ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದ ವೀರ ವನಿತೆ, ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯಂದು ಶತಕೋಟಿ ಪ್ರಣಾಮಗಳು. ಸ್ವಾಭಿಮಾನದಿಂದ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ರಣಕಹಳೆಯೂದಿದ ಚೆನ್ನಮ್ಮನವರ ಛಲ, ನಿಷ್ಠೆ, ಧೈರ್ಯ ಹಾಗೂ ಸಾಹಸಗಳು ಕನ್ನಡ ನಾಡಿನ ಸಮಸ್ತ ಮಹಿಳೆಯರಿಗೆ ಸರ್ವಕಾಲಿಕ ಪ್ರೇರಣೆ.
@BYVijayendra@SBeldale
ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವ ಹಾಗೂ ಕೃತಜ್ಞತಾ ಪೂರ್ವಕವಾಗಿ ಸ್ಮರಿಸೋಣ.
ಪ್ರಜಾಪ್ರಭುತ್ವ, ಸಹಬಾಳ್ವೆ, ವೈವಿಧ್ಯತೆಯಲ್ಲಿ ಏಕತೆಯಂತಹ ಮಹತ್ವದ ಮೌಲ್ಯಗಳನ್ನು ಕಾಪಾಡುವ ಶಕ್ತಿಯಾದ ಭಾರತ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು.
ಸಂವಿಧಾನದ ಆಶಯಗಳು ಇನ್ನಷ್ಟು ಬೇರೂರಲಿ, ಸಂವಿಧಾನದ ಶಕ್ತಿಯೂ ಹೆಚ್ಚಲಿ. ರಾಷ್ಟ್ರೀಯತೆ, ಏಕತೆ, ಸಮಾನತೆ, ಸೋದರತೆಯಂತಹ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.
#ConstitutionDay2023
||ತಮಸೋಮಾ ಜ್ಯೋತಿರ್ಗಮಯ||
ದೀಪ ಹಚ್ಚೋಣ ಪ್ರೀತಿ ಹಂಚೋಣ ಅಂಧಕಾರ ಕಳೆದು ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿಯ ಜ್ಯೋತಿ ನಿಮಗೂ ನಿಮ್ಮ ಕುಟುಂಬದವರಿಗೂ ಶ್ರೇಯಸ್ಸನ್ನು ತರಲಿ ಎಂದು ಆಶಿಸುತ್ತಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸಿದ ರೈತನಾಯಕ ಶ್ರೀ @BSYBJP ಅವರಿಗೆ ಅಭಿನಂದನೆಗಳು. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ದೇಶಕ್ಕೇ ಮಾದರಿಯಾಗಿ, ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಹಲವಾರು ಯೋಜನೆಗಳ ಜಾರಿಗೆ ಶ್ರಮಿಸಿದ್ದ ರೈತಬಂಧುವಿಗೆ ಶ್ರೇಷ್ಠಗೌರವ ಸಂದಿದೆ
ಅಭಿನಂದನೆಗಳು
♡ದೇಶದಲ್ಲಿಯೇ ಮೊದಲ ಬಾರಿ ಕೃಷಿ ಬಜೆಟ್ ಮಂಡನೆ ಮಾಡಿದ ನೈಜ ರೈತ ನಾಯಕ, ರೈತರಿಗಾಗಿ ಪಾದಯಾತ್ರೆ ಹಾಗೂ ಹಲವಾರು ಹೋರಾಟಗಳನ್ನು ಮಾಡಿದ ನಮ್ಮೆಲ್ಲರ ನೆಚ್ಚಿನ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ @BSYBJP ಕೃಷಿ ವಿಶ್ವವಿದ್ಯಾನಿಲಯವೇ ಗೌರವ ಡಾಕ್ಟರೇಟ್ ಘೋಷಣೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
#BSY
ನನ್ನ ಅತ್ಯಂತ ನೆಚ್ಚಿನ ನಾಯಕರ ಜೊತೆಗೆ ❤️
ಮಾನ್ಯ ಶ್ರೀ ಯಡಿಯೂರಪ್ಪ ಜೀ ಅವರ ಜೊತೆಗೆ ಕಳೆಯುವ ಕೆಲವೇ ಕ್ಷಣಗಳು ಎಂಥವರನ್ನೂ ಧ್ಯೇಯಪಥದಲ್ಲಿ ಸಾಗಲು ಮತ್ತಷ್ಟು ಶಕ್ತಿ,ಸ್ಪಷ್ಟತೆ,ಪ್ರೇರಣೆ ನೀಡುತ್ತದೆ.
@BSYBJP@BYVijayendra@BYRBJP@SBeldale
ವಚನಗಳ ಮೂಲಕವೇ ಜ್ಞಾನ ದೀವಿಗೆ ಹಚ್ಚಿದ ವಿಶ್ವಗುರು, ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಧೀಮಂತ ಚೇತನ, ಕಾಯಕಯೋಗಿ ಜಗಜ್ಯೋತಿ ಬಸವೇಶ್ವರರ ಜಯಂತಿಯಂದು ಅವರಿಗೆ ನನ್ನ ಶಿರ ಸಾಷ್ಟಾಂಗ ಪ್ರಣಾಮಗಳು.
ಸರ್ವರಿಗೂ ಬಸವ ಜಯಂತಿಯ ಹೃತ್ಪೂರ್ವಕ ಶುಭಾಶಯಗಳು.
#BasavaJayanti
ಶ್ರೀ ರಾಮ ನವಮಿಯ ಹಾರ್ದಿಕ ಶುಭಾಶಯಗಳು.
ಮರ್ಯಾದಾ ಪುರುಷೋತ್ತಮ, ಉತ್ಕೃಷ್ಟ ಜೀವನ ಮೌಲ್ಯಗಳ ಪ್ರತೀಕ, ಪ್ರಭು ಶ್ರೀರಾಮಚಂದ್ರನ ಆದರ್ಶಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಪಾಲಿಸೋಣ. ಶ್ರೀ ರಾಮ ನವಮಿಯನ್ನು ಶ್ರದ್ಧೆ, ಸಂಭ್ರಮ, ಸಡಗರದಿಂದ ಆಚರಿಸೋಣ. ಜೈ ಶ್ರೀ ರಾಮ
#ramnavami2023
ಟಿಕೆಟ್ ಸಿಕ್ಕವರು ನಮ್ಮ ನಾಯಕರೇ, ಟಿಕೆಟ್ ಸಿಗದವರು ನಮ್ಮ ನಾಯಕರೆ ನಾವನಿಸಿದವರಿಗೆ ಟಿಕೆಟ್ ಸಿಗಲಿಲ್ಲವೆಂದು ಮೂರನೆಯವರಿಗೆ ಲಾಭ ಪಡೆಯಲು ಅವಕಾಶ ಮಾಡಿಕೊಡುವುದುಬೇಡ,ಪಕ್ಷದ ನಿರ್ಧಾರವನ್ನು ಸ್ವಾಗತಿಸಿ ಬೆಂಬಲಿಸೋಣ
ನಮ್ಮ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಸೋಣ,
ಅಭ್ಯರ್ಥಿ ಮುಖ್ಯವಲ್ಲ,ಪಕ್ಷ ಮತ್ತು ಪಕ್ಷದ ಸಿದ್ಧಾಂತ ಮುಖ್ಯ @BJP4Karnataka
ನಿಮ್ಮೆಲ್ಲರ ಬಣ್ಣದಂತಹ ಕನಸುಗಳಿಗೆ ಈ ಹೋಳಿ ಹಬ್ಬವು ಜೀವ ತುಂಬಲಿ, ಆಸೆಗಳು ಈಡೇರಲಿ, ಬದುಕು ಬಣ್ಣದಂತೆ ಸುಂದರವಾಗಲಿ ಸಮಸ್ತ ನಾಡಿನ ಜನತೆಗೆ ಹೋಳಿ ಹುಣ್ಣಿಮೆ ಹಬ್ಬದ ಶುಭಾಶಯಗಳು.
#happyholi2023#holihunnime https://t.co/UtwZUXl8KQ
ನಮ್ಮ ಹಿರಿಯ ನಾಯಕರು, ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಕಟ್ಟಿದ ಧೀಮಂತ ನಾಯಕ, ರೈತಬಂಧು, ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ @BSYBJP ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ನಾಡಿನ ಜನರ ಸೇವೆ ಮಾಡಲು ತಮಗೆ ಇನ್ನಷ್ಟು ಆಯುರಾರೋಗ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
@BSYBJP@BYVijayendra