Mechanical Engineer in Automotive Industry. City, State and later Nation is order. People over Philosophy and Psychology. ಕನ್ನಡಿಗ - ಹುಟ್ಟಿನಿಂದ, ಬದುಕಿನಿಂದ
ತಮ್ಮ ಕುರಿತು ಹೆಚ್ಚು ತಮಟೆ ಬಾರಿಸಿಕೊಳ್ಳುವುದನ್ನು, ತಮ್ಮ ಬಗ್ಗೆ ಯಾರಾದರೂ ಹೆಚ್ಚು ಮಾತಾಡುವುದನ್ನು ಮುಜುಗರದಿಂದ ನೋಡುವ ಸ್ವಭಾವ ಹೆಚ್ಚಿನ ಕನ್ನಡಿಗರದ್ದು.
'ಪ್ರತಿ ವಾರ ಏನಾದರೊಂದು ಸುದ್ದಿ ಮಾಡುತ್ತಿದ್ದೇವೆ, ಯಾರನ್ನಾದರೂ ತರಾಟೆಗೆ ತೆಗೆದುಕೊಳ್ಳುತ್ತಿದ್ದೇವೆ 'ಎಂಬ ಅನಿಸಿಕೆ ಕೆಲ ಕನ್ನಡಿಗರಿಗೆ ಬರಬಹುದು/ ಬಂದಿರಬಹುದು.
ಆದರೆ ಯಾಕೆ ಮಾಡಬೇಕಾಗಿ ಬಂದಿದೆ? ಮಾಡದಿದ್ದರೆ ನಮ್ಮ ಮುಂದಿನ ಗತಿ ಏನು? ಎಂಬುವುದನ್ನು ಅರ್ಥ ಮಾಡಿಕೊಂಡು ಕಾಲಕ್ಕೆ ಸರಿಯಾದ ಹೆಜ್ಜೆ ಇಡುವ ಅಗತ್ಯ ಕನ್ನಡಿಗರ ಮುಂದಿದೆ.
🎯ತಮಿಳು ಭಾಷಿಕರಿಗೆ ಅವರದ್ದೇ ಆದ ರಾಜಕೀಯ ಪಕ್ಷಗಳಿವೆ, ಅವರ ಆಗು ಹೋಗುಗಳನ್ನು ಪ್ರತಿನಿಧಿಸಲು.
🎯ಮಲಯಾಳಿ ಭಾಷಿಕರ ಬಳಿ ಅಸಾಮಾನ್ಯವಾದ ಒಗ್ಗಟ್ಟು ಅವರ ದನಿಯಾಗಿ, ಶಕ್ತಿಯಾಗಿ ಅವರಿಗೆ ಆಸರೆಯಾಗಿದೆ.
🎯ಹಿಂದಿ ಭಾಷಿಕರಿಗೆ ನಮ್ಮ ಸಂವಿಧಾನದ ಸಾಕಷ್ಟು ಅಂಶಗಳು ಅವರ ಪರವಾಗಿ, ಅವರಿಗಾಗಿಯೇ ಎನ್ನುವಷ್ಟು ಬೆನ್ನೆಲುಬಾಗಿ ಬಂದಿದೆ.
ಆದರೆ ಕನ್ನಡಿಗರ ಸ್ಥಿತಿ??
❎ನಮಗೆ ನಮ್ಮದೇ ಆದ ರಾಜಕೀಯ ದನಿ ಇಲ್ಲ, ಶಕ್ತಿ ಇಲ್ಲ.
❎ಜಾತಿಗಳನ್ನು ಒಡೆದು ಬಳಸಿಕೊಂಡು ರಾಜಕೀಯ ಮಾಡಿ ಬಂದಿರುವುದರಿಂದ ಜಾತಿಗಳಾಚೆ ಕನ್ನಡ ಎಂಬ ಗುರುತಿನಡಿಯಲ್ಲಿ ಸಮುದಾಯ ಚಿಂತನೆ ಮತ್ತು ಒಗ್ಗಟ್ಟನ್ನು ಕಟ್ಟಿಕೊಂಡಿಲ್ಲ.
❎ಕಲಿತ, ಶ್ರೀಮಂತ ಕನ್ನಡಿಗರಿಗೆ ತಾವು ವಿಶಾಲ ಹೃದಯದವರು ಎಂದು ಹೇಳಿಕೊಳ್ಳುವ ಚಟ ಇರುವುದರಿಂದ ಅವರು ಕೂಡ ಕನ್ನಡಕ್ಕೆ ಯಾವುದೇ ಶಕ್ತಿಯಾಗಿಲ್ಲ.
ಉಳಿದಿರುವವರು ಯಾರು?
ಸಾಮಾನ್ಯ ಕನ್ನಡಿಗರು. ಇರುವ ಸಶಕ್ತ ವೇದಿಕೆ ಯಾವುದು? ಸಾಮಾಜಿಕ ಜಾಲತಾಣಗಳು, ಅದರ ಮೂಲಕವೇ ಜನಜಾಗ್ರತಿ.
ಹಾಗಾಗಿ ವಾರಕೊಮ್ಮೆ ಅಲ್ಲ, ಪ್ರತಿ ದಿನವೂ ನಮಗಾಗುತ್ತಿರುವ ಅನ್ಯಾಯ, ಸುಳ್ಳಿನ ವಿರುದ್ಧ ದನಿ ಎತ್ತ ಬೇಕೆಂದರೂ ಹೋರಾಟ ಮಾಡಬೇಕಿದೆ.
ಕನ್ನಡಿಗರು ಒಂದು ಸಾಮಾಜಿಕ ಮತ್ತು ರಾಜಕೀಯ ಶಕ್ತಿಯಾಗುವ ತನಕ ಇದನ್ನು ಮಾಡಲೇಬೇಕಿದೆ.
ಹಾಗಾಗಿ ನಮಗಾಗಿ, ನಮ್ಮ ನಾಡು, ನುಡಿಗಾಗಿ, ಎಲ್ಲಕ್ಕಿಂತ ಮಿಗಿಲು ನಮ್ಮ ಮುಂದಿನ ಪೀಳಿಗೆ ತನ್ನೂರಲ್ಲೇ ಆಟಕ್ಕುಂಟು, ಲೆಕ್ಕಕಿಲ್ಲ ಎಂಬ ರೀತಿಯಲ್ಲಿ ಎರಡನೇ ದರ್ಜೆಯ ನಾಗರೀಕರಾಗುವುದನ್ನು ತಪ್ಪಿಸಲು ತಪಸ್ಸಿನಂತೆ ಕನ್ನಡದ ಕೆಲಸ ಮಾಡಬೇಕಿದೆ. ಯಾವುದೇ ದ್ವಂದ್ವ ಬೇಡ.
@BMTC_BENGALURU There are lots of good features in the APP but data updation issues are seen frequently. Especially during peak hrs.
Today I observe vehicle details mismatch but location tracker is working fine.
App shows KA57F0990 where as physically am in the bus KA57F3446
The middle class is enjoying. Economic benefits of globalisation at work & majoritarian bigotry on the streets. However both together isn’t sustainable. Sooner or later street bigotry will take over & there will be little or no economic activity to enjoy the majoritarian frenzy.
2016ರ ಕಾವೇರಿ ನದಿ ನೀರು ಹಂಚಿಕೆಯ ವಾದ-ಪ್ರತಿವಾದದ ನಡುವಿನಲ್ಲಿ ಬರೆದಿದ್ದ ಸಾಲುಗಳು
“ಕನ್ನಡ ಕಹಳೆ ಮೊಳಗಲಿಂದಿಗೆ. ನೆತ್ತರು ಬಸಿದು ನಮ್ಮೊಡಲ ಕಟ್ಟಿ ಕೊಟ್ಟಿರ್ಪರು ನಾಡ ಅಪ್ಪಂದಿರು. ಅಳಿವಿಗಲ್ಲ, ಉಳಿವಿಗೇ ಉಳಿವಿಗೆ”
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು
😊👏🏻
ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೇರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ. - ಕುವೆಂಪು
ಕನ್ನಡವನ್ನು ಬರೀ ಹಾಡು, ಕುಣಿತ, ಸಿನೆಮಾ, ನಾಟಕದಂತಹ ಜುಟ್ಟಿನ ಮಲ್ಲಿಗೆಗೆ ಕಟ್ಟಿ ಹಾಕದೇ ಅರಿವು, ಅರಿಮೆಗಳಂತಹ ಹೊಟ್ಟೆಯ ಹಿಟ್ಟಿನ ವಿಷಯಕ್ಕೂ ಹಿಗ್ಗಿಸುವ ಹೊಣೆ ಆ ಶಕ್ತಿ ಇರುವ ಕನ್ನಡಿಗರ ಮೇಲಿದೆ. ಎಲ್ಲರಿಗೂ ರಾಜ್ಯೋತ್ಸವದ ಸಿಹಿ ಹಾರೈಕೆಗಳು..
#Kannada
7. ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿಸುತ್ತಿರುವ ಮತ್ತು ಓದಿಸುವ ಆಸೆ ಹೊಂದಿರುವ ಪಾಲಕರೆಲ್ಲರೂ ಬರುವ ಶನಿವಾರ ಒಂದೆಡೆ ಸೇರುತ್ತಿದ್ದೇವೆ. ಆಸಕ್ತರು ಪಾಲ್ಗೊಳ್ಳಿ..
@chetanjeeral@JS_Prashant@Munnota_Trust
6. ಈ ನಿಟ್ಟಿನಲ್ಲಿ ಇನ್ನಷ್ಟು ಗುಣಮಟ್ಟದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಬೆಂಗಳೂರಿನಲ್ಲಿ ಶುರುವಾಗಬೇಕು. NEP ಈ ಬಗ್ಗೆ ಮಾತನಾಡುತ್ತಿದೆ, ಅದರಿಂದ ಪ್ರೇರಣೆ ಪಡೆದು ಒಂದಿಷ್ಟು ಶಾಲೆಗಳು ಆಗಬಹುದು ಅನ್ನುವ ನಿರೀಕ್ಷೆ ಇದೆ. ನೋಡೋಣ..
5. ಬೆಂಗಳೂರಿನಲ್ಲಿ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳಿರುವುದು, ಅಲ್ಲಿ ಮಧ್ಯಮ ವರ್ಗದ ಪಾಲಕರು ಇಷ್ಟ ಪಟ್ಟು ಮಕ್ಕಳನ್ನು ಸೇರಿಸುವಂತೆ ಆಗುವುದು ಕನ್ನಡ ಮಾಧ್ಯಮದ ಒಟ್ಟಾರೆ revivalಗೆ ಒಂದು ಮುಖ್ಯ ಹೆಜ್ಜೆ ಅನ್ನುವುದು ನನ್ನ ನಂಬಿಕೆ.
4. ಅವರ ಪರಿಶ್ರಮದಿಂದಾಗಿ ಲ್ಯಾಬ್ ಇರುವ ದಿನ 5,6,7ನೇ ತರಗತಿಯಲ್ಲಿ ಹೆಚ್ಚು ಕಡಿಮೆ ನೂರಕ್ಕೆ ನೂರು ಹಾಜರಾತಿ ಕಾಣುತ್ತಿದೆ ಅಂತ ಶಾಲೆಯ ಎಚ್.ಎಮ್ ಇವತ್ತು ತಿಳಿಸಿದರು. ಶ್ವೇತಾ ಅವರಿಗೆ ಒಂದು ಚಪ್ಪಾಳೆ ಸಲ್ಲಬೇಕು..
3. ಈ ಹೊತ್ತಿನಲ್ಲಿ ಶಾಲೆಯಲ್ಲಿ ತಮ್ಮ ಮಗಳನ್ನು ಓದಿಸುತ್ತಿರುವ ಶ್ವೇತಾ ಜೀರಾಳ್ ಅವರು ವಾರಕ್ಕೆ ಮೂರು ಬಾರಿ ಶಿಕ್ಷಕಿಯಾಗಿ ಬರಲು ಒಪ್ಪಿ ಕೊಟ್ಟ ಮಾತಿನಂತೆ ಅತ್ಯಂತ ಶ್ರದ್ಧೆಯಿಂದ ಲ್ಯಾಬ್ ನಡೆಸುತ್ತಿದ್ದಾರೆ.
2. ಈ ವರ್ಷ ವಾರಕ್ಕೆ ಮೂರು ದಿನ ಮೂರು ತರಗತಿಗಳ ಮಕ್ಕಳಿಗೆ ತಲಾ ಒಂದೊಂದು ಬಾರಿ ಅನ್ನುವಂತೆ ಲ್ಯಾಬ್ ಅವಧಿ ನಿಗದಿಪಡಿಸಿ, ಆ ಹೊತ್ತಿನಲ್ಲಿ ಇದಕ್ಕೆಂದೇ ಒಬ್ಬ ಶಿಕ್ಷಕಿಯನ್ನು ನೇಮಿಸಿ Do It Yourself ಮಾದರಿಯ ಚಟುವಟಿಕೆಯ ಮೂಲಕ ಪಾಠ ಕಲಿಯುವಂತೆ ಮಾಡಲು ಮುಂದಾದೆವು.
1. ಕನ್ನಡ ಮಾಧ್ಯಮ ಶಾಲೆಯಲ್ಲಿ STEM ಆಧಾರಿತವಾಗಿ ವಿಜ್ಞಾನವನ್ನು ಹೇಳಿಕೊಡುವ ಹಾಗೆ ಆಗಬೇಕು ಅನ್ನುವ ಉದ್ದೇಶದಿಂದ ಬೆಂಗಳೂರಿನ ಕಾರ್ಮೆಲ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಮುನ್ನೋಟದಿಂದ ಶುರು ಮಾಡಿದ ತಿಳಿಮನೆ ಲ್ಯಾಬ್ ಈಗ ಎರಡನೆಯ ವರ್ಷದಲ್ಲಿದೆ. ಮೊದಲ ವರ್ಷ ನಾವೇ ಸಾಕಷ್ಟು ಕಮ್ಮಟಗಳನ್ನು ಮಕ್ಕಳಿಗಾಗಿ ನಡೆಸಿದ್ದೆವು.
One Question Madam.. GK for all..
Do they speak in Hindi with Delhite's until they know others MT or they speak in their MT to all Delhite's?
https://t.co/zD4ILQmb4n
South Indian women security at Delhi metro stations always recognise that I'm a South Indian and we end up having conversations that last for at least 5 minutes ❤️ best part of my day.