@CMofKarnataka@siddaramaiah ಸರ್ ಬೆಳಗ್ಗೆಯಿಂದ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುವಡುವ ಕುರಿತು ಪ್ರತಿಭಟನೆ ನಡೆಸುತ್ತಿದ್ದೇವೆ ಆದರೆ ಇಲ್ಲಿಯವರೆಗೂ ನೀವು ಸ್ಪಂದಿಸಿಲ್ಲ ಅನಿರುದಿಷ್ಟಾವಧಿ ಪ್ರತಿಭಟನೆಗೆ ಅವಕಾಶವನ್ನು ಪೊಲೀಸ್ ಇಲಾಖೆ ನೀಡುತ್ತಿಲ್ಲ ಈ ಕೂಡಲೇ ನಾವು ನಿಮ್ಮ ಮನೆ ಬಾಗಿಲಿಗೆ ಬರಲಿದ್ದೇವೆ ನಮಗೆ ನ್ಯಾಯ ಬೇಕು !
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಆಗಸ್ಟ್ 27ರಂದು ನಿಗದಿಯಾಗಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವ ಕುರಿತು ಪ್ರತಿಭಟನೆಯನ್ನು ನಡೆಸುತ್ತಿದೆ ಆದರೆ ಇಲ್ಲಿವರೆಗೂ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ
ಆಮರಣ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ಇದೀಗ ನಿರ್ಧರಿಸಿದ್ದೇವೆ !
@CMofKarnataka@DKShivakumar
ಇಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕೆ.ಎ.ಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಡ ಕುಟುಂಬಗಳಿಂದ ಬಂದು ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಅಹರ್ನಿಶಿ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಾ ಇರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ.
ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿ ಬರೆಯಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷೆಯ ಸೆಂಟರ್ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇರುವ ಒಂದು ಪ್ರತೀತಿಯನ್ನು ಬದಲಿಸಿ ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐ.ಟಿ., ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು, ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತ ಅವೈಜ್ಞಾನಿಕ ವೇಳಾಪಟ್ಟಿಯನ್ನು ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದ ಕೂಪವಾಗಿರುವ ಲೋಕ ಸೇವಾ ಆಯೋಗಕ್ಕೆ ಯೋಗ್ಯ, ಸಮರ್ಥ, ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಲಿ.
@CMofKarnataka I @tv9kannada I @AsianetNewsSN I @NewsFirstKan I @TheSouthfirst I @prajavani I @KannadaPrabha I @KannadaRepublic I @VijayaKarnataka I @Vijayavani_Digi I @DeccanHerald I @Andolanadigital I @StarOfMysore I @AKSSAofficial
The recent rescheduling of the KAS Prelims Exam to August 27th, a weekday, has severely inconvenienced many working professionals. This arbitrary change, combined with exam centers located up to 400 km from candidates' homes, has forced aspirants to stage a protest tomorrow at Freedom Park instead of preparing for their exam.
This mismanagement reflects poorly on the government, which appears indifferent to the concerns of hardworking individuals. This is a pressing matter that impacts the lives of our youth and requires urgent attention. Therefore, I urge the Chief Minister to immediately intervene and address this issue, and implement a solution that accommodates all aspirants.
ಕೆಪಿಎಸ್ಸಿ ಸರ್ವಾಧಿಕಾರಿ ಧೋರಣೆ ವಿರುದ್ಧ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ನಾಳೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ;
ಮಾಧ್ಯಮ ಮಿತ್ರರು , ವಿರೋಧ ಪಕ್ಷದ ನಾಯಕರು
ಜನಪ್ರತಿನಿಧಿಗಳು , ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟದ ತುಡಿತ ಇರುವ ಸಂಘಟನೆಗಳು , ಬೆಂಬಲಿಸಲು ಕೋರುತ್ತೇವೆ ;
ನಾನು 39 ವರ್ಷದ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಅಭ್ಯರ್ಥಿ ನನಗೆ ಇದೇ ಕೊನೆಯ ಅವಕಾಶ
ನಾನು ಖಾಸಗಿ ಕ್ಷೇತ್ರದ ನೌಕರನಾಗಿದ್ದು ಪರೀಕ್ಷೆಯನ್ನು ಕೆಲಸದ ದಿನ ಆಗಸ್ಟ್ 27 ರಂದು ನಿಗದಿ ಮಾಡಿದ್ದೀರಿ
ನಾನು ಅವಕಾಶ ವಂಚಿತನಾಗುತ್ತಿದ್ದೇನೆ ;ಅಭ್ಯರ್ಥಿಯ ಅಳಲು
ಪರೀಕ್ಷೆ ಮುಂದೂಡಿ ನಮ್ಮ ಹಕ್ಕುಗಳನ್ನು ರಕ್ಷಿಸಿ
@CMofKarnataka#postponekas
ಕರ್ನಾಟಕ ಸರ್ಕಾರವಾಗಲಿ, ಕರ್ನಾಟಕ ಲೋಕಸೇವಾ ಆಯೋಗವಾಗಲಿ ತಾವೊಂದು ನೇಮಕಾತಿ ಅಥವಾ ಪರೀಕ್ಷೆ ನಡೆಸಬೇಕಾದರೆ ವಿದ್ಯಾರ್ಥಿ ಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳುವುದು ಸಹಜ ನ್ಯಾಯದ ಪ್ರತೀಕ, ಆದರೆ ಈ ತಿಂಗಳ 27ರಂದು 2023-24 ರ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ತರಾತುರಿಯಲ್ಲಿ ದಿನಾಂಕ ಪ್ರಕಟಿಸಿರುವ ಕೆ.ಪಿ.ಎಸ್.ಸಿ ನಡೆ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.
ಹೊರ ಜಿಲ್ಲೆಗಳಿಂದ ಪರೀಕ್ಷೆಗೆ ಹಾಜರಾಗುವ ಗ್ರಾಮೀಣ ಅಭ್ಯರ್ಥಿಗಳು ಹಾಗೂ ಈಗಾಗಲೇ ಖಾಸಗಿ ಉದ್ಯೋಗ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಆಕಾಂಕ್ಷಿಗಳು ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ವಾರಾಂತ್ಯದ ರಜಾ ದಿನಾಂಕ ನಿಗದಿ ಮಾಡಬೇಕೆಂದು ಮನವಿ ನೀಡಿದ್ದರೂ ಹಠಕ್ಕೆ ಬಿದ್ದಿರುವ ಕೆ.ಪಿ.ಎಸ್.ಸಿ ಪರೀಕ್ಷೆ ಮಾಡಿಯೇ ಸಿದ್ದ ಎಂಬಂತೆ ವರ್ತಿಸುತ್ತಿರುವುದು ಕಠೋರತನದ ನಡೆಯಾಗಿದೆ.
ಅಲ್ಲದೇ 2017-18 ರ ನಂತರ ಈಗಷ್ಟೇ ಪರೀಕ್ಷೆ ನಿಗದಿಯಾಗಿದ್ದು ಕನಿಷ್ಠ 60 ದಿನಗಳಾದರೂ ಕಾಲಾವಕಾಶ ನೀಡದಿರುವ ನಿರ್ಧಾರ ಸರ್ಕಾರದ ಮೇಲೆ ಅನುಮಾನ ಹೆಚ್ಚಿಸಿದೆ.
ವರ್ಷಾನುಗಟ್ಟಲೆ ಕಠಿಣ ಪರಿಶ್ರಮ ಪಟ್ಟು ಪೂರ್ವ ಸಿದ್ಧತೆ ಮಾಡಿಕೊಂಡಿರುವ ಅಭ್ಯರ್ಥಿಗಳ ಮನವಿಯನ್ನು ಸಹಾನುಭೂತಿಯಿಂದ ಪರಿಶೀಲಿಸದೇ ತರಾತುರಿ ನಿರ್ಧಾರ ಕೈಗೊಂಡಿರುವ ಕೆ.ಪಿ.ಎಸ್.ಸಿ ನಡೆ ಖಂಡನೀಯ. ಸರ್ಕಾರ ಹಾಗೂ ಕೆ.ಪಿ.ಎಸ್.ಸಿ ಅಧಿಕಾರಿಗಳು ನಿರ್ಧಾರ ಬದಲಿಸಿ ಪರಿಕ್ಷಾರ್ಥಿ ಉದ್ಯೋಗಾಕಾಂಕ್ಷಿಗಳಿಗೆ ಅನಾನುಕೂಲವಾಗದಂತೆ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸುತ್ತೇನೆ.
#postponekas
#KPSC
@CMofKarnataka@secretarykpsc
245 CTI & 545 Civil PSI ಹುದ್ದೆಗಳ ನೇಮಕಾತಿ ಸೇರಿದಂತೆ ಈಗಾಗಲೇ ನಡೆದಿರುವ ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ ಆದಷ್ಟು ಬೇಗ ಪ್ರಕಟಿಸಬೇಕು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು PC (Civil/CAR/DAR) ಹುದ್ದೆಯಿಂದ ದೂರ ಉಳಿಯುತ್ತಾರೆ. ಇದರಿಂದ ಬೇರೆಯವರಿಗೂ ಅವಕಾಶ ಸಿಗುತ್ತದೆ ಹಾಗೂ ತೇರ್ಗಡೆಯಾದವರಿಗೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
ಪಿ.ಸಿ. ಪರೀಕ್ಷೆಯ ಫಲಿತಾಂಶ ಮೊದಲು ಬಿಡುಗಡೆ ಆಗಿ ನಂತರ ಪಿ.ಎಸ್.ಐ ಆಗಿ ಎರಡರಲ್ಲೂ ತೇರ್ಗಡೆಯಾದವರು ಪಿ.ಸಿ. ಬಿಟ್ಟು ಪಿ.ಎಸ್.ಐ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮತ್ತೆ ಬ್ಯಾಕ್ಲಾಗ್ ಆಗಿ ಸರ್ಕಾರಕ್ಕೂ ಅಭ್ಯರ್ಥಿಗಳಿಗೂ ತೊಂದರೆಯಾಗುವುದು ಖಚಿತ.
ಒಂದು ಉದ್ಯೋಗ ಸಿಗುವುದರಿಂದ ಒಂದು ಮನೆಗೆ ಸಾಕಷ್ಟು ಆರ್ಥಿಕ ನೆರವಾಗುತ್ತದೆ, ಅಭ್ಯರ್ಥಿಯ ಭವಿಷ್ಯ ಸಧೃಡವಾಗುತ್ತದೆ. ಪರೀಕ್ಷೆ ಫಲಿತಾಂಶದ ವಿಳಂಬ, ಅನಿಶ್ಚಿತತೆ, ಅವೈಜ್ಞಾನಿಕ ವೇಳಾಪಟ್ಟಿ, ಅಭ್ಯರ್ಥಿ ಇರುವ ಊರಿಂದ ಬೇರೆ ಊರಿಗೆ ಪರೀಕ್ಷೆ ಸೆಂಟರ್ ನಿಗದಿ ಮಾಡುವುದನ್ನು ಬಿಟ್ಟು ಪರೀಕ್ಷಾರ್ಥಿಗಳ ಪರ ಆಯೋಗ ಕೆಲಸ ಮಾಡಬೇಕು.
@AksaaOfficial I @SRWORLDNEWS I @tv9kannada I
@publictvnews I @KannadaPrabha I @prajavani I
@AsianetNewsSN I
Why is KPSC rushing to conduct the KAS prelims 2024?
Why schedule the KAS prelims on a working day when 2 lakh candidates are appearing?
Why are some exam centers 200 km away from candidates residences?
Why was the question paper printed a month early instead of a week before?
ಇದೇ ಆಗಸ್ಟ್ 27ರಂದು ನಿಗದಿಯಾಗಿರುವ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಗೆ ನೂರಾರು ಗೊಂದಲಗಳಿವೆ/ಪ್ರಶ್ನೆ ;
ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ?
ಪ್ರಶ್ನೆ ಪತ್ರಿಕೆಯನ್ನು ನಿಯಮಬಾಹಿರವಾಗಿ ಮುದ್ರಣ ಮಾಡಿರುವುದು ?
ಕಾರ್ಯನಿಮಿತ್ತ ದಿನದಲ್ಲಿ ಪರೀಕ್ಷೆ ನಡೆಸುತ್ತಿರುವುದು ? ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು !
ಕರ್ನಾಟಕ ಲೋಕ ಸೇವಾ ಆಯೋಗ ಆಯೋಜಿಸಿರುವ KAS ಪರೀಕ್ಷೆ ಇದೆ ಆಗಸ್ಟ್ 27 ರಂದು ನಡೆಯಲಿದ್ದು, ಪರೀಕ್ಷಾರ್ಥಿಗಳಿಗೆ ಈಗಾಗಲೇ ಹಾಲ್ ಟಿಕೆಟ್ ಗಳನ್ನು ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಭಾನುವಾರ ನಡೆಯುವುದು ಅಲಿಖಿತ ನಿಯಮ, ಆದರೆ ಈ ಬಾರಿ ಮಂಗಳವಾರ ನಡೆಯಲಿದೆ.
ಈಗ ಪರೀಕ್ಷಾರ್ಥಿಗಳಿಗೆ ಹೊಸ ಸಮಸ್ಯೆ ಎದುರಾಗಿದ್ದು, ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾರ್ಥಿಗಳು ಇರುವ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹಾಕಿದ್ದಾರೆ. ಮೈಸೂರಿನಲ್ಲಿರುವವರಿಗೆ - ಶಿವಮೊಗ್ಗ, ಚಿತ್ರದುರ್ಗದಲ್ಲಿರುವವರಿಗೆ - ಮಂಗಳೂರು ಹೀಗೆ ಅವೈಜ್ಞಾನಿಕವಾಗಿ ಸ್ಥಳ ನಿಗದಿ ಮಾಡಿದ್ದಾರೆ. ವಾರದ ದಿನ ರಜೆ ಅಲಭ್ಯತೆ ಇರುವ ಸಮಸ್ಯೆದೊಂದಿಗೆ, ಈಗ ಪರೀಕ್ಷಾರ್ಥಿಗಳು ರಾತ್ರಿ ಪ್ರಯಾಣ ಮಾಡಬೇಕು ಹಾಗೂ ದೂರದೂರುಗಳಿಗೆ ಹೋಗಲು ಅನವಶ್ಯಕ ಖರ್ಚು ವೆಚ್ಚ ಮಾಡಿಕೊಳ್ಳಬೇಕು.
ಈ ರೀತಿಯಾದ (ಅ)ವ್ಯವಸ್ಥೆಗೆ ಕಾರಣ ಯಾರು ಹಾಗೂ ಅಭ್ಯರ್ಥಿಗಳ ಸ್ವಂತ ಊರು/ಜಿಲ್ಲೆ ಬಿಟ್ಟು ನೂರಾರು ಕಿಲೋಮೀಟರ್ ದೂರದಲ್ಲಿರುವ ಕೇಂದ್ರಗಳಿಗೆ ಹಾಕಿರುವುದು ಯಾಕೆ ಎಂಬುದನ್ನು ಲೋಕಸೇವಾ ಆಯೋಗ ಸ್ಪಷ್ಟಪಡಿಸಬೇಕು. ಪರೀಕ್ಷೆ ವರದ ದಿನ ಇರುವುದರಿಂದ ಎರಡು ದಿನ ರಜೆ ಪಡೆದು ಹೋಗುವುದು ಅಥವಾ ರಾತ್ರಿ ಪ್ರಯಾಣ ಮಾಡುವುದು ಅಭ್ಯರ್ಥಿಗಳಿಗೆ ಅನವಶ್ಯಕ ಹೊರೆಯಾಗಲಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರು ಕೂಡಲೇ ಇದನ್ನು ಸರಿಪಡಿಸಬೇಕು.
@CMofKarnataka I @tv9kannada I @AsianetNewsSN I
@NewsFirstKan I @prajavani I @Vijayavani_Digi I @VijayaKarnataka I @AKSSAofficial I @karnatakapsc I
@secretarykpsc I @DeccanHerald I @KannadaPrabha I
ಕರ್ನಾಟಕ ಲೋಕಸೇವಾ ಆಯೋಗ (KPSC) ಈ ತಿಂಗಳ 27ರಂದು 2023-24ರ KAS ಪೂರ್ವಭಾವಿ ಪರೀಕ್ಷೆ ನಡೆಸಲು ಎಲ್ಲಿಲ್ಲದ ತರಾತುರಿ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ.
ಪರೀಕ್ಷೆ ಬರೆಯುವವರನ್ನೇ ಚಿತ್ರಹಿಂಸೆಗೆ ಒಳಪಡಿಸಿ KPSCಯು ಪರೀಕ್ಷೆ ನಡೆಸುವ ಆತುರದ ಹಿಂದಿರುವ ದುರುದ್ದೇಶವಾದರೂ ಏನು? ಅನೇಕ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲಿಕ್ಕೇ ಸಾಧ್ಯವಾಗುತ್ತಿಲ್ಲ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ, ಅದರಲ್ಲೂ ಅಂಧ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗುವುದು ಬಹುದೊಡ್ಡ ಸಮಸ್ಯೆಯಾಗಿದೆ.
ಕೆಲವರು ದುಡ್ಡು ಮಾಡಿಕೊಳ್ಳುವುದಕ್ಕೆ ಈ ಪರೀಕ್ಷೆಯನ್ನು ನಡೆಸುತ್ತಿರುವಂತೆ ಕಾಣುತ್ತಿದೆ. 4-5 ವರ್ಷಗಳಿಂದ ಕಷ್ಟಪಟ್ಟು ಓದಿರುವವರಿಗೆ ಅನ್ಯಾಯ ಮಾಡುವ ದುರಾಸೆ ಒಳ್ಳೆಯದಲ್ಲ. @INCKarnataka ಸರಕಾರ ಹಾಗೂ #KPSC ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು. ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಎಲ್ಲಾ ಆಕಾಂಕ್ಷಿಗಳಿಗೂ ಅನುಕೂಲ ಆಗುವ ದಿನಾಂಕ ನಿಗದಿಪಡಿಸಿ ಪರೀಕ್ಷೆ ನಡೆಸಲಿ.
#postponekas
ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಲೋಕಸೇವಾ ಆಯೋಗವು [KPSC] ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಕೇಂದ್ರ ಲೋಕಸೇವಾ ಯೋಗ [UPSC] ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ.
ಆದರೆ, ಲೋಕಸೇವಾ ಆಯೋಗ ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಲೋಕಸೇವಾ ಆಯೋಗವು ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಈಗಾಗಲೇ ಇರುವ ಪ್ರಮಾಣಿತ ಕಾರ್ಯ ವಿಧಾನ (Standard Operating Procedure) ನ ಬಿಟ್ಟು ಅವರ ಇಷ್ಟದಂತೆ ಮುದ್ರಣ ಮಾಡಿಟ್ಟುಕೊಳ್ಳುವುದು ಯಾಕೆ ಅಂತ ತಿಳಿಸಲಿ.
@tv9kannada I @thefileindia I @AsianetNewsSN I
@NewsFirstKan I @prajavani I @KannadaPrabha I
@powertvnews I @AKSSAofficial I @CMofKarnataka I
@timesofindia I
ಗೆಜಿಡೆಟ್ ಪ್ರೊಬೆಷನರಿ ಹುದ್ದೆ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ [KPSC] ಪರೀಕ್ಷಾರ್ಥಿಗಳಿಗೆ ಅನ್ಯಾಯ, ಏಕಪಕ್ಷೀಯ ಧೋರಣೆ, ಆಯೋಗದ ಕೆಲ ಪಟ್ಟಭದ್ರರ ಒತ್ತಡಕ್ಕೆ ಮಣಿದು ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಅನೇಕ ಪರೀಕ್ಷಾರ್ಥಿಗಳು, ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುವುದರಿಂದ ಈ ಹಿಂದೆ ನಾನು ಹೇಳಿದಂತೆ ಕಷ್ಟಪಟ್ಟು, ಉದ್ಯೋಗದಲ್ಲಿದ್ದುಕೊಂಡು ಓದಿದ ಅಭ್ಯರ್ಥಿಗಳಿಗೆ ಅನ್ಯಾಯಾಗುತ್ತದೆ.
2017-18 ನೇ ಬ್ಯಾಚಿನ ಅಭ್ಯರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಕೇವಲು ಒಂದು ತಿಂಗಳು ಮಾತ್ರ ಕೊಟ್ಟಿರುವುದು ತರವಲ್ಲ. ಈ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಪಠ್ಯಕ್ರಮ [syllabus] ವ್ಯಾಪ್ತಿ ಹೆಚ್ಚಾಗಿದ್ದು, ಪಠ್ಯಕ್ರಮದಲ್ಲಿರುವ ವಿಷಯಗಳ ಬಗ್ಗೆ ಸುಧೀರ್ಘ ಅಧ್ಯಯನ ಮಾಡಿದರಷ್ಟೇ ಯಶಸ್ಸು ಸಿಗುತ್ತದೆ. ಪಠ್ಯಕ್ರಮದ ಮನನ, ಪುನರ್ ಮನನ ಮಾಡುವದಕ್ಕೆ ಕಾಲಾವಕಾಶ ಬೇಕಾಗಿರುವುದು ಸಹಜ.
ಪ್ರಶ್ನೆ ಪತ್ರಿಕೆ ಈಗಾಗಲೇ ಮುದ್ರಣ ಆಗಿದೆ, ಪರೀಕ್ಷೆಯನ್ನು ಬೇಗ ಮುಗಿಸಬೇಕು ಎಂಬ ತಾಂತ್ರಿಕ ಕಾರಣಗಳನ್ನೊಡ್ಡುವುದು ತಪ್ಪು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಲೋಕಸೇವಾ ಆಯೋಗದ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಮೇಲಾಗಿ, ವಾರದ ದಿನ ಪರೀಕ್ಷೆ ನಿಗದಿ ಮಾಡುವುದರಿಂದ ಐ.ಟಿ., ಶಿಕ್ಷಕರು, ಸರ್ಕಾರಿ ನೌಕರರು, ಇತರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ರಜೆ ಸಿಗುವುದು ಕಷ್ಟವಾಗುತ್ತದೆ. ಭಾನುವಾರದಂದೇ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವುದು ರೂಡಿಯಲ್ಲಿದೆ. ಇದೆ ವ್ಯವಸ್ಥೆಯನ್ನು ಮುಂದುವರೆಸುವುದನ್ನು ಬಿಟ್ಟು ಸರ್ಕಾರ ಹಾಗೂ ಲೋಕಸೇವಾ ಆಯೋಗ ಈ ಪರೀಕ್ಷೆಯನ್ನು ವಾರದ ದಿನ ನಿಗದಿ ಮಾಡಿರುವುದು ಖಂಡನೀಯ ಹಾಗೂ ತರ್ಕರಹಿತವಾಗಿದೆ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇದೆ ಚಿಂತೆಯಲ್ಲಿದ್ದಾರೆ. ಸರ್ಕಾರ ತನ್ನ ನಿಲುವನ್ನು ಬದಲಿಸಿ ಸದರಿ ಪರೀಕ್ಷೆಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಗೆ ಬದಲಿಸಿ ಆದೇಶ ಹೊರಡಿಸಲಿ.
@tv9kannada I @AsianetNewsSN I @powertvnews I
@KannadaPrabha I @prajavani I @NewsFirstKan I
@News18Kannada I @Vijayavani_Digi I @VijayaKarnataka I @CMofKarnataka I @KAssociaton I @AKSSAofficial I