"ಮುತ್ತುರಾಜ"
ಈ ದೊಡ್ಡ ಆಲದ ಮರದ ನೆರಳಲ್ಲಿ ನಾವುಗಳು
ನಮ್ಮ ರಾಜಕುಮಾರನ ಹುಟ್ಟು ಹಬ್ಬದ special "VIDEO"
Special thanks:
Kalyan Manjunath
Sachin Doddamani
ShiOM
Mruthyunjaya
Recorded at : Shiom Studios
Camera - Srikanth H J
#video#drrajkumar#rajkumar#rajkumarbirthday
ಕನ್ನಡ ಭಾಷೆ ನಮ್ಮ ಅಸ್ತಿತ್ವ, ಬಹುತೇಕ ಕನ್ನಡಿಗರಿಗೆ ಭಾಷೆ ಸೂಕ್ಷ್ಮತೆ ಅರ್ಥವಾಗುತ್ತಿಲ್ಲ...
ಇಂದಿನ ಮುಂದಿನ ಮಕ್ಕಳಿಗೆ ಸಾಮಾನ್ಯ ಜ್ಞಾನ, ಸ್ವಾಭಿಮಾನದಿಂದ ಬೆಳೆಸಿ, ಗುಲಾಮತನವನ್ನು ತಿರಸ್ಕರಿಸುವ ಮನೋಭಾವದಿಂದ ಬೆಳೆಸಿ...
ಕನ್ನಡವೇ ನಮ್ಮ ಹೆಮ್ಮೆ
ಕನ್ನಡವೇ ನಮ್ಮ ಗುರುತು
ಇದನ್ನು ಪ್ರಶ್ನಿಸುವವರ ವಿರುದ್ಧ ಧ್ವನಿ ಎತ್ತೋಣ
ನಮ್ಮ ಸಹನೆ ಪರೀಕ್ಷಿಸಬೇಡಿ
ಇನ್ನು ಪ್ರತಿರೋಧವೇ ಉತ್ತರ
#GoBackGoverner#ಕರ್ನಾಟಕ#ಕನ್ನಡ
ಕರ್ನಾಟಕದ ಮೊದಲ ರಾಜ್ಯಪಾಲರಾಗಿದ್ದವರು ಜಯಚಾಮರಾಜೇಂದ್ರ ಒಡೆಯರ್ ಅವರು. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾಗಿದ್ದ ಅವರು ಕನ್ನಡ ನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯದ ದೊಡ್ಡ ಪೋಷಕರಾಗಿದ್ದವರು. ಕರ್ನಾಟಕದಲ್ಲಿ ಆಗಿಹೋದ ಟಿ.ಎನ್.ಚತುರ್ವೇದಿ, ಖುರ್ಷಿದ್ ಆಲಂ ಖಾನ್, ವಿ.ಎಸ್.ರಮಾದೇವಿ ಅವರುಗಳು ಈ ನಾಡಿನ ಅಸ್ಮಿತೆಯನ್ನು ಗೌರವಿಸಿ ಕನ್ನಡಿಗರ ಪ್ರೀತಿ ಗೆದ್ದಿದ್ದರು.
ಕನ್ನಡಿಗರ ದೌರ್ಭಾಗ್ಯವೆಂಬಂತೆ ಈ ಬೆರಳೆಣಿಕೆಯ ರಾಜ್ಯಪಾಲರನ್ನು ಹೊರತುಪಡಿಸಿದರೆ ರಾಷ್ಟ್ರೀಯ ಪಕ್ಷಗಳ ಕೈಗೊಂಬೆ ರಾಜಕಾರಣಿಗಳನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ರಾಜ್ಯಪಾಲರುಗಳು ಪಕ್ಷ ರಾಜಕಾರಣದಿಂದ ದೂರ ಉಳಿಯಬೇಕು ಎಂಬುದು ಸಾಂವಿಧಾನಿಕ, ನೈತಿಕ ಕರ್ತವ್ಯ. ಆದರೆ ತಾವು ಪ್ರತಿನಿಧಿಸುತ್ತಿದ್ದ ರಾಜಕೀಯ ಪಕ್ಷ, ತನ್ನನ್ನು ನೇಮಕ ಮಾಡಿದ ಸರ್ಕಾರದ ಏಜೆಂಟರಂತೆ ಇವರು ವರ್ತಿಸಿದ್ದೇ ಹೆಚ್ಚು.
ಹಿಂದೆ ರಾಜ್ಯಪಾಲರಾಗಿದ್ದ ವಜೂಬಾಯಿ ವಾಲಾ ಎಂಬುವವರು ರಾಜಭವನವನ್ನು ಗುಜರಾತ್ ಭವನವನ್ನಾಗಿ ಮಾಡಿಕೊಂಡಿದ್ದರು. ಈಗ ಮಧ್ಯಪ್ರದೇಶದವರಾದ ತಾವರ್ ಚಂದ್ ಗೆಹ್ಲೋಟ್ ತಮಗೆ ಬೇಡವಾದ ವಿಷಯಕ್ಕೆ ತಲೆಹಾಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಮಾಡಿದರೆ ರಾಜ್ಯಪಾಲರಿಗೇನು ಸಮಸ್ಯೆ? ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರ ಕರ್ನಾಟಕದ ಶಾಲಾಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದರೆ ರಾಜ್ಯಪಾಲರ ಗಂಟೇನು ಹೋಗುತ್ತದೆ? ಸರ್ಕಾರ ತನ್ನ ನೀತಿಯನ್ನು ಪುನರ್ ಪರಿಶೀಲಿಸಲಿ ಎಂದು ಅವರು ಯಾಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತಾರೆ? ಇದೇ ಕಾಳಜಿಯನ್ನು ಅವರು ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಮಕ್ಕಳ ಮೇಲೆ ಏಕೆ ತೋರುವುದಿಲ್ಲ. ಅವರು ಅಲ್ಲಿಯೂ ಮಕ್ಕಳಿಗೆ ಮೂರನೇ ಭಾಷೆಯನ್ನು ಅಂಕಗಳಿಗೆ ಕಡ್ಡಾಯ ಮಾಡಬೇಕಲ್ಲವೇ? ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ನೋಡೋಣ.
ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಡಿಯಾಳಾಗಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿಯ ಗುಲಾಮರನ್ನಾಗಿಸಲು ಯತ್ನಿಸಲಾಗುತ್ತಿದೆ. ಈಗ ಕರ್ನಾಟಕ ಎಚ್ಚೆತ್ತುಕೊಂಡಿದೆ. ಇನ್ನು ಈ ಷಡ್ಯಂತ್ರಗಳಿಗೆ ನಾವು ಬಲಿಯಾಗುವುದಿಲ್ಲ.
ಕನ್ನಡ ವಿರೋಧಿ ಧೋರಣೆ ತಳೆದಿರುವ ತಾವರ್ ಚಂದ್ ಗೆಹ್ಲೋಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ, ಅಥವಾ ಅವರನ್ನು ನೇಮಿಸಿರುವ ಕೇಂದ್ರ ಸರ್ಕಾರ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿ. ಕರ್ನಾಟಕದಲ್ಲಿ ಕನ್ನಡದ್ರೋಹಿಗಳಿಗೆ ಯಾವುದೇ ಜಾಗವಿಲ್ಲ.
- ಟಿ.ಎ.ನಾರಾಯಣಗೌಡ
#GoBackGoverner
#ಕನ್ನಡಿಗರವಿಜಯದಿನ
ಕ್ರಿ.ಶ. 618ರಲ್ಲಿ, ಉತ್ತರದ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಿಸಲು ಯತ್ನಿಸಿದಾಗ, ಕನ್ನಡದ ಮಹಾವೀರ ಇಮ್ಮಡಿ ಪುಲಕೇಶಿ ಮಹಾರಾಜರು ನರ್ಮದಾ ದಡದಲ್ಲೇ ಅವನನ್ನು ಸೋಲಿಸಿದರು. ಈ ಮಹಾ ಜಯದಿಂದ 'ದಕ್ಷಿಣ ಪತೇಶ್ವರ' ಎಂಬ ಬಿರುದು ಪಡೆದು ಹೊಸ ಇತಿಹಾಸ ಸೃಷ್ಟಿಗೆ ಕಾರಣರಾದರು.
ಈ ವಿಜಯ ದಿನವನ್ನು ‘ಕನ್ನಡಿಗರ ವಿಜಯ ದಿನ’ವೆಂದು ಆಚರಿಸಿ, ಮಹಾ ವೀರನಿಗೆ ಗೌರವ ಸಲ್ಲಿಸೋಣ!
ಭಾರತ ಮೇಲೆ ನಡೆದ ಅರಬ್ ದಾಳಿಯನ್ನು ತಡೆಯುವಲ್ಲಿ ಕೂಡ ಪುಲಿಕೇಶಿ ಪ್ರಮುಖ ಪಾತ್ರ ವಹಿಸಿ, ನಮ್ಮ ದೇಶದ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಕಾಯ್ದುಕೊಂಡಿದ್ದು ಚರಿತ್ರೆಗಳಲ್ಲಿ ದಾಖಲಾಗಿದೆ.
#ಇಮ್ಮಡಿಪುಲಕೇಶಿ
#ವಿಜಯದದಿನ
Don't forget kannadiga!🚨
Finally, the day comes to an end, and not even @BJP4Karnataka, @BYVijayendra, or @RAshokaBJP remembered Immadi Pulakeshi on #ಕನ್ನಡಿಗರ_ವಿಜಯದಿನ.
#VictoryOverNorth
This silence clearly shows how deeply they’re bent to high command politics rather than regional pride.
Their priority is high command over Karnataka’s pride.
ದಕ್ಷಿಣಾಪಥೇಶ್ವರನ ವಿಜಯೋತ್ಸವ!
ಕ್ರಿ.ಶ. 618ರಲ್ಲಿ ನರ್ಮದಾ ನದಿಯ ದಡದಲ್ಲಿ ಉತ್ತರ ಭಾರತದ ಚಕ್ರವರ್ತಿ ಹರ್ಷವರ್ಧನನ ದಿಗ್ವಿಜಯಕ್ಕೆ ಧೈರ್ಯವಾಗಿ ಸವಾಲು ಒಡ್ಡಿ, ದಕ್ಷಿಣ ಭಾರತದ ಸಾರ್ವಭೌಮತೆಯನ್ನು ಎತ್ತಿಹಿಡಿದ ಕನ್ನಡಿಗರ ಕುಲತಿಲಕ ಇಮ್ಮಡಿ ಪುಲಿಕೇಶಿ ಮಹಾರಾಜರ ಶೌರ್ಯಕ್ಕೆ ಸಾಟಿಯೇ ಇಲ್ಲ.
ಬಾದಾಮಿ ಚಾಲುಕ್ಯರ ಅಪ್ರತಿಮ ಪರಾಕ್ರಮವನ್ನು ಸ್ಮರಿಸುವ ‘ಕನ್ನಡಿಗರ ವಿಜಯ ದಿನ’ದಂದು ನಮ್ಮ ಹೆಮ್ಮೆಯ ಕನ್ನಡಿಗರ ಕೀರ್ತಿಗಾಥೆ ತಲೆಮಾರುಗಳಿಗೆ ಶಾಶ್ವತ ಪ್ರೇರಣೆಯಾಗಿದೆ.
ನಮ್ಮ ರಕ್ತದಲ್ಲೇ ಶೌರ್ಯ… ನಮ್ಮ ನೆಲದ್ದೇ ವಿಜಯ!
#ಕನ್ನಡಿಗರವಿಜಯದಿನ #ಇಮ್ಮಡಿಪುಲಿಕೇಶಿ #ಬಾದಾಮಿಚಾಲುಕ್ಯ