ಪರಿಸರ ಸಂರಕ್ಷಣೆ ನಮ��ಮೆಲ್ಲರ ಜವಾಬ್ದಾರಿಯಾಗಿದೆ. ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ತ್ಯಜಿಸಿ, ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸೋಣ.
ಬಟ್ಟೆ ಚೀಲಗಳ ಬಳಕೆಯನ್ನು ರೂಢಿಸಿಕೊಳ್ಳುವುದು ಪರಿಸರದ ಮೇಲಿನ ನಮ್ಮ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯ ಪ್ರತೀಕ, ಪ್ಲಾಸ್ಟಿಕ್ ತ್ಯಜಿಸಿ, ಪ್ರಕೃತಿಯನ್ನು ರಕ್ಷಿಸಿ
ಗ್ರಾಮ ಗ್ರಂಥಾಲಯಗಳು ಈಗ ಕೇವಲ ಪುಸ್ತಕಗಳ ಸಂಗ್ರಹಗಾರವಾಗಿ ಉಳಿದಿಲ್ಲ.
ಮಕ್ಕಳು, ಯುವ ಸಮುದಾಯ, ರೈತರು ಸೇರಿದಂತೆ ಗ್ರಾಮದಲ್ಲಿನ ಎಲ್ಲಾ ವಯೋಮಾನದವರು, ಎಲ್ಲಾ ವರ್ಗದವರು ಒಟ್ಟಿಗೆ ಸೇರುವ, ತಮ್ಮ ಅರಿವು ಹೆಚ್ಚಿಸಿಕೊಳ್ಳುವ ತಾಣವಾಗಿ ಬದಲಾಗಿವೆ.
ಹಳ್ಳಿಗರಲ್ಲಿ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ, ಅವರ ಜ್ಞಾನವನ್ನು ಹೆಚ್ಚಿಸುವ ಅರಿವು ಕೇಂದ್ರಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನೂ ವೃದ್ಧಿಸುತ್ತಿವೆ, ಅರಿವು ಕೇಂದ್ರಗಳು ಉಂಟುಮಾಡುತ್ತಿರುವ ಮೌನಕ್ರಾಂತಿಯ ಬಗ್ಗೆ ಬೆಳಕು ಚೆಲ್ಲುವ ಈ ಲೇಖನವು ಇನ್ನೂ ಹೆಚ್ಚಿನ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತದೆ..
https://t.co/xkUyn8qSD5
ಮಹಾತ್ಮ ಗಾಂಧಿ ನರೇಗಾ ಯೋಜನೆಯ ಉದ್ಯೋಗ ಚೀಟಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಉದ್ಯೋಗ ಚೀಟಿ ಹೊಂದಿರು��� ಕುಟುಂಬದವರು ಅಗತ್ಯ ದಾಖಲೆಯೊಂದಿಗೆ ಅಪ್ಡೇಟ್ ಮಾಡಿಸುವಂತೆ ತಿಳಿಸಿದೆ.
'ಹರ್ ಘರ್ ತಿರಂಗಾ ಹರ್ ಘರ್ ಸ್ವಚ್ಛತೆ' ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ಅಭಿಯಾನವನ್ನು ಯಶಸ್ವಿಗೊಳಿಸುವುದು ಕೇವಲ ನಮ್ಮ ಕೆಲಸವಲ್ಲ, ಇದು ನಮ್ಮೆಲ್ಲರ ಜವಾಬ್ದಾರಿ.
79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸೋಣ, ಸ್ವಚ್ಛತೆಗೆ ಮಹತ್ವ ನೀಡೋಣ.
#HarGharTiranga#hargharswachhata#HarGharTiranga2025
ಮೈಸೂರು ತಾಲ್ಲೂಕಿನ ಕ��ಳನಪುರ ಗ್ರಾಮದ ರೈತ ರವಿ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ಬೆಳೆಗೆ ಸಹಾಯಧನ ಪಡೆದು ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡ ಯಶೋಗಾಥೆಯು ಪ್ರಜಾಸತ್ಯ ಪ್ರಾದೇಶಿಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವುದು.
@MgnregsK @ZP_Mysuru @CEOZPMYSURU
ನೆಮ್ಮದಿ ಜೀವನಕ್ಕೆ ನರೇಗಾ ನೆರವು
ಮೈಸೂರು ತಾಲ್ಲೂಕಿನ ಕೀಳನಪುರ ಗ್ರಾಮದ ರೈತ ರವಿ ಅವರಿಗೆ ವ್ಯವಸಾಯವೇ ಜೀವನೋಪಾಯವಾಗಿದ್ದು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ಬೆಳೆಗೆ 1,01,573 ರೂ. ಸಹಾಯಧನ ಪಡೆದು ರೇಷ್ಮೆ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ
ರೇಷ್ಮೆ ಗೂಡು ಮಾರಾಟದಿಂದ ಉತ್ತಮ ಲಾಭ ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ
ರೈತನ ಕೈಹಿಡಿದ ರೇಷ್ಮೆ ಕೃಷಿ
ಮೈಸೂರು ತಾಲ್ಲೂಕಿನ ಹಾರೋಹಳ್ಳಿ (ಮೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ರೈತ ರಾಮು ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿಪ್ಪುನ���ರಳೆ ನಾಟಿಗೆ 87,192 ರೂ. ಸಹಾಯಧನ ಪಡೆದು ರೇಷ್ಮೆ ಕೃಷಿಯಲ್ಲಿ ಉತ್ತಮ ಆದಾಯ ಗಳಿಸಿದ್ದಾರೆ.
@ZP_Mysuru @CEOZPMYSURU
"ಹಿರಿಯ ಜೀವಕ್ಕೆ ರೇಷ್ಮೆ ಬೇಸಾಯ ಅಚ್ಚುಮೆಚ್ಚು"
ಮೈಸೂರು ತಾಲ್ಲೂಕಿನ ಕೀಳನಪುರ ಗ್ರಾಮ ಪಂಚಾಯಿತಿ ವ್���ಾಪ್ತಿಯ ಮಹಾದೇವಿ ಕಾಲೋನಿ ಗ್ರಾಮದ ಹಿರಿಯ ಚೇತನ ರಾಯಮ್ಯ ಅವರು ತಮ್ಮ ಅಚ್ಚುಮೆಚ್ಚಿನ ರೇಷ್ಮೆ ಬೇಸಾಯಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಹಾಯಧನ ಪಡೆದು ರೇಷ್ಮೆಹುಳು ಸಾಕಾಣಿಕೆಯಲ್ಲಿ ನಿರತರಾಗಿದ್ದಾರೆ.
@ZP_Mysuru
ಪ್ರತಿಯೊಬ್�� ಎಳೆಯ ಮಕ್ಕಳ ಬುದ್ಧಿವಿಕಾಸ ಕೇಂದ್ರವಾಗಿರುವ ಅಂಗನವಾಡಿ ಕಟ್ಟಡವು ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾಗುತ್ತಿದೆ.
ಮೈಸೂರು ತಾಲ್ಲೂಕಿನ ಕಟ್ಟೇಹುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡದಿಂದ ಗ್ರಾಮದ ಅನೇಕ ಪುಟ್ಟ ಮಕ್ಕಳ ಲಾಲನೆ, ಪಾಲನೆ, ಪೋಷಣೆಯೊಂದಿಗೆ ಕಲಿಕೆಗೆ ನೆರವಾಗುತ್ತಿದೆ. @ZP_Mysuru
ನಿಮ್ಮ ಪ್ರತಿನಿತ್ಯದ ಬಳಕೆಗೆ ಕಾಗದದ ಅಥವಾ ಬಟ್ಟೆಯ ಬ್ಯಾಗ್ ಉಪಯೋಗಿಸುವ ಆಯ್ಕೆ ಇದ್ದಾಗ ಮತ್ಯಾಕೆ ಏಕ ಬಳಕೆ ಪ್ಲಾಸ್ಟಿಕ್ ಬ���ಸ್ತೀರಾ?
ಸಮಾಜದಲ್ಲಿ ಬದಲಾವಣೆ ಆಗಬೇಕೆಂದರೆ ಮೊದಲು ನಮ್ಮ ಆಯ್ಕೆಯನ್ನು ಬದಲಾಯಿಸಿಕೊಳ್ಳಬೇಕು. ಯೋಚಿಸಿ!
#PlasticBan #SayNotoPlastic
ಒಂದು ಪ್ಲಾಸ್ಟಿಕ್ ತಾನೇ ಏನೂ ಆಗೋಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ನೀವು ಎಸೆಯೋ ತ್ಯಾಜ್ಯ ಇತರ ಜೀವಿಗಳ ಜೀವಕ್ಕೆ ಹಾನಿಯುಂಟು ಮಾಡುತ್ತಿದೆ.
ಎಚ್ಚೆತ್ತುಕೊಳ್ಳಿ, ನಿಮ್ಮ ನಿರ್ಲಕ್ಷ್ಯದ ನಡೆ ಇತರ ಜೀವಿಗಳಿಗೆ ಹಾನಿಯುಂಟು ಮಾಡದಿರಲಿ.
#SayNotoplastic#PlasticBan#BeMindFull#SwacchBharat#SBMG
ಕೃಷಿ ಚಟುವಟಿಕೆಗಳಿಗೆ, ರೈತರ ಹೊಸ ಕನಸುಗಳಿಗೆ ನರೇಗಾ ಯೋಜನೆಯು ವರವಾಗಿ ಪರಿಣಮಿಸಿದೆ.
ಹೊಸ ಬೆಳೆಗಳಿಗೆ ಬೇಕಾದಂತೆ ತಮ್ಮ ಭೂಮಿಯನ್ನು ಮಾರ್ಪಡಿಸಿಕೊಳ್ಳಲು, ತಮ್ಮ ಭೂಮಿಯಲ್ಲಿ ಬದು, ಕಾಲುವೆಗಳನ್ನು ನಿರ್ಮಾಣ ಮಾ���ಿಕೊಳ್ಳಲು, ಹೊಸ ತೋಟ ನಿರ್ಮಾಣ ಮಾಡಿಕೊಳ್ಳಲು ನರೇಗಾ ಸಹಾಯ ಪಡೆಯುತ್ತಿದ್ದಾರೆ.
ಕೃಷಿಯಲ್ಲಿ ಹೊಸ ಪ್ರಯೋಗ ಮಾಡಲು ರೈತರಿಗೆ ಆತ್ಮವಿಶ್ವಾಸ ತುಂಬುವ ನರೇಗಾ ಕೃಷಿ ಕ್ಷೇತ್ರದಲ್ಲಿ ಮತ್ತು ರೈತರ ಬದುಕಲ್ಲಿ ಮಹತ್ವದ ಬದಲಾವಣೆ ತರುತ್ತಿರುವುದು ಸ್ಪಷ್ಟ.
ಬೀರಿಹುಂಡಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ "ಸ್ತ್ರೀ ಚೇತನ" ಅಭಿಯಾನದ ಅಂಗವಾಗಿ ಮಹಿಳೆಯರು ಹೆಚ್ಚಾಗಿ ನರೇಗಾ ಕೂಲಿ ಕೆಲಸದಲ್ಲಿ ಭಾಗವಹಿಸು��ಂತೆ ಜಾಗೃತಿ ಮೂಡಿಸಲಾಯಿತು.
@ZP_Mysuru
ಮೈಸೂರು ತಾಲ್ಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಮ್ಮಿಕೊಂಡಿರುವ "ಸ್ತ್ರೀ ಚೇತನ" ಅಭಿಯಾನದ ಅಂಗವಾಗಿ ಮಹಿಳೆಯರು ಹೆಚ್ಚಾಗಿ ಕೂಲಿ ಕೆಲಸದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಲಾಯಿತು.
@ZP_Mysuru
ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳಕ್ಕಾಗಿ ಏಪ್ರಿಲ್ನಿಂದ ಜೂನ್ವರೆಗೆ ಹಮ್ಮಿಕೊಂಡಿರುವ 'ಸ್ತ್ರೀ ಚೇತನ' ಅಭಿಯಾನಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರ���ಗಳಾದ ಸಿ.ಕೃಷ್ಣ ಅವರು ಚಾಲನೆ ನೀಡಿ, ಮಹಿಳೆಯರು ಹೆಚ್ಚಾಗಿ ಭಾಗವಹಿಸುವಂತೆ ತಿಳಿಸಿದರು.
@ZP_Mysuru