ವಿಷಯ : 2025-26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರಾ ನೇಮಕ ಮಾಡಿಕೊಳ್ಳುವ ಕುರಿತು ನಡೆಸುವ ಹೋರಾಟಕ್ಕೆ ತಮ್ಮ ಅನುಮತಿ ಕೋರಿ. @drmcsudhakar@siddaramaiah
ಮಾನ್ಯರೇ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಯುಜಿಸಿ ಅರ್ಹ ಅಭ್ಯರ್ಥಿಗಳಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ವಂಚನೆಯಾಗುತ್ತಿದ್ದು ಅಭ್ಯರ್ಥಿಗಳು ನಿರಾಶಿತರಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ, ಮತ್ತು ಅವರ ಹಕ್ಕುಗಳನ್ನು ಪಡೆದುಕೊಳ್ಳಲು ಕಾನೂನಾತ್ಮಕ ಹೋರಾಟಗಳನ್ನು ಕೈಗೊಂಡಿರುತ್ತಾರೆ ಅದರಂತೆ ಅವರ ಕಾನೂನಾತ್ಮಕ ಹೋರಾಟದ ಪ್ರತಿಫಲವಾಗಿ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ 09/09/2025 ರಂದು ಡಬ್ಬಲ್ ಬೆಂಚ್ ನಲ್ಲಿ WA 1574/2024 ರಂತೆ ಮಧ್ಯಂತರ ಆದೇಶ ಬಂದಿರುತ್ತದೆ. ಅದರಂತೆಯೇ ದಿನಾಂಕ 20/09/2025 ರ ಒಳಗಾಗಿ ಆಯ್ಕೆ ಪ್ರಕ್ರಿಯೆ ಮುಗಿಸದಿದ್ದಲ್ಲಿ ದಿನಾಂಕ 23/09/2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉನ್ನತ ಶಿಕ್ಷಣ ಸಚಿವರಾದ MC ಸುದಾಕರ್ ರವರ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಮಟ್ಟದ ಹೋರಾಟವನ್ನು ಕೈಗೊಳ್ಳಲು ಇಚ್ಚಿಸಿರುತ್ತೇವೆ, ಇದಕ್ಕೆ ತಾವು ಅನುಮತಿ ನೀಡಬೇಕಾಗಿ ಕೋರಿಕೊಳ್ಳುತ್ತೇವೆ. @AKSSAofficial