ಸೋದರಿ ನಿವೇದಿತಾ ಪ್ರತಿಷ್ಠಾನ
ಉಡುಪಿ
ಕುಂದಾಪುರದ ಭಂಡಾರಕರ್ಸ್ ಪದವಿ ಕಾಲೇಜಿನಲ್ಲಿ ಪ್ರತಿಷ್ಠಾನದ ಕಾರ್ಯಕ್ರಮಗಳು ಮತ್ತು ಉದ್ದೇಶವನ್ನು ವಿವರಿಸಲಾಯಿತು. #ನಿವೇದನಾ ಚಟುವಟಿಕೆಗೆ 30 ವಿದ್ಯಾರ್ಥಿನಿಯರು ಹೆಸರು ನೊಂದಾಯಿಸಿಕೊಂಡಿದ್ದಾರೆ.
https://t.co/wnjOCTLuba
ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು
#ಸೀತಾ_ನವಮಿ
ಎಲೆಕ್ಟ್ರಾನಿಕ್ ಸಿಟಿ ಭಾಗದ, ಚಿಕ್ಕ ತೋಗೂರಿನ ಅಂಗನವಾಡಿ ಕೇಂದ್ರದಲ್ಲಿ, 4 ಜನ ಗರ್ಭಿಣಿಯರಿಗೆ #ಸೀತಾ_ಸೀಮಂತ ನೆರವೇರಿತು. ಗರ್ಭಿಣಿಯರಿಗೆ "ಸೀತಾ ಸೀಮಂತ" ದ ಮಹತ್ವವನ್ನು ತಿಳಿಸಿ, ತಾಯಿ ಮತ್ತು ಮಗುವಿನ ಆರೋಗ್ಯ ಕಾಳಜಿಯ ಬಗ್ಗೆ ಅರಿವು ಮೂಡಿಸಲಾಯಿತು.
https://t.co/fOphl4Kuvx
ಸೋದರಿ ನಿವೇದಿತಾ ಪ್ರತಿಷ್ಠಾನ
ಬಳ್ಳಾರಿ
#ಬಾಲವಸಂತೋತ್ಸವ
ಸಂಡೂರಿನ ವಡ್ಡುಗ್ರಾಮದಲ್ಲಿ 2 ಮತ್ತು 3 ನೇ ದಿನದ ಬೇಸಿಗೆ ಶಿಬಿರದಲ್ಲಿ 20 ಮಕ್ಕಳು ಹಾಜರಾಗಿದ್ದರು.
1)ಧ್ಯಾನ,
2)ಯೋಗ
3)ಓಂಕಾರ
4)ಶ್ಲೋಕ
5)ಸಂಸ್ಕೃತ ಅಭ್ಯಾಸ
6)ದೇವರ ನಾಮಗಳು
7)ಜಾನಪದ ಹಾಡುಗಳು
ಈ ಎಲ್ಲಾ ಚಟುವಟಿಕೆಗಳನ್ನು ಮಾಡಿಸಲಾಯಿತು.
https://t.co/MbYWns31Et
ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು
#ಸೀತಾ_ನವಮಿ
ಉತ್ತರ ಹಳ್ಳಿ ಹಾಗೂ ಎನ್.ಆರ್ ಕಾಲೋನಿಯಲ್ಲಿ ಗರ್ಭಿಣಿಯರಿಗೆ #ಸೀತಾ_ಸೀಮಂತ ನಡೆಯಿತು.
ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳಬೇಕು. ಆ ಮೂಲಕ ಹುಟ್ಟುವ ಮಗು ಸತ್ಪ್ರಜೆಯಾಗಲಿ ಎಂದು ಹಾರೈಸಿದೆವು.
ಒಟ್ಟು 14 ಜನ ಗರ್ಭಿಣಿಯರು ಮಂಗಳದ್ರವ್ಯಗಳನ್ನು ಸಂತೋಷದಿಂದ ಸ್ವೀಕರಿಸಿದರು.
ಸೋದರಿ ನಿವೇದಿತಾ ಪ್ರತಿಷ್ಠಾನ
ಬೆಂಗಳೂರು
#ಸೀತಾ_ನವಮಿ ಪ್ರಯುಕ್ತ ಕೆ.ಆರ್.ಪುರಂ ತಂಡದವರಿಂದ ರಾಮಮೂರ್ತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ 16 ಗರ್ಭಿಣಿಯರಿಗೆ #ಸೀತಾ_ಸೀಮಂತ ಕಾರ್ಯಕ್ರಮ ಮಾಡಲಾಯಿತು.
https://t.co/4Hhx97UCK9
ಸೋದರಿ ನಿವೇದಿತಾ ಪ್ರತಿಷ್ಠಾನ ಚಿಕ್ಕಮಗಳೂರು
#ಬಾಲವಸಂತೋತ್ಸವ
ತೇಗೂರು ಗ್ರಾಮದಲ್ಲಿ ಇಂದು ನಡೆದ ಮೊದಲನೇ ದಿನದ ಬೇಸಿಗೆ ಶಿಬಿರದಲ್ಲಿ 40 ಮಕ್ಕಳು ಹಾಜರಾಗಿದ್ದರು.
ಧ್ಯಾನ, ಯೋಗ, ಓಂಕಾರ, ಶ್ಲೋಕ, ಸಂಸ್ಕೃತ ಅಭ್ಯಾಸ, ವಿವೇಕಾನಂದರ ಜೀವನ ಚರಿತ್ರೆ, ಅಕ್ಕ ನಿವೇದಿತಾ ವಿಡಿಯೋ ಪ್ರದರ್ಶನ
ಈ ಎಲ್ಲಾ ಚಟುವಟಿಕೆಗಳನ್ನು ಮಾಡಿಸಲಾಯಿತು.
ಸೋದರಿ ನಿವೇದಿತಾ ಪ್ರತಿಷ್ಠಾನ
ಕೋಲಾರ
ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದ ಸೋಮೇಶ್ವರಸ್ವಾಮಿ ದೇವಾಲಯದ ಕಲ್ಯಾಣಿ ಸ್ವಚ್ಛತೆಯನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ವಚ್ಛ ಮಾಡಲಾಗಿತ್ತು.
ಈಗ ಕಲ್ಯಾಣಿಯಲ್ಲಿ ಭೂಮಿಯಿಂದ ನೀರು ಬರುತ್ತಿದೆ. ಪ್ರತಿಷ್ಠಾನದ ಕೆಲಸ ಸಾರ್ಥಕತೆ ಮೂಡಿಸಿದೆ.
ಸೋದರಿ ನಿವೇದಿತಾ ಪ್ರತಿಷ್ಠಾನ
ಶಿವಮೊಗ್ಗ
ಶುಭಕೃತ್ ನಾಮ ಸಂವತ್ಸರವು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಪಕ್ಕದಲ್ಲಿರುವ ಟೆಂಟ್ ಮಕ್ಕಳಿಗೆ ಹಾಗೂ ಪೋಷಕರಿಗೆ ಶುಭವನ್ನು ಹೊತ್ತು ತಂದಿದೆ.
https://t.co/3dGb6HSQRL
#ಬೇಟಿ_ಪಢಾವೋ
ಸೋದರಿ ನಿವೇದಿತಾ ಪ್ರತಿಷ್ಠಾನ
ಮೈಸೂರು
#ಸೀತಾ_ನವಮಿ
ಕುದುರೆ ಮಾಳದಲ್ಲಿ ಒಟ್ಟು 6 ಜನ ಗರ್ಭಿಣಿಯರಿಗೆ #ಸೀತಾ_ಸೀಮಂತ ನಡೆಯಿತು. ಸಕಾರಾತ್ಮಕ ಚಿಂತನೆ ಇಟ್ಟುಕೊಳ್ಳಬೇಕು. ಉತ್ತಮ ಆಹಾರ ಸೇವಿಸಬೇಕು. ಒಳ್ಳೆಯ ಯೋಚನೆಗಳ, ಪುಸ್ತಕಗಳನ್ನು ಓದುವುದಿಂದ ಗರ್ಭದಲ್ಲಿರುವ ಮಗುವಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿ ಕೊಡಲಾಯಿತು.
ಸೋದರಿ ನಿವೇದಿತಾ ಪ್ರತಿಷ್ಠಾನ ಬೆಂಗಳೂರು
#ಸೀತಾ_ನವಮಿ
ಮಲ್ಲೇಶ್ವರಂನ ಮುತ್ತು ಮಾರಿಯಮ್ಮ ದೇವಾಲಯದಲ್ಲಿ 6 ಜನ ಗರ್ಭಿಣಿಯರಿಗೆ #ಸೀತಾ_ಸೀಮಂತ ನೆರವೇರಿತು. ಪರಸ್ಪರ ಪರಿಚಯದ ಮುಖಾಂತರ ಆರಂಭಿಸಿ ಸೋದರಿ ನಿವೇದಿತಾ ಪ್ರತಿಷ್ಠಾನದ ಚಟುವಟಿಕೆಗಳನ್ನು ತಿಳಿಸಿದೆವು.
https://t.co/tm7ZUqcGUo
ಸೋದರಿ ನಿವೇದಿತಾ ಪ್ರತಿಷ್ಠಾನ
ಹೊಸಪೇಟೆ
#ಸೀತಾ_ನವಮಿ
ಹಂಪಾಪಟ್ಟಣ ಎಂಬ ಹಳ್ಳಿಯಲ್ಲಿ
ಐದು ಮಂದಿ ಗರ್ಭಿಣಿಯರಿಗೆ ಮಂಗಳದ್ರವ್ಯಗಳನ್ನು ನೀಡಿ #ಸೀತಾ_ಸೀಮಂತ ಕಾರ್ಯಕ್ರಮ ನೆರವೇರಿತು. ಗರ್ಭಿಣಿಯರ ಆರೈಕೆ ಹಾಗೂ ಸಕಾರಾತ್ಮಕ ಚಿಂತನೆಗಳ ಕುರಿತು ತಿಳಿಸಿಕೊಡಲಾಯಿತು.