ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್���ಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿ��್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸ���ಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
@BasanagoudaBJP ಜವಾಬ್ದಾರಿ ತಗೊಂಡ್ರೆ ಭಯದಿಂದ ರಾಜೀನಾಮೆ ಕೊಡಬೇಕು ಅಂತ ಬಯಕೆ ಇಂಥ ಮಾತು ಸುಮ್ನೆ ನಿಷ್ಠಾವಂತ ಅಧಿಕಾರಿಗಳನ್ನು ಬಲಿಪಶು ಯಾಕೆ ಮಾಡುತ್ತೀರಿ ಜವಾಬ್ದಾರಿ ನೀವೇ ಹೊರಬೇಕು
@AKSSAofficial ಬದಲಾವಣೆ ನಮ್ಮಿಂದಲೇ ಸಾಧ್ಯ ಇಂಥಾ ಗುರುಗಳು ನಮಗೆ ಸಪೋರ್ಟ್ ಮಾಡ್ತಾರೆ ಅಂದ್ರೆ ಇದು ಯಾಕೆ ಸಾಧ್ಯ ಇಲ್ಲ ಅಂತಾ ರಾಜಕಾರಣಿಗಳು ��ವರ ಚೇಲಾಗಳು ಕೊಡುವ ಬಿಡಿಗಾಸಿಗೆ ಬಲಿಯಾಗಬೇಡಿ ಯುವ ಸಮುದಾಯ ಯೋಚಿಸಿ..✋✋
@BJP4Karnataka@INCKarnataka@siddaramaiah ನಿಮ್ಗೂ ಬಿಟ್ಟಿದಿಲ್ಲಾ ನೀವು ಅವರಿಗಿಂತ ಒಂದ್ ಕೈ ಮೇಲು ನಿಮ್ಗೂ ತಕ್ಕಾ ಪಾಠ ಕಲ್ಸ್ತಿವಿ ಕಾದು ನೋಡಿ ಯುವಕರ ಶಕ್ತಿ ಏನು ಅಂತಾ ಗೊತ್ತಾಗುತ್ತೆ 😡��
KPSC ಅನ್ನೋ ನಾಟಕ ಕಂಪನಿ ದಯವಿಟ್ಟು ಮುಚ್ಚಿ.... ಹಳೇ ಕಳ್ಳರನ್ನ ತಗದು ಹೊಸ ಕಳ್ಳರನ್ನ ನೇಮಕಾತಿ ಮಾಡೋದು ಏನ್ ದೊಡ್ಡ ಸಾಧನೆ ಅಲ್ಲ.... ದಯವಿಟ್ಟು @siddaramaiah sir, ನಾಟಕ ಕಂಪನಿ ಶಾಶ್ವತವಾಗಿ ಬಂದ್ ಮಾಡಿ ಪುಣ್ಯ ಕಟ್ಕೋರಿ....😡😡
ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ��ಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ.
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇ��್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತೇನೆ.
@AKSSAofficial I @tv9kannada I @prajavani I @UvEnglish I @publictv I @AsianetNewsSN I