ದೇವರಹಿಪ್ಪರಗಿ ವಿಧಾನಸಭೆ ಕ್ಷೇತ್ರದ ಶಾಸಕರು, ನನ್ನ ಸನ್ಮಿತ್ರರೂ ಆಗಿರುವ ಶ್ರೀ ಭೀಮನಗೌಡ ಬಸನಗೌಡ ಪಾಟೀಲ್ (ರಾಜೂಗೌಡ) ಅವರ ಮಾತೃಶ್ರೀ ಶ್ರೀಮತಿ ನೀಲಾಬಾಯಿ ಗೌಡ್ತಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು.
ಅಗಲಿದ ಆ ತಾಯಿಯ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ..
Today in New Delhi a significant discussion was held focusing on the revival of the RINL Steel Plant - (Vizag Steel) alongside Andhra Pradesh Chief Minister Shri @ncbn avaru.
This meeting aimed to address key strategies and initiatives to enhance the plant's operations and ensure its sustainable growth. My colleague, Minister of State Shri @BJPVarma avaru, Vishakhapatnam MP Shri @sribharatm, and the Secretary of @SteelMinIndia were also present.
India has lost a visionary business leader in the passing away of Shri. Ratan Tata. In his early years as Chairman, Tata Group, I had negotiated the creation of a new airport for Bangalore with him. I was CM then. Later too we were in touch. He was a very gentle person. RIP.
Yesterday, I had a productive meeting with Finance Minister Smt. @nsitharaman avaru and Andhra Pradesh CM Shri @ncbn avaru to discuss the revival of RINL (Vizag Steel). We are committed to securing a sustainable future for this vital asset, driving economic growth and strengthening India's steel industry.
#VizagSteel #RevivalPlan
I'm deeply saddened to hear about Shri Ratan Tata's demise. His legacy as a philanthropist and industrialist has profoundly impacted countless lives and communities. His vision, compassion, and unwavering dedication to social causes will always be remembered. Our thoughts and prayers are with his family during this challenging time.
#RatanTata
ಈ ಸಂದರ್ಭದಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷ ಶ್ರೀ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ಶ್ರೀ ಎಂ.ಎಸ್. ರಘುನಂದನ್, ಜಿ.ಪಂ. ಮಾಜಿ ಸದಸ್ಯರಾದ ಶ್ರೀ ಕೆ.ಎಸ್. ವಿಜಯಾನಂದ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀ ಎಸ್.ಜೆ.ಅಶೋಕ್ ಜಯರಾಮ್, ಎಚ್ಡಿಕೆಎನ್ ಜಾಗ್ವಾರ್ ಗ್ರೂಪ್ನ ಶ್ರೀ ಬಿ.ಆರ್.ಶ್ರೀಧರ ದೊಡ್ಡಬಾಣಸವಾಡಿ, 2/3
ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ನಾಡಿನ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಶ್ರೀ ಅರ್ಜುನ ದೇವ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು.
ಹಲವು ತಲೆಮಾರುಗಳ ಮಾಧ್ಯಮ ಬೆಳವಣಿಗೆಯ ಕೊಂಡಿಯಾಗಿದ್ದ ಅವರು ನಿಷ್ಠೆ, ಪ್ರಾಮಾಣಿಕತೆ, ದಕ್ಷತೆಗೆ ಹೆಸರಾಗಿದ್ದರು. ಅನೇಕ ಗ್ರಾಮೀಣ ಪ್ರತಿಭೆಗಳನ್ನು ಮಾಧ್ಯಮ ಲೋಕಕ್ಕೆ ಪರಿಚಯಿಸಿದ್ದರು.
ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳು, ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಮಂಡ್ಯ ಲೋಕಸಭೆ ಕ್ಷೇತ್ರದ ಕೊಪ್ಪದಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮತಯಾಚನೆ ನಡೆಸಲಾಯಿತು. ಸಾರ್ವಜನಿಕ ಬಂಧುಗಳು ನನ್ನನ್ನು ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡು ಗೌರವಿಸಿದರು.
ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು, ಮುಖಂಡರಾದ ಶ್ರೀ ಉಮೇಶ್ ಸೇರಿದಂತೆ @JanataDal_S@BJP4Karnataka ಪಕ್ಷಗಳ ನಾಯಕರು ಉಪಸ್ಥಿತರಿದ್ದರು.
#ಮಂಡ್ಯ
ಲೋಕಸಭೆ ಚುನಾವಣೆಯ ಮೊದಲ ಹಂತದ ಬಹಿರಂಗ ಪ್ರಚಾರ ಕೊನೆಯ ದಿನವಾದ ಇಂದು ಮಂಡ್ಯದಲ್ಲಿ ಪ್ರಚಾರ ನಡೆಸಲಾಯಿತು. ಅತ್ಯಂತ ಯಶಸ್ವಿಯಾಗಿ ನಡೆದ ರೋಡ್ ಶೋ ಕಾರ್ಯಕ್ರಮದಲ್ಲಿ ಸಾಗರೋಪಾದಿಯಲ್ಲಿ ಮಹಾಜನರು ಸೇರಿದ್ದರು. ತಾಯಂದಿರು, ಅಕ್ಕ ತಂಗಿಯರು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು. 1/3
#ಮಂಡ್ಯ
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆಯಲ್ಲಿ (ಪಿಂಕ್ ಬೂತ್) ನನ್ನ ಕುಟುಂಬ ಸಮೇತವಾಗಿ ಮತದಾನ ಮಾಡಿದೆ.
ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದ ಹಕ್ಕು ಚಲಾಯಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎನ್ನುವುದು ನನ್ನ ಕಳಕಳಿ.
#Elections2024
•||ಮಂಡ್ಯ ಲೋಕಸಭೆ ಕ್ಷೇತ್ರದ ತಂದೆ ತಾಯಂದಿರು, ಅಕ್ಕತಂಗಿಯರು, ಅಣ್ಣತಮ್ಮಂದಿರಿಗೆ ಅನಂತ ಧನ್ಯವಾದಗಳು||•
•ಅತ್ಯಂತ ನಿರ್ಣಾಯಕವಾಗಿದ್ದ 2024ನೇ ಲೋಕಸಭೆ ಚುನಾವಣೆಯಲ್ಲಿ ಆಕಸ್ಮಿಕವಾಗಿ @JanataDal_S, @BJP4Karnataka (NDA) ಮೈತ್ರಿಕೂಟದ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ತಾವೆಲ್ಲರೂ ತೋರಿದ ಪ್ರೀತಿ, ವಿಶ್ವಾಸಕ್ಕೆ ಧನ್ಯನಾಗಿದ್ದೇನೆ. ಕ್ಷೇತ್ರದ ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ತಾವು ನೀಡಿದ ಅಭೂತಪೂರ್ವ ಬೆಂಬಲಕ್ಕೆ ಮೂಕವಿಸ್ಮಿತನಾಗಿದ್ದೇನೆ.
•ತಾವೆಲ್ಲರೂ ಉರಿ ಬಿಸಿಲನ್ನು ಲೆಕ್ಕಿಸದೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದೀರಿ. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಲು ನೀವು ತೋರಿದ ಉತ್ಸಾಹ, ಬದ್ಧತೆಯನ್ನು ಕಂಡು ನನ್ನ ಹೃದಯ ಉಕ್ಕಿ ಬಂದಿದೆ. ವಿಶೇಷವೆಂದರೆ; ಬೆಂಗಳೂರು, ಮೈಸೂರು ನಗರಗಳು ಸೇರಿದಂತೆ ದೇಶ ವಿದೇಶಗಳಲ್ಲಿ ನೆಲೆಸಿರುವ ಜಿಲ್ಲೆಯ ನನ್ನ ಬಂಧುಗಳು ಮತಗಟ್ಟೆಗೆ ಬಂದು ಹರಸಿದ್ದಾರೆ. ನಿಮ್ಮೆಲ್ಲರ ಋಣ ದೊಡ್ಡದು.
•ಎಷ್ಟೋ ಅಪಪ್ರಚಾರ, ಅಪದ್ಧಗಳ ನಡುವೆಯೂ ಪ್ರತಿಗಾಮಿ ಶಕ್ತಿಗಳನ್ನು ಮೆಟ್ಟಿ ನಿಂತು ಸುನಾಮಿಯಂತೆ ಮತ ಚಲಾಯಿಸಿದ್ದೀರಿ. ಇಡೀ ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯಷ್ಟು ಮತದಾನ ಆಗಿರುವುದು ನೀವು ವ್ಯಕ್ತಪಡಿಸಿದ ಅಕ್ಕರೆಯ ಪ್ರತಿಫಲ ಎಂದೇ ನಾನು ಭಾವಿಸಿದ್ದೇನೆ.
•ನನ್ನ ಪರವಾಗಿ ಹಗಲಿರುಳೆನ್ನದೆ ದುಡಿಮೆ ಮಾಡಿದ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷದ ಸಮಸ್ತ ಕಾರ್ಯಕರ್ತರು, ಮುಖಂಡರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಪ್ರತಿಯೊಬ್ಬರ ಹೆಸರನ್ನೂ ಸ್ಮರಿಸುತ್ತಾ ನನ್ನ ಹೃದಯಾಂತರಾಳದ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ವಂದನೆಗಳೊಂದಿಗೆ
ಇಂತಿ ನಿಮ್ಮ ಮನೆಮಗ
•ಹೆಚ್.ಡಿ.ಕುಮಾರಸ್ವಾಮಿ
ಜೆಡಿಎಸ್-ಬಿಜೆಪಿ (NDA) ಮೈತ್ರಿಕೂಟದ ಅಭ್ಯರ್ಥಿ, ಮಂಡ್ಯ ಲೋಕಸಭೆ ಕ್ಷೇತ್ರ
#ಮೋದಿ_ಮತ್ತೊಮ್ಮೆ
ಮಂಡ್ಯ ಲೋಕಸಭೆ ಕ್ಷೇತ್ರದ ಪಾಂಡವಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಅಪಾರ ಜನಸ್ತೋಮ ಸೇರಿದ್ದ ಈ ಸಭೆ ಮಂಡ್ಯದ ಭವಿಷ್ಯದ ದಿಕ್ಕನ್ನು ಸಾರಿ ಹೇಳಿತು.
ಮಾಜಿ ಸಚಿವರಾದ ಶ್ರೀ ಸಿ.ಎಸ್.ಪುಟ್ಟರಾಜು, ಶ್ರೀ ಇಲವಾಳ ಸಚ್ಚಿದಾನಂದ ಸೇರಿದಂತೆ ಎರಡೂ ಪಕ್ಷಗಳ ಪ್ರಮುಖ ನಾಯಕರು, ಅಸಂಖ್ಯಾತ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
#ಮಂಡ್ಯ
ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳವರ ವರ್ಧಂತಿ ಮಹೋತ್ಸವ ನಿಮಿತ್ತ ಪರಮಪೂಜ್ಯರಿಗೆ ಅನಂತ ಪ್ರಣಾಮಗಳು.
ನಾಡಿನ ಜನತೆಗೆ ಮಹಾಸ್ವಾಮೀಜಿಗಳವರ ಅನುಗ್ರಹ, ಮಾರ್ಗದರ್ಶನ ಸದಾ ಇರಲಿ ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ.
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ @BJP4Karnataka, @JanataDal_S ಮೈತ್ರಿ ಅಭ್ಯರ್ಥಿ ಶ್ರೀ @Tejasvi_Surya ಅವರ ಪರವಾಗಿ ಇಂದು ಬೆಳಗ್ಗೆ ನಗರದ ಗೋವಿಂದರಾಜ ನಗರ ಮತ್ತು ವಿಜಯನಗರದಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡು ಪ್ರಚಾರ ನಡೆಸಲಾಯಿತು.
•ಶಾಸಕರಾದ ಶ್ರೀ ಸಿ.ಕೆ.ರಾಮಮೂರ್ತಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಶ್ರೀ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎರಡೂ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದರು.
#ಮಂಡ್ಯ
ಸತ್ಯ, ಅಹಿಂಸೆ, ಮಾನವೀಯತೆಯ ಸಂದೇಶಗಳ ಮೂಲಕ ಮನುಕುಲಕ್ಕೆ ಅರಿವಿನ ಬೆಳಕು ಕೊಟ್ಟ ಭಗವಾನ್ ಮಹಾವೀರ ಜಯಂತಿ ದಿನದಂದು ಆ ದಿವ್ಯ ಚೇತನಕ್ಕೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.
#ಮಹಾವೀರ_ಜಯಂತಿ#MahaveerJayanti
ಮಂಡ್ಯ ಲೋಕಸಭೆ ಕ್ಷೇತ್ರದ ಶ್ರೀರಂಗಪಟ್ಟಣದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಾಯಿತು.
ಮಾಜಿ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಈ ಸಮಾವೇಶದಲ್ಲಿ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರ ಸೇರಿದಂತೆ ಇಡೀ ಮಂಡ್ಯ ಕ್ಷೇತ್ರದ ಎಲ್ಲಾ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ತೆರಳಿ ಬಂದಿದ್ದರು.
ಮಾಜಿ ಸಚಿವರಾದ ಶ್ರೀ ಬಂಡೆಪ್ಪ ಕಾಶೆಂಪೂರ್, ಶ್ರೀ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಭೋಜೇಗೌಡ, ಶ್ರೀ ಮಂಜೇಗೌಡ, ಮಾಜಿ ಸದಸ್ಯರಾದ ಶ್ರೀ ಹೆಚ್.ಎಂ.ರಮೇಶ್ ಗೌಡ, ಮೈತ್ರಿಕೂಟದ ನಾಯಕರಾದ ಶ್ರೀ ಇಂಡುವಾಳು ಸಚ್ಚಿದಾನಂದ, ಮಂಡ್ಯ ಜಿಲ್ಲಾ @JanataDal_S ಅಧ್ಯಕ್ಷರಾದ ಶ್ರೀ ಡಿ.ರಮೇಶ್, @BJP4Karnataka ಜಿಲ್ಲಾಧ್ಯಕ್ಷರಾದ ಶ್ರೀ ಇಂದ್ರೇಶ್, ಶ್ರೀ ಸಿದ್ದರಾಮಯ್ಯ, ಡಾ.ರವೀಂದ್ರ, ಶ್ರೀ ಸಂತೋಷ್, ಶ್ರೀ ಹೆಚ್.ಮಂಜುನಾಥ, ಶ್ರೀ ಟಿ.ಶ್ರೀಧರ್ ಸೇರಿದಂತೆ ಮೈತ್ರಿ ಪಕ್ಷಗಳ ನಾನಾ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಜನಸ್ತೋಮ ಸೇರಿದ್ದರು.
#ಮಂಡ್ಯ #ಶ್ರೀರಂಗಪಟ್ಟಣ
ಬೆಂಗಳೂರು ಲೋಕಸಭೆ ಕ್ಷೇತ್ರದ @BJP4Karnataka, @JanataDal_S ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಪರವಾಗಿ ರಾಜರಾಜೇಶ್ವರಿ ನಗರದಲ್ಲಿ ಪ್ರಚಾರ ನಡೆಸಲಾಯಿತು.
ಮಾಜಿ ಸಚಿವರಾದ ಶ್ರೀ ಮುನಿರತ್ನ ಅವರು ಸೇರಿದಂತೆ ಎರಡೂ ಪಕ್ಷಗಳ ಪ್ರಮುಖ ನಾಯಕರು, ಅಸಂಖ್ಯಾತ ಕಾರ್ಯಕರ್ತರು, ಬೃಹತ್ ಜನ ಸಮೂಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
#ಬೆಂಗಳೂರು_ಗ್ರಾಮಾಂತರ
ಮಂಡ್ಯ ಲೋಕಸಭೆ ಕ್ಷೇತ್ರದ ನಾಗಮಂಗಲದಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ.
ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆದ ಈ ಸಮಾವೇಶದಲ್ಲಿ ಮೈಸೂರು-ಕೊಡಗು ಸಂಸದರಾದ ಶ್ರೀ ಪ್ರತಾಪ್ ಸಿಂಹ, ಹಿರಿಯ ಮುಖಂಡರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡ, ಶ್ರೀ ನೆಲ್ಲಿಗೆರೆ ಬಾಲು, ಶ್ರೀ ಕುಮಾರಸ್ವಾಮಿ, ಶ್ರೀ ಕೆ.ಕೃಷ್ಣಪ್ಪ, ಡಾ.ರವೀಂದ್ರ, ಶ್ರೀ ಫೈಟರ್ ರವಿ, ಶ್ರೀಮತಿ ಹೇಮಲತಾ, @JanataDal_S ಜಿಲ್ಲಾಧ್ಯಕ್ಷರಾದ ಶ್ರೀ ಡಿ.ರಮೇಶ್, ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಜಿ.ಟಿ.ಶ್ರೀನಿವಾಸ್, @BJP4Karnataka ತಾಲೂಕು ಅಧ್ಯಕ್ಷರಾದ ಶ್ರೀ ಸೋಮಶೇಖರ್ ಸೇರಿ ಎರಡೂ ಪಕ್ಷಗಳ ನಾಯಕರು, ಅಪಾರ ಕಾರ್ಯಕರ್ತರು, ಭಾರೀ ಪ್ರಮಾಣದಲ್ಲಿ ಮಹಾಜನರು ನೆರೆದಿದ್ದರು.
#ನಾಗಮಂಗಲ #ಮಂಡ್ಯ
ಕೋಲಾರ ಲೋಕಸಭೆ ಕ್ಷೇತ್ರ @JanataDal_S@BJP4Karnataka ಮೈತ್ರಿ ಅಭ್ಯರ್ಥಿ ಶ್ರೀ ಮಲ್ಲೇಶ್ ಬಾಬು ಅವರ ಪರವಾಗಿ ಮುಳಬಾಗಿಲು ಪಟ್ಟಣದಲ್ಲಿ ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ನಡೆಸಲಾಯಿತು.
ಶಾಸಕರಾದ ಶ್ರೀ ಸಮೃದ್ಧಿ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಈ ಸಮಾವೇಶದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳಾದ @drashwathcn, ಮಾಜಿ ಸಚಿವರಾದ ಶ್ರೀ ವರ್ತೂರ್ ಪ್ರಕಾಶ್, ಸಂಸದರಾದ ಶ್ರೀ ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಇಂಚರ ಗೋವಿಂದರಾಜು, ಮಾಜಿ ಶಾಸಕರಾದ ಶ್ರೀ ಸಂಪಂಗಿ, ಶ್ರೀ ರಾಜಾ ವೆಂಕಟಪ್ಪ ನಾಯಕ ದೊರೆ ಸೇರಿದಂತೆ ಎರಡೂ ಪಕ್ಷಗಳ ಅನೇಕ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕ ಬಂಧುಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
#ಮುಳಬಾಗಿಲು #ಕೋಲಾರ