ಕನ್ನಡ ಹಾಗೂ ಸಂಸ್ಕೃತ ಎರಡೂ ಪರಸ್ಪರ ಪೂರಕ ಭಾಷೆಗಳು.ಭಾಷೆಯ ವಿಷಯದಲ್ಲಿ ನಾವು ಯಾವಾಗಲೂ ಸರಿಯಾದ ಚಿಂತನೆಗಳ ಮೂಲಕ ಮಾತ್ರವೇ ಅರಳುವುದು ಸಾಧ್ಯ. ಅನಾವಶ್ಯಕ ಗೋಜಲುಗಳ ಮೂಲಕ ಅಲ್ಲ.
#akbms
ತಾರೀಕು 02/01/2022 ರಂದು ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶ್ರೀ ಅಶೋಕ ಹಾರನಹಳ್ಳಿ ಅವರು ಭಾಗವಹಿಸಿ ಸಮಾಜದ ಸದಸ್ಯರೊಡನೆ ಸಂಘಟನೆ ಮತ್ತು ಮಹಾಸಭಾದ ಸದಸ್ಯತ್ವ ಅಭಿಯಾನ ಹಾಗು ಹಲವು ನೂತನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು.
ಕೋಲಾರ ಬ್ರಾಹ್ಮಣ ಸಂಘದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿ ಸರ್ಕಾರಿ ಆದೇಶ ಹೊರಡಿಸಬೇಕೆಂದು ರಾಜ್ಯಸರ್ಕಾರಕ್ಕೆ ಒತ್ತಾಯಿಸಿದರು.