouthEastDivision
ಆಗ್ನೇಯ ವಿಭಾಗದ ರಾಣಿ ಚೆನ್ನಮ್ಮ ಪಡೆಯವರು @adugodips ವ್ಯಾಪ್ತಿಯ ಎಂ.ಎ.ಆರ್.ಪಿ ಶಾಲೆಯ ಬೇಸಿಗೆ ಶಿಬಿರಕ್ಕೆ ಭೇಟಿ ನೀಡಿ, ಶಿಬಿರದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳು, ಸ್ವಯಂ ಆತ್ಮರಕ್ಷಣೆ, ರಸ್ತೆ ಸುರಕ್ಷತೆ, ದುಶ್ಚಟಗಳಿಂದ ದೂರ ಇರುವ ಕುರಿತು ಹಾಗೂ ಮೊಬೈಲ್ನ ಹೆಚ್ಚಿನ ಬಳಕೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.
ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ KSP ಆಪ್, ಡಯಲ್ 112 ಮತ್ತು 1930 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಸಹ ಮಾಹಿತಿ ನೀಡಿದರು. @adugodips@BlrCityPolice@jt_cpeastbcp #RaniChennammaPade #Adugodi #ChildSafety #SelfDefense #RoadSafety #StaySafe #Dial112 #KSPApp #CyberHelpline1930
ಬೆಂಗಳೂರು ನಗರದ ಈಶಾನ್ಯ ವಿಭಾಗ ಉಪ ಪೊಲೀಸ್ ಆಯುಕ್ತರ ಕಚೇರಿ, ದೇವನಹಳ್ಳಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಮತ್ತು ದೇವನಹಳ್ಳಿ ಪೊಲೀಸ್ ಠಾಣೆಯ ನೂತನವಾಗಿ ನಿರ್ಮಿಸಲಾದ ಕಚೇರಿ ಕಟ್ಟಡಗಳ ಉದ್ಘಾಟನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆವತಿಯಲ್ಲಿ ಭಾರತೀಯ ಮೀಸಲು ಪಡೆಗೆ ಶಂಕುಸ್ಥಾಪನೆ ನೆರವೇರಿಸಿದೆ.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಚಿಕ್ಕಬಳ್ಳಾಪುರ ಸಂಸದರಾದ ಡಾ. ಕೆ.ಸುಧಾಕರ್, ಶಾಸಕರಾದ ಎಸ್.ಆರ್.ವಿಶ್ವನಾಥ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರಾದ ರಮೇಶ್ ಬಾನೋಥ್, ವಂಶಿಕೃಷ್ಣ, ಪ್ರೆಸ್ಟಿಜ್ ಗ್ರೂಪ್ ಸಂಸ್ಥೆಯ ಮುಖ್ಯಸ್ಥರಾದ ನದೀಮ್ ಮತ್ತು ನಹೀಮ್ ರವರು ಉಪಸ್ಥಿತರಿದ್ದರು.
@KHMuniyappaklr@SRVishwanathBJP@KarnatakaCops@DgpKarnataka@masaleemips@CPBlr@BlrCityPolice
#karnataka #police #bengaluru
ಆಗ್ನೇಯ ವಿಭಾಗದ @MicoPolice ತಂಡವು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಮನೆಯ ಕಿಟಕಿಗಳ ಮೂಲಕ ಮೊಬೈಲ್ ಮತ್ತು ಲ್ಯಾಪಟಾಪ್ಗಳನ್ನು ಕಳ್ಳತನ ಮಾಡುತ್ತಿದ್ದ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 23 ಮೊಬೈಲ್ ಫೋನ್ಗಳು, 1 ಟ್ಯಾಬ್ ಹಾಗೂ 3 ಲ್ಯಾಪಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಬೆಲೆಬಾಳುವ ವಸ್ತುಗಳು, ಮೊಬೈಲ್ಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ಕಿಟಕಿಯ ಹತ್ತಿರ ಇಡುವುದನ್ನು ತಪ್ಪಿಸಿ. ಮನೆಯ ಸುರಕ್ಷತೆಗಾಗಿ ಕಿಟಕಿಗಳಿಗೆ ಗ್ರೀಲ್ ಅಳವಡಿಸಿಕೊಳ್ಳಿ ಹಾಗೂ ಎಚ್ಚರಿಕೆಯಿಂದಿರಿ. ಅನುಮಾನಾಸ್ಪದ ವ್ಯಕ್ತಿಗಳು ನಿಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿರುವುದು ಗಮನಿಸಿದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ #112 ಸಹಾಯವಾಣೆಗೆ ಕರೆ ಮಾಡಿ ಮಾಹಿತಿ ನೀಡಿ.
ಎಚ್ಚರಿಕೆಯೇ ಅಪರಾಧ ತಡೆಗೆ ಮೊದಲ ಹೆಜ್ಜೆ.
@DgpKarnataka@BlrCityPolice@CPBlr@jt_cpeastbcp
#BengaluruCityPolice #MicoLayoutPolice #CrimePrevention #StayAlertStaySafe #PublicSafety #Dial112 #SouthEastDivision
ರಾಣಿ ಚೆನ್ನಮ್ಮ ಪಡೆಯವರು ಆಗ್ನೇಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ಕ್ಗಳಿಗೆ ಭೇಟಿ ನೀಡಿ, ಹಿರಿಯ ನಾಗರಿಕರು ಹಾಗೂ ಮಹಿಳೆಯರ ಸುರಕ್ಷತೆಯ ಕುರಿತು ವಿಶೇಷ ಗಮನ ಹರಿಸಿ. ಹಿರಿಯ ನಾಗರಿಕರಿಗೆ ಸುರಕ್ಷೆ & ವಿಶ್ವಾಸ ನೀಡುವ ಪೊಲೀಸ್ ಇಲಾಖೆಯ “ಆಸರೆ” ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸರಗಳ್ಳತನ ಮತ್ತು ಮೊಬೈಲ್ ಕಳ್ಳತನಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚಿಸಿ. ಸೈಬರ್ ಅಪರಾಧಗಳ ಸಂದರ್ಭದಲ್ಲಿ ತಕ್ಷಣ #1930ಕ್ಕೆ ಕರೆ ಮಾಡಲು ಹಾಗೂ KSP Mobile App ಮತ್ತು #112 ಸಹಾಯವಾಣಿ ಸಂಖ್ಯೆಗಳ ಬಳಕೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. @DgpKarnataka@BlrCityPolice@jt_cpeastbcp
#RaniChennammaPade #PublicSafety #SeniorCitizenSafety #WomenSafety
#Dial1930 #Dial112 #CrimePrevention
📱 "ಡೌನ್ಲೋಡ್ ಮಾಡುವ ಮೊದಲು ಯೋಚಿಸಿ!"
WhatsApp ಅಥವಾ ಇತರೆ ಮೆಸೇಜಿಂಗ್ ಆ್ಯಪ್ಗಳ ಮೂಲಕ ಕಳುಹಿಸಲಾದ .APK ಫೈಲ್ಗಳನ್ನು ಇನ್ಸ್ಟಾಲ್ ಮಾಡುವುದನ್ನು ತಪ್ಪಿಸಿ. ಅವುಗಳಲ್ಲಿ ಹಾನಿಕಾರಕ ಮಾಲ್ವೇರ್ ಇರಬಹುದಾಗಿದೆ, ಇದು ನಿಮ್ಮ ಮೊಬೈಲ್ ಅನ್ನು ಹಾನಿಗೊಳಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದುಕೊಳ್ಳಬಹುದು. 🚫📂
🛡️ ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಿ – ನಂಬಿಗಸ್ತ ಮೂಲಗಳಿಂದ ಮಾತ್ರ ಆ್ಯಪ್ಗಳನ್ನು ಡೌನ್ಲೋಡ್ ಮಾಡಿ. ಸೈಬರ್ ಅಪರಾಧಗಳ ಬಗ್ಗೆ ತಕ್ಷಣವೇ 1930 ಗೆ ಕರೆ ಮಾಡಿ. @DgpKarnataka@BlrCityPolice@jt_cpeastbcp #CyberSafety #ThinkBeforeDownload #StaySafeOnline #StopCyberCrime #APKAlert #CyberAwareness #southeastdivision
ಪ್ರಜ್ಞಾವಂತ ನಾಗರಿಕರು ಸುರಕ್ಷಿತ ಬೆಂಗಳೂರನ್ನು ನಿರ್ಮಿಸುತ್ತಾರೆ.
ದೈಹಿಕ ಸಧೃಡತೆಯಿಂದ ಮಾನಸಿಕ ಆರೋಗ್ಯದವರೆಗೆ — ಪ್ರತಿ ಹೆಜ್ಜೆಯೂ ಮುಖ್ಯ.
ನಮ್ಮನ್ನು ನಾವು ಮತ್ತು ಒಬ್ಬರನ್ನೊಬ್ಬರು ಕಾಳಜಿಪೂರ್ವಕವಾಗಿ ನೋಡಿಕೊಳ್ಳೋಣ.
Healthy citizens build a safer Bengaluru.
From physical fitness to mental well-being—every step counts.
Let’s look out for ourselves and each other.
#WorldHealthDay #HealthyBengaluru #BengaluruCityPolice
ಕರ್ನಾಟಕ ಪೊಲೀಸ್ ಧ್ವಜ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ನಮ್ಮ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗೂ ಕರ್ತವ್ಯನಿಷ್ಠೆಯನ್ನು ಗೌರವಿಸುವ ಸುದಿನ ಇಂದು.
ಸಮಾಜದ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲು-ರಾತ್ರಿ ಶ್ರಮಿಸುವ ನಮ್ಮ ಪೊಲೀಸ್ ಸಿಬ್ಬಂದಿಗೆ ಹೃತ್ಪೂರ್ವಕ ಅಭಿನಂದನೆಗಳು. @DgpKarnataka@BlrCityPolice@jt_cpeastbcp
#KarnatakaPoliceFlagDay #PoliceFlagDay2026 #RespectOurPolice #PublicSafety #LawAndOrder #ServeAndProtect #PolicePride
ಯಲಹಂಕ ನ್ಯೂ ಟೌನ್, ಆಡುಗೋಡಿ, ಭಾರತೀನಗರ, ಜಾಲಹಳ್ಳಿ ಮತ್ತು ಪುಲಿಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 11 ಮಂದಿಯನ್ನು ನಾರ್ಕೋಟಿಕ್ ಪದಾರ್ಥಗಳ ಅಕ್ರಮ ಮಾರಾಟಕ್ಕಾಗಿ ಬಂಧಿಸಲಾಗಿದೆ.
ಪೊಲೀಸರು 2 ಕೆಜಿ 7 ಗ್ರಾಂ MDMA, ₹31 ಕೆಜಿ 396 ಗ್ರಾಂ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಮತ್ತು 162 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಅಪರಾಧಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳ ಮೊತ್ತದ ಮಾರುಕಟ್ಟೆ ಮೌಲ್ಯ ಸುಮಾರು ₹2.57ಕೋಟಿ (ಮಾರುಕಟ್ಟೆ ಬೆಲೆ ₹5.14 ಕೋಟಿ) ಎಂದು ಅಂದಾಜಿಸಲಾಗಿದೆ.
ಸಾರ್ವಜನಿಕರು ಜಾಗರೂಕರಾಗಿರುವಂತೆ ಮತ್ತು ಮಾದಕವ್ಯಸನ ಅಥವಾ ಅಕ್ರಮ ಕಳ್ಳಸಾಗಣೆ ಸಂಬಂಧಿತ ಯಾವುದೇ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ 112 ನಂಬರ್ಗೆ ತಿಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
Within the limits of Yelahanka New Town, Adugodi, Bharathinagar, Jalahalli and Pulikeshinagar Police Stations, 11 persons have been arrested for illegal sale of narcotic substances. Police have seized 2 kg 7 grams of MDMA, 31 kg 396 grams of Ganja, 220 grams of Hydro Ganja, and 162 grams of Heroin, along with a two-wheeler used in the offence. The total value of the seized items is approximately ₹2.57 crore (market value ₹5.14 crore).
Public is advised to stay vigilant and report any information related to drug abuse or trafficking to the nearest police station or dial 112.
#SayNoToDrugs #DrugFreeSociety #NarcoticsFreeIndia
@CPBlr@seemantsingh96@DgpKarnataka@KarnatakaCops
ಆಗ್ನೇಯ ವಿಭಾಗದ @adugodips ತಂಡವು ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ 5 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು 28 ಕೆ.ಜಿ ಗಾಂಜಾ, 220 ಗ್ರಾಂ ಹೈಡ್ರೋ ಗಾಂಜಾ ಹಾಗೂ 162 ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ರೂ. 54,40,000/- ಆಗಿದೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಸಮಾಜವನ್ನು ಮಾದಕ ವಸ್ತುಗಳ ದುಶ್ಚಟದಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಾದಕ ವ್ಯಸನ ಅಥವಾ ಅಕ್ರಮ ಮಾರಾಟಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ದೊರೆತಲ್ಲಿ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112 ಗೆ ಮಾಹಿತಿ ನೀಡುವಂತೆ ನಾಗರಿಕರಿಗೆ ಮನವಿ ಮಾಡಲಾಗಿದೆ. @DgpKarnataka@BlrCityPolice@jt_cpeastbcp
#DrugFreeKarnataka #SayNoToDrugs #BengaluruCityPolice #StayAlert #SafeSociety #SouthEastDivision
ಕ್ರಿಕೆಟ್ನ ಉತ್ಸಾಹ ನಗರವನ್ನು ಆವರಿಸುತ್ತಿರುವಂತೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಐಪಿಎಸ್ ಸೀಮಾಂತ್ ಕುಮಾರ್ ಸಿಂಗ್ ಅವರು ನಾಗರಿಕರನ್ನು ಐಪಿಎಲ್ ಪಂದ್ಯಗಳನ್ನು ಜವಾಬ್ದಾರಿಯುತವಾಗಿ ಆನಂದಿಸುವಂತೆ ಹಾಗೂ ನಾಗರಿಕರು ಶಿಸ್ತನ್ನು ಕಾಪಾಡುವಂತೆ ಮತ್ತು ಮಾದಕ ವ್ಯಸನದ ವಿರುದ್ಧ ಒಗ್ಗಟ್ಟಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ.
As the spirit of cricket takes over the city,
Seemant Kumar Singh, IPS, Commissioner of Police, Bengaluru City, urges citizens to enjoy the IPL responsibly, uphold civic discipline, and stand united against drug abuse.
#CheerResponsibly #SafeBengaluru #sayNOtodrugs
@CPBlr@seemantsingh96@DgpKarnataka@KarnatakaCops