हिंदुस्तान की सेना में लाखों लोग देशसेवा करते थे। उन जवानों को सम्मान के साथ मेडिकल, कैंटीन, पेंशन जैसी सुविधाएं मिलती थीं।
लेकिन अब जो अग्निवीर 4 साल बाद सेना से वापस आएंगे, उनकी आर्थिक स्थिति ख���ाब होगी।
: @RahulGandhi जी
📍 उत्तर प्रदेश
"जब नाश मनुज पर छाता है,
पहले विवेक मर जाता है.."
प्रधानमंत्री मोदी की कांग्रेस नेताओं के प्रति घृणा का सहज अंदाज़ा उनके इस बयान से लगाया जा सकता है।
प्रधानमंत्री जैसे ज़िम्मेदार पद पर बैठा कोई व्यक्ति वोट के ज़रिए फाँसी देने की बात कैसे कर सकता है। प्रधानमंत्री लोकतंत्र का गला घोट रहे हैं।
यह हेट स्पीच का स्पष्ट उदाहरण है। चुनाव आयोग यदि निष्पक्ष और स्वतंत्र चुनाव के लिए गंभीर है तो उन्हें इसका तुरंत संज्ञान लेकर कठोर कार्रवाई करनी चाहिए।
प्रधानमंत्री मोदी की इस बौखलाहट का जवाब जनता चुनाव में ज़रूर देगी।
"ನಾನು ಹಿಂದು ಆಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ"
-ಡಾ. ಬಿ ಆರ್ ಅಂಬೇಡ್ಕರ್
(ಉಲ್ಲೇಖ; ೧೯೩೫ ರ ನಾಗ್ಪುರ ಭಾಷಣ ಹಾಗೂ ೧೯೫೫ ಬುದ್ಧ ಧರ್ಮ ಸ್ವಿಕಾರ ಮಾಡಿದ ನಂತರ ನೀಡಿದ ಐತಿಹಾಸಿಕ ಭಾಷಣ.)
ಬಡವರ, ದುಡಿವ ವರ್ಗದ ಜನತೆಯ ಕಾಳಜಿ, ದೇಶಪ್ರೇಮ ಹಾಗೂ ದಿಟ್ಟ ನಿರ್ಧಾರಗಳ ಮೂಲಕ ಬಲಿಷ್ಠ, ಸ್ವಾಭಿಮಾನಿ, ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಇಂದಿರಾಗಾಂಧಿಯವರು ಶ್ರಮಿಸಿದ ಪರಿ ಅದ್ಭುತ.
ಸಾಮಾಜಿಕ ಜೀವನದಲ್ಲಿ ಕಠಿಣ ಪರಿಸ್ಥಿತಿಗಳಲ್ಲೂ ದಿಟ್ಟನಿರ್ಧಾರ ಕೈಗೊಳ್ಳುವ ಅವರ ಶಕ್ತಿ ��ಮಗೆ ಮಾದರಿಯಾಗಿದೆ.
ದಶಕಗಳಿಂದ ಸಂಗೀತದ ಮೂಲಕ ಜನತೆಗೆ ಅರಿವಿನ ರಸದೌತಣ ಉಣಬಡಿಸುತ್ತಿರುವ ಹಿರಿಯ ಸಂಗೀತ ಕಲಾವಿದರಾದ ಶ್ರೀ ಅಂಬಯ್ಯ ನುಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು ಹರ್ಷದಾಯಕ ವಿಚಾರ......
ಕಲೆಯನ್ನು ಬದುಕುತ್ತಿರುವ ಕಲಾವಿದನಿಗೆ ಪ್ರೀತಿಯಿಂದ ಅಭಿನಂದನೆಗಳು.
ರೈತರು,ಕಾರ್ಮಿಕರು ಹಾಗೂ ದುಡಿವ ವರ್ಗದವರ ಹೋರಾಟದ ಶ���್ತಿಯಾಗಿದ್ದ, ಜನಸಾಮಾನ್ಯರ ಧ್ವನಿ ಮಾರುತಿ ಮಾನ್ಪಡೆ ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
#ಹೋರಾಟದ #ಬದುಕಿಗೊಂದು #ಗೌರವ #ನಮನ.
ಆಡಳಿತವೆಂದರೆ ಜನಸಂಕ್ಷೇಮದ ಕೆಲಸವೆಂದು ಸಾಧಿಸಿ ತೋರಿಸಿದವರಲ್ಲಿ ಮಾಜಿಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಒಬ್ಬರು. ರಾಜಕೀಯ ಜೀವನುದುದ್ದಕ್ಕೂ ಜನಾಭಿವೃದ್ಧಿಯ ಚಿಂತನೆಗಳು, ಜನಹಿತ ರಾಜಕಾರಣದಿಂದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದ್ದರು. ಅವರ ಚಿಂತನೆ, ಆಡಳಿತ ವೈಖರಿ ಹಾಗೂ ಪಕ್ಷನಿಷ್ಠೆ ವರ್ತಮಾನದ ರಾಜಕಾರಣಕ್ಕೆ ಒಂದು ಪಾಠ.
ಗಾನ ಗಾರುಡಿಗ, ಸಂಗೀತ ಪ್ರೇಮಿಗಳ ಹೃದಯ ಸಾಮ್ರಾಟ ಶ್ರೀ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನಿಧನ ಅತ್ಯಂತ ವಿಷಾದನೀಯ.
ಸುಮಧುರ ಗಾಯನದ ಮೂಲಕ ಸಂಗೀತ ಪ್ರೇಮಿಗಳ ಮನಸು ತಣಿಸಿದ ಅವರು, ಭಾರತದ ಸಾಂಸ್ಕೃತಿಕ ಹಾಗೂ ಕಲಾಲೋಕಕ್ಕೆ ಅತ್ಯಮೂಲ್ಯ ಸಂಪತ್ತಾಗಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ.
ಬಸವಕಲ್ಯಾಣದ ಹೋರಾಟದ ರಾಜಕಾರಣಿ, ಶಾಸಕ ಬಿ.ನಾರಾಯಣ ರಾವ್ ನಮ್ಮನ್ನಗಲಿದ್ದು ಅತ್ಯಂತ ದುಃಖಕರ.
ಬಸವ ತತ್ವ ಅಳವಡಿಸಿಕೊಂಡಿದ್ದ ಅವರು, ಹೋರಾಟವನ್ನೇ ರಾಜಕೀಯ ಬದುಕಾಗಿಸಿಕೊಂಡಿದ್ದರು. ಎಂದಿಗೂ ಅಧಿಕಾರದ ಪ್ರಲೋಭನೆಗೆ ಸಿಲುಕದೆ ಶುದ್ಧ ರಾಜಕಾರಣ ಹಾಗೂ ಸರಳ, ಸಜ್ಜನಿಕೆಯಿಂದ ಜನಾನುರಾಗಿಯಾಗಿದ್ದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದರಾದ ಸುರೇಶ್ ಅಂಗಡಿ ಅವರ ಅಕಾಲಿಕ ಸಾವು ದಿಗ್ಭ್ರಮೆ ಮೂಡಿಸಿದೆ. ರಾಜಕೀಯ ರಂಗದಲ್ಲಿ ಅಭಿವೃದ್ಧಿಯ ಚಿಂತನೆ ಹಾಗೂ ಸ್ನೇಹ ಮನೋಭಾವದಿಂದ ಉನ್ನತ ಮಟ್ಟ ತಲುಪಿದ್���ರು. ರಾಜ್ಯಕ್ಕೆ, ಜನತೆಗೆ ಇನ್ನೂ ಅವರ ಸೇವೆ ಅಗತ್ಯವಾಗಿತ್ತು. ಇಷ್ಟರಲ್ಲೇ ನಮ್ಮನ್ನಗಲಿದ್ದು ದುಃಖಕರ.
ಹಲವು ವದಂತಿಗಳ ಹೊರತಾಗಿಯೂ, ರಾಜ್���ಸಭಾ ಸದಸ್ಯ ಅಶೋಕ ಗಸ್ತಿ ಅವರ ಅಕಾಲಿಕ ನಿಧನ ವಿಷಾದನೀಯ. ಜನಸಾಮಾನ್ಯರಿಗೆ ಅವರ ಸೇವೆ ಇನ್ನಷ್ಟು ಕಾಲ ಮುಂದುವರೆಯಬೇಕಿತ್ತು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.
ದೇಶದ ಆಡಳಿತ ಚುಕ್ಕಾಣಿ ಹಿಡಿದು ನೀವು ತೋರಿಸುತ್ತಿರುವ ಅಭಿವೃದ್ಧಿ ಶ್ರೀಸಾಮಾನ್ಯನ ಬದುಕಿಗೆ ಕಿಂಚಿತ್ತೂ ಪ್ರಯೋಜನವಿಲ್ಲ.
ದೇಶಭಕ್ತಿಯ ಹೆಸರಿನಲ್ಲಿ ನಿಮ್ಮ ವೈಫಲ್ಯಗಳನ್ನು ಮರೆಮಾಚುತ್ತಿದ್ದೀರಿ. ಇನ್ನಾದರೂ ಪ್ರಾಮಾಣಿಕತೆಯಿಂದ ಜನಸಂಕ್ಷೇಮದ ಕೆಲಸಗಳನ್ನು ಆರಂಭಿಸಿ ಪ್ರಧಾನಮಂತ್ರಿಗಳೇ ಎಂದು ಹಾರೈಸುತ್ತಾ...
ಜನುಮದಿನದ ಹೃದಯಪೂರ್ವಕ ಶುಭಾಶಯಗಳು