FICCI ಆಯೋಜಿಸಿದ್ದ Eco- friendly mobility for the sustainable development ಸಂವಾದ ಕಾರ್ಯಕ್ರಮದಲ್ಲಿ ಟೊಯೋಟಾ ಸಂಸ್ಥೆಯ ಪ್ರತಿನಿಧಿಗಳಿಗೆ ಕಾರ್ಮಿಕರ ಹಾಗು ವ್ಯವಸ್ಥಾಪನೆಯ ಮಧ್ಯೆ ಇರುವ ಬಿಕ್ಕಟ್ಟನ್ನು ಶಾಂತಿಯುತವಾಗಿ ಆದಷ್ಟು ಬೇಗ ಬಗೆಹರಿಸಿಕೊಳ್ಳುವಂತೆ ತಿಳಿಹೇಳಲಾಯಿತು @ficci_india
ಪುಣ್ಯಾತ್ಮ ಯಾರು?
ನಿಮ್ಮಲ್ಲಿ ಪ್ರಮಾಣಿಕತೆ ಇದ್ದರೆ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ಕಾರ್ಮಿಕ ಪ್ರತಿನಿಧಿಗಳನ್ನು ನೇರವಾಗಿ ಚರ್ಚೆಗೆ ಕರೆಯಿರಿ. ನಮ್ಮ ಹಲವಾರು ಸಮಸ್ಯೆಗಳಿವೆ ಎಲ್ಲವನ್ನೂ ಮುಕ್ತವಾಗಿ ಚರ್ಚೆ ಮಾಡಿ. ಏಕಾಏಕಿ ಶೇಕಡ 25 ರಷ್ಟು ಕನ್ವೇಯರ್ ಸ್ಪೀಡ್ ಹೆಚ್ಚಿಸಿದಮೇಲೆ ಅಷ್ಟು ಮಾನವ ಸಂಪನ್ಮೂಲ ನೀಡಬೇಕಲ್ಲವೇ.
@JurnoAjit ಒಂದು ಪಕ್ಷ ಆಗದಿದ್ದರೆ ಅನ್ಯಾಯವನ್ನು ಮಾಡಬೇಡಿ. ಅವರೇ ಕಟ್ಟಿದ ಕಂಪನಿಯನ್ನು ಅವರೇ ಮುಚ್ಚಿಸುವ ಶಕ್ತಿ ದುಡಿಯುವ ಕೈಗಳಿಗಿದೆ. ಕೇವಲ 3500 ಕಾರ್ಮಿಕರ ಹೋರಾಟ ಮಾಡುತ್ತಿಲ್ಲ ಪರೋಕ್ಷವಾಗಿ ಅವರ ಕುಟುಂಬಗಳು ಆತ್ಮೀಯರು ಸಹ ಹೋರಾಟ ಮಾಡುತ್ತಿದ್ದಾರೆ. 15/16
ಅಜಿತ್ ಹನುಮಕ್ಕನವರೇ @JurnoAjit ನಿಮಗೆ ಗೊತ್ತಿರುವಷ್ಟು ದೊಡ್ಡವಳು ನಾನಲ್ಲ, ಆದರೂ ನನ್ನದೊಂದು ಮನವಿ ಸಮಾಜದಲ್ಲಿ ಒಂದು ಗೌರವಯುತ ಸ್ಥಾನದಲ್ಲಿ ಕೆಲಸ ಮಾಡುತ್ತಿರುವ ನೀವು ಹೀಗೆ ಸುಳ್ಳು ಮಾಹಿತಿಯನ್ನು ಕೊಡಬೇಡಿ ವಾಸ್ತವವನ್ನು ತಿಳಿದು ಸತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ. ಸಾಧ್ಯವಾದರೆ ನ್ಯಾಯದ ಪರ ನಿಲ್ಲಿ. 14/16
ಅದೇ ಕಂಪನಿಯ ಕಾರ್ಮಿಕರು ಬೆಂಕಿ ಹಚ್ಚಿದ್ದರು. ಆದರೆ ಕಂಪನಿಯ ಆಡಳಿತ ಮಂಡಳಿ ಖಾಸಗಿ ನೌಕರರನ್ನು ನೇರ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದರು ಪ್ರತಿಭಟನಾಕಾರರು ತಮ್ಮ ಬದುಕು ಕುಟುಂಬ ಬೀದಿಯಲ್ಲಿ ಇಟ್ಟರು ಯಾವುದೇ ಹಾನಿ ಮಾಡಿಲ್ಲ. ಆದರೂ ಯಾವುದೇ ಮಾಧ್ಯಮಗಳು ರಾಜಕೀಯ ಪಕ್ಷಗಳುಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. 13/16
ಕಾರ್ಮಿಕರು ಕಳೆದ 105ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ಯಾವುದೇ ಅಹಿತಕರ ವರ್ತನೆ ಮಾಡದೆ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ರಕ್ತದಾನ ಮೋದಿಗೆ ರಕ್ತದಲ್ಲಿ ಪತ್ರ ಬರೆಯುವುದರ ಮೂಲಕ ಮಾದರಿ ಹೋರಾಟ ನಡೆಸುತ್ತಿದ್ದಾರೆ. @JurnoAjit ತಮ್ಮ ಕಾರ್ಯಕ್ರಮದಲ್ಲಿ ಹೇಳಿದಂತೆ ಐಫೋನ್ ಐಪ್ಯಾಡ್ ತಯಾರಿಸುತ್ತಿದ್ದ ಕಂಪನಿಗೆ
12/16
6. VSS ಭೂತ:
ಕೆಲಸದ ಒತ್ತಡ ಹೆಚ್ಚು ಮಾಡಿ VSS ತೆಗೆದುಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಕಂಪನಿಯ ವಿರುದ್ಧ ಕಾಮೆಂಟ್ ಮಾಡಿದರೆ, ಸಮಸ್ಯೆಗಳನ್ನು ಹೇಳಿಕೊಂಡರೆ ಕ್ಷುಲ್ಲಕ ಕಾರಣಕ್ಕೆ ಅಮಾನತು ಮಾಡುತ್ತಾರೆ.
ಹೀಗೆ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಶೋಷಣೆಗೆ ಒಳಗಾದ ಸುಮಾರು 3500
11/16
5. ಸುವರ್ಣ ನ್ಯೂಸ್ ನಲ್ಲಿ ಪ್ರಸಾರವಾದ ಕಾಲಹರಣದ ಸುಳ್ಳು ಆರೋಪ:
ಒಬ್ಬ ಕಾರ್ಮಿಕ ಸರಿಸುಮಾರು 9 ಗಂಟೆಗಳ ಕಾಲ ಕಂಪನಿಯವ ಒಳಗೆ ಇರುತ್ತಾನೆ. ಈ ಸಮಯದಲ್ಲಿ ನಾನು ನನ್ನ ಪತಿಯನ್ನು ಏನೇ ತುರ್ತುಪರಿಸ್ಥಿತಿ ಇದ್ದರು ವಿರಾಮದ ಸಮಯದಲ್ಲಿ ಸಂಪರ್ಕಿಸಬೇಕು ಇಲ್ಲವಾದಲ್ಲಿ ಸಂಬಳ ಕಡಿತ ಮಾಡುವುದು ನೋಟಿಸ್ ನೀಡುವುದು ಮಾಡ್ತಾರೆ. 10/16
ಹಾಗೂ ಅವೈಜ್ಞಾನಿಕ ಅಧಿಕ ಕೆಲಸದೊತ್ತಡದಿಂದ ರೋಬೋಗಳಂತೆ ಕೆಲಸ ಮಾಡಿ joints pain, spinal cord splitdisc, ಮೂಳೆ ಸವೆತ ಹೀಗೆ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಎಲ್ಲಾ ರೀತಿಯ medical test ಮಾಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಆದರೆ ಈಗ ಚಿಕ್ಕವಯಸ್ಸಿನಲ್ಲಿಯೇ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. 9/16
ಹಾಗೂ ಕೆಲಸ ಮಾಡುವ ಸ್ಥಳದಲ್ಲೇ ಮಾಡಿಕೊಂಡ ಇಷ್ಟೋ ನಿದರ್ಶನಗಳಿವೆ.
4. ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಕಾರ್ಮಿಕರು:
ಅವೈಜ್ಞಾನಿಕ ಕೆಲಸದ ಅವಧಿಯಿಂದಾಗಿ ಸರಿಯಾಗಿ ಊಟ ನಿದ್ದೆ ಸಿಗದೆ ಆಸಿಡಿಟಿ,ಸ್ಟ್ರೆಸ್,ರಕ್ತದೊತ್ತಡ.ನೈಸರ್ಗಿಕ ಕರೆಗೆ ನಿರ್ಬಂಧ ಹೇರುವ ಕಾರಣದಿಂದ ನೀರು ಕುಡಿಯದೆdehydrationಹಾಗೂ ಕಿಡ್ನಿ ಸಮಸ್ಯೆಗಳು ಬಾಧಿಸುತ್ತಿವೆ.8/16
ಕೆಲಸದ ಅವಧಿಯಲ್ಲಿ ಎರಡು ಬಾರಿ ಹತ್ತು ನಿಮಿಷಗಳ ವಿರಾಮ ಹಾಗೂ ಊಟಕ್ಕೆ 30 ನಿಮಿಷಗಳ ವಿರಾಮವಿರುತ್ತದೆ ಇದನ್ನು ಹೊರತುಪಡಿಸಿ ಬೇರೆ ಅವಧಿಯಲ್ಲಿ ನೈಸರ್ಗಿಕ ಕರೆಗೆ ಹೋದಲ್ಲಿ ಸಂಬಳ ಕಡಿತಗೊಳಿಸುತ್ತಾರೆ. ಹಾಗಾಗಿ ಇಷ್ಟ ಕಾರ್ಮಿಕರು ನೀರು ಸರಿಯಾಗಿ ಕುಡಿಯದೆ ಅನೇಕ ರೀತಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 7/16