Karnataka Food Safety Department seizes 1,240 kg of edible oil in Dakshina Kannada
Food Safety officials seized 1,240 kg of edible oil from Bolas Agro Private Limited in Baikampady Industrial Area, Dakshina Kannada, over alleged misbranding and labelling violations.
The stock included groundnut and coconut oil. Officials found that raw groundnut oil procured from Challakere in Chitradurga district was repackaged and marketed as cold-pressed groundnut oil, allegedly misleading consumers.
#Karnataka #DakshinKannada
It’s the peak tourist season and seats are available on this train. Watching for a while before I say something.
Also the IRCTC website is a mad challenge for booking. As minister of IT @AshwiniVaishnaw should get his other ministry to look at the usability of IRCTC tech flaws.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇನ್ನು ನಾಲ್ಕೈದು ದಿನದಲ್ಲಿ ಉಡಾನ್ ಸ್ಕೀಮ್ ಮುಗಿಯುತ್ತಿದ್ದ ಹಾಗೆಯೇ ವಿಮಾನಯಾನ ಸಂಸ್ಥೆಗಳಿಗೆ ಕೊಡುತ್ತಿದ್ದ ಸಬ್ಸಿಡಿ ನಿಂತು, ವಿಮಾನ ಹಾರಾಟ ನಿಲ್ಲುತ್ತದೆ. ಈ ಸುದ್ದು ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ರಾಜಕಾರಣಿಗಳ ಮಧ್ಯೆ ಕೇಂದ್ರ-ರಾಜ್ಯ ಫೈಟ್ ಶುರುವಾಗಿದೆ.
ಬಹಳ ತಮಾಷೆಯ ಸಂಗತಿಯೆಂದರೆ, ಇದು ಶಿವಮೊಗ್ಗ ವಿಮಾನ ನಿಲ್ದಾಣ ಆಗಿದ್ದಕ್ಕೆ ಈ ವಿಚಾರ ಚರ್ಚೆಗೆ ಬಂದಿದೆ. ಒಂದು ವೇಳೆ ಕಲಬುರಗಿ ವಿಮಾನ ನಿಲ್ದಾಣ ಆಗಿರುತ್ತಿದ್ದರೆ, ಇದು ಸುದ್ದಿಯೂ ಆಗುತ್ತಿರಲಿಲ್ಲ!
ಸಾವಿರ ಕೋಟಿ ರೂ. ಖರ್ಚು ಮಾಡು, ಭಾರಿ ಪ್ರಮಾಣ 750 ಎಕರೆ ವಿಸ್ತೀರ್ಣದ ಜಾಗದಲ್ಲಿ (ದೇಶೀಯ ವಿಮಾನ ನಿಲ್ದಾಣಕ್ಕೆ ಅಗತ್ಯವಿದ್ದುದಕ್ಕಿಂತ ಸುಮಾರು ದುಪ್ಪಟ್ಟು ಜಾಗ ಸ್ವಾಧೀನ ಮಾಡಿಕೊಳ್ಳಲಾಗಿದೆ) ನಿರ್ಮಾಣವಾದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಕೂಡಾ ಕಳೆದ ವರ್ಷದ ನವೆಂಬರ್ ಸುಮಾರಿಗೆ ಉಡಾನ್ ಯೋಜನೆ ಸ್ಥಗಿತ ಆಗಿತ್ತು.
ಆದರೆ, ಈ ವಿಷಯ ಸುದ್ದಿಯಾಗಲೇ ಇಲ್ಲ! ಯಾಕೆ?
ವಿಷಯ ಇಷ್ಟೇ...
ಉಡಾನ್ ಸ್ಕೀಮ್ ಮುಗಿಯುವುದಕ್ಕೂ ಒಂದು ತಿಂಗಳು ಮೊದಲೇ ರಾಜ್ಯ ಸರ್ಕಾರ ಈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ದಿನಕ್ಕೊಂದು ವಿಮಾನ ಹಾರಾಟ ಮಾಡಿಸುವುದಕ್ಕೆ ವರ್ಷಕ್ಕೆ 15 ಕೋಟಿ ರೂ. ಅನುದಾನವನ್ನು ಸೈಲೆಂಟ್ ಆಗಿ ಘೋಷಿಸಿದೆ. ಇವತ್ತಿಗೂ ರಾಜ್ಯ ಸರ್ಕಾರದ ಸಬ್ಸಿಡಿಯಲ್ಲಿ ಬೆಂಗಳೂರು-ಕಲಬುರಗಿ ಮಧ್ಯೆ ಒಂದು ವಿಮಾನ ಹಾರಾಟ ನಡೆಸುತ್ತಿದೆ.
ಕಲಬುರಗಿಗೆ ಮಾತ್ರ ಯಾಕೆ?
ಕಲಬುರಗಿಯಲ್ಲಿ ಇರೋ ಗಣ್ಯರು ಯಾರು ಹೇಳಿ? ಖರ್ಗೆ, ಮರಿ ಖರ್ಗೆ ಮತ್ತು ಅವರ ಮರಿ ಮರಿ ಖರ್ಗೆಗಳು! ಅವರಿಗೆ ಓಡಾಡುವುದಕ್ಕೆ ನಮ್ಮ ದುಡ್ಡಿನಲ್ಲಿ ಸಬ್ಸಿಡಿ ಸಿಗ್ತಾ ಇದೆ! ಅದೇ ಬೇರೆ ವಿಮಾನ ನಿಲ್ದಾಣಕ್ಕೆ ಬೇಕಾದರೆ ಕೇಂದ್ರ ಸರ್ಕಾರ ಕೊಡಲಿ ಅಂತ ಉದ್ಧಟತನದ ಮಾತನಾಡುತ್ತಿದ್ದಾರೆ. ಹಾಗಾದರೆ, ಕಲಬುರಗಿಗೂ ಕೇಂದ್ರವೇ ಕೊಡಲಿ ಎಂದು ಕುಳಿತುಕೊಳ್ಳಬೇಕಿತ್ತಲ್ಲ! ಅಲ್ಲಿ, ನಿಮ್ಮ ರಾಷ್ಟ್ರಾಧ್ಯಕ್ಷರನ್ನು ಮೆಚ್ಚಿಸಬೇಕಿತ್ತು. ಇಲ್ಲಿ ಮೆಚ್ಚಿಸುವುದಕ್ಕೆ ಯಾರೂ ಇಲ್ಲವಲ್ಲ! ಇದನ್ನು ಅಲ್ಲಿನ ಸಂಸದರ ತಲೆಗೆ ಕಟ್ಟಬಹುದು ಎಂಬ ಹೊಲಸು ರಾಜಕೀಯ...
ಇಷ್ಟೇ ಅಲ್ಲ... ಇನ್ನೂ ತಮಾಷೆಯ ಸಂಗತಿ ಹಲವು ಇವೆ.
ಸಾಮಾನ್ಯವಾಗಿ ರಾಜ್ಯದ ಒಳಗಿನ ಸಣ್ಣ ವಿಮಾನ ನಿಲ್ದಾಣಗಳನ್ನು ರಾಜ್ಯ ಸರ್ಕಾರವೇ ನಿರ್ಮಾಣ ಮಾಡಿ, ಅದನ್ನು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ)ಗೆ ಹಸ್ತಾಂತರ ಮಾಡುತ್ತದೆ. ಅದೇ ರೀತಿ, ಕಲಬುರಗಿ ವಿಮಾನ ನಿಲ್ದಾಣವನ್ನೂ ಹಸ್ತಾಂತರ ಮಾಡಲಾಯಿತು. ಆದರೆ, ಎಎಐಗೆ ಹಸ್ತಾಂತರ ಮಾಡಿದ ನಂತರ, ಅದರಲ್ಲಿ ರಾಜ್ಯದ ಮಸಲತ್ತು ಏನೂ ನಡೆಯುವುದಿಲ್ಲ. ಎಎಐ ತನ್ನ ಪರಿಣಿತಿಯನ್ನು ಬಳಸಿ ನೌಕರರನ್ನು ನೇಮಿಸಿ, ಅದು ನಿಗದಿ ಮಾಡಿದ ಮಾನದಂಡವನ್ನು ಅನುಸರಿಸುತ್ತದೆ. ಇದರಲ್ಲಿ ರಾಜ್ಯದ ರಾಜಕಾರಣಿಗಳು ಕೈಯಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಇದು ಹೀಗಾಗುತ್ತಿದ್ದ ಹಾಗೆ, ನಮ್ಮ ರಾಜ್ಯ ಹೊಸ ಕ್ಯಾತೆ ತೆಗೆಯಿತು. ನಾವೇ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತೇವೆ. ಎಎಐಗೆ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿತು. ಅದಕ್ಕೆ ರಾಜ್ಯ ಸರ್ಕಾರದ ಸಂಸ್ಥೆ ಕೆಎಸ್ಐಐಡಿಸಿ ಗೆ ವಿಮಾನ ನಿಲ್ದಾಣ ನಿರ್ವಹಣೆ ಹೊಣೆ ಕೊಡುತ್ತೇವೆ ಎಂದಿತು. ಅದೇ ಪ್ರಕಾರ, ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಎಐ ಅಲ್ಲ, ರಾಜ್ಯದ ಕೆಎಸ್ಐಐಡಿಸಿಯೇ ನಿರ್ವಹಿಸುತ್ತಿದೆ. ಆದರೆ, ಈ ಕೆಎಸ್ಐಐಡಿಸಿ ಎಂಬುದು ಒಂದು ಘೋಸ್ಟ್ ಸಂಸ್ಥೆಯ ರೀತಿ! ವಿಮಾನ ನಿಲ್ದಾಣವನ್ನು ನಿರ್ವಹಿಸುವ ತಾಂತ್ರಿಕ ಪರಿಣಿತಿ ಇದಕ್ಕಿಲ್ಲ. ಹೀಗಾಗಿ, ಮತ್ತೆ ಎಎಐ ಬರಬೇಕಾಯಿತು. ಎಎಐ ಎಲ್ಲ ತಾಂತ್ರಿಕ ವಿಷಯಗಳನ್ನು ಈಗಲೂ ನಿರ್ವಹಿಸುತ್ತಿದೆ. ಆದರೆ, ಕೆಎಸ್ಐಐಡಿಸಿ ಹೆಸರಿನಲ್ಲಿ ಒಂದಷ್ಟು ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ಅಂತ ಭರಿಸುತ್ತಿದೆ.
ಎಎಐಗೆ ವಿಮಾನ ನಿಲ್ದಾಣಗಳನ್ನು ವಹಿಸಿದ್ದರೆ, ವಿಮಾನ ನಿಲ್ದಾಣದ ನಿರ್ವಹಣೆಯ ಅಷ್ಟೂ ವೆಚ್ಚವನ್ನೂ ಎಎಐ ನೋಡಿಕೊಳ್ಳುತ್ತಿತ್ತು. ಆದರೆ, ಈಗ ಖಾಲಿ ಬಿದ್ದಿರುವ, ವಿಮಾನ ಹಾರಾಟ ಇಲ್ಲದ ಏರ್ಪೋರ್ಟ್ಗಳಿಗೆ ವರ್ಷವೂ ಕೋಟಿಗಟ್ಟಲೆ ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸುವ ಪರಿಸ್ಥಿತಿ ಬಂದಿದೆ. ಇದರ ಬದಲಿಗೆ, ಎಎಐಗೆ ನಿರ್ವಹಣೆಗೆ ಕೊಟ್ಟು, ದಿನಕ್ಕೆ ಒಂದೋ ಎರಡೋ ವಿಮಾನ ಹಾರಾಟಕ್ಕೆ ರಾಜ್ಯ ಸರ್ಕಾರ ಸಬ್ಸಿಡಿ ಕೊಟ್ಟಿದ್ದರೆ, ಅಲ್ಲಿಗೆ ಜನರಿಗೂ ಅನುಕೂಲವಾಗುತ್ತಿತ್ತು.
ಈ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ಮಿಸಿದ್ದೇನೋ ನಿಜ. ಆದರೆ, ಇವತ್ತಿಗೂ ಕೆಲಸವೇ ಸರಿಯಾಗಿ ಮುಗಿದಿಲ್ಲ. ಇಷ್ಟು ವರ್ಷ ಆದರೂ, ರಾತ್ರಿ ಲ್ಯಾಂಡಿಂಗ್ಗೆ ಬೇಕಾದ ಸೌಲಭ್ಯವನ್ನು ಕಲ್ಪಿಸುವುದಕ್ಕೆ ಆಗಲಿಲ್ಲ. ನಮ್ಮಲ್ಲಿ ಇನ್ನೂ ವಿಮಾನ ನಿಲ್ದಾಣ ಎಂದರೆ, ಜನರು ಓಡಾಡುವುದಕ್ಕೆ ಅನುಕೂಲ ಕಲ್ಪಿಸುವುದು ಎಂದಷ್ಟೇ ಆಗಿದೆಯೇ ಹೊರತು, ವಿಮಾನ ನಿಲ್ದಾಣ ಬಂದರೆ, ಅದು ಕೃಷಿ ಹಾಗೂ ಉದ್ಯಮದ ಅವಕಾಶಕ್ಕೆ ತೆರೆದ ಬಾಗಿಲು ಎಂಬ ಮನಸ್ಥಿತಿ ಇನ್ನೂ ಬೆಳೆದಿಲ್ಲ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ಬಳಸಿಕೊಂಡು ಸುತ್ತಮುತ್ತಲಿನ ಕೃಷಿ ಉತ್ಪನ್ನಗಳು ಹಾಗೂ ತರಕಾರಿಗಳ ಮೌಲ್ಯವರ್ಧನೆಗೆ ಅಪಾರ ಅವಕಾಶವಿತ್ತು. ವಿಮಾನ ನಿಲ್ದಾಣ ಹಾಗೂ ಕೋಲ್ಡ್ ಚೈನ್ ಸ್ಟೊರೇಜ್ ಮತ್ತು ಕಾಂಟ್ರಾಕ್ಟ್ ಫಾರ್ಮಿಂಗ್ ಇವು ಮೂರೂ ಅತ್ಯಂತ ಅದ್ಭುತ ಸಂಯೋಜನೆ. ವಿಮಾನ ನಿಲ್ದಾಣವೇನೋ ಹೆಸರಿಗೆ ಆಯಿತು. ಆದರೆ, ಅದನ್ನು ಯಶಸ್ವಿಯಾಗಿ ಹಾಗೂ ಲಾಭದಾಯಕವಾಗಿ ನಡೆಸುವುದಕ್ಕೆ ಬೇಕಾದ ಯಾವ ಸೌಕರ್ಯ ಹಾಗೂ ಅನುಕೂಲವನ್ನು ರಾಜ್ಯ ಸರ್ಕಾರ ಮಾಡಲಿಲ್ಲ.
ಇದರಿಂದ, ಅಷ್ಟು ಚೆಂದದ ವಿನ್ಯಾಸದಿಂದ ನಿರ್ಮಾಣ ಮಾಡಿದ, ಅತ್ಯಂತ ಸ್ಟ್ರಾಟಜಿಕ್ ಸ್ಥಳದಲ್ಲಿ ಇರುವ ವಿಮಾನ ನಿಲ್ದಾಣವೊಂದು ಅನಾಥವಾಗಿ ನಿಲ್ಲುವ ಪರಿಸ್ಥಿತಿ ಬಂದಿದೆ.
ಬರಹ : ಕೃಷ್ಣ ಭಟ್
- Rajesh Agrawal and Geeta Rani are a couple from Agra.
- Since they had no biological children, they decided to adopt a child.
- They raised him, educated him, and even got him married.
- The couple spent their lifetime savings of ₹75 lakh building a house.
- Later, their son allegedly tricked them into selling their house for ₹46 lakh on the pretext of purchasing a new property. He kept the money for himself and transferred the house's ownership into his wife's name.
- After being thrown out of their own home, the elderly couple moved into an old-age home. They have reportedly made over 1,000 videos appealing for justice on social media.
After witnessing such an incident, people will think ten times before deciding to adopt a child.
Rahul Gandhi's frustration of losing elections has now reached back 2014. Now he says 2014 election was rigged with millions of foreign dollars
In 2014, his own Congress-led UPA government was in power. If such large amounts of foreign money were being pumped into the election, then it directly points to the failure of his own government which could not stop it.
Either Rahul Gandhi has completely lost his mind, or he is indirectly blaming his own UPA government.
ಎಷ್ಟು ಬಾರಿ ಮರ್ಯಾದಿ ಕಳೆದುಕೊಳ್ಳುವಿರಿ ಕನ್ನಡ ಹೋರಾಟಗಾರ ಎಂಬ ಚರ್ಮ ಹೊದ್ದುಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರಾದ @rajanna_rupesh ಅವರೇ?
ಒಬ್ಬ ಭಾರತೀಯ ಪ್ರಜೆಯಾಗಿ ನೀವು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುವುದು ಸರಿಯಾಗಿದೆ. ಆದರೆ ನೀವು ಎಷ್ಟು ತೆರಿಗೆ ಕಟ್ಟಿದ್ದೀರಿ ಮತ್ತು ಮುಂದೆ ಕಟ್ಟುತ್ತೀರಿ? ನಿಮ್ಮ ಆದಾಯದ ಮೂಲ ಏನು, ನಿಮ್ಮ ವೃತ್ತಿ ಏನು ಅಂತ ನಮಗೂ ಹೇಳಬಹುದು.
ಕರ್ನಾಟಕ ಸರ್ಕಾರದಲ್ಲಿ ತಪ್ಪುಗಳು ನಡೆದಾಗ ನಿಮ್ಮ ಬೆನ್ನುಮೂಳೆ ಸಡಿಲವಾಗಿರುತ್ತದೆಯೇ? ಆಗ ಪ್ರಶ್ನೆ ಮಾಡಲು ನಿಮ್ಮ ನಾಲಿಗೆ ಹೊರಳುವುದಿಲ್ಲವೇ?
ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮತ್ತು ಕಾಂಗ್ರೆಸ್ ಪಕ್ಷದಿಂದ ರಚಿತವಾಗಿರುವ ಕರ್ನಾಟಕ ಸರ್ಕಾರದ ಚುನಾಯಿತ ಪ್ರತಿನಿಧಿಗಳು ಏನಾದರೂ ಹೇಳಿಕೆ ಕೊಟ್ಟ ಕೂಡಲೇ ನೀವು ಯಾಕೆ 10G ವೇಗದಲ್ಲಿ ಮೊಳಕೆಯೊಡೆದು ಅಚ್ಚ ಕನ್ನಡಿಗರಾಗಿಬಿಡ್ತೀರಿ?
ಅವರೆಲ್ಲಾ ಸುಮ್ಮನಿದ್ದಾಗ ನೀವು ನಿಮ್ಮ ಇರುವಿಕೆಯನ್ನೇ ತೋರಿಸುವುದಿಲ್ಲ, ಯಾಕೆ?
ನೀವು ಪ್ರಶ್ನೆ ಮಾಡುವುದರಲ್ಲಿ ಏನಾದರೂ ಕುಂಭಕರ್ಣರ? ಕೇಂದ್ರವನ್ನ ಮಾತ್ರ ಪ್ರಶ್ನಿಸಿ ರಾಜ್ಯ ಸರ್ಕಾರವನ್ನ ಪ್ರಶ್ನಿಸದೇ ಇರಲು?
ನಿಮ್ಮ ಕಿವಿ, ಕಣ್ಣು ಬಾಯಿ ಎಲ್ಲಾ ಬಿಜೆಪಿ ಸರ್ಕಾರದ ವಿರುದ್ಧ ಮಾತ್ರ ವೀರೋಚಿತವಾಗಿ ಹೋರಾಡಲು ಯಾಕೆ ಕೆಲಸ ಮಾಡ್ತವೆ?
ಜನರಿಗೆ ನೀವು ಯಾವ ಪಕ್ಷದ ಕಾರ್ಯಕರ್ತ ಅನ್ನುವುದರ ಬಗ್ಗೆ ತಿಳುವಳಿಕೆ ಇದೆ, ಬಹುಶಃ ನಿಮಗೆ ಅದನ್ನ ಒಪ್ಪಿಕೊಳ್ಳಲು ಕಷ್ಟವಾಗ್ತಿರಬಹುದು.