ಡಾ.ರಾಜ್ ನಟಿಸಿರುವ 34 ಚಿತ್ರಗಳು 9 ಭಾಷೆಗಳಲ್ಲಿ ಒಟ್ಟಾರೆ 58 ಬಾರಿ ರಿಮೇಕ್ ಆಗಿವೆ. ಒಟ್ಟು 34 ನಾಯಕ ನಟರು ರಾಜ್ ನಿರ್ವಹಿಸಿದ್ದ ಪಾತ್ರಗಳನ್ನು ವಿವಿಧ ಭಾಷೆಗಳಲ್ಲಿ ನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಒಬ್ಬ ನಟನ ಚಿತ್ರಗಳು 50ಕ್ಕೂ ಹೆಚ್ಚು ಬಾರಿ ರಿಮೇಕ್ ಆಗಿರುವುದು, 9 ಭಾಷೆಗಳಲ್ಲಿ ರಿಮೇಕ್ ಆಗಿ ತೆರೆಕಂಡಿರುವುದು ಡಾ.ರಾಜ್ ಹೆಗ್ಗಳಿಕೆ.
ಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಂರ ನಟನೆಯ ಮುದ್ದಿನ ಮಾವ ಚಿತ್ರದಲ್ಲಿ ಬಾಲಸುಬ್ರಹ್ಮಣ್ಯಂರ ಪಾತ್ರದ ಹಾಡುಗಳಿಗೆ ಹಿನ್ನೆಲೆ ಗಾಯನ ಮಾಡಿದ ಹೆಗ್ಗಳಿಕೆ ಡಾ ರಾಜ್ ರದು. ಅಸಂಖ್ಯಾತ ಭಕ್ತಿ ಗೀತೆಗಳನ್ನು ಜನಸಾಮಾನ್ಯರಿಗೆ ಹಾಡಿದ ಕೀರ್ತಿ ರಾಜ್ ರದು. #DrRajkumarBirthanniversary
1974 ರಿಂದ ರಾಜ್ ಕುಮಾರ್ ಹಾಡಲು ಶುರು ಮಾಡಿದರು. ತಮ್ಮ ಪಾತ್ರಗಳ ಹಾಡನ್ನು ತಾವೇ ಹಾಡುವುದರ ಜೊತೆಗೆ ಬೇರೆ ನಟರಿಗೆ ಹಿನ್ನಲೆ ಗಾಯಕರಾಗಿ ಹಾಡುತ್ತಿದ್ದರು. ಜೀವನ ಚೈತ್ರ ಚಿತ್ರದ #ನಾದಮಯ ಹಾಡಿಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು..
30ರ ಜುಲೈ 2000 ದಂದು ಕಾಡುಗಳ್ಳ ವೀರಪ್ಪನ್ ನಿಂದ ಡಾ ರಾಜ್ ಕುಮಾರ್ ರವರ ಅಪಹರಣ. ನವೆಂಬರ್ 15ರಂದು ಬಿಡುಗಡೆ. 108 ದಿನಗಳ ವೀರಪ್ಪನ್ ಬಂಧನದಲ್ಲಿ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ರಾಜ್ ಕುಮಾರ್ ಇದ್ದದ್ದು ಅವರ ಜೀವನದ ಪ್ರಮುಖ ಘಟನೆ. #DrRajkumarBirthanniversary
ಕನ್ನಡ ನಾಡು, ಇತಿಹಾಸ, ಪರಂಪರೆ, ಸಂಸ್ಕೃತಿ, ಭಾಷೆ,ನೆಲ-ಜಲದ ಅಭಿಮಾನವನ್ನು ಸಾಮಾನ್ಯ ಜನರಿಗೆ, ಪ್ರಪಂಚಕ್ಕೆ ಚಲನಚಿತ್ರಗಳ ಮೂಲಕ ಪರಿಚಯಿಸಿದ ಪುರುಷೋತ್ತಮ ಡಾ ರಾಜ್. ಜನ್ಮದಿನದ ಸವಿನೆನಪುಗಳು. #DrRajkumarBirthanniversary
@MBPatil@BSYBJP ಹೀಗೆ ಜಾತಿಯ ಮೂಲಕ ವಿಭಜನೆ ಮಾತುಗಳಾಡುವವರು ನಿಜವಾಗಿಯೂ ಮಹಾತ್ಮ ಗಾಂಧಿ ಕಟ್ಟಿದ ಪಕ್ಷದವರಾ? ಎಂಬ ಸಂದೇಹ ಬರುತ್ತಿದೆ. ಜಾತಿ ಮೂಲಕ ನೋಡಿದ ತಕ್ಷಣ ನಿಮ್ಮ ಮನುಷ್ಯತನವೇ ಬೀದಿಗೆ ಬಂದಿರುತ್ತದೆ.
@JagadishShettar ನೀವೊಬ್ಬ ಶಿಸ್ತಿನ ನೇತಾರ ಎಂದೇ ಭಾವಿಸಲಾಗಿತ್ತು. ಪಕ್ಷದ ಎಲ್ಲ ರೀತಿಯ ಜವಾಬ್ದಾರಿ ನಿರ್ವಹಿಸಿ ಈಗ ಅಗೌರವದ ನಡೆ ತುಳಿದಿರಿ. ಅಧಿಕಾರದ ಆಸೆ ಎಂತಹವರನ್ನೂ ಅಂಧಕಾರಕ್ಕೆ ತಳ್ಳುತ್ತದೆ ಎಂಬುದನ್ನು ನೀವು ನಿರೂಪಿಸಿಬಿಟ್ಟಿರಿ. ಯಡ್ಯೂರಪ್ಪ, ಈಶ್ವರಪ್ಪ, ಹಾಲಾಡಿ ತುಂಬಾ ಗೌರವಂತರೆನಿಸಿಕೊಂಡರು. ಸಂಘದ ಕೂಸನ್ನು ಬಿಡಬಾರದಾಗಿತ್ತು.