ನಮ್ಮ ಮೆಟ್ರೋ ಮಾದರಿಯಲ್ಲಿ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲೂ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.
ಶಕ್ತಿ ಗ್ಯಾರಂಟಿ ಯೋಜನೆಯ ಮಹಿಳಾ ಫಲಾನುಭವಿಗಳ ಜತೆಗೆ ಪುರುಷ ಪ್ರಯಾಣಿಕರಿಗೂ ಕಾರ್ಡ್ ನೀಡಲಾಗುವುದು.
ಆಪ್ ಅಥವಾ ಕೌಂಟರ್ ಗಳಲ್ಲಿ ಕಾರ್ಡ್ ರೀಚಾರ್ಜ್ ಮಾಡಿ, ಕ್ಯಾಶ್ ಲೆಸ್ ಪ್ರಯಾಣ ಮಾಡಬಹುದು.
ಶಕ್ತಿ ಯೋಜನೆಯ ದುರುಪಯೋಗ ತಡೆಗೆ ದಿಟ್ಟ ಹೆಜ್ಜೆ
ಬಡವರ ಹಕ್ಕಿನ ಪಡಿತರ ಅಕ್ಕಿಯ ಕಳ್ಳಸಾಗಣೆ ವಿರುದ್ಧ ರಾಜ್ಯಾದ್ಯಂತ ಕಠಿಣ ಕಾರ್ಯಾಚರಣೆ ನಡೆಸಿ, ₹4.75 ಕೋಟಿ ಮೌಲ್ಯದ 564 ಮೆಟ್ರಿಕ್ ಟನ್ಗೂ ಅಧಿಕ ಅಕ್ಕಿ ಹಾಗೂ 24 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. 6 ಪ್ರಕರಣಗಳನ್ನು ದಾಖಲಿಸಿ, ಕರ್ತವ್ಯಲೋಪದ ಆರೋಪದಡಿ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಬಡವರ ಅನ್ನವನ್ನು ಕಬಳಿಸುವವರಾಗಲಿ, ಅಕ್ರಮಕ್ಕೆ ಸಹಕರಿಸುವ ಅಧಿಕಾರಿಗಳಾಗಲಿ ಯಾರನ್ನೂ ಬಿಡುವುದಿಲ್ಲ. ಪಡಿತರ ಅಕ್ಕಿಯ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟುವವರೆಗೆ ನಮ್ಮ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ.
#PSDRation #Ride #Belagavi #statewideInspection
ಆರೋಗ್ಯಕರ ಸಮಾಜಕ್ಕೆ ಪರಿಶುದ್ಧ ಆಹಾರವೇ ಗುಟ್ಟು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಐಸ್ ಕ್ರೀಮ್ ಘಟಕಗಳ ಮೇಲೆ ದಾಳಿ ಮಾಡಿದ್ದು, 70 ಆಹಾರ ಮಾದರಿ ಸಂಗ್ರಹಿಸಿದೆ. ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ ಮಾಡಿ ಕ್ರಮ ಕೈಗೊಂಡಿದೆ.
ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳಿಗೆ ಬಳಸುವ ಜೀವ ರಕ್ಷಕ ಔಷಧಿಗಳ ಅತಿಯಾದ ಬೆಲೆ ಮತ್ತು ರೋಗಿಗಳ ಸುಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ಎತ್ತಿರುವ ಗಂಭೀರ ಪ್ರಶ್ನೆಗಳನ್ನು ಹಾಗೂ ನೀಡಿರುವ ನಿರ್ದೇಶನಗಳನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. "ಜೀವ ರಕ್ಷಕ ಔಷಧಿಗಳ ವಿಷಯದಲ್ಲಿ ಅತಿಯಾದ ದರಗಳು ಮತ್ತು ಭಾರಿ ಬೆಲೆ ವ್ಯತ್ಯಾಸ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ" ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ.
ಈ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರವು ಮೊದಲಿನಿಂದಲೂ ನಿರಂತರ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ನಡೆಸಿದ ಪರಿಶೀಲನೆಯ ವೇಳೆ 253 ಔಷಧಿಗಳ ಖರೀದಿ ವೆಚ್ಚ (Landing Cost) ಮತ್ತು ರೋಗಿಗಳಿಗೆ ವಿಧಿಸುವ MRP ನಡುವೆ ಭಾರಿ ವ್ಯತ್ಯಾಸ ಇರುವುದು ನಮ್ಮ ಗಮನಕ್ಕೆ ಬಂದಿತು. ಕೂಡಲೇ ನಾವು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಅವರ ಸೂಚನೆಯಂತೆ ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು, ತುರ್ತು ರಾಷ್ಟ್ರೀಯ ಕ್ರಮಕ್ಕೆ ಮನವಿ ಮಾಡಿದ್ದೆವು.
ನಮ್ಮ ಸರ್ಕಾರದ ಈ ಗಂಭೀರ ಪ್ರಯತ್ನಕ್ಕೆ ಸ್ಪಂದಿಸಿ, ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು (NPPA) ಕ್ಯಾನ್ಸರ್ ಔಷಧಿಗಳ ವ್ಯಾಪಾರ ಲಾಭಾಂಶವನ್ನು (Trade Margin) ಗರಿಷ್ಠ ಶೇ.30ಕ್ಕೆ ಮಿತಿಗೊಳಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ದೇಶಾದ್ಯಂತ ರೋಗಿಗಳಿಗೆ ವಾರ್ಷಿಕ ಸುಮಾರು ₹2,500 ಕೋಟಿ ಉಳಿತಾಯವಾಗಲಿದ್ದು, ಹಲವು ಔಷಧಿಗಳ ಬೆಲೆ ಶೇ.20 ರಿಂದ 70ರಷ್ಟು ಇಳಿಕೆಯಾಗಲಿದೆ. ಇದು ಲಕ್ಷಾಂತರ ಬಡ ಕ್ಯಾನ್ಸರ್ ರೋಗಿಗಳಿಗೆ ದೊರೆತಿರುವ ದೊಡ್ಡ ನೆಮ್ಮದಿ.
ಈ ಕಾರಣದಿಂದ ಇಂದು ಕರ್ನಾಟಕ ರಾಜ್ಯಕ್ಕೆ ಮತ್ತು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಐತಿಹಾಸಿಕ ದಿನ.
🔷ಪ್ರಮುಖ ತೀರ್ಮಾನಗಳು:
🔹ಬಿಲ್ಗಳಲ್ಲಿ ಪಾರದರ್ಶಕತೆ ಕಡ್ಡಾಯ: ಆಸ್ಪತ್ರೆಗಳು ಮತ್ತು ಔಷಧಾಲಯಗಳು ರೋಗಿಗಳಿಗೆ ನೀಡುವ ಬಿಲ್ಗಳಲ್ಲಿ ಔಷಧಿಯ ಖರೀದಿ ವೆಚ್ಚ (Landing Cost) ಮತ್ತು ಮಾರಾಟ ಬೆಲೆ (MRP) ಎರಡನ್ನೂ ಕಡ್ಡಾಯವಾಗಿ ನಮೂದಿಸುವಂತೆ ನಮ್ಮ ಇಲಾಖೆ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಇದನ್ನು ನವೆಂಬರ್ 1ರಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು.
🔹ಹೃದಯ ಹಾಗೂ ಕಿಡ್ನಿ ಕಾಯಿಲೆಗಳ ಚಿಕಿತ್ಸಾ ವೆಚ್ಚದ ಪರಿಶೀಲನೆ: ಕ್ಯಾನ್ಸರ್ ಔಷಧಿಗಳ ಬೆಲೆ ನಿಯಂತ್ರಣದಂತೆಯೇ, ಮುಂಬರುವ ದಿನಗಳಲ್ಲಿ ಹೃದಯ (ಹಾರ್ಟ್) ಮತ್ತು ಮೂತ್ರಪಿಂಡ (ಕಿಡ್ನಿ) ಕಾಯಿಲೆಗಳಿಗೆ ಬಳಸುವ ದುಬಾರಿ ಔಷಧಿಗಳು ಹಾಗೂ ಚಿಕಿತ್ಸಾ ವೆಚ್ಚವನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ಅತಿಯಾದ ಬೆಲೆಗೆ ಔಷಧಿ ಮಾರಾಟ ಮಾಡಿ, ಚಿಕಿತ್ಸಾ ವೆಚ್ಚ ಹೆಚ್ಚಿಸಿ ರೋಗಿಗಳನ್ನು ಸುಲಿಗೆ ಮಾಡುತ್ತಿರುವುದು ಕಂಡುಬಂದಲ್ಲಿ, ಗಂಭೀರ ತನಿಖೆ ನಡೆಸಿ ಇದೇ ಮಾದರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಹಾಗೂ ಅತಿಯಾದ ಲಾಭಕ್ಕಾಗಿ ರೋಗಿಗಳನ್ನು ಸುಲಿಗೆ ಮಾಡುವ ಯಾವುದೇ ಅನ್ಯಾಯದ ಕ್ರಮವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಬಡವರ ಮತ್ತು ರೋಗಿಗಳ ಪರವಾಗಿ ಇಂತಹ ಜನಪರ ಕ್ರಮಗಳನ್ನು ನಾವು ಮುಂದೆಯೂ ಮುಂದುವರಿಸುತ್ತೇವೆ.
ಬಹುಮುಖ್ಯವಾಗಿ, ರೋಗಿಗಳ ಮತ್ತು ಅವರ ಕುಟುಂಬಸ್ಥರ ನೋವನ್ನು ಅರಿತು, ಔಷಧ ಮಾರುಕಟ್ಟೆಯ ಈ ಜಾಲವನ್ನು ಪತ್ತೆಹಚ್ಚಿ ನಮ್ಮ ಗಮನಕ್ಕೆ ತಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅವರಿಗೆ ನಮ್ಮ ವಿಶೇಷ ಅಭಿನಂದನೆಗಳು. ಜೊತೆಗೆ, ಈ ಕ್ರಮವನ್ನು ವ್ಯಾಪಕವಾಗಿ ಸಾರ್ವಜನಿಕರಿಗೆ ತಲುಪಿಸಿ ಜಾಗೃತಿ ಮೂಡಿಸಿದ ಎಲ್ಲ ಮಾಧ್ಯಮ ಮಿತ್ರರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಬೆಂಗಳೂರು ಮಹಾನಗರ ಪ್ರದೇಶ (BMRDA)ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಮುಂದಿನ 15 ವರ್ಷಗಳ ನೀಲನಕ್ಷೆ ರೂಪಿಸಿದೆ.
2037ರ ವೇಳೆಗೆ ಹೆಚ್ಚುವರಿ 312 ಕಿಲೋಮೀಟರ್ ಮೆಟ್ರೋ ಸಂಪರ್ಕ ವಿಸ್ತರಣೆ, 72 ಕಿ.ಮೀ. ಸಬ್ ಅರ್ಬನ್ ರೈಲು, 210 ಕಿ.ಮೀ. ಹೊರವರ್ತುಲ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ.
ಸುಗಮ ಸಂಚಾರ, ಸಮರ್ಪಕ ನೀರು, ಕೈಗೆಟಕುವ ವಸತಿ, ಉದ್ಯೋಗ ಸೃಷ್ಟಿಯ ಗುರಿ ಸಾಧನೆಗೆ ನಮ್ಮ ಮೊದಲ ಆದ್ಯತೆ
A citywide enforcement drive across Bengaluru checked 1,530 establishments in a single operation, covering 522 hotels, 893 pubs and bars, 62 dance bars and 53 recreation clubs.
The drive resulted in nearly 300 petty cases and over 350 COTPA cases, along with action under the Excise Act and Karnataka Police Act, besides noise-pollution cases and other FIRs.
We will ensure consistent enforcement across the city so that establishments operate responsibly and within the law. These drives will continue, with a clear focus on public safety, compliance with licensing conditions, neighbourhood nuisance and other violations affecting citizens.
ಪ್ರಜಾಸೇವೆಯಡಿ ಸಾರ್ವಜನಿಕರು ಅಹವಾಲು/ ಅರ್ಜಿ ಸಲ್ಲಿಸುವುದನ್ನು ಕಾಂಗ್ರೆಸ್ ಸರ್ಕಾರ ಇನ್ನಷ್ಟು ಸುಲಭಗೊಳಿಸುತ್ತಿದೆ.
ʻಭಾಷಿಣಿ ರಾಜ್ಯಂ ಎಐʼ ತಂತ್ರಜ್ಞಾನದ ಮೂಲಕ ನಿಮ್ಮ ಮಾತೃಭಾಷೆಯಲ್ಲೇ ಧ್ವನಿ ಅಥವಾ ವಿಡಿಯೋ ಸಂದೇಶ ಕಳುಹಿಸಿ ಸರ್ಕಾರಿ ಸೇವೆ ಪಡೆಯಬಹುದು.
#ಬೆಂಗಳೂರುಜಾತ್ರೆ
ಬೆಂಗಳೂರು ನಗರದ ಸಂಸ್ಕೃತಿ, ಪರಂಪರೆ, ಕಲೆ, ಆಹಾರ ಮತ್ತು ವೈವಿಧ್ಯಮಯ ಜೀವನಶೈಲಿಯ ಸಂಭ್ರಮ.
ಒಂದು ನಗರ. 10 ದಿನ. 1,000ಕ್ಕೂ ಹೆಚ್ಚು ಕಾರ್ಯಕ್ರಮಗಳು!
ಡಿಸೆಂಬರ್ 4 ರಿಂದ 13 ರವರೆಗೆ!
ಬೆಂಗಳೂರು ಜಾತ್ರೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲು ಆಸಕ್ತಿ ಹೊಂದಿರುವ ಆಯೋಜಕರು, ಸಂಸ್ಥೆಗಳು ಹಾಗೂ ಕಲಾವಿದರು ದಯವಿಟ್ಟು https://t.co/jybkf0S4vL ನಲ್ಲಿ ನೋಂದಾಯಿಸಿಕೊಳ್ಳಿ
1/2
ಜನಸೇವೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಮೈಸೂರಿನ ಪಿರಿಯಾಪಟ್ಟಣದಲ್ಲಿ ಪ್ರಜಾಸೇವಾ ಇಲಾಖೆ ಹಮ್ಮಿಕೊಂಡಿದ್ದ 'ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ದೃಶ್ಯಗಳು.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.
ಕಾಂಗ್ರೆಸ್ ಸರ್ಕಾರದ K-VLSI ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಡಿ ಬೆಂಗಳೂರಿನ MINRO ಮೂಲಕ 151 ಎಂಜಿನಿಯರಿಂಗ್ ಪದವೀಧರರಿಗೆ ಸೆಮಿಕಂಡಕ್ಟರ್ ಹಾಗೂ VLSI ತಂತ್ರಜ್ಞಾನದಲ್ಲಿ ಉದ್ಯಮಾಧಾರಿತ ತರಬೇತಿ ನೀಡಲಾಗಿದೆ.
ರಾಜ್ಯವನ್ನು ಜಾಗತಿಕ ಸೆಮಿಕಂಡಕ್ಟರ್ ಹಬ್ ಆಗಿ ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ.
ಯುವಕರಿಗೆ ಕೌಶಲ್ಯ ತರಬೇತಿ ಜತೆಗೆ ನೇಮಕಾತಿ ನಮ್ಮ ಆದ್ಯತೆ
ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಕಾಂಗ್ರೆಸ್ ಸರ್ಕಾರ ಮತ್ತೊಂದು ವೇದಿಕೆ ಸೃಷ್ಟಿಸಿದೆ.
ಜಾಗತಿಕ ರೆನೈಸಾನ್ಸ್ ಸೋಲಾರ್ ಸಂಸ್ಥೆ, ತುಮಕೂರಿನ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ (CBIC) ಪ್ರದೇಶದಲ್ಲಿ 5 GW ಸಾಮರ್ಥ್ಯದ ಸೋಲಾರ್ ಇಂಗುಟ್ (Ingot) ಮತ್ತು ವೇಫರ್ (Wafer) ತಯಾರಿಕಾ ಘಟಕ ಸ್ಥಾಪನೆಗೆ 5 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದೆ.
ಸೋಲಾರ್ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಕರ್ನಾಟಕಕ್ಕೆ ಈ ಹೂಡಿಕೆ ಇನ್ನಷ್ಟು ವೇಗ ಹಾಗೂ ಶಕ್ತಿ ತುಂಬಲಿದೆ.
ಏಷ್ಯನ್ ಗೇಮ್ಸ್ ಆರ್ಚರಿಯ ರೀಕರ್ವ್ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಾದ ಅಂಕಿತಾ ಭಕತ್ , ಕೀರ್ತಿ ಶರ್ಮಾ ಹಾಗೂ ಕುಮ್ಕುಮ್ ಮೊಹೊದ್ ಅವರಿಗೆ ಹಾರ್ದಿಕ ಅಭಿನಂದನೆಗಳು
ಆಹಾರ ಸುರಕ್ಷತೆ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಆನ್ಲೈನ್ ಫುಡ್ ಡೆಲಿವರಿ ಗೋದಾಮುಗಳು ಹಾಗೂ ನಕಲಿ ಕ್ವಿಕ್ ಕಾಮರ್ಸ್ ಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ.
ಇದುವರೆಗೆ 236 E-commerce ಗೋದಾಮುಗಳ ಪರಿಶೀಲನೆ ನಡೆಸಲಾಗಿದ್ದು, ನಿಯಮ ಉಲ್ಲಂಘಿಸಿದ 44 ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಸುರಕ್ಷಿತ ಆಹಾರ ಮತ್ತು ಗ್ರಾಹಕರ ಹಿತವೇ ನಮ್ಮ ಧ್ಯೇಯ
ಜನರ ಸಮಸ್ಯೆಗಳಿಗೆ ಸ್ಪಂದಿಸುವುದು… ನನ್ನ ಮೊದಲ ಆದ್ಯತೆ! ಸಿಂಧನೂರಿನ ವಿಧಾನ ಪರಿಷತ್ ಶಾಸಕರ (ನನ್ನ) ಕಚೇರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಪ್ರತಿಯೊಬ್ಬರ ಸಮಸ್ಯೆಯನ್ನು ವಿಚಾರಿಸಲಾಯಿತು.
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
#BasanagoudaBadarli #MLC #Sindhanur #ಜನಸೇವೆ #ಜನಸ್ಪಂದನೆ #ಸಿಂಧನೂರು