As the newly amended Forest Conservation Act 1980 - Forest Conservation (Amendment)Bill, 2023, is being introduced in the upcoming Monsoon Session in Lok Sabha. The Nature around us is very important.
ಹೊನ್ನಾವರದ ಟೊಂಕದಲ್ಲಿ ಇನ್ನಿಲ್ಲದ ಗಡಿಬಿಡಿ. ಸಾಲು ಸಾಲು ಅಭಿವೃದ್ಧಿ ಚಟುವಟಿಕೆಗಳು ಕನ್ನಡದ ಕರಾವಳಿಯತ್ತ ಹರಿದು ಬರುತ್ತಿವೆ. ಆಲೀವ್ ರಿಡ್ಲೆ ಆಮೆ ಮೊಟ್ಟೆಗಳ ಗೂಡನ್ನು ಸಮಾಧಿ ಮಾಡುತ್ತಿವೆ. ಪಾಪಾ ಆ ಜೀವಿಗಳಿಗೆ ನಮ್ಮ ಹಾಗೆ ಮಾತು ಬಂದಿದ್ರೆ ನ್ಯಾಯ ಕೇಳುತ್ತಿದ್ದವೇನೋ!! ಅಮಾಯಕ ಜೀವಿಗಳ ಮೇಲೆ ಸಮಾಧಿ ನಿರ್ಮಿಸಿ ಅಭಿವೃದ್ಧಿಯ ಉತ್ತುಂಗದಲ್ಲಿ
ಘಟ್ಟದ ನದಿ ತೊರೆಗಳ ಶಾಶ್ವತ ಅಳಿವಿನ ನಂತರ ತೋರುವ ಕ್ರೂರ ಮೌನವಿದೆಯಲ್ಲಾ ಅದು ಎಲ್ಲಕ್ಕಿಂತಲೂ ಭೀಕರವಾದುದು ಅದರ ಪರಿಣಾಮ ಇಡೀ ಜೀವ ವ್ಯವಸ್ಥೆಯನ್ನು ಹಾಳುಗೆಡುವಷ್ಟು ಘೋರವಾಗಿರಬಲ್ಲದು ಅದಕ್ಕೂ ಮುನ್ನ ಪೂರಾ ಬಾಗಿ ಕೇಳ್ತಿದಿನಿ ವಿರೋಧವಿದ್ದರೆ ಬೇಗ ಅಧಿಕೃತವಾಗಿ ತಲುಪಿಸಿ.. 1/2
#ಪಶ್ಚಿಮಘಟ್ಟಉಳಿಸಿ#SaveWesternGhats
ಒಂದು ಜೀವ ತನ್ನತ್ವಕ್ಕಾಗಿ ,ಈ ವೈವಿಧ್ಯ ವ್ಯವಸ್ಥೆಯನ್ನು ನಾಶ ಮಾಡುತ್ತಾ ಅದಕ್ಕೆ ಅಭಿವೃದ್ಧಿ ಎಂದು ಹೆಸರಿಡುತ್ತಾ ತನ್ನ ಅನಾಗರಿಕತೆಯನ್ನ ಪ್ರಕೃತಿ ವಿಕೋಪ ಎಂದು ಬಿಂಬಿಸುತ್ತ, ತಾನೇ ಶ್ರೇಷ್ಠ ಎಂಬಂತೆ ಬೀಗುತ್ತಿರುವವನಿಗೆ ಏನು ಹೇಳಲು ಸಾಧ್ಯ.....ಓಹ್ ಅದು ನಾವೇ ಅಲ್ಲವೇ!😔 #Bengalurufloods#bengalururains
ಮನುಷ್ಯನ ದುರಾಸೆಗೆ ಕೊನೆ ಎಲ್ಲಿ?! ಕಪ್ಪತಗುಡ್ಡ ಈಗಾಗಲೇ ಅನೇಕ ವನ್ಯಜೀವಿಗಳಿಗೆ, ಔಷಧಿ ಸಸ್ಯಗಳಿಗೆ ಹೆಸರುವಾಸಿಯಾಗಿದೆ.ಉತ್ತರ ಕರ್ನಾಟಕಕ್ಕೆ ಅಮೂಲ್ಯ ಆಮ್ಲಜನಕ ಒದಗಿಸುವ ಈ ಗುಡ್ಡಗಳನ್ನು ನಿಮ್ಮ ದುರಾಸೆಗೆ ಬಲಿ ಕೊಡಬೇಡಿ🙏 @CMofKarnataka@BSBommai@aranya_kfd@PMOIndia@narendramodi
ಹೌದು...ಮುಂದಾಗಬೇಕು, ಅದು ಹೇಗೆ, ಯಾವ ರೀತಿ ಅನ್ನೋದು ಒಂದು ದೊಡ್ಡ ಸವಾಲು. ಒಂದು ವೇದಿಕೆ ಸ್ಥಾಪಿಸಿ, ಸ್ಥಳೀಯ ಮಾಹಿತಿಯನ್ನು ಕಲೆಹಾಕುವುದು ಬಹಳ ತುರ್ತಿನ ಕೆಲಸ , ಅದಕ್ಕೆ ಪರಿಸರ ಕಾಳಜಿರುವ ಜನರು ಒಗ್ಗೂಡುವದು ತುಂಬಾ ಮುಖ್ಯ. ನಿಮ್ಮ ಆಲೋಚನೆಗಳನ್ನು ನಮ್ಮ ಸಂಸ್ಥೆಯ ಇಮೇಲ್ ವಿಳಾಸಕ್ಕೆ ದಯಮಾಡಿ ತಿಳಿಸಿ....
ಈಗಾಗಲೇ ಹವಾಮಾನ ವೈಪರೀತ್ಯ, ಜೀವವೈವಿದ್ಯತೆ ನಶಿಸುವದು, ಮಣ್ಣಿನ ಆರೋಗ್ಯ ಕುಂದುವಿಕೆ ಎಲ್ಲಾ ಮಿತಿಮೀರಿದ ವೇಗದಲ್ಲಿ ಇದೆ. ಇನ್ನು ನಿರ್ಲಕ್ಷ್ಯ ಮಾಡಿದರೆ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಕಷ್ಟಸಾಧ್ಯ......😱