ಇವತ್ತು ಸಂಜೆ 7ಗಂಟೆಗೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯುತ್ತಿದೆ. 70 ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಮಾನ್ಯ ಮುಖ್ಯಮಂತ್ರಿ @siddaramaiah ಸಿದ್ಧರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸರಿಯಾದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸ ನನ್ನದು. ಈಗಾಗಲೇ ಎಲ್ಲ ಸಚಿವರಿಗೂ ಆಗಿರುವ ಪ್ರಮಾದದ ಅರಿವಾಗಿದೆ. ಹೀಗಾಗಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಈಗ ಆಗಿರುವ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸುವ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ನನ್ನ ನಿರೀಕ್ಷೆ.
ಕೆಪಿಎಸ್ಸಿಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬುದು ಗೊತ್ತಾದ ನಂತರ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟ ಸಂಘಟಿಸುತ್ತ ಬಂದಿದೆ. ನಮ್ಮೆಲ್ಲರ ಸಾಂಘಿಕ ಹೋರಾಟದ ಫಲವಾಗಿಯೇ ಮುಖ್ಯಮಂತ್ರಿಗಳು ಈ ಹಿಂದೆ ಮರುಪರೀಕ್ಷೆಗೆ ಆದೇಶಿಸಿದ್ದರು. ಆದರೆ ಹೊಣೆಹೇಡಿತನದ ಪರಮಾವಧಿ ಎಂಬಂತೆ ಕೆಪಿಎಸ್ಸಿ ಮೊದಲ ಬಾರಿ ಮಾಡಿದ್ದ ತಪ್ಪುಗಳಿಂತ ಹೆಚ್ಚು ತಪ್ಪುಗಳನ್ನು ಮರುಪರೀಕ್ಷೆಯಲ್ಲಿ ಮಾಡಿತು.
ಮರುಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆ ಗಳಲ್ಲಿ 80 ತಪ್ಪುಗಳಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಇಳಿಯಿತು. ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಗೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು. ಒಂದಲ್ಲ, ಎರಡಲ್ಲ ಮೂರುಬಾರಿ ಮುಖ್ಯಮಂತ್ರಿಗಳನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಮಾತನಾಡಿದೆ. ಸಚಿವರು, ಶಾಸಕರ ಜೊತೆ ಮಾತಾಡಿದೆ, ವಿರೋಧ ಪಕ್ಷದ ನಾಯಕರ ಜೊತೆಯೂ ಮಾತಾಡಿದೆ. ನಮ್ಮ ಕರವೇ ಸೇನಾನಿಗಳು ಕೆಪಿಎಸ್ಸಿ ಮುತ್ತಿಗೆಯನ್ನೂ ನಡೆಸಿ ಬಂಧನಕ್ಕೊಳಗಾದರು, ಕೇಸೂ ಹಾಕಿಸಿಕೊಂಡರು. ಅಂದು ಸುಮಾರು ಇನ್ನೂರಕ್ಕೂ ಹೆಚ್ಚು ಪೊಲೀಸರನ್ನು ನನ್ನ ಮನೆಯ ಸುತ್ತ ಕಾವಲಿಗಿಟ್ಟು ನನ್ನ ಬಂಧನಕ್ಕೆ ತಯಾರಿ ನಡೆಸಲಾಗಿತ್ತು. (ನಾನು ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ನಿಗದಿಯಾಗಿರಲಿಲ್ಲವಾದ್ದರಿಂದ ನಾನು ಮನೆಯಿಂದ ಹೊರಗೆ ಬಂದಿರಲಿಲ್ಲ)
ಕೆಪಿಎಸ್ ಸಿ ಕುರಿತಾದ ಈ ಹೋರಾಟದಲ್ಲಿ ನಾವು ಪ್ರಜಾಪ್ರಭುತ್ವ ಮಾರ್ಗದ ಎಲ್ಲ ಹೋರಾಟದ ವಿಧಾನಗಳನ್ನು ಬಳಸಿದ್ದೇವೆ. ಕೊನೆಗೆ ಮುಖ್ಯಮಂತ್ರಿಗಳ ಮನ ಕರಗಲಿ ಎಂದು ರಕ್ತದಲ್ಲೂ ಪತ್ರ ಬರೆಯುವ ಅಭಿಯಾನ ನಡೆಸಿದ್ದೇವೆ. ನಾನೂ ಕೂಡ ನನ್ನ ರಕ್ತದಲ್ಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಪೋಸ್ಟರ್ ಕ್ಯಾಂಪೇನ್, ಟ್ವಿಟರ್ (ಎಕ್ಸ್) ಕ್ಯಾಂಪೇನ್ ಎಲ್ಲ ಮಾಡಿಮುಗಿಸಿದ್ದೇವೆ.
ಇವತ್ತು ಸಂಪುಟ ಸಭೆಯಲ್ಲಿ ಸರಿಯಾದ ತೀರ್ಮಾನ ಆಗದೇ ಹೋದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಅದಕ್ಕೆ ನಾನು ಹೊಣೆಯಲ್ಲ. 7ನೇ ತಾರೀಕಿನಿಂದ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು, ಅವರ ಪೋಷಕರು ಬೆಂಗಳೂರಿಗೆ ಬರಲಿದ್ದಾರೆ. ನಮ್ಮ ಹೋರಾಟದ ವರಸೆ ಬದಲಾಗುತ್ತದೆ. ದಯವಿಟ್ಟು ಯಾರೂ ನಮ್ಮನ್ನು ದೂರಬೇಡಿ.
ಸರ್ಕಾರ ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕೆ ಅವಕಾಶ ನೀಡದೇ ಇಂದೇ ಸರಿಯಾದ ನಿರ್ಧಾರ ಕೈಗೊಳ್ಳಲಿ ಎಂದು ಆಶಿಸುತ್ತೇನೆ.
@nimmaupendra@simpletrolls 👌👌❤️❤️ ಪ್ರಜಾಕೀಯ ಮುಂದಿನ ದಿನಗಳಲ್ಲಿ ಕನ್ನಡಿಗರ ಪ್ರಾದೇಶಿಕ ಪಕ್ಷವಾಗಿ ಗೆದ್ದೇ ಗೆಲ್ಲುತ್ತದೆ ಅಂದಿನಿಂದ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಪ್ರಾರಂಭವಾಗುತ್ತದೆ ಅಂತ ದೊಡ್ಡ ಶಕ್ತಿ ನಮ್ಮ ಮಣ್ಣಿನಲ್ಲಿದೆ ಕನ್ನಡಿಗರಲ್ಲಿದೆ 🇮🇳🇮🇳
ಎಲ್ಲಾ Sports page ಗಳು ಕನ್ನಡ ಬಳಸೋ ಹಾಗೇ ಆಗಿದೆ ಅಂದ್ರೆ ಅನೇಕ ಕನ್ನಡಿಗರ ಶ್ರಮ (ಕನ್ನಡ ಬಳ್ಸಿ ಕನ್ನಡ ಬಳ್ಸಿ ಅದೆಷ್ಟು ಕಾಮೆಂಟ್ಸ್ ಮಾಡ್ಕೊಂಡು ಬಂದಿದ್ದಾರೋ ನಮ್ಮವರು...
(ಯಾವ್ದೆ ಸಿಟಿ sport page ಗಳು ಅಲ್ಲಿನ ಸ್ಥಳೀಯ ಭಾಷೆ ಅಷ್ಟಾಗಿ ಬಳಸೋದೆ ಇಲ್ಲ )
😊💛❤️
"ಕರ್ನಾಟಕದ ಸಮೃದ್ಧ ಇತಿಹಾಸದಲ್ಲಿ, ತನ್ನದೇ ಛಾಪನ್ನು ಮೂಡಿಸಿದ ವಿಜಯನಗರ ಸಾಮ್ರಾಜ್ಯದ ಅರಸ, ಕನ್ನಡ ರಾಜ್ಯರತ್ನ ಸಿಂಹಾಸನಾಧೀಶ್ವರ ಶ್ರೀ ಕೃಷ್ಣದೇವರಾಯ ಅವರ ಜಯಂತಿಯಂದು ಅವರಿಗೆ ಶ್ರದ್ಧಾ ಪೂರ್ವಕ ನಮನಗಳು."
#shrikrishnadevaraya@CMofKarnataka@BSBommai