ಸಂಡೂರು ರಾಜವಂಶದ ಯುವ ನಾಯಕ ಶ್ರೀ ಕಾರ್ತಿಕ್ ಘೋರ್ಪಡೆ ಅವರ ಅಕಾಲಿಕ ನಿಧನದ ���ುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮತ್ತು ಆಪ್ತರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. 🙏🏼
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತಷ್ಟು ಮುಜುಗರ/ಮುಖಭಂಗವನ್ನು ಎದುರಿಸುವ ಮೊದಲು ಪ್ರಧಾನಿ ಮೋದಿ ತಮ್ಮ ಸರ್ಕಾರ ತಂದಿರುವ ರೈತರ 3 ಮರಣ ಶಾಸನಗಳನ್ನು ಮತ್ತು ಈ ಕಂಗನರನ್ನು ಸ್ಕ್ರಾಪ್ ಮಾಡುವುದು ಸೂಕ್ತ!
ರೈತರ ಹೋರಾಟಕ್ಕೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ಇದಕ್ಕಾಗಿ ಜನವರಿ 20 ರಂದು ನಡೆಯುವ ರಾಜಭವನ ಚಲೋವನ್ನು ಯಶಸ್ವಿಗೊಳಿಸುತ್ತೇವೆ. ರೈತರ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸುತ್ತೇವೆ.
#RajBhavanChalo
ಬಿಹಾರದಲ್ಲಿ 2006ರಿಂದ ಎಪಿಎಂಸಿ ಮಾರುಕಟ್ಟೆ ಇಲ್ಲ. ಹೀಗಾಗಿ ಅಲ್ಲಿನ ರೈತರ ಬೆಳೆಗೆ ನೆರೆ ರಾಜ್ಯಗಳಿಗಿಂತ ಕಡಿಮೆ ಬೆಲೆ ಸಿಗುವಂತಾಗಿದೆ.
ಎಪಿಎಂಸಿ ಮಾರುಕಟ್ಟೆ ಇಲ್ಲ ಎಂದರೆ, ರೈತರ ಬೆಳೆಗೆ ಬೆಲೆ ಇಲ್ಲ ಎಂದೇ ಅರ್ಥ.
#RajBhavanChalo
ಕಾಫಿ ಬೆಳೆಯು ಎಪಿಎಂಸಿ ಮಾರುಕಟ್ಟೆಯಿಂದ ಮುಕ್ತ ಮಾರುಕಟ್ಟೆಗೆ ಹೋಗಿದೆ. ಇದಾದ ಬಳಿಕ ಕಾಫಿ ಬೆಳೆಗಾರರು ಬೆಲೆ ಕುಸಿತದ ಸಮಸ್ಯೆಗೆ ಸಿಲುಕಿದ್ದಾರೆ.
ಹೀಗೆಯೇ ಬಿಜೆಪಿ ಸರ್ಕಾರ, ರೈತರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಲಿ.
#RajBhavanChalo
��ಮ್ಮೆ ಎಪಿಎಂಸಿ ಮಾರುಕಟ್ಟೆ ಬಂದ್ ಆದರೆ, ರೈತರು ತಮ್ಮ ಅಸ್ಥಿತ್ವ ಕಳೆದುಕೊಂಡಂತೆಯೇ ಅರ್ಥ.
ದುರಂತವೆಂದರೆ ನಂತರ ದಿನಗಳಲ್ಲಿ ರೈತರು ಕಂಪನಿಗಳ ಗುಲಾಮರಾಗಿಯೇ ಉಳಿಯಬೇಕಾಗುತ್ತದೆ.
ಇದು ಸರ್ಕಾರವೇ ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಸಮಸ್ಯೆ.
#RajBhavanChalo
ರೈತರು ಬೆಳೆದ ಬೆಳೆಯ ಗುಣಮಟ್ಟ ನಿರ್ಧಾರ ಮಾಡುವವರು ಯಾರು ಎಂಬುದು ಈ ಕಾಯ್ದೆಯಲ್ಲಿ ಸ್ಪಷ್ಟಪಡಿಸಿಲ್ಲ.
ಪರಿಣಾಮ ಇದರ ನಿರ್ಧಾರವನ್ನು ಕಂಪನಿಯವರೇ ಮಾಡುತ್ತಾರೆ. ಸಹಜವಾಗಿ ಗುಣಮಟ್ಟದ ತೀರ್ಮಾನದ ವಿಚಾರದಲ್ಲಿ ರೈತರಿಗೆ ಅನ್ಯಾಯವಾಗಲಿದೆ.
#RajBhavanChalo
ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ, 80 ಹಾಗೂ 63 ಸೆಕ್ಷನ್ಗಳನ್ನು @BSYBJP ಸರ್ಕಾರ ರದ್ದುಗೊಳಿಸಲು ಹೊರಟಿದೆ.
ಉಳುವವರಿಂದ ಭೂಮಿ ಕಿತ್ತುಕೊಂಡು ಉಳ್ಳವರನ್ನು ಭೂಮಿಯ ಒಡೆಯರನ್ನಾಗಿ ಮಾಡಲು ಹೊರಟಿದೆ.
ರೈತರನ್ನು ತಮ್ಮದೇ ನೆಲದಲ್ಲಿ ಗುಲಾಮರನ್ನಾಗಿ ಮಾಡುವ ವ್ಯವಸ್ಥಿತ ಹು���್ನಾರ.
#RajBhavanChalo