ಖಾಲಿ ಹುದ್ದೆ ಭರ್ತಿ ಮಾಡದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾಡಿನ ಯುವಜನತೆ ಬೀದಿಗಿಳಿದು ಹೋರಾಟ ಮಾಡಬೇಕು.
- ಶ್ರೀ @hd_kumaraswamy , ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು
@BasanagoudaBJP ಅದೇ ರೀತಿ ಕೆಎಎಸ್ 384 ಹುದ್ದೆಗಳು ಕೂಡ ಕಾಂಗ್ರೆಸ್ ಸರ್ಕಾರದ ದೊಡ್ಡ ಹಗರಣವಾಗಿದೆ ಅನೇಕ ಪ್ರಭಾವಿ ಮಕ್ಕಳನ್��ು ಈ ಹುದ್ದೆಗೆ ಸೇರಿಸಲು ಕೆಪಿಎಸ್ಸಿ ಮೂಲಕ ಸರ್ಕಾರ ಆಕ್ರಮ ವ್ಯಸಗಿದೆ ತಾವುಗಳು ಇದರ ಬಗ್ಗೆ ಧ್ವನಿಯೆತ್ತಿ ಈ ಅಧಿಸೂಚನೆಯನ್ನು ರದ್ದು ಪಡಿಸಬೇಕಾಗಿ ವಿದ್ಯಾರ್ಥಿಗಳ ಪರವಾಗಿ ಕೇಳುತ್ತೇವೆ
@siddaramaiah ಮಾನ್ಯ ಮುಖ್ಯಮಂತ್ರಿಗಳೇ ಬರಿ ಬಾಯಿ ಮಾತಲ್ಲಿ ಈ ರೀತಿ ಸಮಜಾಯಿಸಿ ನೀಡಬೇಡಿ ಉದ್ಯೋಗ ಆಕಾಂಕ್ಷಿಗಳು ನಿಮ್ಮ ಮೇಲೆ ಯಾವುದೇ ನಂಬಿಕೆಯನ್ನು ಇಟ್ಟಿಲ್ಲ ನೀವು ಏನೇ ಸುಳ್ಳು ಹೇಳುವುದಿದ್ದರೂ ಇನ್ನೂ ಎರಡು ವರ್ಷಗಳು ಮಾತ್ರ ಸುಳ್ಳು ಹೇಳುತ್ತೀರಿ ನಂತರ ನಿಮ್ಮನ್ನು ಮನೆಗೆ ಕಳುಹಿಸ���ು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ
@DKShivakumar ಈ ರೀತಿ ವಿಧಾನಸಭೆಯಲ್ಲಿ ಹೇಳಿ ಅಧಿವೇಶನ ಮುಗಿದ ಮೇಲೆ ಇದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುವ ನಿಮ್ಮ ನಡವಳಿಕೆಗೆ ಧಿಕ್ಕಾರ ಕಳೆದ ಅಧಿವೇಶನದಲ್ಲಿ ಕೆಎಎಸ್ ಮರು ಆದಿಸೂಚನೆ ಮಾಡುತ್ತೇವೆಂದು ಮುಖ್ಯಮಂತ್ರಿ ಹೇಳಿದರು ಮಾಡಿಲ್ಲ ಈ ರೀತಿ ಸುಳ್ಳು ಹೇಳಿಕೊಂಡು ಇನ್ನೂ ಎರಡುವರೆ ವರ್ಷ ಕಾಲ ಕಳೆಯಿರಿ ವಿದ್ಯಾರ್ಥಿಗಳು ಬುದ್ಧಿ ಕಲಿಸುವರು
@BasanagoudaBJP@AKSSAofficial ವಿದ್ಯಾರ್ಥಿಗಳ ಕಷ್ಟ ವಿಧಾನಸಭೆಯಲ್ಲಿ ಗಮನಸೆಳೆದ ನಿಮಗೆ ಕೃತಜ್ಞತೆಗಳು ಕೆಎಎಸ್ ಪರೀಕ್ಷೆಯಲ್ಲಿ ಕೆಎಟಿ ಮರುಅಧಿಸೂಚನೆ ಮಾಡಿ ಎಂದು ಹೇಳಿದರುಸರ್ಕಾರ ಕಿವಿಕೊಡುತ್ತಿಲ್ಲ ಸರ್ಕಾರದ ಆದೇಶ ಪ್ರಕಾರ ತಿದ್ದುಪಡಿ ಅಧಿಸೂಚನೆಗಳನ್ನು ರದ್ದುಮಾಡಿ ಒಳಮೀಸಲಾತಿ ಅನ್ವಯಿಸಿ ಮರುಅಧಿಸೂಚನೆ ಮಾಡಬೇಕೆಂದಿದೆ ಆದರೆ ಕೆಎಎಸ್ ವಿಚಾರದಲ್ಲಿ ಕೆಪಿಎಸ್ಸಿ ಮೌನವಹಿಸಿದೆ
ರಾಜ್ಯದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ, ಉದ್ಯೋಗಕ್ಕಾಗಿ ಕಾದು ಕುಳಿತ ಲಕ್ಷಾಂತರ ಪ್ರತಿಭಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಇಂದು ಸದನದಲ್ಲಿ ಸರ್ಕಾರದ ಗಮನಸೆಳೆದು ಒತ್ತಾಯಿಸಿದೆ.
@AKSSAofficial | #CongressFailsKarnataka | #JusticeforJobAspirants
ರಾಜ್ಯದಲ್ಲಿ ಸುಮಾರು 280000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ 9 % ರಷ್ಟು ಮಾತ್ರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ.
ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ.
ಸರ���ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ.
ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸುತ್ತೇನೆ.
@AKSSAofficial I @tv9kannada I @prajavani I @UvEnglish I @publictv I @AsianetNewsSN I
ಎಲ್ಲಿದೆ ಸ್ವಾಮಿ ಉದ್ಯೋಗದ ಗ್ಯಾರೆಂಟಿ?
ಎಲ್ಲಿದೆ ನೇಮಕಾತಿ ಭಾಗ್ಯ?
ಬ್ರೇಕ್ ಫಾಸ್ಟ್ ಮೀಟಿಂಗ್, ಪವರ್ ಶೇರಿಂಗ್ ಅಂತ ದಿನಬೆಳಗಾದರೆ ರಾಜಕಾರಣದಲ್ಲೇ ಕಾಲಹರಣ ಮಾಡುತ್ತಿರುವ @INCKarnataka ಸರ್ಕಾರ ಆಡಳಿತವನ್ನ ಸಂಪೂರ್ಣವಾಗಿ ಮರೆತಿದೆ.
ಕಬ್ಬು, ಮೆಕ್ಕೆಜೋಳ ರೈತರ ಪ್ರತಿಭಟನೆ ನಂತರ ಈಗ ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗ��� ಪ್ರತಿಭಟನೆ
ಉಗ್ರ ಸ್ವರೂಪ ಪಡೆದುಕೊಂಡಿದೆ.
ಸಿಎಂ @siddaramaiah ನವರೇ ಕೂಡಲೇ ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ಹೊರಡಿಸಿ, ಬಂಧಿಸಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳ ಬಿಡುಗಡೆಗೆ ಸೂಚನೆ ನೀಡಿ.
#CongressFailsKarnataka
ಲಕ್ಷಾಂತರ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! 'ಧಾರವಾಡ ಚಲೋ’ ಮೂಲಕ ವಿದ್ಯಾರ್ಥಿಗಳ ನಡೆಸುತ್ತಿರುವ ನ್ಯಾಯಯುತ ಬೃಹತ್ ಪ್ರತಿಭಟನೆಯ ಹಿಂದಿನ ತ��್ಮ ವೈಫಲ್ಯ, ಯುವಜನರ ನೋವು, ಹತಾಶೆಗಳನ್ನು ಗಮನಿಸದೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಲ ಪ್ರಯೋಗದಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಕಷ್ಟಪಟ್ಟು ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವ ನಮ್ಮ ಯುವಜನರ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಉಪಯೋಗಿಸಿರುವುದು ಹೇಯ ಕೃತ್ಯ.
ಜನಪರ ದಾಯಿತ್ವವನ್ನು ಸಂಪೂರ್ಣ ಮರೆತು, ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಈ ಬೇಜವಾಬ್ದಾರಿ ರಾಜ್ಯ ಸರ್ಕಾರ, ನಮ್ಮ ಯು���ಕ-ಯುವತಿಯರ ಭವಿಷ್ಯವನ್ನು ಹಗುರವಾಗಿ ಪರಿಗಣಿಸಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರೇ, ಮೊದಲು ಬಂಧಿತರಾಗಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳನ್ನು ಬಿಡುಗಡೆ ಮಾಡಿ, ಈ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ! ಇನ್ನು ವಿಳಂಬ ಮಾಡದೆ ರಾಜ್ಯ ಸರ್ಕಾರ, ಪರೀಕ್ಷಾರ್ಥಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ನೀಡಬೇಕು.
#CongressFailsKarnataka
@siddaramaiah ಮಾನ್ಯ @CMofKarnataka ಕರ್ನಾಟಕದ ಅತ್ಯುನ್ನತ ನಾಗರಿಕ ಸೇವಾ ಹುದ್ದೆ ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ದೋಷಗಳಿದ್ದು ಕನ್ನಡಿಗರಿಗೆ ಗ್ರಾಮೀಣ ಅಭ್ಯರ್ಥಿಗಳಿಗೆ ಮೋಸವಾಗಿದ್ದು ತಮ್ಮ ಗಮನಕ್ಕೆ ಬಂದಿದ್ದರು ಜಾಣ ಕುರುಡುತನ ಪ್ರದರ್ಶಿಸಿ ಈಗ ಕನ್ನಡ ಬಗ್ಗೆ ಅಭಿಮಾನ ತೋರಿಸಿತ್ತಿರುವುದು ಶೋಚನೀಯ