ನಿನ್ನೆಯಿಂದ ಆರ್ ಸಿ ಬಿ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಘೋರ ದುರಂತದ ದೃಶ್ಯಗಳನ್ನು ನೋಡಿ, ಅದರ ಆಘಾತದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹನ್ನೊಂದು ಅಮಾಯಕ ಜೀವಗಳು ಹಾಗೆ ಅನ್ಯಾಯವಾಗಿ ಹೊಸಕಿ ಹಾಕಲ್ಪಟ್ಟವಲ್ಲ, ಅದನ್ನು ಹೇಗೆ ಅರ್ಗಿಸಿಕೊಳ್ಳುವುದು. ಆ ಮಕ್ಕಳ ಕುಟುಂಬದವರ ನೋವಿಗೆ ಸಾಂತ್ವನ ಎ���್ಲಿದೆ?
ನಿನ್ನೆಯಿಂದ ಇಡೀ ಕರ್ನಾಟಕ, ದೇಶ, ಏಳುವರೆ ಕೋಟಿ ಕನ್ನಡಿಗರು ಕಾಲ್ತುಳಿತದಲ್ಲಿ ಬಲಿಯಾದ ಆ ಮಕ್ಕಳಿಗಾಗಿ ಮರುಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಅಗಲಿದ ಎಲ್ಲ ಜೀವಗಳ ಕುಟುಂಬದವರೊಂದಿಗೆ ಇರುತ್ತದೆ. ಬಾಳಿ ಬದುಕಬೇಕಾದ ಎಳೆಯ ಜೀವಗಳಿಗೆ ಭಾರವಾದ ಹೃದಯದಿಂದ ಶ್ರದ್ಧಾಂಜಲಿ ಸಲ್ಲಿಸುವೆ.
ಆರ್ ಸಿ ಬಿ ತಂಡ ಹದಿನೆಂಟು ವರ್ಷಗಳ ಬಳಿ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಎಲ್ಲರಿಗೂ ಸಂತೋಷವಿತ್ತು, ಸಂಭ್ರಮವಿತ್ತು. ಆದರೆ ಅದು ಕೆಲವೇ ಘಂಟೆಗಳಲ್ಲಿ ಸೂತಕವಾಗಿ ಬದಲಾಗಿಹೋಯಿತು. ಹನ್ನೊಂದು ಜನರ ಮನೆಯ ದೀಪ ಆರಿಹೋಯಿತು. ಇದಕ್ಕೆ ಯಾರು ಹೊಣೆ, ಆ ಕುಟುಂಬದವರಿಗೆ ಎಲ್ಲಿದೆ ನ್ಯಾಯ?
ಆರ್ ಸಿಬಿ ತಂಡಕ್ಕೆ ಅಷ್ಟು ಆತುರಾತುರವಾಗಿ ಒಂದಲ್ಲ, ಎರಡು ಕಡೆ ಅಭಿನಂದನಾ ಸಮಾರಂಭಗಳನ್ನು ಆಯೋಜಿಸಿದ್ದು ಯಾಕೆ, ಆರ್ ಸಿ ಬಿ ಅಭಿಮಾನಿಗಳು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಸೇರುವಂತೆ ಮಾಡಿದವರು ಯಾರು? ಯಾವ ಪುರುಷಾರ್ಥಕ್ಕಾಗಿ ಇದೆಲ್ಲ ನಡೆದುಹೋಯಿತು?
ನನ್ನ ದೃಷ್ಟಿಯಲ್ಲಿ ಈ ಭೀಕರ ದುರಂತಕ್ಕೆ ಎಲ್ಲರೂ ಹೊಣೆಗಾರರು. ಸಮೂಹ ಸನ್ನಿಗೆ ಬಲಿಯಾಗಿ ವಿಜಯೋತ್ಸವಕ್ಕೆ ಅನಗತ್ಯ ಉತ್ಸಾಹ ತೋರಿದ ರಾಜ್ಯ ಸರ್ಕಾರ, ಕಾರ್ಯಕ್ರಮವನ್ನು ಗೊತ್ತು ಗುರಿಯಿಲ್ಲದೆ ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಅಸೋಸಿಯಷನ್, ಆರ್ ಸಿ ಬಿ ಮ್ಯಾನೇಜ್ಮೆಂಟ್, ಈವೆಂಟ್ ನಡೆಸುವ ಸಂಸ್ಥೆ, ಕೊನೆಗೆ ಸಂಭ್ರಮಕ್ಕೂ ಹುಚ್ಚಾಟಕ್ಕೂ ವ್ಯತ್ಯಾಸ ಗೊತ್ತಿಲ್ಲದ ಅಭಿಮಾನಿಗಳು ಎಲ್ಲರೂ ಕಾರಣ.
ನಿನ್ನೆಯ ದುರ್ಘಟನೆ ಸಂದರ್ಭದಲ್ಲಿ ಇದ್ದ ಎರಡು, ಮೂರು ಸಾವಿರ ಪೊಲೀಸರು ತಮ್ಮ ಶಕ್ತಿ ಮೀರಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಮೂರು - ನಾಲ್ಕು ಲಕ್ಷದಷ್ಟು ಜನರನ್ನು ನಿರ್ವಹಿಸಲು ಇಷ್ಟು ಪೊಲೀಸರಿಗೆ ಸಾಧ್ಯವೇ ಇರಲಿಲ್ಲ. ಹಾಗಿದ್ದ ಮೇಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟವರು ಯಾರು? ಯಾವ ಧೈರ್ಯದ ಮೇಲೆ ಅನುಮತಿ ಕೊಟ್ಟರ���, ಅದೂ ಕೂಡ ಯಾವ ಪೂರ್ವ ತಯಾರಿಯೂ ಇಲ್ಲದೆ?
ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಅಮಾನತ್ತು ಮಾಡಲಾಗಿದೆ. ಇದು ಅವರಿಗೆ ಆಗಬೇಕಿತ್ತು. ಯಾರು ಎಷ್ಟೇ ಒತ್ತಡ ಹೇರಲಿ, ತೀರ್ಮಾನ ತೆಗೆದುಕೊಳ್ಳಬೇಕಾಗಿದ್ದು ಪೋಲೀಸ್ ಕಮಿಷನರ್. ಅವರ ತಪ್ಪು ನಿರ್ಧಾರವು ಕೂಡ ಈ ಘೋರ ದುರಂತಕ್ಕೆ ಪ್ರಮುಖ ಕಾರಣ.
ಇದೇ ದಯಾನಂದ್ ಅವರು ೨೦೨೩ರ ಡಿಸೆಂಬರ್ ೨೭ ರಂದು ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಐತಿಹಾಸಿಕ ಕನ್ನಡ ನಾಮಫಲಕ ಚಳವಳಿ ಸಂದರ್ಭದಲ್ಲಿ ಹೇಗೆ ಚಳವಳಿಗಾರರೊಂದಿಗೆ ಹೇಗೆ ನ���ೆದುಕೊಂಡರು ಎಂಬುದು ಇ��್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನನ್ನ ಮೇಲೆ ಹದಿನಾರು ಕೇಸ್ ಗಳನ್ನು ಹಾಕಲಾಯಿತು. ನನ್ನನ್ನು ಮೂರು ನಾಲ್ಕು ತಿಂಗಳುಗಳ ಕಾಲ ಜೈಲಿನಲ್ಲೇ ಇಡುವ ಸಂಚು ನಡೆದಿತ್ತು. ನ್ಯಾಯಾಲಯ ಜಾಮೀನು ನೀಡಿದ್ದರಿಂದ ಹದಿನಾರು ದಿನಗಳ ನಂತರ ನಾನು ಜೈಲಿನಿಂದ ಹೊರಗೆ ಬಂದೆ.
ಅಧಿಕಾರ ಯಾವತ್ತಿಗೂ ಶಾಶ್ವತ ಅಲ್ಲ ಎಂದು ನಾನು ಅವತ್ತೇ ದಯಾನಂದ್ ಅವರಿಗೆ ಹೇಳಿದ್ದೆ. ಈಗ ಕರ್ಮ ಅವರ ಕಡೆ ತಿರುಗಿ ಬಂದು ನಿಂತಿದೆ. ಮೂರು ದಶಕಕ್ಕೂ ಹೆಚ್ಚು ಕಾಲದ ನನ್ನ ಚಳವಳಿಯ ಅನುಭವದಲ್ಲಿ ಕನ್ನಡ ಚಳವಳಿಗಾರ��ನ್ನು ಕೆಟ್ಟದಾಗಿ ನಡೆಸಿಕೊಂಡವರಿಗೆ ಏನೇನೆಲ್ಲ ಆಗಿದೆ ಎಂಬುದನ್ನು ನಾನು ನೋಡಿದ್ದೇನೆ. ದಯಾನಂದ್ ಈ ಪಟ್ಟಿಗೆ ಹೊಸ ಸೇರ್ಪಡೆ ಅಷ್ಟೇ.
ಚಳವಳಿಗಾರರು ಪ್ರತಿಭಟನೆ ಮಾಡಬೇಕೆಂದರೆ ಫ್ರೀಡಂ ಪಾರ್ಕ್ ನಲ್ಲಿ ಹೋಗಿ ಬಾಯಿ ಬಡಿದುಕೊಳ್ಳಬೇಕು. ಬೀದಿಗೆ ಬಂದ್ರೆ ಪೊಲೀಸರು ಕೇಸು ಹಾಕುತ್ತಾರೆ. ಅದಕ್ಕೆ ಕೋರ್ಟಿನ ತೀರ್ಮಾನವನ್ನು ಮುಂದೆ ಇಡುತ್ತಾರೆ. ನಿನ್ನೆ ಇಡೀ ಬೆಂಗಳೂರು ನಗರ ನಲುಗಿ ಹೋಯಿತಲ್ಲ, ಅದಕ್ಕೆ ನ್ಯಾಯಾಲಯದ ಆದೇಶ ಅಡ್ಡಿ ಬರುವುದಿಲ್ಲವೇ? ನ್ಯಾಯ ಕೇಳಿ ಪ್ರತಿಭಟನೆ ಮಾಡುವವರಿಗೆ ಅನುಮತಿ ಸಿಗುವುದಿಲ್ಲ, ವಿಜಯೋತ್ಸವದ ಹೆಸರಿನಲ್ಲಿ ಅಮಾಯಕ ಜೀವಗಳನ್ನು ತುಳಿದು ಹಾಕುವ ಕಾರ್ಯಕ್ರಮಗಳಿಗೆ ಅನುಮತಿ ಸಿಗುತ್ತೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ಇದಕ್ಕೆ ನನ್ನ ಧಿಕ್ಕಾರ.
ಹನ್ನೊಂದು ಜೀವಗಳನ್ನು ಬಲಿ ತೆಗೆದುಕೊಂಡ ದುರ್ಘಟನೆಗೆ ಯಾರು ಯಾರು ಕಾರಣರೋ ಎಲ್ಲರಿಗೂ ಶಿಕ್ಷೆ ಆಗಲಿ. ಇದು ನನ್ನ ಆಗ್ರಹ.
' @H_D_Devegowda ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ @siddaramaiah ನವರು *ಇಬ್ಬಗೆಯ ನೀತಿ* ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ!
ಆಣಿಮುತ್ತು ಉದುರಿಸುವ ಭರದಲ್ಲಿ ತಾವೇನು? ತಮ್ಮ ನಿಜಬಣ್ಣವೇನು ಎಂಬುದನ್ನು ಮತ್ತೊಮ್ಮೆ *ಲೋಕಾರ್ಪಿತ* ಮಾಡಿದ್ದಾರೆ!
*ಸಿದ್ದರಾಮಯ್ಯನವರು ಎಂದರೆ ಹಾಗೆಯೇ..
**ದೇಹವೊಂದು, ನಾಲಿಗೆ ಎರಡು!!*
ದೇವೇಗೌಡರು ಸಕ್ರಿಯ ರಾಜಕಾರಣದಲ್ಲಿದ್ದಾರ��. ಅವರ ಬಗ್ಗೆ ಸಿದ್ದರಾಮಯ್ಯನವರು ಸಹಜ, ಸಕಾರಾತ್ಮಕ ಟೀಕೆ ಮಾಡಲಿ. ಬೇಡ ಎಂದವರು ಯಾರು? ಆದರೆ, ಅದೇ *ನಿತ್ಯಕೃಷಿ* ಎಂಬಂತೆ ನಿರಂತರವಾಗಿ ರಾಜಕೀಯ ಜನ್ಮಕೊಟ್ಟ ಮೇರು ನಾಯಕನ ಬಗ್ಗೆಯೇ ವಿಷಕಾರುವುದು ಎಷ್ಟು ಸರಿ?
ಸಿದ್ದರಾಮಯ್ಯನವರು ಜನತಾ ಪರಿವಾರದಲ್ಲಿದ್ದಾಗ *ಇಂದಿರಾ ಗಾಂಧಿ* ಅವರ ಬಗ್ಗೆ ಉದುರಿಸಿದ್ದ *ಭಾರೀ ಭಾರೀ* ಆಣಿಮುತ್ತುಗಳನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಿದೆಯಾ?
ಇಂದಿರಾ ಗಾಂಧಿ ಅವರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರ ಬಗ್ಗೆ ಸಿದ್ದರಾ���ಯ್ಯನವರು ಉದುರಿಸಿದ್ದ ಆಣಿಮುತ್ತುಗಳನ್ನು ಉಲ್ಲೇಖಿಸುವುದು ಅಪ್ರಸ್ತುತ.
ಕೊನೆಪಕ್ಷ, ಹುದ್ದೆಯ ಶಿಷ್ಟಾಚಾರಕ್ಕಾದರೂ ಕಟ್ಟುಬಿದ್ದು ಸಿಎಂ ಅವರು ತಮ್ಮ ನಾಲಿಗೆಗೆ *ಆಚಾರ* ಕಲಿಸಿಕೊಳ್ಳದಿದ್ದರೆ ಅವರು ಹಿಂದೆ ಉದುರಿಸಿದ್ದ ಎಲ್ಲಾ ಆಣಿಮುತ್ತುಗಳನ್ನು ಹೆಕ್ಕಿಹೆಕ್ಕಿ ಇಡಲಾಗುವುದು.
ಹೌದು.. @narendramodi ಅವರ ನಿರ್ಣಯದ ಜಾತಿ ಗಣತಿಯನ್ನು ಜೆಡಿಎಸ್ ಸ್ವಾಗತಿಸಿದೆ.
ಸಿದ್ದರಾಮಯ್ಯನವರೇ, ನಿಮ್ಮ ಜಾತಿಗಣತಿಯನ್ನು ಜೆಡಿಎಸ್ ವಿರೋಧಿಸಿಲ್ಲ, ನೆನಪಿರಲಿ. ಆದರೆ; ನಿಮ್ಮ ಗಣತಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ವಿರೋಧಿಸಿದೆ. ಅದು ಸುಳ್ಳು ಅಂಕಿ-ಅಂಶಗಳ ಕಾಗಕ್ಕಗುಬ್ಬಕ್ಕನ ಕಥೆ ಎಂಬುದನ್ನು ಜನರಿಗೆ ತಿಳಿಸಿದೆ.
ನಿಮ್ಮ *ಗಣತಿಗಾರುಡಿ* ಎಲ್ಲರಂತೆ ನಮಗೂ ಅರ್ಥವಾಗಿದೆ. ನಿಮ್ಮದೇ ಪಕ್ಷದ ಶಾಸಕರು, ಸಚಿವರು ನಿಮ್ಮ ಗಣತಿಯ ಬಾಲ-ಬುಡ ಹಿಡಿದು ಬೀದಿಬೀದಿಯಲ್ಲಿ
ಅಲ್ಲಾಡಿಸುತ್ತಿದ್ದಾರೆ.
*ನಿಮ್ಮ ಸರಕಾರದ ಬುಡವನ್ನೂ ಸಹ..*
ಏನಂತೀರಿ..?
#ಸುಳ್ಳುಗಣತಿ
#ದ್ವೇಷಗಣತಿ
ಕರ್ನಾಟಕ ಲೋಕಸೇವಾ ಆಯೋಗ- ಇಂದು ಇಡೀ ದೇಶಕ್ಕೆ ಒಂದು ಕೆಟ್ಟ ಸಂದೇಶ ರವಾನಿಸಿದೆ. ಒಂದು ಲೋಕಸೇವಾ ಆಯೋಗ ಹೇಗೆ ಮಾದರಿಯಾಗಿ ಇರಬಾರದು ಅನ್ನೊದನ್ನು ಇಡೀ ದೇಶಕ್ಕೆ ತೋರಿಸಿದೆ.
ಪರೀಕ್ಷೆ ಆರಂಭಕ್ಕೂ ಮೊದಲಿನಿಂದಲೂ ಗೊಂದಲ, ತಪ್ಪುಗಳು. ಪರೀಕ್ಷೆಯಲ್ಲಿ ಸಾಲು ಸ���ಲು ತಪ್ಪು, ಎಡವಟ್ಟುಗಳು. ತಪ್ಪು ತಪ್ಪಾಗಿ ಕನ್ನಡದಲ್ಲಿ ಪ್ರಶ್ನೆಗಳ ಪ್ರಕಟ. ಎರಡೆರಡು ಬಾರಿ ಪರೀಕ್ಷೆ, ಅದರಲ್ಲಿಯೂ ಸಾಲು ಸಾಲು ತಪ್ಪುಗಳು. ದುರಾಡಳಿತ ಅನ್ನೊದು ಕೆಪಿಎಸ್ ಸಿ ಮತ್ತು ನಿಮ್ಮ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೆ ತೋರಿಸುತ್ತಿದೆ.
@siddaramaiah ನವರೇ, ಕಳೆದ ಸದನದಲ್ಲಿ ಕೆಪಿಎಸ್ ಸಿ ವಿಚಾರವಾಗಿ "ಸರ್ವಪಕ್ಷ ಸಭೆ ಕರೆಯುತ್ತೇನೆ.. ಎಲ್ಲರಿಂದ ಅಭಿಪ್ರಾಯ ಪಡೆಯುತ್ತೇನೆ.. ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲಾ.." ಹೀಗೆ ಸುಳ್ಳು ಹೇಳಿ ರಾತ್ರೋರಾತ್ರಿ ದುರ��ಡಳಿತದ ಈ ಪರೀಕ್ಷೆ ನಡೆಸಲು ಮುಂದಾಗುತ್ತೀರುವ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ಲವೇ?
ತಡರಾತ್ರಿ ದೂರ��� ಊರಿನಿಂದ ಮಹಿಳೆಯರು ಹೇಗೆ ಬೆಂಗಳೂರಿಗೆ ಬರಲು ಸಾಧ್ಯ? ಕೆಪಿಎಸ್ ಸಿ ಕರ್ನಾಟಕದ ಪಾಲಿಗೆ ಶಾಪದ ಸಂಸ್ಥೆಯಾಗಿದೆ. ಕೆಪಿಎಸ್ ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ ಹಾಗೂ ಸರ್ಕಾರದ ಅತಿದೊಡ್ಡ ವೈಫಲ್ಯಗಳಲ್ಲಿ ಒಂದು..
ನಿಮ್ಮ ದುರಾಡಳಿತದ ಸರ್ಕಾರ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.. ನಿಮಗೆ ಸರ್ಕಾರದ ದುರಾಡಳಿತ ರಾಜ್ಯಕ್ಕೆ ಬೇಡವಾಗಿದೆ. ನಿಮ್ಮ ರಾಜಿನಾಮೆ ಮಾತ್ರ ನ್ಯಾಯ ಒದಗಿಸುತ್ತದೆ.
#CongressFailsKarnataka
#KPSC
ಇದೊಂದು ಐತಿಹಾಸಿಕ ನೇಮಕಾತಿ ಪರೀಕ್ಷೆಯಾಗಿ ದಾಖಲೆ ಸೃಷ್ಟಿಸಲಿದೆ!
ಕೆಎಎಸ್ ಹುದ್ದೆಯ ಪರೀಕ್ಷೆಗೆ ರಾತ್ರಿ 12 ಗಂಟೆವರೆಗೂ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಬೆಳಗ್ಗೆ ಪರೀಕ್ಷೆ ಬರೆಯಬೇಕು!
#kpsc#KASExam
��ೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ!
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ @INCKarnataka ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ @siddaramaiah ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು
ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ.
ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು.
#KPSCMosa
#ಕೆಪಿಎಸ್ಸಿ_ಮೋಸ
ಯಾವ ನಾಡಿನಲ್ಲಿ ಇದೀವಿ ನಾವು #Siddaramaiah ಅವರೆ ನಿಮಗೆ ಮಾನವೀಯತೆ ಇದೀಯ ಛೀ ನಾಚಿಕೆ ಆಗುತಿದೇ ಭ್ರಷ್ಟ #kpsc ಮಾಡುತಿರುವ ದ್ರೋಹ ನಿಮಗೆ ಕಂಡರು ಕಾಣದೆ ಇರುವ ನಿಮಗೆ ದೇವರು ಸರಿಯಾದ ಶಿಕ್ಷೆಯನ್ನೇ ಕೊಡುತಾನೆ ಮಾನವೀಯತೆ ಮರೆತ @KpscSecretary ನಿಮಗೂ ನಿಮ್ಮ ಮಕ್ಕಳಿಗೂ ನಮ್ಮ ಕಣ್ಣೀರು ಶಾಪವಾ��ಿ ನಿಮ್ಮ ಕುಟುಂಬವೇ ಸರ್ವನಾಶವಾಗಲಿ
ದೂರದ ಪರೀಕ್ಷಾ ಕೇಂದ್ರದ ಊರು ತಲುಪಿ ಮುಖ್ಯಪರೀಕ್ಷೆಗೆ ತಯಾರಿ ಆಗುತ್ತಿರುವ ಅಭ್ಯರ್ಥಿಗಳ ಪರವಾಗಿ ಮಾತಾಡಬೇಕಾ?
KAS ಮುಖ್ಯಪರೀಕ್ಷೆಗೆ ಅರ್ಹತೆ ಪಡೆಯದೆ ಹೊರಗುಳಿದ ಅಭ್ಯರ್ಥಿಗಳ ಪರವಾಗಿ ಧ್ವನಿಗೂಡಿಸಬೇಕಾ?
ಪರೀಕ್ಷೆ ಹಿಂದಿನ ದಿನ ಅರ್ಹತೆ ಪಡೆ��ು ಅರ್ಜಿ ಹಾಕಲು KPSC ಮುಂದೆ ಸರಿ ರಾತ್ರಿಯಲ್ಲಿ ಮಳೆಯಲ್ಲಿ ತೋಯುತ್ತಿರುವ ಅಭ್ಯರ್ಥಿಗಳ ಜೊತೆಗೆ ನಿಲ್ಲಬೇಕಾ?
ಎಲ್ಲರೂ ನಮ್ಮವರೇ.
KAS ಕಗ್ಗಂಟು!
KPSC ಮತ್ತೊಮ್ಮೆ ಅಭ್ಯರ��ಥಿಗಳಿಗೆ ದ್ರೋಹ ಬಗೆದ ಸಂಗತಿ ತಿಳಿಯಿತು. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಈ ಆನ್ಲೈನ್ ಕಾಲದಲ್ಲಿ, ಅದೂ ನಡು ರಾತ್ರಿ ತನಕ ಖುದ್ದಾಗಿ ಬಂದು ಅರ್ಜಿ ಸಲ್ಲಿಸಿ ಹಾಲ್ ಟಿಕೆಟ್ ಪಡೆಯಿರಿ ಎನ್ನುವುದು ಸರ್ವಾಧಿಕಾರಿ ಧೋರಣೆ.
ಮಾನ್ಯ ಮುಖ್ಯ ಮಂತ್ರಿಗಳೇ , KPSC ಅನ್ನು ಮುಚ್ಚುವ ಸಮಯ ಬಂದಿದೆ.
#KPSCMosa
ಕರ್ನಾಟಕದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಕೆಪಿಎಸ್ಸಿ!
ಇಂದು ರಾತ್ರಿ 12 ಗಂಟೆಯ ತನಕ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದೆ
ಇದರ ಕಾರ್ಯವೈಖರಿ ಮೆಚ್ಚಬೇಕು!
ಏನ್ರಿ ಇಷ್ಟೊಂದು ಅವಸರ ನಿಮಗೆಲ್ಲಾ? ಏಕೆ ಇಷ್ಟು ಜಿದ್ದಾ ಜಿದ್ದಿ, ಕನ್ನಡದ ಯುವಕರು ಭವಿಷ್ಯದ ಮೇಲೆ ನೀವು ಸಮಾಧಿ ಕಟ್ಟಲು ಹೊರಟಿದ್ದೀರಿ! ಮಾಧ್ಯಮಗಳೇ @tv9kannada ಗಮನಿಸಿ