ನಮ್ಮ ಗುರಿ ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!
ಹೆಸರಾಂತ ಅಕ್ಷಯ ಕಲ್ಪ, ಕೃಷಿ ಕಲ್ಪಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತಿ
ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು BLDE ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದೆ
ಹೈನೋದ್ಯಮದಲ್ಲಿ ಸೂಕ್ತ ಶಿಕ್ಷಣ ನೀಡಲು ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ
ನೀರಾವರಿ ಯೋಜನೆಗಳ ಮೂಲಕ ಬಸವನಾಡಿನ ಒಣನೆಲಕ್ಕೆ ಜೀವ ತುಂಬಿ ಜಲಕ್ರಾಂತಿ ಸೃಷ್ಟಿಸಿರುವುದು ಈಗ ಇತಿಹಾಸವಾಗಿದೆ. ಅದರ ಫಲವಾಗಿ ಸಾವಿರಾರು ರೈತ ಕುಟುಂಬಗಳು ಕೃಷಿಯನ್ನು ಆಶ್ರಯಿಸಿ ನೆಮ್ಮದಿಯ ಹಾಗೂ ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
ಆ ಜಲಕ್ರಾಂತಿಯ ಮುಂದುವರಿದ ಅಧ್ಯಾಯವೇ ಕಳೆದ ವರ್ಷ ಆರಂಭಿಸಿದ ಕ್ಷೀರ ಪೈಲೆಟ್ ಯೋಜನೆ. ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಯೋಜನೆ 150ಕ್ಕೂ ಹೆಚ್ಚು ರೈತ ಕುಟುಂಬಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿಯನ್ನು ತಂದಿದೆ.
ಒಂದು ಕಾಲದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ತಿಂಗಳಿಗೆ ₹20-30 ಸಾವಿರ ಆದಾಯ ಗಳಿಸುವುದೇ ಸವಾಲಾಗಿತ್ತು. ಆದರೆ BLDE, ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆಯಿಂದ ಇಂದು ಹಲವು ರೈತ ಕುಟುಂಬಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿವೆ.
ಪ್ರತಿ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿ ಇರಬೇಕು ಎಂಬುದು ನಮ್ಮ ಸಂಕಲ್ಪ. ಆ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿBLDE ಡೀಮ್ಡ್ ವಿವಿ ವತಿಯಿಂದ ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದ್ದೇವೆ.
ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದೊಂದಿಗೆ ಅತ್ಯಾಧುನಿಕ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಜಲಕ್ರಾಂತಿಯಿಂದ ಕ್ಷೀರಕ್ರಾಂತಿಯವರೆಗೆ… ನಮ್ಮ ಜನರ ಬದುಕು ಮತ್ತಷ್ಟು ಸಮೃದ್ಧವಾಗಬೇಕು ಎಂಬುದೇ ನಮ್ಮ ಧ್ಯೇಯ.
ಬಬಲೇಶ್ವರ ಕ್ಷೇತ್ರದ ತಿಕೋಟಾ ತಾಲೂಕಿನ ಧನ್ನರ್ಗಿ ಗ್ರಾಮದಲ್ಲಿ ಸುಮಾರು ರೂ. 65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಸಂಬಂಧ ಗುರುವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಆರೋಗ್ಯ ಮಂದಿರ ಮಹತ್ವದ ಹೆಜ್ಜೆಯಾಗಲಿದೆ
ನಮ್ಮ ಗುರಿ ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!
ಹೆಸರಾಂತ ಅಕ್ಷಯ ಕಲ್ಪ, ಕೃಷಿ ಕಲ್ಪಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತಿ
ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು BLDE ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದೆ
ಹೈನೋದ್ಯಮದಲ್ಲಿ ಸೂಕ್ತ ಶಿಕ್ಷಣ ನೀಡಲು ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ
ನೀರಾವರಿ ಯೋಜನೆಗಳ ಮೂಲಕ ಬಸವನಾಡಿನ ಒಣನೆಲಕ್ಕೆ ಜೀವ ತುಂಬಿ ಜಲಕ್ರಾಂತಿ ಸೃಷ್ಟಿಸಿರುವುದು ಈಗ ಇತಿಹಾಸವಾಗಿದೆ. ಅದರ ಫಲವಾಗಿ ಸಾವಿರಾರು ರೈತ ಕುಟುಂಬಗಳು ಕೃಷಿಯನ್ನು ಆಶ್ರಯಿಸಿ ನೆಮ್ಮದಿಯ ಹಾಗೂ ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
ಆ ಜಲಕ್ರಾಂತಿಯ ಮುಂದುವರಿದ ಅಧ್ಯಾಯವೇ ಕಳೆದ ವರ್ಷ ಆರಂಭಿಸಿದ ಕ್ಷೀರ ಪೈಲೆಟ್ ಯೋಜನೆ. ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಯೋಜನೆ 150ಕ್ಕೂ ಹೆಚ್ಚು ರೈತ ಕುಟುಂಬಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿಯನ್ನು ತಂದಿದೆ.
ಒಂದು ಕಾಲದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ತಿಂಗಳಿಗೆ ₹20-30 ಸಾವಿರ ಆದಾಯ ಗಳಿಸುವುದೇ ಸವಾಲಾಗಿತ್ತು. ಆದರೆ BLDE, ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆಯಿಂದ ಇಂದು ಹಲವು ರೈತ ಕುಟುಂಬಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿವೆ.
ಪ್ರತಿ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿ ಇರಬೇಕು ಎಂಬುದು ನಮ್ಮ ಸಂಕಲ್ಪ. ಆ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿBLDE ಡೀಮ್ಡ್ ವಿವಿ ವತಿಯಿಂದ ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದ್ದೇವೆ.
ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದೊಂದಿಗೆ ಅತ್ಯಾಧುನಿಕ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಜಲಕ್ರಾಂತಿಯಿಂದ ಕ್ಷೀರಕ್ರಾಂತಿಯವರೆಗೆ… ನಮ್ಮ ಜನರ ಬದುಕು ಮತ್ತಷ್ಟು ಸಮೃದ್ಧವಾಗಬೇಕು ಎಂಬುದೇ ನಮ್ಮ ಧ್ಯೇಯ.
ಕೋಟ್ಯಾಳ: ಅಂತಾರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಾಲೆಯ ಭವ್ಯ ಉದ್ಘಾಟನೆ!
ತಿಕೋಟಾ ತಾಲ್ಲೂಕಿನ ಕೋಟ್ಯಾಳ ಗ್ರಾಮದ ಸರ್ಕಾರಿ ಶಾಲೆಯ ನೂತನ, ಸುಸಜ್ಜಿತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ್ದು ಸಂತಸ ತರಿಸಿದೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಫೌಂಡೇಶನ್ ನ ಸಿಎಸ್ಆರ್ ಅನುದಾನದಡಿ, ಸುಮಾರು ₹3.25 ಕೋಟಿ ವೆಚ್ಚದಲ್ಲಿ 7,000 ಚದರ ಅಡಿ ವಿಸ್ತೀರ್ಣದ ಅತ್ಯಾಧುನಿಕ ಹಾಗೂ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ, 800 ಚದರ ಅಡಿ ವಿಸ್ತೀರ್ಣದ ಹಳೆಯ ಶಾಲಾ ಕಟ್ಟಡಕ್ಕೂ ಪುನಶ್ಚೇತನ ನೀಡಿ, ಸಂಪೂರ್ಣ ಶೈಕ್ಷಣಿಕ ಆವರಣವನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ.
ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್’ಲ್ಯಾಬ್ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ.
ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ.
ಕೋಟ್ಯಾಳದಲ್ಲಿಯೇ ಸುಸಜ್ಜಿತ ಶಾಲೆಯಾಗಿರುವುದರಿಂದ ಮಕ್ಕಳು ತಿಕೋಟಾಗೆ ಹೋಗಿ ಶಿಕ್ಷಣ ಪಡೆಯುವುದು ತಪ್ಪಲಿದೆ.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಆಶಯದೊಂದಿಗೆ ನಿರ್ಮಿಸಲಾದ ಈ ಶಾಲೆ, ಸರ್ಕಾರಿ ಶಾಲೆಗಳ ಬಗ್ಗೆ ಹೊಸ ವಿಶ್ವಾಸ ಮೂಡಿಸಿ, ಮಕ್ಕಳ ಕನಸುಗಳಿಗೆ ಹೊಸ ರೆಕ್ಕೆ ನೀಡಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಅವರಾದ ಡಾ. ಹರಿಮುರಾರ, ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ್, ಅಧಿಕಾರಿಗಳು, ಭೂಮಿದಾನ ಮಾಡಿದವರುಗಳಾದ ಶ್ರೀಮತಿ ಕಮಲಾ ಮುರುಗೇಶ ನಿರಾಣಿ, ಆನಂದರಾವ್ ಕುಲಕರ್ಣ, ಅನೀಲಕುಮಾರ ಪಾಟೀಲ, ವಿ.ಎಸ್ ಪಾಟೀಲ ಸೇರಿದಂತೆ, ಹಲವು ಗಣ್ಯರು ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ನೂತನ ಶಾಲಾ ಕಟ್ಟಡವನ್ನು ಕಂಡ ಮಕ್ಕಳ ಕಣ್ಗಳಲ್ಲಿ ಮೂಡಿದ ಸಂತಸ ಮತ್ತು ಉತ್ಸಾಹ, ಈ ಯೋಜನೆಯ ಯಶಸ್ಸಿಗೆ ಜೀವಂತ ಸಾಕ್ಷಿಯಾಯಿತು.
ಮಾನವಕುಲಕ್ಕೆ ಸಾಮರಸ್ಯ, ಸಹೋದರತ್ವ, ಸಹಬಾಳ್ವೆಯಂತಹ ಶ್ರೇಷ್ಠ ಮೌಲ್ಯಗಳನ್ನು ಬೋಧಿಸಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ಅವರ ಚಿಂತನೆಗಳು ಹಾಗೂ ಬೋಧಿಸಿದ ತತ್ವ-ಆದರ್ಶಗಳು ನಮ್ಮೆಲ್ಲರಿಗೂ, ವಿಶೇಷವಾಗಿ ಯುವ ಸಮುದಾಯಕ್ಕೆ, ಇಂದಿಗೂ ಸ್ಫೂರ್ತಿಯ ಚಿಲುಮೆಯಾಗಿವೆ.
#Vivekananda #SwamiVivekananda
30-06-2026 ❌ Ola serv centre mechanics and managers don’t know where the scooty stands or missing. And ola evsupport replying everyone working on high priority🚫Fake ola 🙏Don’t make fool your coustomers. My scooter is not repaired yet by ola serv centres. This is delhi condtn.
ಕ್ಷೀರ ಪೈಲಟ್ ಯೋಜನೆಯ ಫಲಶ್ರುತಿ: ನಾಗರಾಳ ಗ್ರಾಮದ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರ ಯಶೋಗಾಥೆ
ತಿಂಗಳಿಗೆ ₹60 ಸಾವಿರದವರೆಗೆ ಆದಾಯ – ವೈಜ್ಞಾನಿಕ ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆಯತ್ತ ಯಶಸ್ವಿ ಹೆಜ್ಜೆ
ಈ ದಿನ ನಾಗರಾಳ ಗ್ರಾಮದ ರೈತ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರನ್ನು ಭೇಟಿ ಮಾಡಿ, ನಮ್ಮ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ಗಳ ಸಹಯೋಗದಲ್ಲಿ ಜಾರಿಗೊಂಡಿರುವ 'ಕ್ಷೀರ ಪೈಲಟ್ ಯೋಜನೆ'ಯಿಂದ ಅವರ ಬದುಕಿನಲ್ಲಿ ಮೂಡಿರುವ ಸಕಾರಾತ್ಮಕ ಪರಿವರ್ತನೆಯ ಕುರಿತು ತಿಳಿದುಕೊಂಡೆ.
ಯೋಜನೆ ಆರಂಭಕ್ಕೂ ಮುನ್ನ ಕೇವಲ ಒಂದು ಹಸುವನ್ನು ಸಾಕುತ್ತಿದ್ದ ಅವರು, ಯೋಜನೆಯಡಿ ನೀಡಲಾದ ವೈಜ್ಞಾನಿಕ ತರಬೇತಿ, ನಿರಂತರ ಮಾರ್ಗದರ್ಶನ ಹಾಗೂ ತಾಂತ್ರಿಕ ನೆರವಿನ ಪ್ರೇರಣೆಯಿಂದ ಇಂದು ತಮ್ಮ ಹೈನುಗಾರಿಕೆಯನ್ನು ವಿಸ್ತರಿಸಿ ಆರು ಹಸುಗಳನ್ನು ಸಾಕುತ್ತಿದ್ದಾರೆ. ಇದರ ಫಲವಾಗಿ ಪ್ರತಿ ತಿಂಗಳು ₹55,000 ರಿಂದ ₹60,000ರವರೆಗೆ ಆದಾಯ ಗಳಿಸುತ್ತಿರುವುದು ತಿಳಿದು ಸಂತಸವಾಯಿತು.
ಕಳೆದ ಆರು ತಿಂಗಳುಗಳಲ್ಲಿ ವೈಜ್ಞಾನಿಕ ಪಶುಪಾಲನೆ, ಆಧುನಿಕ ಹೈನುಗಾರಿಕೆ ವಿಧಾನಗಳು ಹಾಗೂ ಸಮರ್ಪಕ ನಿರ್ವಹಣೆಯನ್ನು ಅಳವಡಿಸಿಕೊಂಡ ಪರಿಣಾಮ, "ಹೈನುಗಾರಿಕೆಯೇ ನಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ರೂಪಿಸಬಲ್ಲ ಉದ್ಯಮ" ಎಂಬ ದೃಢ ವಿಶ್ವಾಸ ಅವರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಖರೀದಿಸಿ ತಮ್ಮ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪವನ್ನೂ ಅವರು ವ್ಯಕ್ತಪಡಿಸಿದರು.
ಇಂತಹ ಯಶೋಗಾಥೆಗಳು ಕ್ಷೀರ ಪೈಲಟ್ ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದ್ದು, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಸಂಯೋಜಿಸುವ ಮೂಲಕ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ಈ ಸಂದರ್ಭದಲ್ಲಿ ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ.ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೈನುಗಾರಿಕೆಯ ಮೂಲಕ ರೈತರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲಿ BLDE ವತಿಯಿಂದ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಜ್ಞಾನ, ತಂತ್ರಜ್ಞಾನ ಹಾಗೂ ನಿರಂತರ ಮಾರ್ಗದರ್ಶನದ ಮೂಲಕ ವಿಜಯಪುರ ಜಿಲ್ಲೆಯನ್ನು ಕ್ಷೀರ ಕ್ರಾಂತಿಯ ಮಾದರಿ ಜಿಲ್ಲೆಯಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ.
ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಧನ್ಶಾಳ ಗ್ರಾಮದಲ್ಲಿ ಹಳೆಯ ಗ್ರಾಮದಿಂದ ಹೊಸ ಗ್ರಾಮದವರೆಗೆ ₹30 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ಹಾಗೂ ಗ್ರಾಮದಲ್ಲೇ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಕಾಮಗಾರಿಗಳಿಂದ ಗ್ರಾಮದ ಸಂಚಾರ ವ್ಯವಸ್ಥೆ ಮತ್ತಷ್ಟು ಸುಗಮವಾಗುವುದರೊಂದಿಗೆ, ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವಿದೆ.
ನಿಡೋಣಿ ಗ್ರಾಮದಲ್ಲಿ ಶೀಘ್ರದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ, ಇಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿರುವ 'ಕ್ಷೀರ ಪೈಲಟ್ ಯೋಜನೆ' ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದೆ. ಆಧುನಿಕ ಹೈನುಗಾರಿಕೆ, ವೈಜ್ಞಾನಿಕ ಪಶುಪಾಲನೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ರೈತರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಕೌಶಲಾಭಿವೃದ್ಧಿಯನ್ನು ಒದಗಿಸುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಈ ಕೇಂದ್ರವು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಲು ರೈತರಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ನೀಡುವ ಮಹತ್ವದ ವೇದಿಕೆಯಾಗಲಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ನಿಡೋಣಿ, ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ. ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಹಾಗೂ ರೈತ ಬಂಧುಗಳು ಉಪಸ್ಥಿತರಿದ್ದರು.
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನಾಚರಣೆ: ಬದುಕು ಮತ್ತು ಸಾಧನೆಗಳ ಸ್ಮರಣೆ
ಬೆಂಗಳೂರಿನ ನಮ್ಮ ನಿವಾಸದಲ್ಲಿ ಇಂದು ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಾನಪದ ಕವಿ, ನಾಡೋಜ ಡಾ. ಗೊ.ರು. ಚನ್ನಬಸಪ್ಪ, ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಸೇರಿದಂತೆ ಎಲ್ಲ ಗಣ್ಯರು ಡಾ. ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಚನ ಸಾಹಿತ್ಯದ ಸಂರಕ್ಷಣೆ ಮತ್ತು ಪ್ರಸಾರಕ್ಕಾಗಿ ಅವರು ಸಲ್ಲಿಸಿದ ಅಪೂರ್ವ ಸೇವೆ, ಅವರ ಆದರ್ಶಮಯ ಬದುಕು ಹಾಗೂ ಕನ್ನಡ ನಾಡಿಗೆ ನೀಡಿದ ಅನನ್ಯ ಕೊಡುಗೆಗಳನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮುದ್ರಕರ ಸಂಘದ ಸ್ವಾನ್ ಸಂಸ್ಥೆಯ ಶ್ರೀ ಕೃಷ್ಣಮೂರ್ತಿ, ಸಂಘದ ಪದಾಧಿಕಾರಿಗಳು, ಶ್ರೀ ಪಾಲನೇತ್ರ, ಬಿಎಂಪಿ ಮಾಜಿ ಉಪಮೇಯರ್ ಶ್ರೀ ಪುಟ್ಟರಾಜು, ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
#ವಚನಸಾಹಿತ್ಯಸಂರಕ್ಷಣಾದಿನ #PGHalakatti #ವಚನಪಿತಾಮಹ
ಕಾಂಗ್ರೆಸ್ ಸೇವಾದಳದ ಮುಖ್ಯ ಸಂಘಟಕರಾಗಿ ನೇಮಕಗೊಂಡಿರುವ ಶ್ರೀ ಬಿ. ವಿ. ಶ್ರೀನಿವಾಸ್ ಅವರು ಬೆಂಗಳೂರಿನ ನಮ್ಮ ನಿವಾಸಕ್ಕೆ ಇಂದು ಆಗಮಿಸಿ ತಮ್ಮ ಸಂತಸವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ, ನೂತನ ಜವಾಬ್ದಾರಿ ಯಶಸ್ಸು ಮತ್ತು ಕೀರ್ತಿಯನ್ನು ತಂದುಕೊಡಲಿ ಎಂದು ಶುಭ ಹಾರೈಸಿದೆ.
ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇವಾದಳವು ಮತ್ತಷ್ಟು ಸಶಕ್ತಗೊಳ್ಳುವುದರೊಂದಿಗೆ, ಪಕ್ಷದ ಸಂಘಟನೆಯೂ ಇನ್ನಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸವಿದೆ.
@srinivasiyc
ದ್ರಾಕ್ಷಿ ನಾಡಿನಲ್ಲಿ ಕೇಸರ ಮಾವಿನ ಕಂಪು!:2ಎಕರೆಗಳಲ್ಲಿ ₹7 ಲಕ್ಷ ಆದಾಯದ ಸಾಧನೆ
ನಮ್ಮ ಭಾಗದ ರೈತರ ಕಾಯಕನಿಷ್ಠೆ, ಪ್ರಗತಿಪರ ಚಿಂತನೆ ಹಾಗೂ ಜಲಕ್ರಾಂತಿ ಒಂದಾದಾಗ ಎಂತಹ ಅದ್ಭುತ ಯಶಸ್ಸು ಸಾಧ್ಯ ಎಂಬುದಕ್ಕೆ ಈ ಪತ್ರಿಕಾ ವರದಿಯೇ ಜೀವಂತ ಸಾಕ್ಷಿಯಾಗಿದೆ.
ತಿಕೋಟಾ ತಾಲೂಕಿನ ಬಾಬಾನಗರದ ಪ್ರಗತಿಪರ ರೈತರಾದ ಶ್ರೀ ಮುರುಗೇಶ ಬಸಗೊಂಡ ಡಂಗನವರ ಅವರು ತಮ್ಮ ತೋಟದ 2ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ 1,200 ಕೇಸರ್ ಮಾವಿನ ಸಸಿಗಳನ್ನು ಬೆಳೆಸಿ, ಈ ವರ್ಷ ಬರೋಬ್ಬರಿ ₹7 ಲಕ್ಷ ಆದಾಯ ಗಳಿಸುವ ಮೂಲಕ ಭರ್ಜರಿ ಸಾಧನೆ ಮಾಡಿದ್ದಾರೆ.
ನಾವು ಶ್ರಮವಹಿಸಿ ಜಾರಿಗೊಳಿಸಿರುವ ನೀರಾವರಿ ಯೋಜನೆಗಳು ಕೇವಲ ತೋಟಗಳಿಗೆ ನೀರು ಹರಿಸಿಲ್ಲ; ಈ ಭಾಗದ ರೈತರ ಬಾಳಿಗೆ ಹೊಸ ಭರವಸೆಯ ಜೀವ ಒಯ್ದಿವೆ. ಕೈಗೆ ಸಿಕ್ಕ ನೀರು ನೆಲವನ್ನು ಹಸನು ಮಾಡಿದೆ, ರೈತನ ಶ್ರಮಕ್ಕೆ ನ್ಯಾಯ ಒದಗಿಸಿದೆ. ಕೃಷಿ ಅಂದ್ರೆ ಬರೀ ನಷ್ಟವಲ್ಲ, ಅದು ತಲೆ ಎತ್ತಿ ಬಾಳುವ ಲಾಭದಾಯಕ ಉದ್ಯಮ ಎಂಬುದನ್ನು ನಮ್ಮ ರೈತರು ಸಾಬೀತುಪಡಿಸುತ್ತಲೇ ಬಂದಿದ್ದಾರೆ.
ಮುರುಗೇಶ್ ಅವರ ಸಾಧನೆ ನಾಡಿನ ರೈತ ಕುಲಕ್ಕೆ ಸ್ಫೂರ್ತಿಯ ಸೆಲೆ. ಭೂಮಿತಾಯಿಯನ್ನು ನಂಬಿದ ನಮ್ಮೆಲ್ಲಾ ರೈತರ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹೀಗೆಯೇ ಸಮೃದ್ಧಿಯಿಂದ ನಗಲಿ.
ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನ ಮಠದ ಪೂಜ್ಯ ಗುರುಗಳಾದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಧಾರ್ಮಿಕ, ಸಾಮಾಜಿಕ ಹಾಗೂ ಸೌಹಾರ್ದತೆಯ ಮೌಲ್ಯಗಳನ್ನು ಬಿತ್ತರಿಸುತ್ತಾ, ಮಾನವೀಯ ಸೇವೆಯ ಮೂಲಕ ಸಮಾಜಕ್ಕೆ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ ತಮ್ಮ ಸೇವೆ ಇನ್ನಷ್ಟು ವಿಸ್ತಾರವಾಗಲಿ. ಪರಮಾತ್ಮನು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಶಕ್ತಿ-ಸಾಮರ್ಥ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ತಮ್ಮ ಆಶೀರ್ವಾದ ಸದಾ ನಾಡಿನ ಜನತೆ ಹಾಗೂ ಭಕ್ತ ಸಮೂಹದ ಮೇಲೆ ಇರಲಿ.
ಬಬಲೇಶ್ವರ ಮತ ಕ್ಷೇತ್ರದ ನಾಗರಾಳ ಗ್ರಾಮದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ದಿನ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರೊಂದಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
12ನೇ ಶತಮಾನದ ಶರಣರು, ಅವರ ವಚನ ಸಾಹಿತ್ಯನ್ನು ಸಂಶೋಧಿಸಿ ಪ್ರಕಟಿಸಲು ತಮ್ಮ ಸರ್ವಸ್ವವನ್ನು ಧಾರೆ ಎರೆದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದಂದು ಹೃದಯಾಂತರಾಳದ ನಮನಗಳು.
ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಅಮೂಲ್ಯ ಭಂಡಾರವನ್ನು ನೀಡಿದ ಅವರ ಕೊಡುಗೆ ಸದಾ ಸ್ಮರಣೀಯವಾಗಿದೆ. ಬಸವ ನಾಡಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕ ಸಂಸ್ಥೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದ ಅವರ ಸಮಾಜ ಪರ ಚಿಂತನೆ ಎಲ್ಲರಿರೂ ದಾರಿದೀಪವಾಗಿವೆ.
Had a cordial meeting with Hon'ble Minister for Industries & Commerce, IT, Electronics & Communications, Government of Telangana, Shri D. Sridhar Babu, who called on me at my residence in Bengaluru today.
We exchanged views on issues of mutual interest - particularly industrial development and avenues for deeper cooperation between Karnataka and Telangana.
Reaffirmed our shared commitment to strengthening cooperative federalism and driving inclusive growth across both states.
ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ಇಲಾಖೆಯ ಸಚಿವರಾದ ಶ್ರೀ ಡಿ. ಶ್ರೀಧರ್ ಬಾಬು ಅವರು ಇಂದು ಬೆಂಗಳೂರಿನ ನನ್ನ ನಿವಾಸಕ್ಕೆ ಸೌಜನ್ಯಯುತ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಕೈಗಾರಿಕಾ ಅಭಿವೃದ್ಧಿ, ಹೂಡಿಕೆ ವೃದ್ಧಿ ಹಾಗೂ ಉಭಯ ರಾಜ್ಯಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಅವಕಾಶಗಳು ಸೇರಿದಂತೆ ವಿವಿಧ ಪ್ರಮುಖ ವಿಷಯಗಳ ಕುರಿತು ಚರ್ಚಿಸಿದೆವು.
@OffDSB
ನಾಡಿನ ಸಮಸ್ತ ವೈದ್ಯರಿಗೂ ಭಾರತ ರತ್ನ ಡಾ. B.C.ರಾಯ್ ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುತ್ತಿರುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ತಮ್ಮ ಜೀವದ ಹಂಗು ತೊರೆದು ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ವೈದ್ಯರು, ಅವರಿಗೆ ಬೆಂಬಲವಾಗಿ ನಿಂತಿರುವ ಎಲ್ಲರ ಸೇವೆಯನ್ನು ಗೌರವದಿಂದ ಸ್ಮರಿಸೋಣ.
#NationalDoctorsDay#doctorsday
ನಮ್ಮೆಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
1843ರ ಜುಲೈ 1ರಂದು ಹೆರ್ಮನ್ ಮೊಗ್ಲಿಂಗ್ ಅವರ ಸಾರಥ್ಯದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾಯಿತು. ಆ ಐತಿಹಾಸಿಕ ಕ್ಷಣದ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 1ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ನ್ಯಾಯ, ಸಮಾನತೆ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸತ್ಯವನ್ನು ಜನರ ಮುಂದಿಡುವ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಸಮಾಜದ ಹಿತವನ್ನು ಕಾಪಾಡುವ ಅವರ ಸೇವೆ ಅಮೂಲ್ಯವಾದದ್ದು.
#ಪತ್ರಿಕಾದಿನಾಚರಣೆ