ಕ್ಯಾನ್ಸರ್ ಬಂದಂತಹ ಕುಟುಂಬಗಳಿಗೆ ಮಾತ್ರ ಗೊತ್ತಿರುತ್ತದೆ ಕ್ಯಾನ್ಸರ್ ಎಂತಹ ಒಂದು ಕಷ್ಟಕರ ಕಾಯಿಲೆ ಎಂದು,
ಆದರೂ ಇಂತಹ ವ್ಯಕ್ತಿಗಳನ್ನು ನಾವು ಗೌರವಿಸಲೇಬೇಕು
#ಸಂತೋಷ್_ಉಳ್ಳಾಲ ದೇವರು ಒಳ್ಳೆಯದು ಮಾಡಲಿ.
ನಮ್ಮ ಮುಖ್ಯಮಂತ್ರಿಗಳು ಕರ್ನಾಟಕವನ್ನು ಬಿಟ್ಟು ದೆಹಲಿಯಲ್ಲಿ ಕೂತಿದ್ದಾರೆ ಅನ್ಸುತ್ತೆ !
ಯಾಕಂದರೆ ಕರ್ನಾಟಕದವರು ಅಧಿಕಾರ ಕೊಟ್ಟಿಲ್ಲ!
ಅಧಿಕಾರ ಕೊಟ್ಟಿರುವುದು ದೆಹಲಿಯ ನಾಯಕರು !
ರೈತರನ್ನು ಕೇಳುವವರೇ ಇಲ್ಲ !
#ರೈತರನ್ನು_ಉಳಿಸಿ
Truth prevails.
The Ramanagara Court granting anticipatory bail to all 11 local farmers and residents falsely booked in the politically motivated Bidadi FIR is a major legal victory.
State power cannot silence the voices of those standing up for their land. Our legal fight, led by Sri Pradeep, continues in full force until every false case is quashed. We stood with the people of Bidadi on the ground, we stood with them in court, and we will keep fighting until complete justice is delivered.
ಕುಟುಂಬ ಸಮೇತ ಭೂವೈಕುಂಠ ಶ್ರೀ ತಿರುಮಲ ತಿರುಪತಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದೆ.
ನಾಡಿನ ಒಳಿತಿಗಾಗಿ ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥನೆ ಸಲ್ಲಿಸಿದೆ.
ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ.
''ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಹಾಗಾಗಿ ಇಲ್ಲಿಗೆ ಹೆಚ್ಚು ಅನುದಾನ ನೀಡಬೇಕೆಂಬ ಚಿಂತನೆಯೇ ಸರಿಯಲ್ಲ. ಇದೊಂದು ರೀತಿ ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ವಾದದಂತೆ ಆಗುತ್ತದೆ. ಆಗ ಯಾದಗಿರಿ, ಕಲಬುರಗಿ ಜಿಲ್ಲೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಹೊಂದಿಸಬೇಕು ?ʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ @nsitharamanoffc ಹೇಳಿರುವುದಾಗಿ ಮಾಧ್ಯಮ ವರದಿಗಳನ್ನು ಗಮನಿಸಿದೆ.
ನಿರ್ಮಲಾ ಸೀತಾರಾಮನ್ ಅವರೇ, ನೀವು ಕಲಬುರಗಿ, ಯಾದಗಿರಿ ಜಿಲ್ಲೆಗಳ ಚಿಂತೆಯನ್ನು ನಮಗೆ ಬಿಡಿ, ನಾವು ಅದನ್ನು ನೋಡಿಕೊಳ್ಳುತ್ತೇವೆ. ಕರ್ನಾಟಕದಿಂದ ಹೆಚ್ಚಿನ ತೆರಿಗೆ ಪಡೆದು ಕವಡೆ ಕಾಸನ್ನು ಹಿಂದಕ್ಕೆ ಕೊಡುವುದನ್ನು ಮೊದಲು ಬಿಡಿ. ಕಳೆದ 12 ವರ್ಷಗಳಲ್ಲಿ (2014-2026, ಎನ್ಡಿಎ ಅವಧಿ) ₹4 ಲಕ್ಷ ಕೋಟಿ ರುಪಾಯಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದ್ದೀರಿ. ಆದರೆ ನಾವು ವರ್ಷ ಒಂದಕ್ಕೆ ಕೇವಲ ಜಿಎಸ್ ಟಿ ಮೂಲಕವೇ ₹4.3 ಲಕ್ಷ ಕೋಟಿ ರಿಂದ ₹4.5 ಲಕ್ಷ ಕೋಟಿ ನೀಡುತ್ತಿದ್ದೇವಲ್ಲ, ಅದು ಎಲ್ಲಿಗೆ ಹೋಗುತ್ತಿದೆ? ಜಿಎಸ್ ಟಿ ವ್ಯವಸ್ಥೆ ಇಲ್ಲದ ವರ್ಷಗಳನ್ನೂ ಲೆಕ್ಕವಿಟ್ಟುಕೊಂಡು ನೋಡಿದರೆ ಸುಮಾರು ಸುಮಾರು ₹45 ಲಕ್ಷ ಕೋಟಿ ರಿಂದ ₹55 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ. ನೀವು ಹಿಂದಕ್ಕೆ ಕೊಟ್ಟಿರುವುದು ನಿಮ್ಮ ಪ್ರಕಾರ ಕೇವಲ 4 ಲಕ್ಷ ಕೋಟಿ. ಶೇ.10ರಷ್ಟೂ ಹಣ ನಮಗೆ ಹಿಂದಕ್ಕೆ ಬಂದಿಲ್ಲ. ಇದು ಯಾವ ಸೀಮೆಯ ನ್ಯಾಯ?
ಕರ್ನಾಟಕಕ್ಕೆ ಭಿಕ್ಷೆ ಕೊಡಿ ಎಂದು ನಾವು ಕೇಳುತ್ತಿಲ್ಲ. ನಾವು ಕೊಡುವ ತೆರಿಗೆ ಹಣದ ಶೇ.50ರಷ್ಟಾದರೂ ಹಿಂದಕ್ಕೆ ಬರದೇ ಇದ್ದರೆ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ? ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಋಣಪ್ರಜ್ಞೆಯೂ ನಿಮಗೆ ಇದ್ದ ಹಾಗೆ ಕಾಣುವುದಿಲ್ಲ. ನಿಮ್ಮ ಕೈಯಲ್ಲಿ ಅಧಿಕಾರ ಇದೆಯಲ್ಲ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಒಂದು ವಿಶೇಷ ಪ್ಯಾಕೇಜ್ ಘೋಷಿಸಿ ನೋಡೋಣ.
ಕರ್ನಾಟಕದ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳುತ್ತದೆ. ಎತ್ತಿಕಟ್ಟಿ ತಮಾಶೆ ನೋಡುವುದನ್ನು ಬಿಟ್ಟುಬಿಡಿ. ಕರ್ನಾಟಕವನ್ನು ಒಡೆಯುವ ಯತ್ನ ಮಾಡಬೇಡಿ. ಅಂಥ ಯತ್ನಗಳು ಆ ಕಾಲದಿಂದಲೂ ವಿಫಲವಾಗಿವೆ. ನಾವು ಕನ್ನಡಿಗರು ಯಾವಾಗಲೂ ಒಂದಾಗಿಯೇ ಇರುತ್ತೇವೆ.
ಕರ್ನಾಟಕದ ತೆರಿಗೆ ಹಣವನ್ನು ಯಾವುದೇ ಮುಲಾಜಿಲ್ಲದೆ, ನಾಚಿಕೆಯೂ ಇಲ್ಲದೆ ಬೇರೆ ರಾಜ್ಯಗಳಿಗೆ ಹಂಚುತ್ತ ಬಂದಿದ್ದೀರಿ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಮೇಲೆ ಕರ್ನಾಟಕವನ್ನು ಪ್ರಶ್ನೆ ಮಾಡಿ. ದೇಶದ ಅತ್ಯುತ್ತಮ ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾದ ಕರ್ನಾಟಕದ ಋಣ ನಿಮ್ಮ ಮೇಲಿದೆ. ಅದನ್ನು ಮರೆಯಬೇಡಿ.
ವಸೂಲಿ @INCKarnataka ಸರ್ಕಾರ !
ಬೆಂಗಳೂರಿನಲ್ಲಿ ಮನೆ ಮಾಲಿಕರಿಗೆ ಜಲಮಂಡಳಿ ಇಲ್ಲಸಲ್ಲದ ದಂಡಾಸ್ತ್ರಗಳನ್ನು ಪ್ರಯೋಗಿಸಿ ಲಕ್ಷಾಂತರ ರೂ. ಹಣ ವಸೂಲಿಗೆ ಇಳಿದಿದೆ.
ಹೊಸ ಮನೆ , ಹಳೆ ಮನೆ ಮರು ನಿರ್ಮಾಣ ವೇಳೆ ಕಾವೇರಿ ನೀರಿನ ಸಂಪರ್ಕ ಹೆಸರಲ್ಲಿ ಪೆನಾಲ್ಟಿ ಚಾರ್ಜ್ ಸಂಗ್ರಹಿಸುವ ಟಾಸ್ಕ್ ಅನ್ನು ಜಲಮಂಡಳಿಗೆ ಸಚಿವ @DKShivakumar ಕೊಟ್ಟಿದ್ದಾರೆ.
ಅವೈಜ್ಞಾನಿಕ ಗ್ಯಾರಂಟಿಗಳಿಂದ ದಿವಾಳಿಯಾಗಿರುವ @siddaramaiah ಸರ್ಕಾರ ಬರಿದಾದ ಬೊಕ್ಕಸವನ್ನು ತುಂಬಿಸಿಕೊಳ್ಳಲು ಬೆಂಗಳೂರಿಗರ ಪಿಕ್ ಪಾಕೆಟ್ ಮಾಡುವುದನ್ನು ಮುಂದುವರಿಸಿದೆ.
#CongressLootsKarnataka
ನಾನು ಈ ಸರ್ಕಾರದ ಬರುವುದಕ್ಕೆ ಮುಂಚೆ
1100 ತಿಂಗಳಿಗೆ ಕಟ್ಟುತ್ತಿದ್ದೆ.
ಎರಡು ದಿನಗಳ ಹಿಂದೆ ಬಂದಂತಹ #ಕರೆಂಟ್_ಬಿಲ್ಲು, 1700🚫
#ಎಚ್ಚರ_ಕನ್ನಡಿಗ
ನಾನು ಬಳಸಿದ್ದು ಇನ್ನೂರ ಹತ್ತು ಯೂನಿಟ್
#ಮಾನ_ಮರ್ಯಾದೆ ಇಲ್ಲ್ವಾ !🤦🏽
ಯಾಕ್ರೋ ಹೇಳಿದ್ರಿ !❓
ನನಗೂ ಫ್ರೀ ನಿನಗೂ ಫ್ರೀ
ಸಾಲದ ಸುಳಿಯಲ್ಲಿ ಕರ್ನಾಟಕ! 📉
"ಸಾಲ ಮಾಡಿಯಾದರೂ ತುಪ್ಪು ತಿನ್ನು" ಎನ್ನುವ ಮಾತನ್ನು @siddaramaiah ಮುಖ್ಯಮಂತ್ರಿ ಹುದ್ದೆಗೇರಿದ ದಿನದಿಂದ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.
2023ರಲ್ಲಿ ₹5.35 ಲಕ್ಷ ಕೋಟಿ ಇದ್ದ ರಾಜ್ಯದ ಸಾಲ 2026 ಮಾರ್ಚ್ʼಗೆ ₹7.64 ಲಕ್ಷ ಕೋಟಿಗೆ ಕೋಟಿ ರೂ.ಗೆ ತಲುಪುವ ಅಂದಾಜಿಸಲಾಗಿದೆ.
ರಾಜ್ಯ ಸರ್ಕಾರ ಸಂಗ್ರಹಿಸುವ ರಾಜಸ್ವದ ಶೇ. 17.23ರಷ್ಟು ಭಾಗ ಕೇವಲ ಬಡ್ಡಿ ಕಟ್ಟುವುದಕ್ಕೆ ಬಳಕೆಯಾದರೆ ರಸ್ತೆ, ನೀರಾವರಿ, ಶಿಕ್ಷಣಕ್ಕೆ ಹಣ ಎಲ್ಲಿಂದ ಬರುತ್ತೆ? ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ?
ಅದಕ್ಷ @INCKarnataka ಆಡಳಿತದಲ್ಲಿ ಆದ್ಯತಾ ವೆಚ್ಚಗಳಿಗೆ ಸಂಪನ್ಮೂಲ ಕೊರತೆ ಎದುರಾಗಿದ್ದು, ಅಭಿವೃದ್ಧಿ ಹಣದ ಲಭ್ಯತೆಗೆ ತೊಡಕು ಉಂಟಾಗಿದೆ. ಬಂಡವಾಳ ವೆಚ್ಚದಲ್ಲಿನ ಇಳಿಕೆಯು ರಾಜ್ಯದ ದೀರ್ಘಾವಧಿ ಆರ್ಥಿಕ ಬೆಳವಣಿಗೆ ಮೇಲೆ ಗಂಭೀರ ಪ್ರಮಾಣದ ದುಷ್ಪರಿಣಾಮ ಬೀರಲಿದೆ.
ಹುಟ್ಟುವ ಕೂಸಿನ ತಲೆ ಮೇಲೂ ಸಾಲದ ಹೊರೆ ಹೊರಿಸುತ್ತಿರುವ, ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ.. ಸಿದ್ದರಾಮಯ್ಯರ ಕೆಟ್ಟ ಆರ್ಥಿಕ ನೀತಿ ರಾಜ್ಯಕ್ಕೆ ಅತ್ಯಂತ ಅಪಾಯಕಾರಿ ಹಾಗೂ ರಾಜ್ಯವನ್ನು ದಿವಾಳಿತನಕ್ಕೆ ಕೊಂಡೊಯ್ಯುವ ಆತಂಕ ಬಂದೊದಗಿದೆ.
#EconomicDisaster #FinancialCrisis
#SiddaramaiahFailure #SaveKarnataka
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಸೋಮವಾರದಿಂದ ದರ ಏರಿಕೆ ಇಲ್ಲ- ಸಂಸದ ತೇಜಸ್ವಿ ಸೂರ್ಯ ಮಾಹಿತಿ
https://t.co/c8TJpus1kS
#NammaMetro#TejasviSurya@Tejasvi_Surya