ಬಸವನಾಡಿನಲ್ಲಿ ಹಸಿರು ಸಿರಿಯ ಮಹಾಮೇಳ!
ಕೋಟಿ ವೃಕ್ಷ ಅಭಿಯಾನದ ಮೂಲಕ ವಿಜಯಪುರಜಿಲ್ಲೆಯಲ್ಲಿ ‘ಹಸಿರೇ ಉಸಿರು’ ಸಾಕಾರಗೊಳ್ಳುತ್ತಿದೆ.
ಮಮದಾಪುರ ಗ್ರಾಮದಲ್ಲಿ ವಿವಿಧ ರೀತಿಯ 60ಸಾವಿರ ಸಸಿಗಳು ಮರಗಳಾಗಿ ಅರಳುತ್ತಿದೆ.
ಭೂತನಾಳ ಸಮೀಪ (ಕರಾಡದೊಡ್ಡಿ ) 500 ಎಕರೆ ಪ್ರದೇಶದಲ್ಲಿ 60ಸಾವಿರಕ್ಕೂ ತರು ಲತೆಗಳು ವಿಕಸನಗೊಳ್ಳುತ್ತಿರುವುದು ನೋಡುವುದೇ ಆನಂದ
ಬಿಜ್ಜರಗಿ, ಅರಕೇ��ಿ, ಕೆ. ಸಿದ್ದಾಪುರ, ನಾಗಠಾಣಾ, ಮುಂತಾದೆಡೆಯೂ ವೃಕ್ಷ ಸಂಪತ್ತು ಸಮೃದ್ಧಿ...
ವಿಜಯಪುರ ಜಿಲ್ಲೆಯಲ್ಲಿ ಹಸಿರು ವೃದ್ಧಿಸುವ, ಜೀವ ವೈವಿಧ್ಯತೆ ಸಂರಕ್ಷಿಸುವ ಕೆಲಸ ನಿರಂತರವಾಗಿ ಮುಂದುವರೆಯಲಿದೆ...
#GreenVijayapura
ತಿಡಗುಂದಿ ಆಕ್ವಾಡಕ್ಟ್ ಮೂಲಕ ಭೂತನಾಳ ಕೆರೆಗೆ ಹರಿದು ಬರುತ್ತಿರುವ ಕೃಷ್ಣೆ...
ವಿಜಯಪುರದಲ್ಲಿನ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ.
ಸದ್ಯದಲ್ಲೇ ಮತ್ತಷ್ಟು ಕೆರೆಗಳಿಗೆ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ...
ಭಾರತದ ಸ್ವಾತ��ತ್ರ್ಯ ಹೋರಾಟದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕರಾಳ ಅಧ್ಯಾಯವಾಗಿದೆ.
1919ರ ಈ ದಿನದಂದು ಬ್ರಿಟಿಷರು ನಡೆಸಿದ ಗುಂಡಿನ ದಾಳಿಯಲ್ಲಿ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಈ ದುರಂತ ಘಟನೆಯಲ್ಲಿ ಮಡಿದ ಎಲ್ಲ ಸತ್ಯಾಗ್ರಹಿಗಳಿಗೆ ನಮ್ಮ ಗೌರವದ ನಮನಗಳು.
ದೌರ್ಜನ್ಯ ಮತ್ತು ದಬ್ಬಾಳಿಕೆಗಳಿಂದ ಮುಕ್ತಗೊಳಿಸಲು ನಮ್ಮ ಪೂರ್ವಜರು ಮಾಡಿದ ತ್ಯಾಗ, ಬಲಿದಾನವನ್ನು ಸ್ಮರಿಸೋಣ.
#jaliyanwalabagh
ದೇಶದ ಹೆಸರಾಂತ ಕನ್ನಡಕ ಸರಣಿ ಲೆನ್ಸ್ ಕಾರ್ಟ್ ಕಂಪೆನಿ ಬೆಂಗಳೂರಿನಲ್ಲಿ ತನ್ನ ಮೆಗಾ ಫ್ಯಾಕ್ಟರಿಯನ್ನು ನಿರ್ಮಿಸಲು ಯೋಜಿಸುತ್ತಿರುವುದು ಸ್ವಾಗತಾರ್ಹ. ಬೆಂಗಳೂರು ವಿಮಾನ ನಿಲ್ದಾಣ ಸಮೀಪ 25 ಎಕರೆ ಭೂಮಿಯನ್ನು ಕಂಪೆನಿಯ ಸಹ ಸಂಸ್ಥಾಪಕ ಶ್ರೀ ಪೀಯೂಷ್ ಬನ್ಸಾಲ್ "X" ನಲ್ಲ�� ಕೋರಿದ್ದು, ಅವರ ಬೇಡಿಕೆಗೆ ��ುರ್ತಾಗಿ ಸ್ಪಂದಿಸಿರುವೆ. ಆ ಕುರಿತ ಮಾಧ್ಯಮಗಳ ವರದಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ...
#lenscart
ಸ್ವಾತಂತ್ರ್ಯ ಹೋರಾಟಗಾರ, ಅದ್ವಿತೀಯ ಕಾದಂಬರಿಕಾರ, ಪತ್ರಕರ್ತರಾದ ಮ. ರಾಮಮೂರ್ತಿಯವರ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸೋಣ.
ನಮ್ಮ ಹೆಮ್ಮೆಯ ಕನ್ನಡ ಧ್ವಜವನ್ನು ರೂಪಿಸಿದ ಅಪ್ರತಿಮ ಕನ್ನಡ ಪ್ರೇಮಿ ಅವರು. ಹಲವು ಐತಿಹಾಸಿಕ ಕಾದಂಬರಿಗಳ ಕರ್ತೃವಾಗಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.
#ಕನ್ನಡಧ್ವಜ#ಮರಾಮಮೂರ್ತಿ
ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿಯ ನಾಯಕರನ್ನು ಕಂಡರೆ ವಾಂತಿ, ವಾಕರಿಕೆ ಬರುತ್ತಿದೆ!
ಸಾಧನೆ, ಅಭಿವೃದ್ಧಿ ತೋರಿಸಿ ಓಟು ಕೇಳಬೇಕಾದ ಕಾರ್ಯಕರ್ತರೇ ಓಟಿನ ಬದಲು ನೋಟಾ ಹಾಕುತ್ತೇವೆ ಎ��್ನುತ್ತಿರುವಾಗ @BJP4Karnataka ರಾಜ್ಯದಲ್ಲಿ ಬದುಕುವುದು ಸಾಧ್ಯವೇ?!
ಕೇವಲ ಕೋಮು ಬೆಂಕಿ ಹಚ್ಚಲು ಓಡೋಡಿ ಬರುವ @ShobhaBJP ಹಾಗೂ ಇತರ ಸಂಸದರಿಗೆ ಈ ಬಾರಿ ಕನ್ನಡಿಗರು ಸೋಲಿನ ಉಡುಗೊರೆ ಕೊಡುವುದು ಖಂಡಿತ.
#BJPvsBJP
ವಿಜಯಪುರ: ಮತ್ಸ್ಯಕ್ರಾಂತಿ!
ವಿಜಯಪುರ ಜಿಲ್ಲೆಯ ಕೆರೆಗಳನ್ನು ಕೃಷ್ಣಾ ನದಿ ನೀರಿನಿಂದ ತುಂಬಿಸುತ್ತಿರುವ ಕಾರಣ ಕುಡಿಯುವ ನೀರಿನ ಕೊರತೆ ನೀಗುವುದರ ಜೊತೆಗೆ ಮೀನುಗಾರಿಕೆಗೂ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ಬರದ ನಡುವೆಯೂ ಉತ್ತಮ ದರ್ಜೆಯ ಮೀನುಗಳು ದೊರೆಯುತ್ತ��ರುವುದರಿಂದ ಮೀನುಗಾರರಲ್ಲಿ ಸಂತಸ ತರಿಸಿದೆ. ಮೀನುಗಾರಿಕೆ ಸಂಘದವರು ಕೆರೆಗಳನ್ನು ಗುತ್ತಿಗೆ ಪಡೆದು ಮೀನುಗಾರಿಕೆ ಮಾಡುತ್ತಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ‘ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ’ ಆರಂಭಿಸುವ ಕುರಿತು ಪ್ರಕಟಿಸಿದ್ದಾರೆ. ಮೀನುಮರಿ ಉತ್ಪಾದನೆ , ಮೀನುಗಳ ಆಹಾರ ತಯಾರಿಕಾ ಘಟಕಗಳ ಮೂಲಕ ಮೀನುಗಾರಿಕೆಗೆ ಅಧಿಕ ಬೆಂಬಲ ದೊರೆಯಲಿದೆ.
ಈಚೆಗೆ ಭೂತನಾಳ ಕೆರೆಗೆ ಭೇಟಿ ನೀಡಿದಾಗ ಸ್ಥಳೀಯ ಮೀನು ಕೃಷ��ಕರು ತಮ್ಮ ಹರ್ಷ ವ್ಯಕ್ತಪಡಿಸಿದರು. ಅವರ ಅಭಿಮಾನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
@siddaramaiah #Vijayapura #ವಿಜಯಪುರ
ಭೂತನಾಳ ಕೆರೆಗೆ ಮತ್ತಷ್ಟು ನೀರು
ಬೇಸಿಗೆಗೆ ವಿಜಯಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದು!
#ವಿಜಯಪುರ ದ ಜೀವನಾಡಿ #ಭೂತನಾಳಕೆರೆ ಯು ಬರಗಾಲದಿಂದ ಬತ್ತಿ ಹೋಗುತ್ತಿದ್ದು, ನಗರದಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಯಿತು. ಈ ಸಮಸ್ಯೆ ನಿವಾರಿಸುವ ಸಲುವಾಗಿ ಮುಳವಾಡ ಏತ ನೀರಾವರಿ ಯೋಜನೆಯಡಿ ನಿರ್ಮಾಣವಾದ ‘ತಿಡಗುಂದಿ ಆಕ್ವಾಡಕ್ಟ್’ ಮೂಲಕ ಭೂತನಾಳ ಕೆರೆಗೆ ಕೃಷ್ಣಾನದಿ ನೀರು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅವರು ಈಗಾಗಲೇ ಈ ಕಾರ್ಯ ಮಾಡಿದ್ದಾರೆ.
ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ದೃಷ್ಟಿಯಿಂದ ಅರಕೇರಿ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಸೂಚಿಸಿದೆ. ಕೆರೆಯ ಮತ್ತೊಂದು ಭಾಗಕ್ಕೆ ಇಂದಿನಿಂದ ಹರಿಸುತ್ತಿದ್ದಾರೆ. ವಿದ್ಯುತ್ ಮೋಟಾರ್ ಗಳನ್ನು ಬಳಸದೆ ನೈಸರ್ಗಿಕವಾಗಿ ನೀರು ಹರಿದು ಬರುವಂತೆ ಮಾಡಲಾಗಿದೆ. ಭೂತನಾಳ ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಾಗಲಿದ್ದು, ಈ ಬಾರಿಯ ಬೇಸಿಗೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದೆಂಬ ವಿಶ್ವಾಸ ನನಗಿದೆ.
5 ಗ್ಯಾರಂಟಿಗಳನ್ನು ಈಡೇರಿಸಿ, ನಾವು #ನುಡಿದಂತೆನಡೆಯುತ್ತಿದ್ದೇವೆ.
ಬಿಜೆಪಿಯವರು ಸುಳ್ಳಿನ ಕಾರ್ಖಾನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ!
2014ರಲ್ಲಿ ₹. 15 ಲಕ್ಷ ಹಾಕುವುದಾಗಿ ಹೇಳಿದ್ದರು ಆ ಹಣ ಬಂತಾ?
ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಏನಾಯಿತು?
ಬರ ಪರಿಹಾರವೂ ನೀಡದೆ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ಧಾರೆ...
Our Govt has delivered what @RahulGandhi promised during BJY yatra in Nanjagud last year.All 32 family members will get a Govt job who lost their life due to negligence of BJP Govt for not providing Oxygen during Covid.
ದಾವೂಸ್: 22ಸಾವಿರ ಕೋಟಿ ಹೂಡಿಕೆ ಒಡಂಬಡಿಕೆಗೆ ಸಹಿ!
ಸ್ವಿಟ್ಜರ್ ಲ್ಯಾಂಡಿನ ದಾವೂಸ್ ನಗರದಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂ��� ಮೇಳದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳೊಂದಿಗೆ 22 ಸಾವಿರ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.
ಈ ಯೋಜನೆಗಳಲ್ಲಿ ವೆಬ್ ವರ್ಕ್ಸ್ ಕಂಪನಿಯು ರಾಜ್ಯದಲ್ಲಿ ಸ್ಥಾಪಿಸಲಿರುವ 100 ಮೆಗಾವ್ಯಾಟ್ ಸಾಮರ್ಥ್ಯದ, 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯ ಡೇಟಾ ಸೆಂಟರ್ ಪಾರ್ಕ್ ಯೋಜನೆ ಪ್ರಮುಖವಾಗಿದೆ.
ಜತೆಗೆ ಮೈಕ್ರೋಸಾಫ್ಟ್, ಹಿಟಾಚಿ, ಲುಲು ಗ್ರೂಪ್, ಹ್ಯೂಲೆಟ್ ಪೆಕಾರ್ಡ್ (ಎಚ್.ಪಿ), ಹನಿವೆಲ್, ಐನಾಕ್ಸ್, ವೋಲ್ವೋ, ನೆಸ್ಲೆ, ಕಾಯಿನ್ ��ೇಸ್, ಟಕೇಡಾ ಫಾರ್ಮಾ, ಬಿಎಲ್ ಆಗ್ರೋ ಇತ್ಯಾದಿ ಕಂಪನಿಗಳೊಂದಿಗೆ 2,000 ಕೋಟಿ ರೂ. ಮೌಲ್ಯದ ಹೂಡಿಕೆಗಳಿಗೆ ತಿಳಿವಳಿಕೆ ಪತ್ರಗಳಿಗೆ ಸಹಿ ಹಾಕಲಾಗಿದೆ.
ಮೈಕ್ರೋಸಾಫ್ಟ್ ಕಂಪನಿಯು ಕೌಶಲ್ಯಾಭಿವೃದ್ಧಿ ಮತ್ತು ಸುಗಮ ಆಡಳಿತ ಉಪಕ್ರಮಗಳ ತರಬೇತಿ ಕೊಡಲಿದೆ.
ಹಿಟಾಚಿ ಕಂಪನಿಯು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆ, ಶಿಕ್ಷಣ ಮತ್ತು ಇ-ಗವರ್ನೆನ್ಸ್ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಲಿದೆ.
ಲುಲು ಸಮೂಹವು 300 ಕೋಟಿ ರೂ. ಹೂಡಿಕೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಆಹಾರ ಸ��ಸ್ಕರಣೆಯಲ್ಲಿ ತೊಡಗಿಕೊಳ್ಳಲು ಉತ್ಸುಕವಾಗಿದೆ.
ಟಕೇಡಾ ಫಾರ್ಮಾ, ಬೆಂಗಳೂರಿನಲ್ಲಿ ತನ್ನ ಗ್ಲೋಬಲ್ ಕೆಪಾಸಿಟಿ ಸೆಂಟರ್ ತೆರೆಯಲು ಮುಂದೆ ಬಂದಿದೆ.
ಈ ಒಡಂಬಡಿಕೆಗಳು ಕಾರ್ಯರೂಪಕ್ಕೆ ಬರುವ ಮೂಲಕ ರಾಜ್ಯವು ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯ ಹೊಸ ಯುಗವನ್ನು ಕಾಣಲಿದೆ.
ವಿಜಯಪುರ ದಲ್ಲಿ ಲುಲು ಹಾಗೂ ಬಿಎಲ್ ಆಗ್ರೋ ಬೃಹತ್ ಹೂಡಿಕೆ
ಮತ್ತಷ್ಟು ಹಸನಾಗಲಿದೆ ಬಸವನಾಡಿನ ರೈತರ ಬದುಕು
(ಸ್ವಿಟ್ಸರ್ಲೆಂಡ್) ದಾವೂಸ್: ವಿಶ್ವ ಆರ್ಥಿಕ ವೇದಿಕೆ 2024ರಲ್ಲಿ ಲುಲು ಗ್ರೂಪ್ ಮತ್ತು ಬಿಎಲ್ ಆಗ್ರೋ ಕಂಪನಿಗಳು ಆಹಾರ ಸಂಸ್ಕರಣೆ ವಲಯದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಜತೆ ಒ��ಂಬಡಿಕೆ ಮಾಡಿಕೊಂಡಿವೆ.
ಉತ್ತರ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಿ.ಎಲ್. ಆಗ್ರೋ ಕಂಪೆನಿ ಇದೇ ಪ್ರಥಮವಾಗಿ ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದು, ನಮ್ಮ #ವಿಜಯಪುರ ವನ್ನೇ ಆಯ್ಕೆಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ರೈತರ ಬದುಕು ಮತ್ತಷ್ಟು ಹಸನಾಗಲಿದೆ.
#WEF2024 @CMofKarnataka @siddaramaiah
ರಾಜ್ಯದಲ್ಲಿ ನೂತನ ಉದ್ಯಮಗಳ ಸ್ಥಾಪನೆ; ಉದ್ಯೋಗ ಸೃಷ್ಟಿಗೆ ಒತ್ತು!
73ಯೋಜನೆಗಳು | ₹. 3,935 ಕೋಟಿಗೂ ಹೆಚ್ಚಿನ ಬಂಡವಾಳ | 14,500+ ಉದ್ಯೋಗಳ ಸೃಷ್ಟಿ
ಶುಕ್ರವಾರ ರಾಜ್ಯ ಮಟ್ಟದ ಏಕಗವಾಕ್��ಿ ಅನುಮೋದನಾ ಸಮಿತಿ ಸಭೆನಡೆಸಿದೆ. 73 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು ₹ 3,935 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಸುಮಾರು 14,500 ಉದ್ಯೋಗಗಳು ಸೃಷ್ಟಿಯಾಗಲಿದೆ.
ETL ಸೆಕ್ಯೂರ್ ಸ್ಪೇಸ್ ಲಿ., DhaSH ಪಿ.ವಿ. ಟೆಕ್ನಾಲಜಿಸ್ , ಮೈಲಾರ್ ಇನ್ ಫ್ರಾ, ಸೇರಿದಂತೆ ಹಲವು ಕಂಪೆನಿಗಳು
ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉದ್ಯಮಗಳು ಸ್ಥಾಪನೆಯಾಗಲಿದೆ.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಡಾ. ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ, #KIADB ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮಹೇಶ್ ಸೇರಿದಂತೆ ಹಲವು ಅಧಿಕಾರಿಗಳು ಇಂದಿನ ಸಭೆಯಲ್ಲಿ ಉಪಸ್ಥಿತರಿದ್ದರು.
𝐂𝐥𝐞𝐚𝐫𝐚𝐧𝐜𝐞 𝐭𝐨 𝐭𝐡𝐞 𝐞𝐬𝐭𝐚𝐛𝐥𝐢𝐬𝐡𝐦𝐞𝐧𝐭 𝐨𝐟 𝐧𝐞𝐰 𝐞𝐧𝐭𝐞𝐫𝐩𝐫𝐢𝐬𝐞𝐬 𝐢𝐧 𝐭𝐡𝐞 𝐬𝐭𝐚𝐭𝐞; 𝐅𝐨𝐜𝐮𝐬 𝐨𝐧 𝐣𝐨𝐛 𝐜𝐫𝐞𝐚𝐭𝐢𝐨𝐧
𝟕𝟑 𝐩𝐫𝐨𝐣𝐞𝐜𝐭𝐬 | 𝐈𝐧𝐯𝐞𝐬𝐭𝐦𝐞𝐧𝐭 𝐨𝐟 𝐨𝐯𝐞𝐫 ₹𝟑,𝟗𝟑𝟓 𝐜𝐫𝐨𝐫𝐞 | 𝐂𝐫𝐞𝐚𝐭𝐢𝐨𝐧 𝐨𝐟 𝐦𝐨𝐫𝐞 𝐭𝐡𝐚𝐧 𝟏𝟒,𝟓𝟎𝟎 𝐣𝐨𝐛𝐬
The state-level single window clearance committee meeting was held on Friday. Approval has been granted for 73 projects with an investment of ₹3,935 crore, which is expected to create approximately 14,500 jobs.
Several companies including ETL Secure Space, DhaSH PV Technologies Pvt. Ltd. will be established in various districts of the state including Tumkur, Ramanagara, Chikkaballapur, Bangalore Rural, Chamarajanagar, and Ballari.
Officials present at today’s meeting included the Principal Secretary of the Industrial Department, Dr. Selvakumar, Commissioner Mrs. Gunjan Krishna, and the Managing Director of #KIADB, Dr. Mahesh.
ಅಂದು: ಜಲಸಂಪನ್ಮೂಲ ಖಾತೆ ಸಚಿವರಾಗಿದ್ದಾಗ ಬಯಲುನಾಡಿನ ಭಗೀರಥ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಇಂದು: ಕೈಗಾರಿಕಾ ಸಚಿವರಾಗಿ 6 ತಿಂಗಳಲ್ಲೇ ಇಲಾಖೆಯ ಹಿರಿಮೆ ಹೆಚ್ಚಿ��ಿದ ಡಾ. ಎಂ.ಬಿ. ಪಾಟೀಲರು!
ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ತಲೆಯೆತ್ತಲಿದೆ #ಕಲಾಲೋಕ
ಮೈಸೂರು ಸ್ಯಾಂಡಲ್ ಸೋಪು, KSIC & ಇಳಕಲ್ ಸೀರೆ, ಚನ್ನಪಟ್ಟಣದ ಬೊಂಬೆಗಳು ಮುಂತಾದ ಕರ್ನಾಟಕದ ಅಸ್ಮಿತೆಯ ಉತ್ಪನ್ನಗಳು ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಮಿನುಗಲಿದೆ.
ಡಾ.M.B. ಪಾಟೀಲರ ಈ ಅನನ್ಯ ಚಿಂತನೆ ಏಪ್ರಿಲ್ ನಿಂದಲೇ ಜಾರಿಗೊಳ್ಳಿದೆ...
"ಮಟ್ಕಾ ಏಜೆಂಟ್, ಗಡಿಪಾರಾಗಿರುವ ಹಾಗೂ18 ಕೇಸುಗಳನ್ನು ಹೊತ್ತಿರುವ ಶ್ರೀಕಾಂತ ಪೂಜಾರಿಯ ಹಿನ್ನಲೆಯನ್ನೇ ತಿಳಿಯದೆ ‘ಕರಸೇವಕ’ ಎಂದು @BJP4Karnataka ನಾಯಕರು ಬಿಂಬಿಸುತ್ತಿರುವುದು ಸ್ವತಃ ಶ್ರೀರಾಮಚಂದ್ರನಿಗೆ ಮಾಡಿದ ಅಪಮಾನವಲ್ಲವೇ?!”
- ಡಾ. ಎಂ.ಬಿ. ಪಾಟೀಲರು,
2019-20ನೇ ಸಾಲಿನಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆ ಕಡಿತ ಗೊಳಿಸಿದೆ.
ಇದರಿಂದಾಗಿ ಕೇಂದ್ರಕ್ಕೆ 2 ಲಕ್ಷ ಕೋಟಿಗಳಷ್ಟು ನಷ್ಟವಾಗಿದೆ.
ತೆರಿಗೆ ಕಡಿತಗೊಳಿಸಿದ್ದರಿಂದ ಕೇಂದ್ರಕ್ಕೆ ಆದ ಲಾಭವೇನು ಎಂಬುದಕ್ಕೆ ಸರ್ಕಾರದ ಬಳಿ ಉತ್ತರವೇ ಇಲ್ಲ!
ಮತಿಗೆಟ್ಟ ಆರ್ಥಿಕ ಇಲಾಖೆ! ಗೊತ್ತುಗುರಿ ಇಲ್ಲದ ಕೇಂದ್ರ ಸರ್ಕಾರ!
ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳ
ಮುಂಬರುವ ಜನವರಿ ಕೊನೆಯ ವಾರದಲ್ಲಿ ರಾಜ್ಯಮಟ್ಟದ ಉದ್ಯೋಗ ಮೇಳ ಆಯೋಜಿಸಲು ಉದ್ದೇಶಿಸಲಾಗಿದೆ. ಈ ನಿಮಿತ್ತ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಗಳೊಂದಿಗೆ ಪಾಲ್ಗೊಂಡಿದ್ದೆ.
ಈ ಮೇಳವನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತಂತೆ ಚರ್ಚೆಗಳು ನಡೆಯಿತು.
ಉದ್ಯೋಗ ಮೇಳ ಆಯೋಜಿಸಿ, ದುಡಿಯುವ ಕೈಗಳಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೆವು. ಅದನ್ನು ಸಾಕಾರಗೊಳಿಸುತ್ತಿದ್ದೇವೆ.