ಭಾಲ್ಕಿ ತಾಲೂಕಿನ ದೋಣಗಾಪೂರ ಗ್ರಾಮದ ರೈತ ಜಗದೀಶ್ ಹೂಗಾರ ರವರು ನರೇಗಾ ಯೋಜನೆಯ ಆರ್ಥಿಕ ನೆರವು ಪಡೆದು ಗುಲಾಬಿ ಹೂ ಕೃಷಿ ಮಾಡಿ ಯಶಸ್ಸು ಕಂಡಿರುವುದರ ಕುರಿತು ಇಂದಿನ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಅವರ ಯಶೋಗಾಥೆ ಪ್ರಕಟಗೊಂಡ ವರದಿ.
@ceozpbidar@ZPBidar @MgnregsK #nrega#Roseplant
ನರೇಗಾ ದಿವಸ ಆಚರಣೆ ಹಾಗೂ ಗ್ರಾಮ ಆರೋಗ್ಯ ಅಭಿಯಾನದ ಕುರಿತು ವಿಜಯವಾಣಿ, ಪ್ರಜಾವಾಣಿ, ವಿಜಯ ಕರ್ನಾಟಕ, ಉದಯವಾಣಿ ಹಾಗೂ ಇತರೆ ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗಳು. @MgnregsK @ZPBidar@ceozpbidar#Nregaday#Healthcamp
ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಕಮಲನಗರ ಗ್ರಾ.ಪಂ ವ್ಯಾಪ್ತಿಯಲ್ಲಿ ಅಮರ ವೈಜಿನಾಥ ಎನ್ನುವ ರೈತರು ನರೇಗಾ ಯೋಜನೆಯಡಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಸುಮಾರು 800 ಬುಲೆಟ್ ತಳಿಯ ಗುಲಾಬಿ ಹೂವಿನ ಸಸಿಗಳನ್ನು ಬೆಳೆದಿದ್ದು, ದಿನಕ್ಕೆ 3 ರಿಂದ 4 ಕೆಜಿ ಇಳುವರಿ ತೆಗೆದು ಒಂದು ಕೆಜಿಗೆ ರೂ.100 ರಂತೆ ಮಾರಾಟ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೀದರ ತಾಲೂಕಿನ ಜನವಾಡ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ನಾಲ ಟರ್ನಿಂಗ್ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಕಾಮಗಾರಿಯನ್ನು ವೀಕ್ಷಿಸುವುದರ ಜೊತೆಗೆ ನರೇಗಾ ಯೋಜನೆಯಲ್ಲಿ ನೂರುದಿನ ಪೂರೈಸಿದ ಕೂಲಿಕಾರರಿಗೆ ಸನ್ಮಾನ ಮಾಡಿದರು. ನಂತರ ನರೇಗಾ ಕಾಮಗಾರಿಗಳನ್ನು ವೀಕ್ಷಿಸಿದರು.
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು, ಈ ನಿಟ್ಟಿನಲ್ಲಿ ಪೂರ್ಣ ತಯಾರಿ ನಡೆಸಿದೆ. ಕಳೆದ 2 ತಿಂಗಳಿಂದ 4 ಬಾರಿ ಬರ ಪರಸ್ಥಿತಿ ಕುರಿತು ಸಂಪುಟ ಉಸಮಿತಿ ಸಭೆ ನಡೆಸಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದೆ.
ರಾಜ್ಯದಲ್ಲಿ ಈವರೆಗೂ ಒಟ್ಟಾರೆ ವಾಡಿಕೆಗಿಂತ ಶೇ 26% ಕಡಿಮೆ ಮಳೆಯಾಗಿದೆ. ಆದ್ದರಿಂದಾಗಿ ಬರದ ವಾತಾವರಣ ದಟ್ಟವಾಗಿದ್ದು, ಈವರೆಗೂ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 62 ತಾಲೂಕುಗಳು ತೀವ್ರ ಬರಪೀಡತ ಎಂದು ಘೋಷಿಸಲು ಅರ್ಹವಾಗಿವೆ. ಆದರೆ ಇನ್ನೂ ಹೆಚ್ಚಿನ ತಾಲೂಕುಗಳು ಬರ ಎದುರಿಸುತ್ತಿರುವರಿಂದ, 137 ತಾಲೂಕುಗಳಲ್ಲಿ ಬೆಳೆನಷ್ಟದ ಕುರಿತು ಮರುಸಮೀಕ್ಷೆ ನಡೆಸಲು ಸಂಪುಟ ಉಪಸಮಿತಿ ತೀರ್ಮಾನಿಸಿದ್ದು, ಗರಿಷ್ಠ 1 ವಾರದ ಒಳಗೆ ಸಮೀಕ್ಷೆ ವರದಿ ಸಲ್ಲಿಕೆಯಾಗಲಿದೆ.
ಈ ಹಿನ್ನಲೆಯಲ್ಲಿ ಬರಪೀಡಿತ ತಾಲೂಕುಗಳಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಪ್ರತಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಮಾನವ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 150 ದಿನಗಳಿಗೆ ಏರಿಸಲು ಶಿಫಾರಸ್ಸು ಮಾಡಲಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದ್ದು, ರಾಜ್ಯದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನೂ ಸರ್ಕಾರ ವಹಿಸಿದೆ. ಮುಂದಿನ ದಿನಗಳಲ್ಲೂ ಸಮಸ್ಯೆ ಎದುರಾಗದಂತೆ ತಡೆಯಲು ಕಂಟಿಂಜೆನ್ಸಿ ಪ್ಲಾನ್ ತಯಾರಿಸಲು ಎಲ್ಲಾ ಜಿಲ್ಲಾ ಸಿಇಒಗಳಿಗೆ ಸೂಚಿಸಲಾಗಿದೆ. ಅಲ್ಲದೇ ಎಲ್ಲಾ ಜಿಲ್ಲಾ ಸಿಇಒಗಳ ಬಳಿ ಕುಡಿಯುವ ನೀರಿಗಾಗಿಯೇ ತಲಾ ಒಂದು ಕೋಟಿ ಹಣ ಈಗಾಗಲೇ ಒದಗಿಸಲಾಗಿದೆ.
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 2023- 24 ನೇ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳ ಅನುಷ್ಠಾನದ ಕುರಿತು ಸಭೆ ನಡೆಸಿ, ಚರ್ಚಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರು ಸೇರಿದಂತೆ ಸರ್ಕಾರದ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
#AmritSanchay | Ramdurg in #Karnataka had a lake that dried up a decade ago, thereby depriving the villagers of fresh, clean drinking water and water for irrigation. The lake was developed under #AmritSarovar and #MGNREGA which also generated jobs for the villagers. #MoRD
#MGNREGS supports farmers by encouraging #horticulture crop expansion.
65,565/- Rs financial support is provided for #Coconut crop expansion.
For more information visit your Gram Panchayat
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಬೆಟ್ಟಬಾಲಕುಂದಾ ಗ್ರಾಮ ಪಂಚಾಯತ ವ್ಯಾಪ್ತಿಯ ಖಂಡಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿರುವ ನರೇಗಾ ಕೂಲಿಕಾರರು. #MGNREGA@ADinfodeptBIDAR @MgnregsK @ZPBidar
ಕ್ಷೇತ್ರ ಬದು ನಿರ್ಮಾಣಕ್ಕೆ ನರೇಗಾದಿಂದ ಆರ್ಥಿಕ ನೆರವು...
ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಡೋಣಗಾಂವ ಎಂ ಗ್ರಾಪಂ ವ್ಯಾಪ್ತಿಯಲ್ಲಿ ಶಿವಕುಮಾರ ಧನರಾಜರವರ ಹೊಲದಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ಷೇತ್ರ ಬದು. ಕ್ಷೇತ್ರ ಬದು ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ಎಕರೆಗೆ ರೂ 10 ಸಾವಿರ ಆರ್ಥಿಕ ನೆರವು ಪಡೆಯಿರಿ. #Mgnrega@ZPBidar @MgnregsK
ದನದ ಕೊಟ್ಟಿಗೆ ನಿರ್ಮಾಣಕ್ಕೆ ನರೇಗಾದಿಂದ ರೂ. 57 ಸಾವಿರ ಆರ್ಥಿಕ ನೆರವು..
ಬೀದರ ಜಿಲ್ಲೆಯ ಬೀದರ ತಾಲೂಕಿನ ಚಟ್ಟನಳ್ಳಿ ಗ್ರಾಪಂ ವ್ಯಾಪ್ತಿಯ ನಿರ್ಮಲ ಘಾಳೆಪ್ಪ ಎನ್ನುವ ರೈತ ಮಹಿಳೆ ತಮ್ಮ ಜಮೀನಿನಲ್ಲಿ ನರೇಗಾದಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು, 11 ಎಮ್ಮೆ ಸಾಕಾಣಿಕ್ಕೆ ಮಾಡುತ್ತಾ ವಾರ್ಷಿಕ 4 ರಿಂದ 5 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಜಾನುವಾರುಗಳ ಸಂರಕ್ಷಣೆಗೆ ನರೇಗಾದಡಿ ಶೆಡ್ ನಿರ್ಮಿಸಿಕೊಳ್ಳಿ...
ಬೀದರ ಜಿಲ್ಲೆ ಚಿಟ್ಟಗುಪ್ಪಾ ತಾಲೂಕಿನ ಬೇಳಕೇರ ಗ್ರಾಪಂ ವ್ಯಾಪ್ತಿಯ ಶಮತಾಬಾದ ಗ್ರಾಮದಲ್ಲಿ ಬಸವರಾಜ ಎನ್ನುವ ರೈತ ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆ ನಿರ್ಮಿಸಿಕೊಂಡು, ಸುಮಾರು 8 ರಿಂದ 10 ಹಸು ಮತ್ತು ಎಮ್ಮೆ ಸಾಕಾಣಿಕೆ ಮಾಡುತ್ತಾ ಉತ್ತಮ ಜೀವನ ಸಾಗಿಸುತ್ತಿದ್ದಾರೆ.
ಒಂದು ಆರ್ಥಿಕ ವರ್ಷದಲ್ಲಿ ನಿಮ್ಮೂರಲ್ಲೆ ನಿಮಗೆ 100 ದಿನಗಳ ಉದ್ಯೋಗ ಖಾತರಿ ಕೆಲಸ ಗ್ಯಾರಂಟಿ..
ಗಂಡು ಹೆಣ್ಣಿಗೆ ಸಮಾನ ಕೂಲಿ ಏಪ್ರಿಲ್ 1 ರಿಂದ ರೂ - 316 /-
ನೂರು ದಿನ ಕೆಲಸ ಮಾಡಿ 31600/- ರೂಪಾಯಿ ನಿಮ್ಮದಾಗಿಸಿಕೊಳ್ಳಿ...
ಹೆಚ್ಚಿನ ಮಾಹಿತಿಗಾಗಿ ಇಂದೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ....
#MGNREGA#BIDAR