ಬೆಂಗಳೂರಿನ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅಕ್ರಮವಾಗಿ, ಅನಧಿಕೃತವಾಗಿ, ಅನೈತಿಕವಾಗಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತೆರವುಗೊಳಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಯನ್ನು ನಾವು ಯಾವತ್ತಿಗೂ ಸಹಿಸುವುದಿಲ್ಲ. ಹಿಂದಿಯನ್ನು ಯಾವುದೋ ಒಂದು ಬಾಗಿಲಲ್ಲಿ ತಂದು ಹಾಕುವುದನ್ನು ನಾವು ಗಮನಿಸುತ್ತಲೇ ಇರುತ್�����ವೆ. ಹಿಂದಿ ಸಾಮ್ರಾಜ್ಯಶಾಹಿಗಳ ಸಂಚನ್ನು ನಾವು ವಿಫಲಗೊಳಿಸುತ್ತಲೇ ಬರುತ್ತೇವೆ. ಕರ್ನಾಟಕದ ನೆಲದಲ್ಲಿ ಹಿಂದಿ ಹೇರಿಕೆಗೆ ಯಾವುದೇ ಅವಕಾಶವನ್ನು ನಾವು ನೀಡುವುದಿಲ್ಲ.
1954ರ ಅಕ್ಟೋಬರ್ 21ರಂದು (BEL ಸ್ಥಾಪನೆಯಾದಾಗ) ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಕೆಂಗಲ್ ಹನುಮಂತಯ್ಯ. ಅವರು ಮುತುವರ್ಜಿ ವಹಿಸಿ ಬಿಇಎಲ್ ಸಂಸ್ಥೆ ಕರ್ನಾಟಕದಲ್ಲಿ ಸ್ಥಾಪನೆಯಾಗಲು ಕಾರಣಕರ್ತರಾಗಿದ್ದರು. ಅವರು ಈ ಸಂಸ್ಥೆಯನ್ನು ಬರಮಾಡಿಕೊಂಡಿದ್ದು ಕರ್ನಾಟಕದಲ್ಲಿ ಹಿಂದಿ ಹೇರಿಕೆ ��ಾಡಲಿ ಎಂದಲ್ಲ. ರಕ್ಷಣಾ ಸಂಸ್ಥೆಗಳ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಈ ಸಂಸ್ಥೆಯನ್ನು ಹುಟ್ಟುಹಾಕುವ ಜೊತೆಗೆ, ಪೋಷಿಸಿ ಬೆಳೆಸಿಕೊಂಡು ಬಂದವರು ಕನ್ನಡಿಗರು. ಆದರೆ ಇದೇ ಸಂಸ್ಥೆಯ ಮೂಲಕ ಜಾಲಹಳ್ಳಿಯ ಬಿಇಎಲ್ ವೃತ್ತದಲ್ಲಿ ಅನಧಿಕೃತವಾಗಿ ಹಿಂದಿ ಫಲಕವನ್ನು ಹಾಕಿಸುವ ಉದ್ದೇಶವಾದರೂ ಏನು? ಅದೂ ಕೂಡ ಸಂಸ್ಥೆಯ ಒಳಗಿನ ಭಾಗದಲ್ಲಿ ಅಲ್ಲ, ಸಾರ್ವಜನಿಕ ರಸ್ತೆಯಲ್ಲಿ ಹಿಂದಿಯನ್ನು ಮೆರೆಸಲು ಏನು ಕಾರಣ?
ಕರ್ನಾಟಕದಲ್ಲಿ ಬಿಇಎಲ್ ಮಾತ್ರವಲ್ಲದೆ, ಬಿಇಎಂಎಲ್, ಎಚ್�� ಎ ಎಲ್, ಐಟಿಐನಂಥ ಪ್ರತಿಷ್ಠಿತ ಸಂಸ್ಥೆಗಳನ್ನು ��ಟ್ಟಿ ಬೆಳೆಸಿದವರು ಕನ್ನಡಿಗರು. ಬೆಂಗಳೂರನ್ನು ಕೈಗಾರಿಕಾ ರಾಜಧಾನಿಯನ್ನಾಗಿ ಮಾಡಿದ್ದು ಈ ಸಂಸ್ಥೆಗಳು. ಇಷ್ಟೇ ಅಲ್ಲದೆ ಸಿಎಸ್ ಐಆರ್, ಎಚ್ ಎಂಟಿ ನಂಥ ಸಂಸ್ಥೆಗಳೂ ಇಲ್ಲಿವೆ. ಈ ಸಂಸ್ಥೆಗಳನ್ನು ನಾವು ಹಿಂದಿಯನ್ನರಿಗೆ ಬರೆದುಕೊಟ್ಟಿಲ್ಲ. ಈ ಸಂಸ್ಥೆಗಳಲ್ಲಿ ಹಿಂದಿ ಹೇರಿಕೆ ಮಾಡುವುದು ದೊಡ್ಡ ಕುತಂತ್ರದ ಭಾಗ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಇಂದು ಬಿಇಎಲ್ ವೃತ್ತದಲ್ಲಿ ಅಳವಡಿಸಲಾಗಿದ್ದ ಹಿಂದಿ ನಾಮಫಲಕವನ್ನು ಕಿತ್ತು ಹಾಕಿ��ೆ. ನಾಮಫಲಕ ಅಳವಡಿಸುವ ಮೂಲಕ ಕನ್ನಡಿಗರನ್ನು ಕೆರಳಿಸುವ ಮಾಡಿರುವ ಬಿಇಎಲ್ ಆಡಳಿತ ಮಂಡಳಿಯ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ವಜಾ ಮಾಡಬೇಕು. ಬಿಇಎಲ್ ಆಡಳಿತ ಮಂಡಳಿ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭವಿಷ್ಯದಲ್ಲಿ ಇಂಥ ಅಧಿಕಪ್ರಸಂಗಿತನವನ್ನು ಯಾರೇ ಮಾಡಿದರೂ ಕರ್ನಾಟಕ ರಕ್ಷಣಾ ವೇದಿಕೆ ಅತ್ಯುಗ್ರವಾಗಿ ಪ್ರತಿಭಟಿಸುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ.
(ಟಿ.ಎ.ನಾರಾಯಣಗೌಡ)
ರಾಜ್ಯಾಧ್���ಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಕನ್ನಡ ಭಾಷಾ ಕಲಿಕೆ ಕಾಯ್ದೆ- 2015ರಲ್ಲಿ ಕೇಂದ್ರ ಪಠ್ಯಕ್ರಮ ಸೇರಿ ಇತರೆ ಪಠ್ಯಕ್ರಮಗಳ ಶಾಲೆಗಳಲ್ಲಿನ ಕನ್ನಡೇತರ ಮಕ್ಕಳಿಗೂ ಕನ್ನಡ ಕಲಿಸುವುದನ್ನುಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ದ್ವಿತೀಯ ಭಾಷೆಯಾಗ�� ಕಲಿಸಬೇಕು. ಹೀಗಿದ್ದರೂ, ಎನ್ಸಿಇಆರ್ಟಿಯು ಈ ಶೈಕ್ಷಣಿಕ ಸಾಲಿನಿಂದಲೇ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನಾಗಿ (ಆರ್3) ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸೂಚಿಸಿರುವುದು ಬೇಜವಾಬ್ದಾರಿತನದ ಪರಮಾವಧಿ. ಇದರಿಂದ ಸಿಬಿಎಸ್ಇ ಶಾಲೆಗಳಲ್ಲಿ ಗೊಂದಲ ಉಂಟಾಗಿದ್ದು, ಕೂಡಲೇ ಈ ಸಂಬಂಧ ಹೊರಡಿಸಿರುವ ಸುತ್ತೋಲೆಯನ್ನು ಹಿಂದಕ್ಕೆ ಪಡೆಯಬೇಕು.
Under the Kannada Language Learning Act of 2015, teaching Kannada to non-Kannada students is mandatory across all schools, including those under central and other curricula. Consequently, CBSE schools are legally required to teach Kannada as either a first or second language. Given this framework, the NCERT's recent directive to mandate Kannada as a third language (R3) for Class 6 starting this academic year is highly irresponsible. This directive has caused significant confusion among CBSE institutions, and the circular issued in this regard must be rescinded immediately.
#KannadaLanguage #EducationPolicy #CBSE #NCERT #LanguageRights #MadhuBangarappa