ಕರ್ನಾಟಕದ ಕಬೀರ ಎಂದೇ ಖ್ಯಾತರಾದ ಮಹಾನ್ ಸಂತ ಶಿಶುನಾಳ ಶರೀಫರು ಸೌಹಾರ್ದತೆಯ ಹರಿಕಾರರು. ಅವರ ತತ್ವಪದಗಳು ಇಂದಿಗೂ ಸಮಾಜಕ್ಕೆ ದಾರಿದೀಪ. ತಮ್ಮ ಚಿಂತನೆ ಮತ್ತು ಬೋಧನೆಗಳ ಮೂಲಕ ಸನ್ಮಾರ್ಗ ತೋರಿದ ಆ ಮಹಾನ್ ಚೇತನಕ್���ೆ ಅವರ ಜಯಂತಿಯ ಸಂದರ್ಭದಲ್ಲಿ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸುತ್ತೇನೆ 🙏
#ShishunalaSharif
ಎಲ್ಲಾ ರೈತ ಬಾಂಧವರಿಗೆ ಕಾರ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು.
ಮುಂಗಾರು ಆಗಮನದ ಸಂದರ್ಭದಲ್ಲಿ ಅನ್ನದಾತರ ಮೊದಲ ಹಬ್ಬವಾಗಿ ಕಾರ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ. ರೈತರೆಲ್ಲರಿಗೂ ಶುಭವಾಗಲಿ, ಅವರ ಬದುಕು ಹಸನಾಗಲಿ ಎಂದು ಹಾರೈಸುತ್ತೇನೆ.
#ಕಾರಹುಣ್ಣಿಮೆ#farmers#farmerlife
ಕನ್ನಡ ಸಾಹಿತ್ಯ ಲೋಕದ ಬಂಡಾಯ ಕವಿ ಎಂದೇ ಖ್��ಾತರು, ದಲಿತ ಚಳವಳಿಯ ಮುಂಚೂಣಿ ನಾಯಕರು ಡಾ.ಸಿದ್ದಲಿಂಗಯ್ಯ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ತಮ್ಮ ಕವಿತೆಗಳ ಮೂಲಕವೇ ಶ��ಷಿತರ ದನಿಗೆ ಜಾಗೃತಿಯ ಶಕ್ತಿ ತುಂಬಿದ ಈ ಚೇತನಕ್ಕೆ ಜನ್ಮದಿನದ ಸಂದರ್ಭದಲ್ಲಿ ನಮನಗಳನ್ನು ಸಮರ್ಪಿಸುತ್ತೇನೆ.
#Siddalingaiah
#everyonefollowers
ತಮ್ಮ ಸುಮಧುರ ಕಂಠದಿಂದ ಕೋಟ್ಯಂತರ ಹೃದಯಗಳನ್ನು ಸೂರೆಗೊಂಡಿದ್ದ ಗಾನ ಗಂಧರ್ವ, ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗೌರವಪೂರ್ವಕ ನಮನಗಳು. 🙏
ಭೌತಿಕವಾಗಿ ಎಸ್ ಪ��ಬಿ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಹಾಡುಗಳು ಅಜರಾಮರ ಹಾಗೂ ನಮ್ಮ ಹೃನ್ಮನಗಳಲ್ಲಿ ಅನುರಣಿಸುತ್ತಲೇ ಇರುತ್ತವೆ. #SPBalasubrahmanyam #SPB
ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮದಿನದಂದು ಅತ್ಯಂತ ಗೌರವಪೂರ್ವಕವಾಗಿ ನಮನಗಳನ್ನು ಸಮರ್ಪಿಸುತ್ತೇನೆ 🙏
ಶ್ರೀ ಕಾಶಿ ವಿಶ್ವನಾಥ ದೇಗುಲವೂ ಸೇರಿ ಅನೇಕ ದೇವಾಲಯಗಳ ಜೀರ್ಣೋದ್ಧಾರ ಮಾಡ��� ಹಿಂದೂ ಧರ್ಮದ ಪುನರುತ್ಥಾನಕ್ಕೆ ಅಪಾರ ಕೊಡುಗೆ ನೀಡಿದ ರಾಣಿ ಅಹಲ್ಯಾಬಾಯಿ ಅವರು ನಮಗೆಲ್ಲರಿಗೂ ಪೂಜನೀಯರಾಗಿದ್ದಾರೆ.
#AhilyabaiHolkar
"ವಿಶ್ವ ತಂಬಾಕು ರಹಿತದಿನ"
ತಂಬಾಕು ತ್ಯಜಿಸುವುದು ತ್ಯಾಗವಲ್ಲ - ಇದು ಜೀವ ಉಳಿಸುವ ಹೋರಾಟ! ಆರೋಗ್ಯವಂತ ಸಮಾಜವೇ ಸುಸ್ಥಿರ ಭವಿಷ್ಯದ ಹಾದಿ.
ಬನ್ನಿ, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಜಾಗೃತಿ ಮೂಡಿಸೋಣ.
#WorldNoTobaccoDay#ವಿಶ್ವತಂಬಾಕುರಹಿತದಿನ
ಮಾತೃಭೂಮಿಯ ವಿಮೋಚನೆಗಾಗಿ ಪ್ರಾಣತ್ಯಾಗಗೈದ ಮಹಾನ್ ಕ್ರಾಂತಿಕಾರಿ, ಹೆಮ್ಮೆಯ ದೇಶಭಕ್ತ ಶಹೀದ್ ಸುಖದೇವ್ ಥಾಪರ್ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳು.
ಭಗತ್ ಸಿಂಗ್ ಮತ್ತು ರಾಜಗುರು ಅವರೊಂದಿಗೆ ದೇಶಕ್ಕಾಗಿ ಗಲ್ಲಿಗೇರಿದ ಅವರ ಶೌರ್ಯ, ಬಲಿದಾನ ನಮಗೆಲ್ಲರಿಗೂ ಸದಾ ಪ್ರೇರಣೆ. 🙏
#SukhdevThapar#ShaheedSukhdev
ಚಿತ್ರದುರ್ಗದ ಗಂಡುಗಲಿ, ಕನ್ನಡ ನಾಡಿನ ಹೆಮ್ಮೆಯ ವೀರ ಮದಕರಿ ನಾಯಕರಿಗೆ ಕೋಟಿ ಕೋಟಿ ನಮನಗಳನ್ನು ಸಮರ್ಪಿಸುತ್ತೇನೆ. ದುರ್ಗದ ಹುಲಿಯ ಧೈರ್ಯ, ಪರಾಕ್ರಮ ಮತ್ತು ಸ್ವಾಭಿಮಾನದ ಆಡಳಿತ, ಹೋರಾಟ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ.
ಆ ವೀರ ಚೇತನದ ಪುಣ್ಯಸ್ಮರಣೆ ಸಂದರ್ಭದಲ್ಲಿ ನನ್ನ ಭಾವಪೂರ್ಣ ನಮನಗಳು 🙏
#MadakariNayaka#Chitradurga
ತ್ಯಾಗ, ಸಾಧನೆ ಹಾಗೂ ಅಪ್ರತಿಮ ದೈವಭಕ್ತಿಯ ಸಾಕಾರಮೂರ್ತಿ, ಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಂದು ಆ ಮಹಾನ್ ಚೇತನಕ್ಕೆ ಶಿರಬಾಗಿ ನಮಿಸುವೆ.
#hemaraddimallamma#vachanam#shreeshailam
ಸಮಸ್ತ ಭಾರತೀಯರಿಗೂ ರಾಷ್ಟ್ರೀಯ ತಂತ್ರಜ್ಞಾನ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ನಮ್ಮ ರಾಷ್ಟವು ತಂತ್ರಜ್ಞಾನ, ಆವಿಷ್ಕಾರ, ನವೋದ್ಯಮಗಳ ನೆಲೆವೀಡು. 1998 ಮೇ 11ರಂದು ಭಾರತವು ರಾಜಸ್ಥಾನದ ಪೊಖ್ರಾನ್ನಲ್ಲಿ ಸರಣಿ ಯಶಸ್ವಿ ���ಣುಪರೀಕ್ಷೆ ನಡೆಸಿತು.
ಜೈ ಹಿಂದ್ 🇮🇳
#ರಾಷ್ಟ್ರೀಯತಂತ್ರಜ್ಞಾನದಿನ
#NationalTechnologyDay2026
ತಾಯಿಯ ಪ್ರೀತಿ ನಿಸ್ವಾರ್ಥ
ತಾಯಿಯ ತ್ಯಾಗ ಅಮೂಲ್ಯ
ತಾಯಿಯ ಆಶೀರ್ವಾದವೇ ನಮ್ಮ ಬದುಕಿನ ದೊಡ್ಡ ಶಕ್ತಿ
ಜಗತ್ತಿನ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು....
ಅಮ್ಮ ಎನ್ನುವ ಪದವೇ ನಮ್ಮ ಬದುಕಿನ ದೊಡ್ಡ ಶಕ್ತಿ ಹಾಗೂ ಮೊದಲ ದೇವರು...
#mothersday#motherhood#mother#hilights
ಅಹಿಂಸೆ, ಶಾಂತಿ ಮತ್ತು ಕರುಣೆಯ ಮಾರ್ಗ ತೋರಿದ ಭಗವಾನ್ ಬುದ್ಧನ ಜ್ಞಾನೋದಯದ ಈ ಪವಿತ್ರ ದಿನದಂದು ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸಲಿ. ಸರ್ವರಿಗೂ ಈ ಶುಭ ದಿನದಂದು ಒಳ್ಳೆಯದೇ ಆಗಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ 🙏
#ಬುದ್ಧಪೂರ್ಣಿಮೆ#BuddhaPurnima
ನಾಡಿನ ಸಮಸ್ತ ಶ್ರಮಿಕ ಬಂಧುಗಳಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ರಾಜ್ಯದ ಕಾರ್ಮಿಕ ಸಮುದಾಯದ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿ, ಸೌಲಭ್ಯಗಳನ್ನು ಒದಗಿಸುತ್ತಿದೆ. ಶ್ರಮಿಕರ ಅಭ್ಯುದಯವೇ ನಮ್ಮ ಸರ್ಕಾರದ ಧ್ಯೇಯ.
#ಶ್ರಮೇವಜಯತೇ#InternationalLaboursDay
ಉಡುಪಿ ಕೃಷ್ಣಮಠದಲ್ಲಿ ಐದು ಪರ್ಯಾಯಗಳನ್ನು ಕಂಡ ಏಕೈಕ ಯತಿಗಳು, ಪದ್ಮವಿಭೂಷಣರಾದ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ಅತ್ಯಂತ ಭಕ್ತಿಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ. ಜ್ಞಾನ ಮತ್ತು ಭಕ್ತಿಯ ಮೇರು ಸಂಗಮವಾಗಿದ್ದ ಪರಮಪೂಜ್ಯರ ಜಯಂತಿಯ ಈ ದಿನದಂದು ನನ್ನ ಪ್ರಣಾಮಗಳನ್ನು ಸಮರ್ಪಿಸುತ್ತೇನೆ 🙏
ಭಾರತೀಯರ ಪಾಲಿನ ಕ್ರಿಕೆಟ್ ದೇವರೆಂದೇ ಖ್ಯಾತರಾಗಿದ್ದ ಮಾಸ್ಟರ್ ಬ್ಲಾಸ್ಟರ್, ಭಾರತರತ್ನ ಶ್ರೀ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! 🏏
#HappyBirthdaySachin#ipl#bcci