https://t.co/PJUHN5It7Z
NOV15 ರ #KAS319 ಪೂರ್ವಬಾವಿ ಪರೀಕ್ಷೆ ಮುಂದೂಡಲೇಬೇಕು ...
ಯಾವುದೇ ಸುಧಾರಣ ಕ್ರಮಗಳಿಲ್ಲದೆ @secretarykpsc ಯಾವುದೇ ನೇಮಕಾತಿ ಪ���ರಕ್ರಿಯೆ ಮಾಡಬಾರದು ನಿಮಗೆ ಕನಿಷ್ಠ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ತೊಲಗಿ...
ಅಭ್ಯರ್ಥಿಗಳ ಜೀವನ ಹಾಳು ಮಾಡಬೇಡಿ ಕಳೆದ ಐದು ವರ್ಷಗಳಿಂದ #KPSC ನಡೆಸಿದ ಪರೀಕ್ಷೆಗಳ ಮೇಲೆ ಅಕ್ರಮದ ಆರೋಪ ಯಾವ ನೇಮಕಾತಿ ಸಹ ಗೊಂದಲಗಳಿಲ್ಲದೆ ಪೂರ್ಣಗೊಳಿಸಿಲ್ಲ
ಮಾನ್ಯ @DKShivakumar KPSC ಯಾವುದೇ ಕಾರಣಕ್ಕೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಲ್ಲಾ ನೇಮಕಾತಿಯನ್ನು @KEA ಗೆ ನೀಡಿ....
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
@secretarykpsc ಸುಧಾರಣೆ ಆಗುವವರೆಗೂ KAS ಪರೀಕ್ಷೆ ಮುಂದೂಡಲೇಬೇಕು!
ಯಾವುದೇ ಸುಧಾರಣೆಗಳಿಲ್ಲದೆ, ಅದೇ ಕಾರ್ಯದರ್ಶಿ ಮತ್ತು ಅದೇ ಸದಸ್ಯರನ್ನು ಒಳಗೊಂಡಿರುವ KPSC ನಡೆಸಲಿರುವ ಮುಂದಿನ KAS ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ನಡೆಯುತ್ತದೆ ಎಂಬ ಭರವಸೆ ನಮಗ���ಲ್ಲ.
ಹೀಗಾಗಿ, KPSCಯಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೊಳಿಸುವವರೆಗೆ KAS ಪರೀಕ್ಷೆಯನ್ನು #ತಾತ್ಕಾಲಿಕವಾಗಿ #ಮುಂದೂಡಬೇಕು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ KPSCಯ ಎಲ್ಲಾ ಸದಸ್ಯರಿಗೆ ನಿಜವಾಗಿಯೂ ನೈತಿಕತೆ ಮತ್ತು ಹೊಣೆಗಾರಿಕೆ ಇದ್ದರೆ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ , ಆಯೋಗದ ಘನತೆಯನ್ನು ಕಾಪಾಡಲು ಮುಂದಾಗಬೇಕು.
ಇನ್ನೊಂದು ವಾರದೊಳಗೆ KAS ಪರೀಕ್ಷೆಯನ್ನು ಮುಂದೂಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಪ್ರಾಮಾಣಿಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ KPSC ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.
ಇದು ಕೇವಲ ಎಚ್ಚರಿಕೆಯಲ್ಲ, ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಡೆಸುವ ಹೋರಾಟದ ಸಂಕಲ್ಪ!
@DKShivakumar @PriyankKharge @SANDEEPRAI
#KPSC #KAS #KSVS #CleanKPSC@KSVS2025
https://t.co/WZx7YKbjsV
@KPSC ಅಕ್ರಮದ ವಿರುದ್ಧ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿ���ರಾದ ಸನ್ಮಾನ್ಯ @hd_kumaraswamy ಅವರ ಮುಕ್ತ ಸಂವಾದ!
#KPSC ಅಕ್ರಮಗಳ ವಿರುದ್ಧ ಗಟ್ಟಿ ಧ್ವನಿ!
#ವಿದ್ಯಾರ್ಥಿಗಳ ಸಲಹೆ, ಸಹಕಾರ ಹಾಗೂ ಬೆಂಬಲದೊಂದಿಗೆ ನೇಮಕಾತಿ ವ್ಯವಸ್ಥೆಯಲ್ಲಿನ ಅಕ್ರಮಗಳನ್ನು ತೊಡೆದುಹಾಕಿ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಹಾಗೂ ನ್ಯಾಯಯುತ ನೇಮಕಾತಿಗಾಗಿ ಸನ್ಮಾನ್ಯ ಕೇಂದ್ರ ಸಚಿವರಾದ @hd_kumaraswamy ಅವರೊಂದಿಗೆ @KPSC ಚರ್ಚೆ WITH HDK ಕಾರ್ಯಕ್ರಮವನ್ನು ಆಯೋಜಿಸಲಾಗಿದೆ..
📍 ದಿನಾಂಕ: 16/10/2026 ಶುಕ್ರವಾರ
📌 ಸ್ಥಳ: ವಿಜಯನಗರ ಬಂಟರ ಸಂಘ
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಪ್ರಾ���ಾಣಿಕ ಹಾಗೂ ಪ್ರತಿಭಾವಂತ ��ಭ್ಯರ್ಥಿಗಳ ಹಿತದೃಷ್ಟಿಯಿಂದ ನಡೆಯುವ ಈ ಮಹತ್ವದ ಸಂವಾದದಲ್ಲಿ ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುತ್ತೇವೆ. 🙏
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
@Nikhil_Kumar_k @H_D_Devegowda @SANDEEPRAI @chandandhore
#KSVS #KPSC #CorruptionFreeKPSC #StudentsVoice #HDKumaraswamy
ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ತನಿಖೆಗಾಗಿ ಮಾನ್ಯ ಉಚ್ಚ ನ್ಯಾಯಾಲಯವು #SIT ರಚಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಇಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ SLP ಮೂಲಕ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಸರ್ಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ ????
ನೇಮಕಾತಿ ಪ್ರಕ್ರಿಯೆಯಲ್ಲಿನ ಸತ್ಯವನ್ನು ಬಹಿರಂಗಪಡಿಸಲು ನಿಷ್ಪಕ್ಷಪಾತ ಹಾಗೂ ಪರಿಣಾಮಕಾರಿ ತನಿಖೆ ನಡೆಯ���ೇಕು. ಯಾವುದೇ ಕಾರಣಕ್ಕೂ ಪ್ರಾಮಾಣಿಕ, ಅರ್ಹ ಹಾಗೂ ಪರಿಶ್ರಮಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ನಿಷ್ಪಕ್ಷಪಾತ ತನಿಖೆ ನಡೆಯಲಿ — ಸತ್ಯ ಹೊರಬರಲಿ — ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿ.
@DKShivakumar @PriyankKharge @KSVS
@SANDEEPRAI
ಧಾರವಾಡದಲ್ಲಿ KPSC ಅಭ್ಯರ್ಥಿಗಳು ಕಳೆದ 3 ದಿನಗಳಿಂದ ನಡೆಸುತ್ತಿರುವ ಹೋರಾಟ ಹಾಗೂ ಶ್ರೀ ಅನಿಲ್ ಕಾಂಬಳೆ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿರಂತರ ಉಪವಾಸದಿಂದ ಅನಿಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣಿದ್ದು ಕುರುಡಾಗಿದೆ.
384 KAS ಹುದ್ದೆಗಳು ಹಾಗೂ PDO ಪರೀಕ್ಷೆಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ KPSC ಅಭ್ಯರ್ಥಿಗಳು ಸಿಬಿಐ (CBI) ತನಿಖೆಗೆ ಆಗ್ರಹಿಸುತ್ತಿದ್ದಾರೆ. ಲಕ್ಷಾಂತರ ಬಡ, ಶ್ರಮಜೀವಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಭ್ರಷ್ಟ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು CBIಗೆ ಒಪ್ಪಿಸಬೇಕು.
ನಾವೆಲ್ಲರೂ KPSC ಹೋರಾಟಗಾರರ ಪರವಾಗಿದ್ದೇವೆ. ಅಭ್ಯರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ!
@secretarykpsc ಆಯೋಗಕ್ಕೆ ಸ್ಪರ್ಧಾರ್ಥಿಗಳ ಪರವಾಗಿ ವಿಶೇಷ ಮನವಿ 🙏
ಆಯೋಗವು @KEA_karnataka H. ಪ್ರಸನ್ನ ಸರ್ ಸೂಚಿಸಿರುವ ಪರೀಕ್ಷಾ ಪಾರದರ್ಶಕತೆ ಹಾಗೂ ಸುಧಾರಣಾ ಕ್ರಮಗಳಿಗೆ ಒಪ್ಪಿಗೆ ನೀಡದಿದ್ದರೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಪರೋಕ್ಷವಾಗಿ ಅವಕಾಶ ನೀಡಿದಂತಾಗುತ್ತದೆ ಎಂಬ ಅನುಮಾನ ಸ್ಪರ್ಧಾರ್ಥಿಗಳಲ್ಲಿ ಮೂಡುತ್ತದೆ.
ಆದ್ದರಿಂದ, ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ನಿಷ್ಪಕ್ಷಪಾತತೆ ಕಾಪಾಡುವ ನಿಟ್ಟಿನಲ್ಲಿ H. ಪ್ರಸನ್ನ ಸರ್ ಸೂಚಿಸಿರುವ ಎಲ್ಲಾ ಪರೀಕ್ಷಾ ಸುಧಾರಣಾ ಹಾಗೂ ಪಾರದರ್ಶಕತಾ ಕ್ರಮಗಳನ್ನು ಆಯೋಗ ಕಡ್ಡಾಯವಾಗಿ ಜಾರಿಗೊಳಿಸಬೇಕು.
ಈ ಕ್ರಮಗಳಿಗೆ ಆಯೋಗ ಯಾವುದೇ ಕಾರಣಕ್ಕೂ ವಿರೋಧಿಸದೆ, ಸ್ಪರ್ಧಾರ್ಥಿಗಳ ಹಿತದೃಷ್ಟಿಯಿಂದ ಸಂಪೂರ್ಣ ಸಹಕಾರ ನೀಡಬೇಕು.
ಅಕ್ರಮಗಳಿಗೆ ಅವಕಾಶವಿಲ್ಲ — ಪಾರದರ್ಶಕ ನೇಮಕಾತಿಯೇ ನಮ್ಮ ಬೇಡಿಕೆ.
@INCKarnataka ಸರ್ಕಾರವೂ ಈ ಕುರಿತು ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ, ಎಲ್ಲ��� ಪರೀಕ್ಷಾ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಖಚಿತಪಡಿಸಬೇಕು.
ಎಲ್ಲಾ ಸ್ಪರ್ಧಾರ್ಥಿಗಳ ಪರವಾಗಿ ಈ ಮೂಲಕ ವಿಶೇಷ ಮನವಿ ಮಾಡಿಕೊಳ್ಳುತ್ತೇವೆ. 🙏
@DKShivakumar @CMofKarnataka @DeepakThimaya @SANDEEPRAI
#CleanKPSC #TransparentKPSC #KSVS
ಕರ್ನಾಟಕ ಸರ್ಕಾರವು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿರುವ ಸಂದರ್ಭದಲ್ಲಿ, ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಯಲ್ಲಿ ಇಂಗ್ಲಿಷ್ ಜ್ಞಾನವನ್ನು ��ಡ್ಡಾಯಗೊಳಿಸುವ ಮೂಲಕ ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರನ್ನು ಸರ್ಕಾರಿ ಉದ್ಯೋಗಗಳಿಂದ ದೂರವಿಡಲು ಮುಂದಾಗಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಪರಭಾಷಾ ಐಎಎಸ್ ಲಾಬಿ ಇರುವುದು ಸ್ಪಷ್ಟ. ಸರ್ಕಾರ ಇಂಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ, ಇಲ್ಲವಾದಲ್ಲಿ ಇಂಥ ಅಧಿಕಾರಿಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಸಂಘಟಿಸಬೇಕಾಗುತ್ತದೆ.
ಕನ್ನಡವೇ ಕರ್ನಾಟಕ ಸರ್ಕಾರದ ಆಡಳಿತ ಭಾಷೆ. ಸರ್ಕಾರದ ಕಚೇರಿಗಳಲ್ಲಿ ಆಡಳಿತ, ಕಡತ ವಿಲೇವಾರಿ, ಪತ್ರ ವ್ಯವಹಾರ ಹಾಗೂ ಸಾರ್ವಜನಿಕ ಸೇವೆಗಳು ಕನ್ನಡದಲ್ಲೇ ನಡೆಯಬೇಕೆಂಬುದು ಸರ್ಕಾರದ ನೀತಿಯಾಗಿದೆ. ಹೀಗಿರುವಾಗ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮಾಡುವಾಗ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವ ಅಗತ್ಯವಾದರೂ ಏನು? ಐ ಎಎಸ್ ಬಾಬುಗಳಿಗೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಇರುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರಲ್ಲವೇ?
ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಪಡೆಯಬೇಕಾದ ಕನ್ನಡಿಗನಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಅವಕಾಶ ನಿರಾಕರಿಸುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮ. ಇದು ಗ್ರಾಮೀಣ ಪ್ರದೇಶದ ಕನ್ನಡಿಗರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಯುವಜನರು ಹಾಗೂ ಇಂಗ್ಲಿಷ್ ಶಿಕ್ಷಣದ ಅವಕಾಶ ಸಿಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಸರ್ಕಾರದ ಆಡಳಿತ ಭಾಷೆ ಕನ್ನಡವಾಗಿರುವುದರಿಂದ ಸರ್ಕಾರಿ ಸೇವೆಗೆ ಅಗತ್ಯವಿರುವ ಭಾಷಾ ಜ್ಞಾನ ಕನ್ನಡವಾಗಿರಬೇಕು. ಯಾವುದೇ ಸಂದರ್ಭದಲ್ಲಿ ಆಡಳಿತಾತ್ಮಕವಾಗಿ ಇಂಗ್ಲಿಷ್ನಲ್ಲಿರುವ ಮಾಹಿತಿಯ ಅಗತ್ಯವಿದ್ದರೆ, ಸರ್ಕಾರದಲ್ಲೇ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅನುವಾದ ಇಲಾಖೆಯ ಮೂಲಕ ಅದನ್ನು ಕನ್ನಡಕ್ಕೆ ಅನುವಾದಿಸಿಕೊಳ್ಳಲು ಅವಕಾಶವಿದೆ. ಅನುವಾದ ವ್ಯವಸ್ಥೆ ಇರುವಾಗ ಸರ್ಕಾರಿ ಉದ್ಯೋಗಕ್ಕೆ ಇಂಗ್ಲಿಷ್ ಜ್ಞಾನವನ್ನು ಕಡ್ಡಾಯಗೊಳಿಸುವುದು ಅರ್ಥಹೀನ.
ಕರ್ನಾಟಕ ಸರ್ಕಾರವು ಒಂದು ಕಡೆ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಘೋಷಿಸಿ, ಮತ್ತೊಂದು ಕಡೆ ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವುದು ದ್ವಂದ್ವ ನೀತಿಯಾಗಿದೆ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಸರ್ಕಾರದ ಘೋಷಣೆ ಕೇವಲ ಕಡತಗಳಿಗೆ ಸೀಮಿತವಾಗದೆ, ಸರ್ಕಾರಿ ನೇಮಕಾತಿ ವ್ಯವಸ್ಥೆಯಲ್ಲಿಯೂ ಪ್ರತಿಫಲಿಸಬೇಕು.
ಕನ್ನಡಿಗರಿಗೆ ಸರ್ಕಾರಿ ಉ���್ಯೋಗದ ಬಾಗಿಲು ತೆರೆಯಬೇಕೇ ಹೊರತು, ಭಾಷೆಯ ಹೆಸರಿನಲ್ಲಿ ಮುಚ್ಚಬಾರದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಯ ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯನ್ನು ಕೇವಲ ಇಂಗ್ಲಿಷ್ ಜ್ಞಾನದ ಕೊರತೆಯ ಕಾರಣಕ್ಕೆ ತಿರಸ್ಕರಿಸುವ ಯಾವುದೇ ನಿಯಮವನ್ನು ಕರ್ನಾಟಕ ರಕ್ಷಣಾ ವೇದಿಕೆ ಒಪ್ಪುವುದಿಲ್ಲ.
ಆದ್ದರಿಂದ ಮುಖ್ಯಮಂತ್ರಿ @DKShivakumar ಡಿ.ಕೆ.ಶಿವಕುಮಾರ್ ಅವರು ಈ ವಿಚಾರವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ಸರ್ಕಾರಿ ನೇಮಕಾತಿ ಪರೀಕ್ಷೆಯ ನಿಯಮಾವಳಿಯಲ್ಲಿ ಅಗತ್ಯ ಬದಲಾವ��ೆಗಳನ್ನು ಮಾಡಿಸಬೇಕು. ಸರ್ಕಾರಿ ಉದ್ಯೋಗಗಳಿಗೆ ಅನಗತ್ಯವಾಗಿ ಇಂಗ್ಲಿಷ್ ಅನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೈಬಿಟ್ಟು, ಕನ್ನಡಕ್ಕೆ ಸೂಕ್ತ ಮತ್ತು ನ್ಯಾಯಯುತ ಸ್ಥಾನಮಾನ ಕಲ್ಪಿಸಬೇಕು.
@secretarykpsc ಎರಡು ತಿಂಗಳ ಹಿಂದೆ 'ಏನೂ ಅಕ್ರಮ ನಡೆದಿಲ್ಲ' ಅಂತ #ಕೆಪಿಎಸ್ಸಿಗೆ ಕ್ಲೀನ್ ಚಿಟ್ ಕೊಟ್ಟ ಅದೇ KPSC ಕಾರ್ಯದರ್ಶಿ K. ಜ್ಯೋತಿ ಅವರು ಈಗ ಜಾರಿಕೊಳ್ತಿದ್ದಾರೆಯೇ ?
ಮುಂದಿನ ಪರೀಕ್ಷೆ? ➡️ "Exam Controller ಹತ್ರ ಕೇಳಿ"
ಹಿಂದಿನ ಪರೀಕ್ಷೆಗಳು? ➡️ "Members ಹತ್ರ ಕೇಳಿ"
ಅಕ್ರಮದ ಹೊಣೆ? ➡️ "ನನಗೇನೂ ಗೊತ್ತೇ ಇಲ್ಲ!"
@Thecharioteer2 @DKShivakumar
ಹಾಸನದ ಪ್ರಾಮಾಣಿಕ ಜಿಲ್ಲಾಧಿಕಾರಿ @KSLathaKumari1 ಲತಾ ಕುಮಾರಿ ಮೇಡಂ ಅವರೊಂದಿಗೆ @KSVS ವಿದ್ಯಾರ್ಥಿ ಸಂಘಟನೆ ದೃಢವಾಗಿ ನಿಲ್ಲುತ್ತದೆ.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಗೌರವ ಮತ್ತು ಬೆಂಬಲ ನೀಡಬೇಕು. @hd_revanna ಹೆಚ್.ಡಿ. ರೇವಣ್ಣ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು. ನ್ಯಾಯ ಮತ್ತು ಅಧಿಕಾರಿಗಳ ಗೌರವದ ಪರವಾಗಿ KSVS ಸದಾ ನಿಲ್ಲಲಿದೆ.
@DKShivakumar@SANDEEPRAI
#StandWithLathaKumari @Sandeep98886864
ವಿದ್ಯಾರ್ಥಿಗಳ ಸಮಸ್ಯೆ ಆಲಿಸಲು ಧಾರವಾಡಕ್ಕೆ ಬನ್ನಿ ಎಂದು @RahulGandhi ಅವರಿಗೆ ಆಹ್ವಾನ!
ಧಾರವಾಡದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸಲು ಧಾರವಾಡಕ್ಕೆ ಆಗಮಿಸುವಂತೆ @INCIndia ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಶ್ರೀ ರಾಹುಲ್ ಗಾಂಧಿಯವರಿಗೆ @RahulGandhi ಧಾರವಾಡದ @Gen Z ವಿದ್ಯಾರ್ಥಿಗ���ು ವಿಶೇಷ ಆಹ್ವಾನ ನೀಡಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗ, ನೇಮಕಾತಿ ಹಾಗೂ ಯುವಜನರ ಸಮಸ್ಯೆಗಳ ಕುರಿತು ನೇರವಾಗಿ ಚರ್ಚಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿ, ಆಹ್ವಾನ ಪತ್ರವನ್ನು ಪೋಸ್ಟ್ ಮೂಲಕ ದೆಹಲಿಗೆ ರವಾನಿಸಿದ್ದಾರೆ.
“ದೆಹಲಿ ತಲುಪುವ ನಮ್ಮ ಧ್ವನಿ, ಧಾರವಾಡದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಧ್ವನಿಯಾಗಲಿ” ಎಂಬ ಆಶಯದೊಂದಿಗೆ ಈ ಆಹ್ವಾನ ನೀಡಲಾಗಿದೆ.
ಧಾರವಾಡದ ವಿದ್ಯಾರ್ಥಿಗಳ ಧ್ವನಿ ದೆಹಲಿಯವರೆಗೆ… 🇮🇳📚
ವಿದ್ಯಾರ್ಥಿಗಳೊಂದಿಗೆ ��ದಾ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಇರಲಿದೆ @Sandeep98886864
@DKShivakumar @INCKarnataka
@SANDEEPRAI
#DharwadStudents #GenZ #RahulGandhi #StudentIssues #YouthVoice
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಮೇಡಂ ಅವರೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ. ಪ್ರಾಮಾಣಿಕವಾಗಿ ಹಾಗೂ ಧೈರ್ಯದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಗೌರವ ಮತ್ತು ಬೆಂಬಲ ನೀಡಬೇಕು. ಹೆಚ್.ಡಿ. ರೇವಣ್ಣ ಅವರು ಲತಾ ಕುಮಾರಿ ಮೇಡಂ ಕುರಿತು ಆಡಿರುವ ಮಾತುಗಳನ್ನು ಹಿಂಪಡೆಯಬೇಕು. ಅಧಿಕಾರಿಗಳ ಗೌರವ, ಕರ್ತವ್ಯನಿಷ್ಠೆ ಮತ್ತು ನ್ಯಾಯದ ಪರವಾಗಿ ನಮ್ಮ ಧ್ವನಿ ಸದಾ ಇರಲಿದೆ. #StandWithLathaKumari
We stand firmly with Hassan DC @KSLathaKumari1 Madam. Public servants performing their duties with integrity and courage deserve respect and support. @hd_revanna should honour his words and withdraw the remarks made against her. Let dignity, accountability, and respect for government officers prevail. We stand for justice. #StandWithLathaKumari
ಕನ್ನಡ ಮಕ್ಕಳ ಶಾಪ. ..
ಕನ್ನಡ ಭಾಷಾಂತರ ದೋಷದ ವಿರುದ್ಧ ಹೋರಾಟ ಮಾಡಿದಾಗ ಟ್ವಿಟರ್ನಲ್ಲಿ ಕನ್ನಡದ ವಿದ್ಯಾರ್ಥಿಗಳನ್ನು ಗೇಲಿ ಮಾಡಿದ್ದ #ಅಯೋಗ್ಯ ಅಧಿಕಾರಿ....
@INCKarnataka CBI ತನಿಖೆ ನಡೆಸಿ ಅಪರಾಧ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕು
@narayanagowdru@SANDEEPRAI
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (@KSVS)
#KSVS ವಕೀಲರ ನಿಯೋಗವು ಇಂದು ವಿದ್ಯಾರ್ಥಿಪರ ಕಾಳಜಿಯುಳ್ಳ ಮಾನ್ಯ ಶ್ರೀ @narayanagowdru ಅವರನ್ನು ಭೇಟಿ ಮಾಡಿ, ಪ್ರಸ್ತುತ ವಿದ್ಯಾರ್ಥಿಗಳು ಎದುರಿಸುತ್ತ��ರುವ ಪ್ರಮುಖ ಸಮಸ್ಯೆಗಳು ಹಾಗೂ @secretarykpsc ನೇಮಕಾತಿಗಳಲ್ಲಿ ಕೇಳಿಬಂದಿರುವ ಅಕ್ರಮಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು
ಈ ಸಂದರ್ಭದಲ್ಲಿ, ಮುಂದಿನ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ, ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಲೋಪಗಳು ಆಗದಂತೆ ಸ್ಪಷ್ಟ ಹಾಗೂ ಗುಣಮಟ್ಟದ ಕನ್ನಡ ಪ್ರಶ್ನೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಒತ್ತಾಯಿಸುವಂತೆಗೆ ಮನವಿ ಮಾಡಲಾಗಿದೆ.
ಅದೇ ರೀತಿ, @secretarykpsc ���ಡೆಸಿರುವ ವಿವಿಧ ಹುದ್ದೆಗಳ ನೇಮಕಾತಿಗಳ ಕುರಿತು ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ #CBI ತನಿಖೆಗೆ ಆದೇಶಿಸುವಂತೆ ಸರ್ಕಾರವನ್ನು ಎಲ್ಲರೂ ಒಗ್ಗಟ್ಟಿನಿಂದ ಆಗ್ರಹಿಸಲು ನಿರ್ಧರಿಸಲಾಯಿತು.
@CMofKarnataka @DKShivakumar
@SANDEEPRAI @KSVS
These are the RTC records of approximately 80 acres of land owned by former KPSC Chairman Shivashankarappa Sahukar, whose daughter Suma Sahukar declared an annual income of ₹40,000 and secured a government job through the KPSC.
#KPSCScam
Good evening, @shalinirajnish madam
First of all, on behalf of AKSSA, I would like to sincerely thank you for always supporting students and for considering many of the issues raised by our association. We are truly grateful for your concern towards the student community.
Madam, I would like to bring to your kind notice an issue regarding the Beat Forest Officer and Beat Forest Watcher recruitment. The selection is based on 10th,12th standard percentage, and because many students received exceptionally high marks during the COVID period, a large number of deserving candidates from other batches are being unfairly affected. This has created widespread dissatisfaction, and many students are demanding a large-scale protest if the recruitment continues under the present criteria.
Today I spoke to Shri Anjum Parvez Sir regarding this issue. He informed me that if you kindly give directions to amend the C&R Rules, he will proceed with the necessary process.
Since the application process is starting from 1st August, I humbly request you to kindly issue the necessary directions at the earliest. Your timely intervention will provide relief to thousands of deserving aspirants.
Thank you once again for your continued support and guidance, Madam.
Kantha Kumar
President
AKSSA
(All Karnataka state students association)
ಇಂದು #KSVS ವಿದ್ಯಾರ್ಥಿ ಸಮೂಹದ ಪ್ರದಾನ ಕಾರ್ಯದರ್ಶಿಗಳಾದ ಮಾನ್ಯ #SANDEEPRAI ಅವರು ಸನ್ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಮಾನ್ಯ ಶ್ರೀ #ದೀಪಕ್ ತಿಮ್ಮಯ್ಯ ಅವರನ್ನು ಭೇಟಿ ಮಾಡಿ, ಪ್ರಸ್ತುತ ವಿದ್ಯಾರ್ಥಿ ಸಮುದಾಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲಾಗಿದೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಹಾಗೂ ವಿದ್ಯಾರ್ಥಿ ನಿಯೋಗಕ್ಕೆ ಮಾನ್ಯ ಶ್ರೀ @DKShivakumar
ಅವರ ಭೇಟಿಗೆ ಅವಕಾಶ ಕಲ್ಪಿಸಿ ವಿದ್ಯಾರ್ಥಿಗಳ ಸಮ��್ಯೆಯನ್ನು ಚರ್ಚಿಸಲು ಸಮಯಾವಕಾಶ ನೀಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ,
ಸನ್ಮಾನ್ಯ ಶ್ರೀ ದೀಪಕ್ ತಿಮ್ಮಯ್ಯ ಹಾಗೂ ವಿದ್ಯಾರ್ಥಿ ಪರ ಕಾಳಜಿಯುಳ್ಳ ADDITIONAL STATE PUBLIC PROSECUTOR ಆದ ಮಾನ್ಯ @suryamukundaraj
ಅವರಿಗೆ ಧನ್ಯವಾದಗಳು,
ಈ ಸಂದರ್ಭದಲ್ಲಿ ಕೆಳಕಂಡ ಪ್ರಮುಖ ವಿಷಯಗಳ ಕುರಿತು ಮನವಿ ಸಲ್ಲಿಸಲಾಗಿದೆ
- PDO, Veterinary Officer ಹಾಗೂ AE/JE ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು CBI ತನಿಖೆಗೆ ಆದೇಶಿಸಬೇಕು.
- KEA ವಿಧಿಸುತ್ತಿರುವ ಗರಿಷ್ಠ ಅರ್ಜಿ ಶುಲ್ಕವನ್ನು ಕಡಿಮೆ ಮಾಡಬೇಕು ಹಾಗೂ ಸರ್ವರ್ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಬೇಕು.
- Apex Bank ನೇಮಕಾತಿ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು.
- SOCO ಹುದ್ದೆಗಳಿಗೆ ಹೊಸ ಅಧಿಸೂಚನೆ ಹೊರಡಿಸಬೇಕು.
- ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯವಿರುವ ಇನ್ನ�� ಹಲವು ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.
ಧನ್ಯವಾದಗಳು.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
https://t.co/WZx7YKbjsV
@INCKarnataka @PriyankKharge @SANDEEPRAI
ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಗಂಭೀರ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಆರೋಪಗಳು ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್���ಾರ್ಥಕ ಚಿಹ್ನೆ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಕೇವಲ ಇಲಾಖಾ ಅಥವಾ ಸೀಮಿತ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಹೀಗಾಗಿ ಕೆಪಿಎಸ್ಸಿ ನೇಮಕಾತಿಗಳಲ್ಲಿನ ಎಲ್ಲ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (CBI)ದಿಂದ ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಹೈಕೋರ್ಟ್ನಲ್ಲಿಯೂ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದರೆ ಇಷ್ಟು ಸಾಲದು. ಸರಿಯಾದ ತನಿಖೆ ನಡೆದು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.
ಕೆಪಿ ಎಸ್ ಸಿ ಮೂಲಕ ನಡೆಡೆದಿರುವ ವಿ��ಿಧ ನೇಮಕಾತಿ ಪ್ರಕ್ರಿಯೆಗಳು, ಪರೀಕ್ಷೆಗಳು, ಫಲಿತಾಂಶಗಳು ಮತ್ತು ಆಯ್ಕೆ ಪಟ್ಟಿಗಳ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಣದ ವ್ಯವಹಾರ ನಡೆದಿದೆ, ಮಧ್ಯವರ್ತಿಗಳ ಮೂಲಕ ಉದ್ಯೋಗ ಮಾರಾಟವಾಗಿದೆ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಮಗ್ರ ತನಿಖೆಯ ಮೂಲಕವೇ ಸತ್ಯಾಸತ್ಯತೆ ತಿಳಿಯಬೇಕು.
ವಿಶೇಷವಾಗಿ, ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಹುದ್ದೆಗಳನ್ನು ಮಾರಿಕೊಂಡ ಹಿನ್ನಲೆಯಲ್ಲೇ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ದೊರಕಬೇಕಿದ್ದ ನ್ಯಾಯ ದೊರೆಯಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಹಾಗೂ ಕೆಪಿಎಸ್ಸಿಯ ಗಮನ ಸೆಳೆದಿತ್ತು. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿಲ್ಲ. ಕನ್ನಡದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ಯುವಜನರ ಭವಿಷ್ಯವನ್ನು ಹಾಳು ಮಾಡಿದ ಎಲ್ಲ ನಿರ್ಧಾರಗಳ ಬಗ್ಗೆಯೂ ತನಿಖೆಯಾಗಬೇಕು.
ಕೆಪಿಎಸ್ಸಿ ಎನ್ನುವುದು ಸಾಮಾನ್ಯ ಸಂಸ್ಥೆಯಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾ���ುವ ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆಯ ಮೇಲೆಯೇ ಜನರ ವಿಶ್ವಾಸ ಕುಸಿದರೆ ಅದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೇವಲ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸಾಲದು. ಕಳೆದ ಹಲವು ವರ್ಷಗಳ ನೇಮಕಾತಿ ಪ್ರಕ್ರಿಯೆಗಳು, ಮೌಲ್ಯಮಾಪನ, ಮೀಸಲಾತಿ ಅನುಷ್ಠಾನ, ಅಂಕಗಳ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
ನಮ್ಮ ಹಕ್ಕೊತ್ತಾಯಗಳು:
1. ಕೆಪಿಎಸ್ಸಿಯ ಎಲ್ಲ ಪ್ರಮುಖ ನೇಮಕಾತಿ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು.
2. ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯ ಎಲ್ಲ ನೇಮಕಾತಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.
3. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತ್ಯೇಕ ನ್ಯಾಯಾಂಗ ಅಥವಾ ��ನ್ನತ ಮಟ್ಟದ ತನಿಖೆ ನಡೆಸಬೇಕು.
4. ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಇತರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
5. ತಪ್ಪು ಕಂಡುಬಂದ ನೇಮಕಾತಿಗಳನ್ನು ಮರುಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
6. ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಶಾಶ್ವತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು.
ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು. ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ನಿರಪರಾಧ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ರಾಜ್ಯದ ಯುವಜನರ ಹಿತದೃಷ್ಟಿಯಿಂದ ಮುಂದುವರಿಸಲಿದೆ.
– ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಕೆಪಿಎಸ್ಸಿ ಪಿಡಿಒ ನೇಮಕಾತಿಯಲ್ಲೂ ಅಕ್ರಮದ ಆರೋಪ; ತನಿಖೆಗೆ ಅಭ್ಯರ್ಥಿಗಳ ಒತ್ತಾಯ | Janamitra
https://t.co/KPJcgcaSVd
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ರಸ್ತೆಗೆ ಇಳಿದು ಪ್ರತಿಭಟಿಸುವ ಮುನ್ನ
@secretarykpsc ಕೂಡಲೇ @PDO ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಿರಿ ಹಾಗೂ ಪಾರದರ್ಶಕ ತನಿಖೆ ಮಾಡಿ
@DKShivakumar