ಇಂದು ದಿನಾಂಕ 21-06-2026 ಮೈಸೂರಿನಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮಗಳು ಮತ್ತು ಸಂಘಟನೆಯ ಬಗ್ಗೆ ಗಂಭೀರ ಚರ್ಚೆಯನ್ನು ನಡೆಸಲಾಯಿತು.
ಸಭೆಯನ್ನು ಆಯೋಜಿಸಲು ಸಹಕರಿಸಿದ ಮೈಸೂರು ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಧನ್ಯವಾದಗಳು.🙏
ರೈತರಿಗೆ ಸಮರ್ಪಕ ರಸಗೊಬ್ಬರ ಮತ್ತು ಬೀಜಗಳನ್ನು ವಿತರಿಸುವಲ್ಲಿ ವಿಪಲವಾದ ರಾಜ್ಯ ಸರ್ಕಾರದ ವಿರುದ್ಧ ಪತ್ರಿಕಾ ಘೋಷ್ಠಿಯನ್ನು ಮಾಡಿ ಜಿಲ್ಲೆಯ ರೈತರ ಧ್ವನಿಯಾಗಿ ಕೆ ಆರ್ ಎಸ್ ಪಕ್ಷವು ಕೆಲಸ ಮಾಡುತ್ತದೆ. ರೈತರು ಯಾವುದೇ ಕಾರಣಕ್ಕೂ ಅಂಜುವ ಅವಶ್ಯಕತೆ ಇಲ್ಲಾ ಎಂದು ವಿಜಯಪುರದ ಕೆ ಆರ್ ಎಸ್ ಪಕ್ಷದ ತಂಡವು ಭರವಸೆಯನ್ನು ನೀಡಿತು.
#ವಿಜಯಪುರ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಮಟ್ಟದ 4ನೇ ಬೃಹತ್ ರೈತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದೆ. ರಾಜ್ಯದ ವಿವಿಧ ಮೂಲೆಯಿಂದ ಹರಿದು ಬಂದ ರೈತ ಮಿತ್ರರರ ಪರಿಚಯವಾಯಿತು. ಇದೇ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಹಲವು ಸೈನಿಕರಿಗೆ ಸನ್ಮಾನಿಸಿ ಗೌರವಿಸಿದರು.
#ದರ್ಬಾರ್ ಸಭಾಂಗಣ
#ವಿಜಯಪುರ
08-05-2026
ಬಿದಿನಾಯಿಗಳನ್ನು Animal Birth Control (Animals)Rules ಪ್ರಕಾರ “ನಾಯಿಗಳನ್ನು ಕೊಲ್ಲದೇ, ಆಪರೇಶನ್ ಮತ್ತು ಲಸಿಕೆ ಮೂಲಕ ನಿಯಂತ್ರಣ” ಮಾಡುವಲ್ಲಿ ವಿಜಯಪುರ ಮಹಾನಗರ ಪಾಲಿಕೆಯು ಎಡವಿದೆ ಅದರಿಂದಲೇ ಇಂದು ಬೀದಿ ನಾಯಿಗಳ ಹಾವಳಿಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಾನಗರ ಪಾಲಿಕೆಯು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುಬೇಕು.
#ವಿಜಯಪುರ
ಶರಣ ಸಾಹಿತಿಗಳು ಮತ್ತು ವಿಜಯಪುರ ನಗರದ Dysp ಆಗಿರುವ ಬಸವರಾಜ ಯಲಗಾರ ಶರಣರು ಇಂದು ಕರ್ನಾಟಕ ಲೋಕಾಯುಕ್ತ ಇಲಾಖೆಗೆ ವರ್ಗಾವಣೆಗೊಂಡಿರುವುದರಿಂದಾಗಿ ಅವರನ್ನು ಭೇಟಿಯಾಗಿ ಇಷ್ಟು ದಿನಗಳ ಕಾಲ ಜಿಲ್ಲೆಯ ಹಿತಕ್ಕಾಗಿ ತಾವು ಸಲ್ಲಿಸಿದ ಪ್ರಾಮಾಣಿಕ ಸೇವೆಯನ್ನು ಸ್ಮರಸಿ ಶುಭ ಹಾರೈಕೆಗಳನ್ನು ತಿಳಿಸಿ ಬಂದೆನು.
#ವಿಜಯಪುರ
ಶ್ರಮಿಕ ವರ್ಗದವರ ಬಳಿಯಲ್ಲಿ ಭಿಕ್ಷೆ ಎತ್ತಿ ಸರ್ಕಾರಿ ವೈದ್ಯರಿಗೆ ನೀಡುವುದರ ಮೂಲಕ ಅವರ ಲಂಚದ ಆಸೆಯನ್ನು ಈಡೇರಿಸೋಣ ಅನ್ನುವ ಉದ್ದೇಶದಿಂದ ಕೆ ಆರ್ ಎಸ್ ಪಕ್ಷವು #ವೈದ್ಯರಿಗಾಗಿ_ಭಿಕ್ಷೆ ಎನ್ನುವ ವಿನುತನ ಹೋರಾಟವನ್ನು ಮಾಡಿತ್ತು.
#ಬಾಗಲಕೋಟ
#ಕನ್ನಡ-ಕನ್ನಡಿಗ-ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕೊತ್ತಾಯಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಿಗರ ಆಗ್ರಹ ಸಮಾವೇಶಕ್ಕೆ ತಮ್ಮೆಲ್ಲರಿಗೂ ಆಮಂತ್ರಣ ಕೋರಿ. ಬನ್ನಿ ಭಾಗವಹಿಸಿ. ಸಮಯ :ಬೆಳಗ್ಗೆ 10 ಗಂಟೆಗೆ ದಿನಾಂಕ: 22.11.2025 ಸ್ಥಳ: ಸ್ವಾತಂತ್ರ್ಯ ಉದ್ಯಾನವನ ಬೆಂಗಳೂರು.
ನಾನು ಹೊರಟೆ. ನೀವೂ ಬನ್ನಿ
#ಕನ್ನಡ-ಕನ್ನಡಿಗ-ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕೊತ್ತಾಯಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಿಗರ ಆಗ್ರಹ ಸಮಾವೇಶಕ್ಕೆ ತಮ್ಮೆಲ್ಲರಿಗೂ ಆಮಂತ್ರಣ ಕೋರಿ. ಬನ್ನಿ ಭಾಗವಹಿಸಿ. ಸಮಯ :ಬೆಳಗ್ಗೆ 10 ಗಂಟೆಗೆ ದಿನಾಂಕ: 22.11.2025 ಸ್ಥಳ: ಸ್ವಾತಂತ್ರ್ಯ ಉದ್ಯಾನವನ ಬೆಂಗಳೂರು.
ನಾನು ಹೊರಟೆ. ನೀವೂ ಬನ್ನಿ.
#ಉಡಾಳ
ಥಿಯೇಟರಗೆ ಹೋಗಿ ಸಿನಿಮಾ ನೋಡಿ ಅದೆಷ್ಟೋ ವರ್ಷಗಳು ಕಳೆದಿದ್ದವು. ಆದರೆ ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲಿ, ಮನರಂಜನೆ ಭರಿತವಾಗಿ, ಉತ್ತರ ಕರ್ನಾಟಕದ ಕಲಾವಿದರೇ ಹೆಚ್ಚಾಗಿ ಅಭಿನಯಿಸಿರುವ #ಉಡಾಳ ಸಿನಿಮಾ ತಂಡದ ಆಹ್ವಾನದ ಮೇರೆಗೆ ಥಿಯೇಟರಿಗೆ ಹೋಗಿ ಸಿನಿಮಾ ನೋಡಿ ಕಲಾವಿದರಿಗೆ ಶುಭಾಶಯಗಳು ತಿಳಿಸಿ ಬಂದೆ💐💐
ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ದೇವರ ಹಿಪ್ಪರಗಿ ಪಟ್ಟಣದಲ್ಲಿ ಇಂದು ರೈತರು ನಡೇಸಿದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದೆ. ಅನ್ನದಾತನ ಅಳಲು ಕೇಳದ ಜನಪ್ರತಿನಿದಿನಗಳು ಮತ್ತು ಸರ್ಕಾರಕ್ಕೆ ನನ್ನನೊಂದು ಧಿಕ್ಕಾರವಿರಲಿ.
#KRSParty#ದೇವರಹಿಪ್ಪರಗಿ