ಕೆಆರ್ಎಸ್ ಪಕ್ಷದ ಪದಾಧಿಕಾರಿಗಳಿಗೆ ಕೆಆರ್ಎಸ್ ಪಕ್ಷದ ಗೌರವಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ಮಾರ್ಗದರ್ಶನದಲ್ಲಿ 2 ದಿನದ ನಾಯಕತ್ವ ಶಿಬಿರಕ್ಕೆ ಚಾಲನೆ...
13.06.2026 https://t.co/R11QIi1ya3
ನಮ್ಮ ಅಣ್ತಮ್ಮ ಪೊಲೀಸರು ಒಂದೆರಡು ದಿನದಲ್ಲಿ ನನ್ನನ್ನು #ಎಳೆದುಕೊಂಡುಹೋಗಿ ಬಂಧಿಸಿದರೆ ಯಾರೂ ಆಶ್ಚರ್ಯ ಪಡಬೇಡಿ. ಅಂತಹ ಘಟನೆಗೆ ಕಾರಣವಾಗಬಹುದಾದ ಪ್ರಸಂಗ ನೆನ್ನೆ ನಡೆದಿದೆ.
ಪ್ರಕರಣ ಸೂಕ್ಷ್ಮವಾಗಿರುವುದರಿಂದ ಮತ್ತು ನಾವು ಮಾಡುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟವೊಂದರ ಪ್ರಕರಣಕ್ಕೆ ಹಿನ್ನಡೆ ಆಗಬಹುದಾದ ಸಾಧ್ಯತೆ ಇರುವುದರಿಂದ ನಾನು ಇಲ್ಲಿ ಸದರಿ ಪ್ರಕರಣದ ಕುರಿತು ಯಾವುದೇ ವಿವರಗಳನ್ನು ನೀಡುತ್ತಿಲ್ಲ.
ಆದರೆ ಈ ಪ್ರಕರಣಕ್ಕೆ ಕಾರಣವಾಗಿರುವ ದುರಹಂಕಾರಿ ಅಧಿಕಾರಿಗೆ ಮತ್ತು ಆತನ ಮಾತು ಕೇಳಿ ಸುಳ್ಳನ್ನು ಬೊಗಳಿ ತಪ್ಪು ಮಾಡಿರುವ ಆತನ ಅಧೀನ (ಗುಲಾಮ) ಅಧಿಕಾರಿಗೆ ನ್ಯಾಯದ ಪಾಠ ಮಾಡಲು ಬೇಕಾದ ಎಲ್ಲಾ ಸಾಕ್ಷ್ಯಗಳೂ ನಮ್ಮಲ್ಲಿವೆ. ಜನರ ಸಂಬಳಕ್ಕೆ ಕೂಲಿಗಿರುವವನಿಗೆ ಅಷ್ಟು ದುರಹಂಕಾರ ಇದ್ದರೆ ಅವನು ಸಾಮಾನ್ಯ ಜನರನ್ನು ಬಡಿದು ಬಾಯಿಗೆ ಹಾಕಿಕೊಳ್ಳದೇ ಇರುತ್ತಾನೆಯೇ?
ನಮ್ಮ ಗುರಿ ಈ ಸಣ್ಣಪುಟ್ಟ ಕ್ರಿಮಿಗಳಲ್ಲ. ಹಾಗಾಗಿಯೇ ನಾನು ಈ ಚಿಲ್ಲರೆಗಳು ಅವಮಾನ, ತೊಂದರೆ, ಕಿರಿಕಿರಿ ಮಾಡಿದಾಗ ನಿರ್ಲಕ್ಷಿಸಿ ಮುಂದುವರೆಯುತ್ತಾ ಬಂದಿದ್ದೇನೆ. ನಮ್ಮ ಗುರಿ ಈ ಭ್ರಷ್ಟ ವ್ಯವಸ್ಥೆಯನ್ನು ಕೊನೆಗಾಣಿಸಿ ಉತ್ತಮವಾದ ವ್ಯವಸ್ಥೆ ಕಟ್ಟುವುದು. ಗುರಿ ದೊಡ್ದದು. ಅದಕ್ಕೆ ಅಡ್ಡಿಯಾಗಿ ಆಗಾಗ ನಮ್ಮ #ರೋಮ ಕೀಳಲು ಬರುವ ಕ್ರಿಮಿಗಳನ್ನು ನಿರ್ಲಕ್ಷಿಸಿ ನಾನು ಅರ್ಜುನನ ಏಕಾಗ್ರತೆಯಲ್ಲಿ ಚಕ್ರದಲ್ಲಿ ತಿರುಗುತ್ತಿರುವ ಮೀನಿನ ಕಣ್ಣಿಗೆ ಗುರಿಯಿಟ್ಟು ಮುನ್ನಡೆಯುತ್ತಿದ್ದೇನೆ.
ಅಂದಹಾಗೆ, KRS ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಮತ್ತು ಮಿಕ್ಕ ಐವರು ನಾಡಸೈನಿಕರಿಗೆ ನೆಲಮಂಗಲ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಅವರ ಬಿಡುಗಡೆ ಆಗಲಿದೆ.
ದುಷ್ಟರೇ, KRS ಪಕ್ಷದ ಸೈನಿಕರನ್ನು ನೀವು ನಿಮ್ಮ ದುಷ್ಟ ಕ್ರಿಯೆಗಳಿಂದ ಬಗ್ಗುಬಡಿಯಲಾರಿರಿ. ನ್ಯಾಯ ಮತ್ತು ಧರ್ಮದ ಅಸ್ತ್ರದಿಂದ ಮಾತ್ರ ನೀವು ನಮ್ಮನ್ನು ಮಣಿಸಬಹುದು. ಅದು ನಿಮ್ಮಲ್ಲಿಲ್ಲ. ನಮ್ಮಲ್ಲಿದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
KRS ಪಕ್ಷದ ಸದಸ್ಯರಾಗಲು ಈ ಕೊಂಡಿಯನ್ನು ಒತ್ತಿ👉 https://t.co/vNhuS9hFk6
ಇಂತಿ,
-ರವಿಕೃಷ್ಣ ರೆಡ್ಡಿ,
ಗೌರವಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.
27-09-2025.
#ಮಾದನಾಯಕಹಳ್ಳಿ ಪೋಲಿಸ್ ಠಾಣೆಯಲ್ಲಿ KRS ಪಕ್ಷದ ಕಾರ್ಯಕರ್ತರಿಗೆ ಅಕ್ರಮ ಬಂಧನ ಹಲ್ಲೆ...
ದಾಸನಪುರ ಎಪಿಎಂಸಿಯಲ್ಲಿ ವರ್ತಕರು ರೈತರು ಬೆಳೆದ ಬೆಳೆ ಮಾರಾಟಕ್ಕೆ ೧೦% ವಸೂಲಿ ಮಾಡಿದ್ದನ್ನು KRS ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಕ್ಕೆ, ವರ್ತಕರು ಸೇರಿ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಮಾಡಿದ್ದಾರೆ..
ಹೆಚ್ಚಿನ ಮಾಹಿತಿಗಾಗಿ KRS ಪಕ್ಷದ ಯೌಟ್ಯೂಬ್ ಲಿಂಕ್ ನೋಡಿ 👉https://t.co/71zXopD7vI
ಮಹಾನ್ ಕನ್ನಡಿಗರೇ,
ಇವನ ಮಾತು ಕೇಳಿ...
ರಾಜ್ಯದ ಆಸ್ಪತ್ರೆಗಳಲ್ಲಿ #ಶೌಚಾಲಯ_ಮತ್ತು_ಬಿಸಿನೀರಿಗೆ ಹೆಚ್ಚಿನ ವಸೂಲಿ ಮಾಡುತ್ತಿರುವುದನ್ನು #ಪ್ರಶ್ನೆ_ಮಾಡುತ್ತಿರುವ ಕೆ ಆರ್ಎಸ್ ಪಕ್ಷದ ಕಾರ್ಯಕರ್ತರುಗಳು............. ಹಿಂದಿ ವಾಲನ ದುರಹಂಕಾರ ನೋಡಿ ಹೆಸರು ಹೇಳಿದರೆ ಮೋದಿ ಎಂದು ಹೇಳುತ್ತಾನೆ......... #ಆಸ್ಪತ್ರೆಗೆ_ಬರುವಕರ್ನಾಟಕದ ಕರುನಾಡ ಜನರು ಇವರ ಹತ್ತಿರ #ಮಾತನಾಡಲು_ಭಯ ಬೀಳುತ್ತಿದ್ದಾರೆ ಎಂತಹ #ದುರಂತ........ ಕರ್ನಾಟಕ ರಾಜ್ಯದ #ರಕ್ಷಣೆಗೆ ಕೆ ಆರ್ಎಸ್ ಪಕ್ಷ ನಿರಂತರವಾಗಿ ಹೋರಾಟ ಮಾಡುತ್ತಿದೆ ಬೆಂಬಲಿಸಿ ಆಶೀರ್ವದಿಸಿ... ##ಬಳ್ಳಾರಿ_ವಿಮ್ಸ್_ಆಸ್ಪತ್ರೆ.....
@timesofindia How can you call this one-sided or paid reporting as responsible journalism? What stopped this reporter from calling @krs_party spokesperson and getting their comment?
This is utter bullshit and full of false statements and against the ethics of journalism.
ಇಂದು ಶುಭ ದಿನದಂದು
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮ ಪಂಚಾಯತಿಯ ಉಪಚುನಾವಣೆಯಲ್ಲಿ KRSಪಕ್ಷದ ಸೇನಾನಿ ಶ್ವೇತಾ ಮಹಾಂತೇಶ್ ನಿವರಗಿ ಗೆದ್ದಿದ್ದಾರೆ.ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು💐💐💐
ಅವರ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡ ಪಕ್ಷದ ಎಲ್ಲಾ ಸೈನಿಕರಿಗೂ ಮತದಾನ ಮಾಡಿದ ಪ್ರಜ್ಞಾವಂತ ಮತದಾರರಿಗೂ ಧನ್ಯವಾದಗಳು🙏
ಕರ್ನಾಟಕದ ವಿದ್ಯಾರ್ಥಿಗಳಿಗೆ ದುಬಾರಿಯಾಗಿ ಪರಿಣಮಿಸಿರುವ ಖಾಸಗಿ ಶಿಕ್ಷಣಸಂಸ್ಥೆಗಳು "ಕಾಲೇಜು ಹಬ್ಬದಲ್ಲಿ " ಪರ ಭಾಷೆಯ ಗಾಯಕರಿಗೆ ಮಣೆ ಹಾಕುವುದು ಒಂದು ಕಡೆಯಾದರೆ, ವಿಧ್ಯಾರ್ಥಿಯೋಬ್ಬ ಕನ್ನಡದ ಹಾಡು ಹಾಡಲು ಕೇಳಿಕೊಂಡರೆ ಆ ಗಾಯಕನಿಂದ ನಿಂದನೆ/ನೀತಿಪಾಠ ಕೇಳಬೇಕಾಗಿ ಬಂದಿರುವುದು ಎಂತಹ ದೌರ್ಭಾಗ್ಯ.?
ರಾಜ್ಯದ ಪ್ರತಿಷ್ಠಿತ ಲೋಕಾಯುಕ್ತ ಸಂಸ್ಥೆಯ ಉಪಲೋಕಾಯುಕ್ತರಾಗಿರುವ ಜಸ್ಟೀಸ್ ಕೆ.ಎನ್.ಫಣೀಂದ್ರ ಮತ್ತು ಜಸ್ಟೀಸ್ ಬಿ. ವೀರಪ್ಪ'ರವರು ಲೋಕಾಯುಕ್ತ ಸಂಸ್ಥೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಪುನರ್ ಸ್ಥಾಪಿಸುವ ಕೆಲಸದಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ🙏
ಬೆಂಗಳೂರು.
29-04-2025.