A baby elephant did everything it could to help a child in danger, refusing to give up despite its size.
Then an adult elephant stepped in, gently lifting the child back to safety with incredible care and strength.
Moments like this remind us that kindness, courage, and protection exist even in the wild❤️
ಮಾತೃ ಸ್ವರೂಪಿಗೆ ಭಾವಪೂರ್ಣ ನಮನ
ಇಂದು ಕುಟುಂಬಸ್ಥರೊಂದಿಗೆ ತೆರಳಿ ಮಾತೃ ಸ್ವರೂಪಿ ಶ್ರೀಮತಿ ಚೆನ್ನಮ್ಮ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದೆ.
ಶ್ರೀಮತಿ ಚೆನ್ನಮ್ಮ ಅವರ ನಿಧನ ಆಘಾತ ತಂದಿದೆ. ಅವರು ಅಪಾರ ದೈವಭಕ್ತೆ. ಕಷ್ಟ-ಸುಖದಲ್ಲಿ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಸೇವೆ ಮಾಡಿದ ಧೀಮಂತ ಹೆಣ್ಣುಮಗಳು. ದೇಶ ಹಾಗೂ ರಾಜ್ಯದ ಹಲವು ನಾಯಕರಿಗೆ ತಾಯಿಯಂತೆ ಸೇವೆ ಮಾಡಿದ್ದರು. ಕುಟುಂಬಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದರು. ಇಂದು ಅವರು ನಮ್ಮೊಂದಿಗಿಲ್ಲ. ಈ ದುಃಖದ ಸಂದರ್ಭದಲ್ಲಿ ದೇವರು ಕುಟುಂಬಸ್ಥರಿಗೆ ಧೈರ್ಯ ಹಾಗೂ ನೋವು ಭರಿಸುವ ಶಕ್ತಿ ನೀಡಲಿ.
ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಮತಿ ಚೆನ್ನಮ್ಮ ಅವರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದು, ಎಲ್ಲಾ ವ್ಯವಸ್ಥೆಯನ್ನು ಮಾಡಲು ಸೂಚಿಸಲಾಗಿದೆ.
139ನೇ ಕಾಂಗ್ರೆಸ್ ಸಂಸ್ಥಾಪನಾ ದಿನ.
ಭಾರತದ ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯದ ಬಳಿಕ ದೇಶದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ.
ಅನೇಕ ವರ್ಷಗಳಿಂದ ಬದ್ಧತೆ, ನಿಸ್ವಾರ್ಥ ಭಾವದಿಂದ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಕಾಂಗ್ರೆಸ್ಸಿಗರಿಗೂ ನಮ್ಮ ನಮನಗಳು.
#RamalingaReddy#Congress #CongressFoundationDay
ಮುಖ್ಯಮಂತ್ರಿ @siddaramaiah ಅವರು ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಂದಿನ ಬಜೆಟ್ ನಲ್ಲಿ ಜಿಲ್ಲೆಯಲ್ಲಿ ಮೊರಾರ್ಜಿ ವಸತಿ ಶಾಲೆಗಳನ್ನು ಹೊಂದಿಲ್ಲದ ಹೋಬಳಿಗಳಿಗೆ ಶಾಲೆ ಮಂಜೂರು ಮಾಡಲಾಗುವುದು ಹಾಗೂ ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ವಿವಿಧ ಹಾಸ್ಟೆಲ್ ಗಳ ಮೇಲುಸ್ತುವಾರಿ ಮಾಡಲು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇಂದು ಮೊದಲ ಬಾರಿಗೆ ಕೋಲಾರಕ್ಕೆ ಭೇಟಿ ನೀಡಿದ್ದು, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಕೈಗೊಳ್ಳಲಾಗಿದೆ. ಕಂದಾಯ, ಸಮಾಜ ಕಲ್ಯಾಣ, ಕಾನೂನು, ಕುಡಿಯುವ ನೀರು, ಬರಗಾಲ ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. 1/4
#ಕೋಲಾರಜಿಲ್ಲೆ #ಪ್ರಗತಿಪರಿಶೀಲನಾ_ಸಭೆ
ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಅವರ ಬದ್ಧತೆಯಲ್ಲಿ ರಾಜ್ಯಕ್ಕೆ "ಕರ್ನಾಟಕ" ಎಂದು ನಾಮಕರಣವಾಗಿ 50 ವರ್ಷ ಪೂರೈಸುತ್ತಿದೆ.
ಕರ್ನಾಟಕ ಎಂದರೆ ಕೇವಲ ಹೆಸರಲ್ಲ, ಹೆಮ್ಮೆ, ಹೆಗ್ಗುರುತು, ಆತ್ಮಾಭಿಮಾನ, ಅಸ್ಮಿತೆ ಎಲ್ಲವೂ..
ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ, ವಿಶಿಷ್ಟವಾಗಿ ಆಚರಿಸಲು ನಮ್ಮ ಸರ್ಕಾರ ತೀರ್ಮಾನಿಸಿದೆ, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತಿದೆ.
ನವೆಂಬರ್ ಒಂದರಂದು ಇಡೀ ದಿನ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ ಮುಖ್ಯಮಂತ್ರಿ @siddaramaiah ಅವರು.
ಮನೆಮನೆಗಳಲ್ಲಿ ಅರಳಲಿ ಕನ್ನಡದ ಬಾವುಟ, ಮನಮನಗಳಲ್ಲಿ ಮೊಳಗಲಿ ಕನ್ನಡದ ಜಯಘೋಷ.
ಮನೆಯ ಯಜಮಾನಿ ಖಾತೆಗೆ ಮಾಸಿಕ 2,000/- ರೂಪಾಯಿ ಜಮಾ ಮಾಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ “ ಗೃಹಲಕ್ಷ್ಮಿ” ಯೋಜನೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭವಾಗಲಿದೆ.
ನಮ್ಮ ಸರ್ಕಾರ ನಿಗದಿ ಪಡಿಸಿರುವ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳ ಪೈಕಿ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ಒಂದು ಕೇಂದ್ರಕ್ಕೆ ತೆರಳಿ ನೀವು ನಿಮ್ಮ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1902 ಈ ಸಂಖ್ಯೆಗೆ ಕರೆ ಮಾಡಿ ಅಥವಾ 8147500500 ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ ಎಂ ಎಸ್ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಿ.
#Gruhalaxmi | #Scheme
,@nalinkateel ಅವರೇ,
ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ!
@BSBommai ಅವರೇ, ನಿಮ್ಮ ಮನೆಗೂ ಫ್ರೀ!
@ShobhaBJP ಅವರೇ, ನಿಮಗೂ ಪ್ರಯಾಣ ಫ್ರೀ!
@CTRavi_BJP ಅವರೇ, ನಿಮ್ಮ ಮನೆಯವರಿಗೂ ₹2000 ಫ್ರೀ!
ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)!
ಇದು ನಮ್ಮ ಗ್ಯಾರಂಟಿ.
Tributes to former Prime Minister Shri #RajivGandhi on his death anniversary.
His contribution to universal adult franchise, decentralisation of power & providing reservation to backward classes has resulted in political equality in India.
ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಗೌರವ ಸಲ್ಲಿಸಿದೆ.
My grandson completed his Class 12 from @cisblearns and the school had a organised a farewell for the graduating class of 2023 at the Canadian International School of Bangalore.
I was happy to be part of the event and congratulated him for completing his class 12.
ಹರಪನಹಳ್ಳಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧಿಸಿ ಜಯಗಳಿಸಿರುವ ಲತಾ ಮಲ್ಲಿಕಾರ್ಜುನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರನ್ನಾಗಿ ಅನುಮೋದಿಸಿದೆ.
ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಯು.ಟಿ ಖಾದರ್ ಅವರಿಗೆ ಅಭಿನಂದನೆಗಳು.
ತಮ್ಮ ಉಪಸ್ಥಿತಿಯಲ್ಲಿ ನಾಡಿನ ಜನರ ಸಮಸ್ಯೆಗಳ ಕುರಿತಾಗಿ ರಚನಾತ್ಮಕ ಚರ್ಚೆಯ ವಾತಾವರಣ ನಿರ್ಮಾಣವಾಗಲಿದೆ, ಸಂವಿಧಾನದ ಆಶಯದಂತೆ ನಿರ್ಲಿಪ್ತರಾಗಿ, ಪಕ್ಷಪಾತಿಯಲ್ಲದೆ ಸದನದ ಪ್ರತಿ ಸದಸ್ಯನ ಧ್ವನಿಗೆ ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನನಗಿದೆ.
ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಮ್ಮ ಕಾರ್ಯಗಳಿಗೆ ಶುಭವಾಗಲಿ..