"ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ"
ಬಿಹಾರದ ಜನತೆ ದೇಶಕ್ಕೆ ಸ್ಪಷ್ಟವಾದ ಸಂದೇಶ ನೀಡಿದ್ದು, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರ ನಿದ್ದೆಗೆಡಿಸಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿಯುವುದಿಲ್ಲ. ಇನ್ನೊಂದು ಪಕ್ಷವನ್ನು ಲಘುವಾಗಿ ತೆಗಳುವುದು , ಅವಹೇಳನ ಮಾಡುವುದನ್ನು ಬಿಡಬೇಕು. ಇನ್ನಾದರು ಕಾಂಗ್ರೆಸ್ ಪಕ್ಷದ ನಾಯಕರು ಜನರ ಮುಂದೆ ತಗ್ಗಿ- ಬಗ್ಗಿ ನಡೆಯುವುದನ್ನು ಕಲಿಯಬೇಕು.
Before the launch of the #JanaRondige Janata Dal membership campaign organized in Hiriyur constituency of Chitradurga district, the leaders and party workers of the constituency warmly welcomed me with love.
ಸ್ನೇಹಿತನಿಗೆ ಸಹಾಯ ಮಾಡಿದರೆ, ಮುಂದಿನ ಬಾರಿ ಅವನು ಮತ್ತೆ ನಿನ್ನ ಬಳಿ ಬರುತ್ತಾನೆ. ನೀನು ಸಹಾಯ ಮಾಡದಿದ್ದರೆ, ಅವನು ನಿನ್ನ ಶತ್ರುವಾಗಿಬಿಡುತ್ತಾನೆ.
#FriendshipDay2025#FriendshipDay
ದೇಶದ ಹಿತ ಕಾಪಾಡಲು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೀರ ಯೋಧರಿಗೆ ಗಡಿ ಭದ್ರತಾ ಪಡೆ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು. ರಾಷ್ಟ್ರದ ರಕ್ಷಣೆಗೆ ಸತತ ಶ್ರಮಿಸುತ್ತಿರುವ ಎಲ್ಲ ಸೈನಿಕರಿಗೆ ಶತ ಶತ ನಮನಗಳು.
#BSFRaisingDay#ಗಡಿಭದ್ರತಾಪಡೆಸಂಸ್ಥಾಪನಾದಿನ
ಇಂದು ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ, ಹುಣಸೂರು ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ತಂಬಾಕು ಬೆಳೆಯುವ ರೈತರ ಜತೆ ಬಿಡದಿಯಲ್ಲಿ ಸಭೆ ನಡೆಸಲಾಯಿತು.
ಕಾಡಂಚಿನ ಬಹುತೇಕ ರೈತರು ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತರ ಸಮಸ್ಯೆಗಳನ್ನ ಆಲಿಸಿದೆ.
ಇದೇ ವೇಳೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಅವರು, ಹುಣಸೂರು ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಗೌಡ ಅವರು, ಪಿರಿಯಾಪಟ್ಟಣ ಮಾಜಿ ಶಾಸಕರಾದ ಶ್ರೀ ಕೆ. ಮಹದೇವ್ ಅವರು ಸೇರಿದಂತೆ ಅನೇಕ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
#mysore
ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರು ಸಮೀಪದ ಶಿಶಿರ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರ ಬಂಧುಗಳ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.
ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ. ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ
ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು.
ಇದೇ ಸಂದರ್ಭದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು,ಮಾಜಿ ಸಚಿವರಾದ ಸಾ.ರಾ ಮಹೇಶ್ ಅವರು, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷರಾದ ಶ್ರೀ ಜಯಮುತ್ತು ಅವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಆನಂದ್ ಸ್ವಾಮಿ ಅವರು, ಮುಖಂಡರಾದ ಶ್ರೀ ನಿಡಗೋಡಿ ಬಾಬು ಅವರು,ಬಿಜೆಪಿ ಮುಖಂಡರಾದ ಶ್ರೀ ರವೀಶ್ ಅವರು, ಶ್ರೀ ಹಾಪ್ ಕಾಮ್ಸ್ ದೇವರಾಜು ಅವರು,ಶ್ರೀ ಕುಕ್ಕೂರ ದೊಡ್ಡಿ ಜಯರಾಮ್ ಅವರು, ಶ್ರೀ ನಾಗರಾಜ್ ಅವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಖಂಡರು, ಅಕ್ಕ ತಂಗಿಯರು, ತಾಯಂದಿರು ಜತೆಯಲ್ಲಿದ್ದರು.
#ಚನ್ನಪಟ್ಟಣ
#channapattana