📘 Stock Market Model Book Series (Kannada)
ಷೇರು ಮಾರುಕಟ್ಟೆ ಕಲಿಯಲು ಬಯಸುವ ಹೊಸಬರಿಗಾಗಿ ನಾನು ಸಿದ್ಧಪಡಿಸಿರುವ ಎರಡು ಉಚಿತ PDF ಗಳು ಇಲ್ಲಿವೆ.
✅ Model Book 1 📖
Link- https://t.co/9R4WkekXjj
✅ Model Book 2 📖
Link- https://t.co/YyktSLfu01
ಈ ಪುಸ್ತಕಗಳಲ್ಲಿ ಷೇರು ಮಾರುಕಟ್ಟೆಯ ಮೂಲ��ೂತ ಅಂಶಗಳನ್ನು ಸರಳ ಕನ್ನಡದಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ.
ನಿಮ್ಮ Stock Market Journey ಅನ್ನು ಸರಿಯಾದ Foundation ಮತ್ತು Process ಜೊತೆ ಪ್ರಾರಂಭಿಸಲು ಸಹಾಯ ಮಾಡುವ ಪ್ರಯತ್ನ. 📈
ಓದಿ ನಿಮ್ಮ ಅಭಿಪ್ರಾಯ ತಿಳಿಸಿ. 🙏
❤️ Like | 🔁 Retweet | 📚 Share
#StockMarket #Kannada #SwingTrading
#Nifty50
Nifty 50 ಈಗ 10 ಮತ್ತು 21 ದಿನದ Moving Averages ಮೇಲೆ ಟ್ರೇಡ್ ಆಗ್ತಾ ಇದೆ.
ಇದು Short term ಅಲ್ಲಿ ಆಗುವ ಬದಲಾವಣೆಯನ್ನು ಸೂಚಿಸುತ್ತದೆ. ಒಟ್ಟಾರೆ ಷೇರು ಮಾರುಕಟ್ಟೆ ಈಗ Positive ಆಗಿ ಕಂಡು ಬರ್ತಾ ಇದೆ.
ಅನೇಕ ಷೇರುಗಳು Breakout ಕೊಟ್ಟಿವೆ.20 ರಿಂದ 25% ಏರಿಕೆ ಕೂಡ ಕಂಡಿವೆ.
ಒಟ್ಟಾರೆ ಮಾರುಕಟ್ಟೆ ಅಂದ್ರೆ Broader market ಉತ್ತಮವಾಗಿ ಏರಿಕೆ ಕಂಡಿದೆ.
ಹಲವು ಷೇರುಗಳು Breakout ಕೊಡಲು Ready ಆಗಿವೆ.ಇವುಗಳನ್ನು ಚಾರ್ಟ್ ಜೊತೆ ಹಂಚಿಕೊಳ್ಳುತ್ತೇನೆ.
1️⃣ Follow at @Sheru_Katte
2️⃣ ಈ ಪೋಸ್ಟ್ ಅನ್ನು Retweet ಮಾಡಿ.
3️⃣ Breakout ಮತ್ತು strong ಆಗಿರುವ ಷೇರುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.
Like, Share, Retweet ❤️💚
ಸಾಮ್ರಾಜ್ಯಶಾಹಿಯ ಪರವಾದ ನಾಡದ್ರೋಹಿ ರಾಜ್ಯಪಾಲರ ವಿರುದ್ಧ ಬೃಹತ್ ಹೋರಾಟ ರಾಜಭವನ ಮುತ್ತಿಗೆ ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ದಿನಾಂಕ: 6-4-2026, ಸೋಮವಾರ, ಬೆಳಿಗ್ಗೆ 10 ಗಂಟೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ, ಪ್ರತಿಭಟಿಸೋಣ.
#ಕರವೇ#karave#krv#ಬೆಂಗಳೂರು#bangalore
ಕನ್ನಡಿಗರ ತೆರಿಗೆ ದುಡ್ಡಲ್ಲಿ ಬದುಕುತ್ತಿರುವ ಹಿಂದಿಯನ್ ರಾಜ್ಯಪಾಲ ಯಾವತ್ತಾದ್ರೂ ರೈಲ್ವೇ ತನ್ನ ಪರೀಕ್ಷೆಯಲ್ಲಿ ಕನ್ನಡ ಕೈಬಿಟ್ಟಾಗ ಕನ್ನಡ ಯಾಕೆ ಕೈಬಿಟ್ರಿ ಅಂತ ಕೇಳಿದ್ದನ್ನು ನೋಡಿದ್ರಾ?
CBSC ನಲ್ಲಿ 2 ಭಾಷೆ ಕಲಿಕೆ ಇದೆ, ಆದ್ರೆ ಸ್ಟೇಟ್ ಸಿಲಬಸ್ ನಲ್ಲಿ ಯಾಕೆ 3 ಭಾಷೆ?
ಈ ಬಿಜೆಪಿ ಸಂಘಿಗಳಿಗೆ ಯಾಕೆ ಸ್ಟೇಟ್ ಸಿಲಬಸ್ ನ ಮಕ್ಕಳ ಮೇಲೆ ಧ್ವೇಷ..
ಒಂದು ಕಾಲದಲ್ಲಿ ಬಜೆಟ್ ನಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸಿಕ್ಕಿತು, ಕರ್ನಾಟಕಕ್ಕೆ ಏನು ಸಿಕ್ಕಿತು, ಇನ್ನೇನು ಸಿಗಬೇಕಿತ್ತು ಅನ್ನುವ ಚರ್ಚೆಗಳು ಆಗುತ್ತಿದ್ದವು. ಈಗ ಅದೆಲ್ಲ ಮಾತನಾಡುವ ವಾತಾವರಣ ಇಲ್ಲ.
ಕರ್ನಾಟಕಕ್ಕೆ ಬಂದರೇನು ಬಿಹಾರಕ್ಕೆ ಹೋದರೇನು ನಮ್ಮ ದೇಶದಲ್ಲಿ ಅಭಿವೃದ್ಧಿ ಆಗಬೇಕು ಅನ್ನುವ ಮಟ್ಟಕ್ಕೆ ಜನರ ತಲೆ ಸವರಿ ಆಗಿದೆ. ಸ್ವಹಿತಾಸಕ್ತಿಯ ಬಗ್ಗೆಯೇ ಅಪಸ್ವರಗಳು ಏಳುತ್ತಿವೆ.
ಕನ್ನಡಿಗ ಮತ್ತು ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡಿದರೆ ದೇಶದ್ರೋಹಿ ಅನ್ನುವ ಪಟ್ಟ ಕಟ್ಟುತ್ತಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರ ನೆಟ್ಟಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಸಮಗ್ರ ಕರ್ನಾಟಕ ಅಭಿವೃದ್ಧಿಯ ಬದಲು ಆಗಲೇ ನಲುಗುತ್ತಿರುವ ಬೆಂಗಳೂರನ್ನು ಮತ್ತಷ್ಟು ಉಸಿರುಗಟ್ಟಿಸುತ್ತಾ ಇದೆ.
ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ಕನ್ನಡಿಗರ ಪಾಲಿನ Devil & the Deep Sea ಪರಿಸ್ಥಿತಿ ನಿರ್ಮಾಣ ಮಾಡಿವೆ
ಅಶ್ವಿನಿ ಗೌಡ ನನಗೆ ಸುಮಾರು 10 ಕ್ಕೂ ಹೆಚ್ಚು ವರ್ಷದಿಂದ ಪರಿಚಯ. ಕರವೇಯಿಂದ ನಡೆದ ಅನೇಕ ಹೋರಾಟಗಳಲ್ಲಿ ಅವರೊಂದಿಗೆ ಭಾಗವಹಿಸಿದ್ದೇನೆ. ಬಿಗ್ ಬಾಸ್ ಶೋನಲ್ಲಿರುವ ಅಶ್ವಿನಿ ಗೌಡ ಪರವಾಗಿ ಒಂದು ಪೊಸ್ಟ್ ಮಾಡಿದ್ದಕ್ಕೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಗೆಳೆಯರೊಬ್ಬರು ಪೋಸ್ಟ್ ಗೆ ಕಮೆಂಟ್ ಮಾಡಿ, ಅವರಿಗೆ ಕನ್ನಡ ಬರೆಯೊಕ್ಕೆ ಬರೊಲ್ಲಾ ಅಂತ ನನ್ನ ವಾಲ್ ನಲ್ಲಿ ಗೇಲಿ ಮಾಡೊಕ್ಕೆ ಪ್��ಯತ್ನ ಮಾಡಿದರು, ಕನ್ನಡ ಹೋರಾಟ ಮಾಡೋಕ್ಕೆ ಕನ್ನಡದ ಮೇಲೆ ಕನ್ನಡಿಗರ ಮೇಲೆ ಕರ್ನಾಟಕದ ಮೇಲೆ ಪ್ರೀತಿಯಿದ್ದರೆ ಸಾಕು, ಯಾರು ಬಾಗಿಲಲ್ಲಿ ನಿಂತು ಕನ್ನಡ ಪರೀಕ್ಷೆ ನೀಡಿ ಕನ್ನಡ ಹೋರಾಟಕ್ಕೆ ಬರಬಹುದು ಅಥವಾ ಬೇಡ ಅಂತ ಹೇಳೊಲ್ಲಾ ಅಂದೆ.
ಜೊತೆಗೆ ಡಿಎನ್ ಶಂಕರ ಭಟ್ಟರ ಒಂದ���ಷ್ಟು ಪುಸ್ತಕ ಓದಿ ಕನ್ನಡ ವ್ಯಾಕರಣ ಅರ್ಥ ಮಾಡಿಕೊಳ್ಳೋಕ್ಕೆ ಹೇಳಿದೆ, ಮಾತು ಮುಂದುವರೆಯಿತು, ಕನ್ನಡ ಪರ ಹೋರಾಟಗಾರರಿಗೆ ಕನ್ನಡದ ವ್ಯಾಕರಣ ಗೊತ್ತಿರಲೇಬೇಕು ಅಂತ ನೀವು ಕಂಡೀಶನ್ ಹಾಕುತ್ತಿದ್ದೀರ, ನೀವು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವವರು ಕನ್ನಡ ಹೋರಾಟದಲ್ಲಿ ಭಾಗವಹಿಸಿರಲೇಬೇಕು, ಪೋಲೀಸ್ ಕೇಸ್ ಹಾಕಿಸಿಕೊಂಡಿರಲೇಬೇಕು ಅಂತ ನಾನು ಕಂಡೀಶನ್ ಹಾಕಿದ್ರೆ ಹೇಗಿರುತ್ತೆ ಅಂದೆ, ಹೋಗಲಿ ಹೋರಾಟ, ಪೋಲೀಸ್ ಕೇಸ್ ವಿಚಾರ ಬಿಡಿ ರಂಗಭೂಮಿಯಲ್ಲಿ ಅನೇಕ ಜನ ಸಮಾಜದ ಹುಳುಕಿನ ವಿರುದ್ದ, ರಾಜಕೀಯ ವ್ಯವಸ್ತೆ ವಿರುದ್ದ ನಾಟಕ, ಹಾಡು ಬರೆದು ವಿರೋಧ ಮಾಡುತ್ತಾರೆ, ನೀವೇನಾದರೂ ಹಾಗೆ ವ್ಯವಸ್ತೆಯ ಹುಳುಕಿನ ವಿರುದ್ದ ರಂಗಭೂಮಿಯ ಮೂಲಕ ಏನಾದರೂ ಮಾಡಿದ್ದೀರ ಅಂತ ಕೇಳಿದ್ದಕ್ಕೂ ಸರಿಯಾದ ಉತ್ತರ ಬರಲಿಲ್ಲ.
ಅಶ್ವಿನಿ ಗೌಡ ಕನ್ನಡ ಪರವಾದ ಹೋರಾಟ ಮಾಡುವಾಗ, ವ್ಯವಸ್ತೆಯ ವಿರುದ್ದ ಮಾಡುವ ಹೋರಾಟದ ಸಮಯದಲ್ಲಿ ಆಗುವ ಕೇಸ್ ಗಳು ಕೇಸ್ ನಿಂದಾಗಿ ಕೋರ್ಟಿನ ಕಡಕಟೆಯಲ್ಲಿ ನಿಲ್ಲುವುದು ರಂಗಭೂಮಿಯ ಸ್ಟೇಜ್ ಮೇಲೆ ನಿಂತಷ್ಟು ಸುಲಭವಲ್ಲ ಅನ್ನೋದು ಆ ಗೆಳೆಯರಿಗೆ ���ಿಳಿದಿಲ್ಲ ಅಂತ ಕಾಣಿಸುತ್ತೆ.
ಕರವೇಯಲ್ಲಿ ಕಾರ್ಯಕರ್ತರನ್ನೆಲ್ಲಾ ಸೇರಿಸಿ ಕರವೇ ಕುಟುಂಬ ಎಂದೇ ಕರೆದುಕೊಳ್ಳುತ್ತೇವೆ, ಕರವೇ ಹೋರಾಟದ ಜೊತೆಗೆ ನಮ್ಮ ವಯಕ್ತಿಕ ಬದುಕಿನ ಅನೇಕ ಏಳು ಬೀಳಿನಲ್ಲಿ ಕರವೇ ಕುಟುಂಬ ಒಟ್ಟಾಗಿಯೇ ಇರುತ್ತದೆ. ಹಾಗಾಗಿ ಕರವೇ ಕುಟುಂಬದ ಅಶ್ವಿನಿಯವರ ಜೊತೆಗೆ ಹೋರಾಟಗಳಲ್ಲಿ ಭಾಗವಹಿಸಿರುವುದರಿಂದ ಮತ್ತು ಅವರ ಹೋರಾಟಗಳನ್ನು ಮತ್ತು ಹೋರಾಟದಿಂದ ಆಗಿರುವ ಬದಲಾವಣೆಗಳು ಗೊತ್ತಿರುವುದರಿಂದ ನಾನು ಅಶ್ವಿನಿ ರವರ ಪರವಾಗಿ ಪೋಸ್ಟ್ ಹಾಕುತ್ತೇನೆ. ಅಶ್ವಿನಿ ಗೌಡ ರವರಿಗಾಗಲಿ ಅಥವಾ ಕರವೇಗಾಗಲಿ ಬಿಗ್ ಬಾಸ್ ಗೆಲುವು ಸೋಲಿನಿಂದ ಏನೋ ಆಗಿಬಿಡುತ್��ೆ ಅನ್ನೋ ಭ್ರಮೆಯಿಲ್ಲ. ಅಶ್ವಿನಿ ಗೌಡ ಬಿಗ್ ಬಾಸ್ ಗೆಲ್ಲಲಿ ಸೋಲಲಿ, ಕರವೇ ಹೋರಾಟಗಳು ಕರ್ನಾಟಕದ ಪರವಾಗಿ ಮುಂದುವರೆಯುತ್ತದೆ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಗೌಡ ರವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕರವೇ ಹೋರಾಟದಲ್ಲಿ ಭಾಗಿಯಾಗಲಿ ಎನ್ನುವ ಆಶಯ ನನ್ನದು.
ಕೊನೆಗೆ ಕರವೇಗೆ ಕನ್ನಡ- ಕನ್ನಡಿಗರ- ಕರ್ನಾಟಕದ ಪರವಾದ ಹೋರಾಟಗಳಲ್ಲಿ ಸಿಗುವ ಜಯವೇ ನಿಜವಾದ ಜಯ.
ನಿಮಗೆ ಅಶ್ವಿನಿ ಗೌಡ ರವರ ಪರವಾದ ಪೋಸ್ ಸರಿಯೆನಿಸಿದರೆ ಬೆಂಬಲಿಸಿ ಓಟ್ ಮಾಡಿ, ಇಲ್ಲ ಅಂದ���ರೆ ನಿಮ್ಮ ವಾಲ್ ನಲ್ಲಿ ನಿಮಗೇನುಬೇಕೋ ಬರೆದುಕೊಳ್ಳಿ ಪ್ರೆಂಡ್ಸ್
✅ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ,ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಉಚಿತವಾಗಿ ಇರುವಂತಹ Websites.
1. ಹೊಸದಾಗಿ ಷೇರು ಮಾರುಕಟ್ಟೆ ಬಗ್ಗೆ ಸಂಪೂರ್ಣವಾಗಿ ಕಲಿಯಲು,Fundamentals, Technical ಬಗ್ಗೆ ತಿಳಿದುಕೊಳ್ಳಲು ಇರುವ Website -
Zerodha Varsity
https://t.co/OObyjgDoC3
2.Fundamental Analysis ಮೂಲಕ ನೀವು ಹೂಡಿಕೆ ಮಾಡಿದ ಕಂಪನಿಯ ಷೇರುಗಳ Balance Sheet, Profit loss ಹಾಗೂ ಇನ್ನೂ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಇರುವ ಅತ್��ುತ್ತಮ Website.
https://t.co/8kHcsC9QxS
https://t.co/J3XYXFr5WL
3. Technical Analysis ಮೂಲಕ ಚಾರ್ಟ್ ಗಳನ್ನು ನೋಡುವುದನ್ನು ಕಲಿಯಲು,ವಿವಿಧ Indicators ಬಳಕೆ ಮಾಡಲು ಇರುವ Website.
Tradingview.
https://t.co/xQWumLRjDO
4. ಹೊಸದಾಗಿ ಬಿಡುಗಡೆ ಆಗುವ ಎಲ್ಲ IPO ಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇರುವ Website.
https://t.co/5dwW7GMtEn
https://t.co/L3dyDE7d6d
5. ನಮ್ಮ ದೇಶದ ಷೇರು ಮಾರುಕಟ್ಟೆಯನ್ನು ಹೊರತುಪಡಿಸಿ ಜಗತ್ತಿನ ಇತರ ದೇಶಗಳ ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇರುವ Website.
https://t.co/2qEuek62v6
https://t.co/1h4wo0n3Y5
6.ಟ್ರೇಡರ್ & ಇನ್ವೆಸ್ಟ��್ ಅವರಿಗೆ ಸಹಾಯ ಆಗುವ ಅತಿ ಮುಖ್ಯ Website ಇಲ್ಲಿದೆ..
ಇಲ್ಲಿ ಎಲ್ಲಾ ಷೇರುಗಳ ಮಾಹಿತಿ ಸಿಗುತ್ತೆ.
ಪ್ರತಿದಿನ ನಡೆಯುವ ಷೇರು ಖರೀದಿ,ಮಾರಾಟದ ಎಲ್ಲ ವಿವರಗಳು ಇಲ್ಲಿ ಸಿಗುತ್ತೆ..
Nse India
https://t.co/msyf8bPBjz
7.NSE India official Website ಇದು.
Recent ಆಗಿ list ಆಗಿರುವ IPOs &SME stocks track ಮಾಡಲು ಅನುಕೂಲ ಆಗುತ್ತದೆ.
https://t.co/7o6X3lXU4X…
8.ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರಿಗೆ ಬೇಕಾದ 3 ಅತ್ಯುತ್ತಮ Websites ಇಲ್ಲಿವೆ.
ಇವುಗಳ ಮೂಲಕ ಎಲ್ಲ mutual fund schemes ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು..
ಸ್ಕೀಮ್ ವಿವರ, ranking, returns ಪರಿಶೀಲನೆ ಎಲ್ಲ��ೂ ಒಂದೇ ಕಡೆ ನೋಡಬಹುದು...
https://t.co/4g4bUu6Fp6
https://t.co/fRnzOa1TnT
https://t.co/sYlVH9r1NY
ಇವೆಲ್ಲ ಸಂಪೂರ್ಣ ಉಚಿತವಾಗಿ ಇರುವಂತಹ Websites.
ಇವುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಷೇರು ಮಾರುಕಟ್ಟೆ ಪಯಣ ಶುರು ಮಾಡಿ.
ಇದು ಎಲ್ಲ ಕನ್ನಡಿಗರಿಗೆ ತಲುಪಲಿ.
Like, Share, Retweet ❤️ 💚
✅Swing Trading ಯಾಕೆ ಸಾಮಾನ್ಯ ಹೂಡಿಕೆದಾರರಿಗೆ ಸೂಕ್ತವಾದ ಆಯ್ಕೆ??
ಇನ್ವೆಸ್ಟ್ಮೆಂಟ್ ಅಂತಾ ಬಂದ್ರೆ ಅನೇಕ ರೀತಿಯ ವಿಧಗಳಿವೆ.
1. Intraday trading
2. Swing Trading
3. Positional Trading
4.Long term Investment
ಷೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಹಣ ಗಳಿಸಲು ಎರಡು ಪ್ರಮುಖ ಮಾರ್ಗಗಳಿವೆ-
There are two ways to make money from the Stock Market.
1.ಪ್ರತಿ ವರ್ಷ ಸ್ಟಾಕ್ ಮಾರ್ಕೆಟ್ ಅಲ್ಲಿ ಅನೇಕ ಷೇರುಗಳು ಭಾರಿ ಪ್ರಮಾಣದ ಏರಿಕೆ ಕಾಣುತ್ತವೆ.
ಇಂತಹ ಕೆಲವು ದೊಡ್ಡ ಲಾಭದಾಯಕ ಷೇರುಗಳ���್ನು (huge winners) ಹುಡುಕುವುದು. ಅವುಗಳಲ್ಲಿ ದೊಡ್ಡ ಮಟ್ಟದ ಹಣವನ್ನು ಹೂಡಿಕೆ ಮಾಡಿ, ಅತಿ ಹೆಚ್ಚಿನ ಲಾಭ ಸಿಗುವವರೆಗೆ ಕಾಯುವುದು.
2. ಅನೇಕ ಷೇರುಗಳು ಅತಿ ಕಡಿಮೆ ಅವಧಿಯಲ್ಲಿ ಅಂದ್ರೆ 4 ರಿಂದ 10 ದಿನಗಳಲ್ಲಿ 20 ರಿಂದ 40% ಏರಿಕೆ ಕಾಣುತ್ತವೆ.
ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ನೂರಾರು ಷೇರುಗಳನ್ನು ಹುಡುಕುವುದು. ಇವುಗಳಲ್ಲಿ ಸಕ್ರಿಯವಾಗಿ ಟ್ರೇಡಿಂಗ್ ಮಾಡುವ ಮೂಲಕ (ಖರೀದಿಸುವುದು ಮತ್ತು ಮಾರಾಟ ಮಾಡುವುದು) ನಮ್ಮ ಹಣವನ್ನು ತ್ವರಿತವಾಗಿ ಹೆಚ್ಚಿಸುವುದು ಇದರ ಗುರಿಯಾಗಿದೆ.
Long term investment ಅಂತಾ ಹೂಡಿಕೆ ಮಾಡಿ ಹಣ ಗಳಿಕೆ ಮಾಡಬೇಕು ಅಂದ್ರೆ ನೀವು Buy ಮಾಡಿರುವ ಷೇರುಗಳು ದೀರ್ಘಾವಧಿಯಲ್ಲಿ 200% ರಿಂದ 300% ಲಾಭ ಗಳಿಸಬೇಕು.ಆದರೆ ಇದು ಅಷ್ಟು ಸುಲಭವಾಗಿ ಆಗುವಂತಹದು ಅಲ್ಲ.ಯಾವುದೇ ಸ್ಟಾಕ್ ಒಂದೇ ಸಮನೆ ಏರಿಕೆ ಕಾಣುವುದಿಲ್ಲ.ಬದಲಾಗಿ ಹಂತ ಹಂತವಾಗಿ ನಿಧಾನಕ್ಕೆ ಏರಿಕೆ ಕಾಣುತ್ತೆ.
200% ರಿಂದ 300% ಏರಿಕೆ ಕಾಣುವ ಮೊದಲು ಅದು 40 ರಿಂದ 50% ಕುಸಿತ ಕಾಣುವುದು ಸಹಜ.
ಇಂತಹ ಷೇರು ಮಾರುಕಟ್ಟೆಯ ದೊಡ್ಡ ಏರಿಳಿತಗಳನ್ನು ತಡೆದುಕೊಳ್ಳುವ ಮಾನಸಿಕ ಸ್ಥೈರ್ಯ ಎಲ್ಲರಿಗೂ ಇರುವುದಿಲ್ಲ.ಜೊತೆಗೆ ಇದಕ್ಕೆ ಬೇಕಾಗುವ ಸಮಯ ಬಹಳ. ಹಣವನ್ನು ಹೂಡಿಕೆ ಮಾಡಿ ವರ್ಷಾನುಗಟ್ಟಲೆ ತಾಳ್ಮೆಯಿಂದ ಕಾಯುವುದು ಅಷ್ಟು ಸುಲಭದ ಕೆಲಸವಲ್ಲ.
ಇದರ ಬದಲಾಗಿ ಪ್ರತಿ ವರ್ಷ 20 ರಿಂದ 30% ಏರಿಕೆ ನೂರಾರು ಷೇರುಗಳಲ್ಲಿ ಕಂಡು ಬರುತ್ತದೆ. ಇಂತಹ ಷೇರುಗಳನ್ನು ಹುಡುಕಿ ಹಣ ಹೂಡಿಕೆ ಶುರು ಮಾಡಿದರೆ ನೀವು ಬಹಳ ವೇಗವಾಗಿ ಹೆಚ್ಚಿನ ಹಣ ಸಂಪಾದನೆ ಮಾಡಬಹುದು.
💹Swing Trading -
ಸ್ವಿಂಗ್ ಟ್ರೇಡಿಂಗ್ ಅನ್ನೋದು ಒಂದು ರೀತಿಯ ಟ್ರೇಡಿಂಗ್ ಶೈಲಿ.
ಇಲ್ಲಿ ಯಾವುದೇ ಒಂದು ಕಂಪನಿಯ ಷೇರನ್ನು 5 ರಿಂದ 10 ದಿನಗಳವರೆಗೆ ಅಥವಾ ಕೆಲವು ವಾರಗಳವರೆಗೆ ಖರೀದಿ ಮಾಡಿ ಷೇರಿನ ಬೆಲೆಯಲ್ಲಿ ಕಂಡು ಬರುವ ಏರಿಕೆ/ಇಳಿಕೆಯಿಂದ ಲಾಭ ಪಡೆಯುವ ಒಂದು ಟ್ರೇಡಿಂಗ್ style..
👉 ಅಂದರೆ,ಇದು ದೀರ್ಘಾವಧಿ ಹೂಡಿಕೆ Long-term Investment ಅಲ್ಲ, ಜೊತೆಗೆ ಇದು Intraday day ಕೂಡಾ ಅಲ್ಲ..
ಇದು ಮಧ್ಯಮ ಅವಧಿಯ (Short to Medium term) ಟ್ರೇಡಿಂಗ್.
ಸ್ವಿಂಗ್ ಟ್ರೇಡಿಂಗ್ ತತ್ವಗಳನ್ನು ಸರಿಯಾಗಿ ಅಳವಡಿಸಿಕೊಂಡರೆ, ನಿಮ್ಮ ಹಣವನ್ನು ಬೆಳೆಸಲು ಇದು ಅತ್ಯಂತ ವೇಗವಾದ ಮಾರ್ಗವಾಗಿದೆ
ಏರಿಕೆಯಲ್ಲಿ ಇರುವ ಷೇರುಗಳಲ್ಲಿ ನಿಮ್ಮ ಹಣ ಹೂಡಿಕೆ ಮಾಡುವುದು ಮತ್ತು ಒಂದೇ ಕಡೆ ನಿಮ್ಮ ಹಣ ಸಿಲುಕಿಕೊಳ್ಳುವುದನ್ನು (dead money) ತಪ್ಪಿಸುವುದು ಇದರ ಗುರಿ.
ಷೇರುಗಳು 2 ರಿಂದ 10 ದಿನಗಳವರೆಗೆ 5% ರಿಂದ 30% ರಷ್ಟು ವೇಗದಲ್ಲಿ (momentum bursts) ಚಲಿಸುತ್ತವೆ. ನಂತರ ಅವು ಸರಾಸರಿ ಬೆಲೆಗೆ ಮರಳುತ್ತವೆ (mean-revert) ಅಥವಾ ಹೆಚ್ಚು ಏರಿಕೆ ಇಳಿಕೆ ಕಾಣದೆ ಒಂದು particular range ಅಲ್ಲಿ ಟ್ರೇಡ್ ಆಗ್ತಾ ಹೋಗುತ್ತವೆ (sideways consolidation). ಅಲ್ಪಾವಧಿಯ ಈ ವೇಗದ ಚಲನೆಯ ಲಾಭವನ್ನು ಪಡೆಯುವುದು ಮತ್ತು ಬೆಲೆ ಸ್ಥಿರವಾಗುವ ಸಮಯವನ್ನು ತಪ್ಪಿಸುವುದು ಪ್ರತಿಯೊಬ್ಬ ಸ್ವಿಂಗ್ ಟ್ರೇಡರ್ನ ಗುರಿಯಾಗಿದೆ.
ಸ್ವಿಂಗ್ ಟ್ರೇಡಿಂಗ್ನ ವಿಶೇಷತೆಯೆಂದರೆ ಅದು ಅನೇಕ ಅವಕಾಶಗಳನ್ನು (signals) ನೀಡುತ್ತದೆ. ಪ್ರತಿ ಅವಕಾಶಕ್ಕೂ ನೀವು ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ಟ್ರೇಡ್ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂದು ನೀವು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಒಂದು ಟ್ರೇಡ್ ನಿಮ್ಮ ಇಡೀ ವರ್ಷದ ಅಥವಾ ತಿಂ��ಳ ಲಾಭವನ್ನು ನಿರ್ಧರಿಸುವುದಿಲ್ಲ, ಇದು compounding ಮ್ಯಾಜಿಕ್ ಮೇಲೆ ಅವಲಂಬಿತವಾಗಿದೆ.
For more such information do follow @Sheru_Katte
Like, Share, Retweet ❤️ 💚
"First Rule of Trading: Protect the Capital"
Stoploss -
✅ಬೈಕ್ ಓಡಿಸುವಾಗ ನಾವು ಹೆಲ್ಮೆಟ್ ⛑️ ��ಾಕೋದು ಆಕ್ಸಿಡೆಂಟ್ ಆಗಲಿ ಅಂತ ಅಲ್ಲ..ಒಂದು ವೇಳೆ ಆದರೆ ನಮ್ಮ ತಲೆ safe ಆಗಿ ಇರಲಿ ಅಂತ.
✅ಕಾರು ಓಡಿಸುವಾಗ Seatbelt ಹಾಕೋದು ಆಕ್ಸಿಡೆಂಟ್ ಆಗುತ್ತೆ ಅಂತಾ ಅಲ್ಲ.ಬದಲಾಗಿ ಆದರೆ ಕಾರು 🚗 ಒಳಗಡೆ safe ಆಗಿ ನಾವು ಇರಲಿ ಅಂತಾ.
✅ಅದೇ ತರ Fire Extinguisher ಇರುತ್ತೆ.. ಬೆಂಕಿ ಬಿದ್ದರೆ ಆರಿಸೋಕೆ ಬೇಕು ಅಂತ.
ಅದೇ ತರ ಸ್ಟಾಕ್ ಮಾರ್ಕೆಟ್ ಅಲ್ಲಿ Stoploss ಇದೆ.
ಅಂದ್ರೆ ನೀವು ಖರೀದಿ ಮಾಡಿರುವ ಷೇರುಗಳು ಜಾಸ್ತಿ ಇಳಿಕೆ ಕಾಣಲು ಶುರು ಮಾಡಿದ್ರೆ ಒಂದು ನೀವು ಮಾರಾಟ ಮಾಡಿ exit ಆಗೋಕೆ ಇರುವ ಅವಕಾಶ.
Stoploss ಎಂದರೆ – ನೀವು ಖರೀದಿಸಿದ ಷೇರು ನೀವು ಅಂದುಕೊಂಡಂತೆ ಏರಿಕೆ ಕಾಣದೆ, ಇಳಿಕೆ ಕಾಣಲು ಶುರು ಮಾಡಿದರೆ, ನಿರ್ದಿಷ್ಟ ಸಣ್ಣ ಪ್ರಮಾಣದ ನಷ್ಟದಲ್ಲಿ (Loss) ಮಾರಾಟ ಮಾಡಿ ಮಾ��ುಕಟ್ಟೆಯಿಂದ ಹೊರಬರಲು (Exit) ಇರುವ ಒಂದು ಸ್ವಯಂಚಾಲಿತ ಅಥವಾ ಪೂರ್ವ-ನಿರ್ಧರಿತ ಅವಕಾಶ.
📉 Stoploss ಏಕೆ ಮುಖ್ಯ?
ಸಾಮಾನ್ಯವಾಗಿ ಹೂಡಿಕೆದಾರರು ಮಾಡುವ ದೊಡ್ಡ ತಪ್ಪು ಎಂದರೆ, ಷೇರು ಇಳಿಕೆ ಕಂಡಾಗ, "ಇನ್ನೇನು ಏರಿಕೆ ಆಗಬಹುದು" ಎಂದು ಕಾಯುತ್ತಾ ಕೂರುವುದು. ಇದು ಅಪಾಯಕಾರಿ.ಏಕೆಂದರೆ ಸಾಮಾನ್ಯ ಹೂಡಿಕೆದಾರರು ಖರೀದಿ ಮಾಡಿದ ಅನೇಕ ಷೇರುಗಳು 50 ರಿಂದ 60%,ಕೊನೆಗೆ 80-90% ವರೆಗೆ ಕುಸಿತ ಕಂಡಿರುವ ಉದಾಹರಣೆ ಇದೆ.
ಅದಕ್ಕೆ ಬದಲಾಗಿ Stoploss ಬಳಕೆ ಮಾಡಿದ್ರೆ ಅತಿ ಕಡಿಮೆ Loss ಆಗುವ ಸಾಧ್ಯತೆ ಇರುತ��ತೆ.
ನೀವು ಯಾವದೇ ಷೇರು Buy ಮಾಡಿದ್ರೆ Maximum ಅಂದ್ರೆ 8-10% ಕುಸಿತ ಕಂಡರೆ ಮಾರಾಟ ಮಾಡಿ ನಿಮ್ಮ ಹಣ ಉಳಿಸಿಕೊಳ್ಳುವುದ��� ಮುಖ್ಯ.
ಯಾಕಂದ್ರೆ 8-10% Loss ಮುಂದಿನ ದಿನಗಳಲ್ಲಿ 40-50% Loss ಆಗಿ ಬದಲಾಗುತ್ತೆ.
ನೀವು ಷೇರು Buy ಮಾಡುವ ಮುಂಚೆನೇ ನಿಮ್ಮ ಹಣ ಕಳೆದುಕೊಳ್ಳುವ ಸಾಮರ್ಥ್ಯ ಲೆಕ್ಕ ಹಾಕಿ.
ಉದಾಹರಣೆಗೆ ನೀವು ಒಂದು ಷೇರು ಏರಿಕೆ ಆಗುತ್ತೆ ,ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಿ ಲಾಭ ಆಗಬಹುದು ಅಂತ Buy ಮಾಡಿದ್ರೆ , ಒಂದು ವೇಳೆ ಅದು ಕುಸಿತ ಕಾಣಲು ಶುರು ಮಾಡಿದ್ರೆ ನಿಮ್ಮ ಹಣ ಎಷ್ಟು Loss ಆಗುತ್ತೆ ಅನ್ನುವುದನ್ನು ಲೆಕ್ಕ ಹಾಕಿ Stoploss ನಿರ್ಧಾರ ಮಾಡಿ.
ಕೆಲವರು 3-4% loss ಅಲ್ಲಿ Exit ಆದ್ರೆ,ಕೆಲವರು 8- 10% loss ಅಲ್ಲಿ Exit ಆಗುತ್ತಾರೆ.
ಉದಾಹರಣೆಗೆ- ನೀವು ₹1,00,000 ಹೂಡಿಕೆ ಮಾಡುತ್ತಿದ್ದರೆ ಮತ್ತು ಅದರಲ್ಲಿ ₹10,000 (10%) ನಷ್ಟವನ್ನು ಮಾತ್ರ ಸಹಿಸಲು ಸಿದ್ಧರಿದ್ದರೆ, ನಿಮ್ಮ ಗರಿಷ್ಠ ಅಪಾಯ ₹10,000 ಆಗಿರುತ್ತದೆ.
ನೀವು ಒಂದು ಷೇರನ್ನು ₹100 ಕ್ಕೆ ಖರೀದಿಸಿದರೆ, ನೀವು ನಿರ್ಧರಿಸಿದ 8% ಅಥವಾ 10% ನಷ್ಟವಾದಾಗ (₹92 ಅಥವಾ ₹90) Stoploss ಇಡಬೇಕು.
Stoploss ಎಂದರೆ ನಿಮ್ಮ ಹಣವನ್ನು ದೊಡ್ಡ ನಷ್ಟದಿಂದ ರಕ್ಷಿಸಿಕೊಳ್ಳಲು ಇರುವ ಒಂದು ಹೂಡಿಕೆಯ ಶಿಸ್ತು (Investment Discipline). ಇದನ್ನು ಕಡ್ಡಾಯವಾಗಿ ಬಳಸುವುದು ಅತ್ಯಗತ್ಯ.
Like, Share, Retweet ❤️💚
ಯಾವುದೇ ಕ್ಷೇತ್ರದಲ್ಲಿ (Field) ಯಶಸ್ಸು ಸಾಧಿಸಬೇಕು ಅಂದ್ರೆ ಇಷ್ಟು ದಿನಗಳು, ವರ್ಷಗಳು ಅಂತಾ ಬೇಕಾಗುತ್ತೆ..
Success Takes Time
🏥 Doctor – 6+ years
⚖️ Lawyer – 6+ years
🏗 Engineer – 4+ years
🏛 IAS/IPS/IFS– 3 to 5+ years
💼 Chartered Accountant – 5+ years
ಆದ್ರೆ Trading 📈 & Investment 📊 ಅಂತಾ ಬಂದ್ರೆ ಅತಿ ಕಡಿಮೆ ಸಮಯದಲ್ಲಿ ಬಹಳ ಬೇಗ ಲಾಭ ಸಿಗಬೇಕು, ಹೆಚ್ಚು ಹಣ ಗಳಿಸಬೇಕು ,success ಬೇಗ ��ಿಗಲಿ ಅಂತಾ ಇಚ್ಚೆ ಪಡುತ್ತೇವೆ.
ಆದ್ರೆ ಇದು practical ಆಗಿ ಸಾಧ್ಯವಿಲ್ಲ..ಏಕೆಂದರೆ ಇತರ ಎಲ್ಲ ಕ್ಷೇತ್ರಗಳಂತೆ ಷೇರು ಮಾರುಕಟ್ಟೆ ಕೂಡಾ ಹೆಚ್ಚಿನ ಶಿಸ್ತು, ಶ್ರದ್ದೆ , ಸಮಯ ಬೇಡುವ ಕ್ಷೇತ್ರ..
ಇಲ್ಲಿ ಯಶಸ್ವಿಯಾಗಿ ಹಣ ಸಂಪಾದನೆ ಮಾಡಬೇಕೆಂದರೆ ಒಂದು ನಿರ್ದಿಷ್ಟ ಸಮಯ ಮೀಸಲಿಟ್ಟು ಪ್ರತಿದಿನ ಕಲಿಯುತ್ತಾ ಹೋಗಬೇಕು..
ನಿಧಾನವಾಗಿ ಸ್ಪಲ್ಪ ಸ್ಪಲ್ಪ ಹಣ ಹೂಡಿಕೆ ಮಾಡುವ ಮೂಲಕ ಮಾರುಕಟ್ಟೆಯ ಆಳ ಅಗಲ ಅರಿತುಕೊಳ್ಳಬೇಕು .
ಪುಸ್ತಕದ 📚 ಓದಿನ ಮೂಲಕ,practical ಆಗಿ ಹೂಡಿಕೆ ಮಾಡುವುದರ ಮೂಲಕ , ಪ್ರತಿದಿನ ಮಾರುಕಟ್ಟೆಗೆ ಸ್ಪಲ್ಪ ಸಮಯವನ್ನು ಮೀಸಲಿಡುವ ಮೂಲಕ ನೀವು ಷೇರು ಮಾರುಕಟ್ಟೆಯ expert ಆಗಿ ಹಣ ಗಳಿಸಬಹುದು. ಅದು ಬಿಟ್ಟರೆ ಬೇರೆ ಯಾವದೇ ಅಡ್ಡ ದಾರಿ (short cut ) ಇಲ್ಲ.
ಆದ್ದರಿಂದ ನಮ್ಮ ಜ್ಞಾನ,ಅನುಭವವನ್ನು ಹೆಚ್ಚಿಸಿಕೊಳ್ಳುವುದು.ಹಂತ ಹಂತವಾಗಿ ಕಲಿತು,ನಮ್ಮ ಗಳಿಕೆ , ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಶ್ರೀಮಂತರಾಗೋಣ....
Think in years.
Stay consistent, Stay patient, and the rewards will follow.
LEARN. ADAPT. EVOLVE.
Like, Share, Retweet 💚❤️
ಔಟ್ ಡೇಟ್ ಕನ್ನಡಿಗರಾಗಬೇಡಿ...
ಇವತ್ತು ಕನ್ನಡಿಗರಿಗೆ ಕ��ಲಸಗಳು ಯಾಕೆ ಸಿಗುತ್ತಿಲ್ಲ ಅಂತಂದ್ರೆ ಒಂದೇ ದಿಕ್ಕಿನಲ್ಲಿ ಯೋಚಿಸುವುದು, ನಾಲ್ಕಾರು ಜನರ ಅನುಭವದ ಮಾತುಗಳು ಕೇಳದೇ ಇರುವುದು, ಕಷ್ಟ ಪಡೆ ಇರುವುದು, ಆಲಸ್ಯ, ಅಹಂ, ಒಗ್ಗಟ್ಟಿಲ್ಲ, ಸ್ವಾಭಿಮಾನ ಇಲ್ಲ, ಇನ್ನು ಬಹುತೇಕರಿಗೆ ಸ್ವಾಭಿಮಾನದ ಅರ್ಥವೇ ಗೊತ್ತಿಲ್ಲ, ಒಂದ ಎರಡ ಕಾಯಿಲೆಗಳು, ಇವೆಲ್ಲ ಇರುವುದರಿಂದ ಕನ್ನಡಿಗರ ಅಭಿವೃದ್ಧಿ ಇನ್ನೆಲ್ಲಿ ???
🚨೨೦೨೫ ರ ಅತಿ ಹೆಚ್ಚು ಸಂಭಾವನೆ ಪಡೆಯುವ ಪದವಿ ಮೇಜರ್ಗಳು:
೧. ನರ್ಸ್ ಅರಿವಳಿಕೆ - $135K ರಿಂದ $205K+
೨. ಪೆಟ್ರೋಲಿಯಂ ಎಂಜಿನಿಯರಿಂಗ್ - $125K ರಿಂದ $205K+
೩. ಕಂಪ್ಯೂಟರ್ ಎಂಜಿನಿಯರಿಂಗ್ - $95K ರಿಂದ $180K+
೪. ಏರೋಸ್ಪೇಸ್ ಎಂಜಿನಿಯರಿಂಗ್ - $90K ರಿಂದ $175K+
��. ಆಕ್ಚುರಿಯಲ್ ಸೈನ್ಸ್ - $88K ರಿಂದ $168K+
೬. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ - $87K ರಿಂದ $162K+
೭. ಕೈಗಾರಿಕಾ ಎಂಜಿನಿಯರಿಂಗ್ - $82K ರಿಂದ $158K+
೮. ಅಂಕಿಅಂಶಗಳು - $82K ರಿಂದ $152K+
೯. ರಾಸಾಯನಿಕ ಎಂಜಿನಿಯರಿಂಗ್ - $82K ರಿಂದ $152K+
೧೦. ಹಣಕಾಸು - $72K ರಿಂದ $152K+
೧೧. ಮೆಕ್ಯಾನಿಕಲ್ ಎಂಜಿನಿಯರಿಂಗ್ - $77K ರಿಂದ $148K+
೧೨. ಬಯೋಮೆಡಿಕಲ್ ಎಂಜಿನಿಯರಿಂಗ್ - $77K ರಿಂದ $142K+
೧೩. ಮಾಹಿತಿ ತಂತ್ರಜ್ಞಾನ - $72,000 ರಿಂದ $142,000+
೧೪. ಅರ್ಥಶಾಸ್ತ್ರ - $72,000 ರಿಂದ $135,000+
೧೫. ಕಂಪ್ಯೂಟರ್ ವಿಜ್ಞಾನ / ಸಾಫ್ಟ್ವೇರ್ ಎಂಜಿನಿಯರಿಂಗ್ - $95,000 ರಿ���ದ $185,000+
ಈ ಕ್ಷೇತ್ರಗಳು ಅತ್ಯುತ್ತಮ ಗಳಿಕೆಯ ಸಾಮರ್ಥ್ಯವನ್ನು ಒದಗಿಸುತ್ತವೆ ಮತ್ತು ಬಹು ಕೈಗಾರಿಕೆಗಳಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ.
ಇದನ್ನು ಉಳಿಸಿ. ಉಳಿದ ಕನ್ನಡಿಗರಿಗೂ ತಿಳಿಸಿ.
KRS ಐಟಿ ತಂಡ