ಇಂದು ದಿನಾಂಕ 5/06/2026
*ಕಾಂತ್ ಕುಮಾರ್ ಸರ್ ರಾಜ್ಯಾಧ್ಯಕ್ಷರು* (AKSSA )
ನಾಗರಾಜ್ A G
ಬೆಳಗಾವಿ ಜಿಲ್ಲಾಧ್ಯಕ್ಷರು ಇವರ ಮಾರ್ಗದರ್ಶನದಲ್ಲಿ
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘ ಹುಕ್ಕೇರಿ ತಾಲೂಕು ಅಧ್ಯಕ್ಷರಾಗಿ *ಗುರುನಾಥ್* ಅವರನ್ನು ಆಯ್ಕೆ ಮಾಡಲಾಗಿದೆ
ಸ್ಪರ್ಧಾರ್ಥಿಗಳೆಯಲ್ಲಿ ಏನಾದರೂ ತೊಂದರೆ ಉಂಟಾದಲ್ಲಿ ಇವರನ್ನ ಸಂಪರ್ಕಿಸಿ
9591985119
7829745811
ಎಲ್ಲಿಗೆ ಬಂತು?
ಯಾರಿಗೆ ಬಂತು ?
47 ರ ಸ್ವಾತಂತ್ರ್ಯ 💁
ಯವಕರು ನೇಮಕಾತಿ ಪ್ರಶ್ನೆ ಮಾಡಿದರೆ ?
ನಮ್ಮ ಘನ ಸರಕಾರದ ಉತ್ತರ ನೋಡಿ 😇
ಒಮ್ಮೊಮ್ಮೆ ಅನಿಸುತ್ತೆ ಅದೇನೋ ಹೇಳ್ತಾರಲ್ಲಾ
Gen Z ಕ್ರಾಂತಿ ಆಗೆ ಬಿಡಲಿ ನಮ್ಮ ದೇಶದಲ್ಲಿ
ಈ ಹಾಳಾದ ವ್ಯವಸ್ಥೆ ವಿರುದ್ಧ 😏😏😏
ಕೆಲಸ ಕೊಡಿ ಅಂದ್ರೆ - ನಿರುದ್ಯೋಗಿ ಆಗಿದ್ದರೆ
ಬಿಟ್ಟಿ ಕಾಸು ಕೊಡ್ತೀವಿ!
ಅನ್ನೋ ಸರಕಾರಗಳು
ಇವೆ ಅಂದ್ರೆ. ..🤓
ಬದಲಾವಣೆ ಬೇಕಾಗಿರೋದು
ಜನರ ಆಯ್ಕೆ + ಸರಕಾರದ ಆದ್ಯತೆಗಳಲ್ಲಿ 🥺
ಯಾವಾಗ ಈ ಜಾತಿ ನಾಯಕರನ್ನು ಬಿಟ್ಟು
ನಮ್ಮ ಯುವಕರು ಒಂದಾಗುತ್ತಾರೋ 💁
ಎಂಥಾ ಭ್ರಷ್ಟ ಸರ್ಕಾರಗಳು ನಮ್ಮದು, ಜನರ ತೆರಿಗೆ ಹಣ ಲೂಟಿ ಮಾಡಿ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ ಈ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಲ್ಲಿ...
ಜೆಸಿಬಿ ಪಕ್ಷಗಳ ಹಿಂಬಾಲಕರೇ,
ಸ್ವಾರ್ಥಕ್ಕಾಗಿ ನಮ್ಮ ಜಾತಿ ನಾಯಕ, ನಮ್ಮ ಜಾತಿ ನಾಯಕ ಅಂಥ ಜಾತಿ ಧರ್ಮ ಹಣ ಹೆಂಡಕ್ಕೆ ಮಾರಿಕೊಂಡು ಇವತ್ತು ಏನೋ ದೊಡ್ಡ ಸಾಧನೆಗಳು ಮಾಡಿದ್ದಾರೆ ಕರ್ನಾಟಕ ಜನಕ್ಕೆ ಇವರು ಅಂತ ಹೋಗಿದ್ದಿರಲ್ಲಪ್ಪ, ನಾಳೆ ನಿಮ್ಮ ನಿಮ್ಮ ಮಕ್ಕಳ ಪರಿಸ್ಥಿತಿನೂ ಇಷ್ಟೇ...
ಈ ಜೆಸಿಬಿ ಪಕ್ಷಗಳ ಹಿಂಬಾಲಕರ ಬಿಟ್ಟು, ಮುಂದೆ ಬಾಳಿ ಬದುಕಬೇಕಾದ ನಮ್ಮ ಸ್ವಾಭಿಮಾನಿ ಕನ್ನಡ ಯುವಕರು ಎಚ್ಚೆತ್ತುಕೊಂಡರೆ ಕನ್ನಡ, ಕನ್ನಡಿಗ, ಕರ್ನಾಟಕ ಉದ್ದಾರಾಗುತ್ತದೆ...
ಕೊನೆಯದಾಗಿ ನಮ್ಮ ಕನ್ನಡದ ಯುವಕರು ಬರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ Gen Zi ಗಳಾಗಬೇಡಿ🙏, ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಮುಂದಾಗಿ, ತಪ್ಪು ತಿಳಿಯಬೇಡಿ...
KRS ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ..
ಕೃಪೆ: ಗೌರವಾಧ್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರ ಫೇಸ್ಬುಕ್ ನಿಂದ https://t.co/PwcnF8tJm4
ನೆನಪಿರಲಿ, ಭ್ರಷ್ಟರ ದುರಾಡಳಿತದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಗುಂಪು ಸೇರುವ ಸ್ವಾತಂತ್ರ್ಯ, ಇಂತಹ ಯಾವುದೇ ಸಂವಿಧಾನದತ್ತ ಮೂಲಭೂತ ಹಕ್ಕುಗಳೂ ಇರುವುದಿಲ್ಲ. ಕುಕ್ಕರ್, ಲಿಕ್ಕರ್, ನಿಕ್ಕರ್'ಗಳ ದುರಾಸೆಗೆ ಬಲಿಯಾಗಿ, ಉನ್ಮಾದದ ವಿಚಾರಗಳಿಗೆ ಹುಚ್ಚರಾಗಿ, ನಾವು ನಮ್ಮ ಕೈಯಾರೆ ಓಟು ಹಾಕಿ ಚುನಾವಣೆಗಳಲ್ಲಿ ಅಯೋಗ್ಯರನ್ನು ಆರಿಸಿಕೊಂಡರೆ ಹೀಗಾಗದೆ ಇನ್ನೇನು ತಾನೇ ಆಗಲು ಸಾಧ್ಯ?
* 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕು
* KPSC'ಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು
ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಇಂದು ಏಕಾಂಗಿಯಾಗಿ ಮತ್ತು ಶಾಂತಿಯುತವಾಗಿ ಧಾರವಾಡದ DC ಕಚೇರಿಯ ಮುಂಭಾಗದ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎನ್ನುವ ಯುವಕನನ್ನು ಪೊಲೀಸರು ಹೀಗೆ ಬಲಾತ್ಕಾರದಿಂದ ಎಳೆದೊಯ್ದಿದ್ದಾರೆ.
ದುರಹಂಕಾರದಿಂದ ಮೆರೆಯುತ್ತಿರುವ ಮತ್ತು ದುರಾಡಳಿತ ನೀಡುತ್ತಿರುವ ಮುಖ್ಯಮಂತ್ರಿ Siddaramaiah ಸರ್ಕಾರಕ್ಕೆ ಈ ಧರಣಿ ಕುಳಿತ ವ್ಯಕ್ತಿಯು ನಾಡಿನ ಲಕ್ಷಾಂತರ ಯುವಜನರ ನೋವು, ಅಸಹಾಯಕತೆ, ಹತಾಶೆ, ಆಕ್ರೋಶ, ಕನಸುಗಳ ಪ್ರತಿನಿಧಿ ಎಂಬ ಅರಿವಿಲ್ಲ.
ಹೀಗೆ ಹೋರಾಡಿಯೇ ನಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಈ ಯುವಜನರ ಹೋರಾಟವನ್ನು ಮತ್ತು ಆಗ್ರಹಗಳನ್ನು ಬೆಂಬಲಿಸುತ್ತದೆ. JCB ಪಕ್ಷಗಳ ದುರಾಚಾರಗಳು ಕೊನೆಯಾಗದೆ ರಾಜ್ಯದ ಜನರ ಬದುಕು ಹಸನಾಗದು ಎಂದೂ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಸಬಯಸುತ್ತದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
- ರವಿ ಕೃಷ್ಣರೆಡ್ಡಿ,
ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
09-05-2026.
ನಮ್ಮ ಪೋಸ್ಟ್ ಗಳು ದಯವಿಟ್ಟು ಪ್ರತಿಯೊಬ್ಬರು ರಿಪೋಸ್ಟ್ ಮಾಡಿ, ನೀವೇ ನಮ್ಮ ನಿಜವಾದ ಐಟಿ ಸೆಲ್ ಗಳು😊👍🏼
@INCKarnataka ಯುವಕರು ಇಷ್ಟು ದಿನಗಳಿಂದ ಮನವಿ ಮಾಡಿದರೂ ನೇಮಕಾತಿ ಅಧಿಸೂಚನೆ ಹೊರಡಿಸಲಿಲ್ಲ. ಈಗ GBA ಚುನಾವಣೆ ಘೋಷಣೆ ಆದ ತಕ್ಷಣ “ಎಲ್ಲ ಸಿದ್ಧತೆ ಆಗಿತ್ತು, ಆದರೆ ಎಲೆಕ್ಷನ್ ಕಾರಣದಿಂದ ತಡವಾಗಿದೆ” ಎನ್ನುವುದು ಯುವಕರಿಗೆ ನ್ಯಾಯವಲ್ಲ. @kharge@siddaramaiah ಅವರು ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಬೇಡ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ನೇಮಕಾತಿ ಅಧಿಸೂಚನೆ ಪ್ರಕಟವಾಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಯುವಕರ ಧ್ವನಿಗೆ ಸರ್ಕಾರ ಸ್ಪಂದಿಸಬೇಕು.
#RecruitmentNow #KarnatakaJobs #YouthVoice #JobNotification #KarnatakaYouth
To,
@compolhdc
ವಿಷಯ :- ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು. ಇದೇ ತಿಂಗಳು ಮೇ /20/2026 ರಂದು 2000 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆ ಮತ್ತು ದಿನಾಂಕ 20/5/2026 ರಿಂದ DC ಕಚೇರಿ ಮುಂದೆ 100 ಜನರಿಗೆ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ಅನುಮತಿ ಕೋರಿ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ KPSC ಯಲ್ಲಿ ನಡೆದಿರುವ ಎಲ್ಲಾ ಪರೀಕ್ಷೆಗಳಲ್ಲಿ ಅಕ್ರಮವಾಗಿರುವುದನ್ನು ಕೂಡಲೇ CBI ತನಿಖೆಗೆ ಕೊಡಬೇಕೆಂದು ಲಕ್ಷಾಂತರ ಯುವಕರ ಪರವಾಗಿ ಕೇಳಿಕೊಳ್ಳುತ್ತೇವೆ ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಸುಮಾರು 2,84,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಕಳೆದ 5-6 ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರಿಯಾದ ನೇಮಕಾತಿ ನಡೆಯುತ್ತಿಲ್ಲದರ ಪರಿಣಾಮ ರಾಜ್ಯದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಹಾಗೆ ಅಕ್ಸಾ ಸಂಘಟನೆಯ ಕಾಂತ ಕುಮಾರ್ ಸರ್ ಮತ್ತು ಮುಖಂಡರುಗಳ ನೇತೃತ್ವದಲ್ಲಿ ಹಲವಾರು ಹೋರಾಟಗಳನ್ನು ಕೂಡ ಕೈಗೊಂಡಿರುತ್ತೇವೆ.ಇದರ ಪರಿಣಾಮವಾಗಿ ಸರ್ಕಾರ ಮೂವತ್ತು (30) ದಿನದೊಳಗೆ ನೇಮಕಾತಿಯನ್ನು ಪ್ರಾರಂಭ ಮಾಡುವದಾಗಿ ಮೂರು ಬಾರಿ ಸುಳ್ಳು ಭರವಸೆ ನೀಡಿ ರಾಜ್ಯದ ಯುವಕರನ್ನ ಯಾಮಾರಿಸುತ್ತಿದ್ದಾರೆ ಇವಾಗ ಮತ್ತೆ ವಿಳಂಬ ಮಾಡಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ ಹಾಗೇ ಆಗುತ್ತದೆ ಈ ಕೂಡಲೇ ಸರ್ಕಾರ ನೀಡಿರುವ ಬರವಸೆ ಯಂತೆ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಲಕ್ಷಾಂತರ ಬಡ ವಿದ್ಯಾರ್ಥಿಗಳ ಪರವಾಗಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಿ ಮತ್ತು KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು ಇದೇ ತಿಂಗಳು ಮೇ /20/2026 ರಂದು 2000 ಜನ ಸ್ಪರ್ಧಾತ್ಮಕ ಆಕಾಂಕ್ಷಿಗಳು ಧಾರವಾಡದಲ್ಲಿರುವ ಶ್ರೀನಗರ ದಿಂದ DC ಕಚೇರಿಯ ತನಕ ಶಾಂತಿಯುತ ಪಾದಯಾತ್ರೆ ಮೂಲಕ ಪ್ರತಿಭಟನೆಗೆ ಮತ್ತು ದಿನಾಂಕ 20/5/2026 ರಿಂದ DC ಕಚೇರಿ ಮುಂದೆ 100 ಜನರಿಗೆ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ಅನುಮತಿ ಕೋರಿ.
ಧನ್ಯವಾದಗಳೊಂದಿಗೆ.
@eshwar_khandre@HKPatilINC@akssaofficial@blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
ಈ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 1 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿದ್ದು ಎಷ್ಟು ಸುಳ್ಳೋ, KPSC ಸುಧಾರಣೆ ಅನ್ನೋದು ಕೂಡ ಅದಕ್ಕಿಂತ ದೊಡ್ಡ ಸುಳ್ಳು ಸುಮ್ನೆ ಸಮಾಧಾನಕರ ಬಹುಮಾನ ಇದ್ದ ಹಾಗೆ ಇದು kpsc ಬಗ್ಗೆ ಇತ್ತೀಚಿಗೆ ತುಂಬಾ ನೆಗೆಟಿವ್ ಜಾಸ್ತಿ ಆಗುತ್ತಿರುವ ಕಾರಣ ಇದೊಂದು ಗಿಮಿಕ್ ಅಷ್ಟೇ ಸಂತೋಷ ಸುಧಾರಣೆ ಆದ್ರೆ, ಒಂದು ಗಮನಿಸಬೇಕು ಹಳೆ ಅಧಿಸೂಚನೆಗಳು ಮುಗಿದ ಮೇಲೆ ಯಾಕೆ ಹೊಸ ಅಧಿಸೂಚನೆ ಮತ್ತಷ್ಟು ವಿಳಂಬ ಮಾಡೋ ಪ್ಲಾನ್ ಏನು ಇದು,ಅಧಿಸೂಚನೆ ಮಾಡಿ ಮೊದಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿ ಜೊತೆಗೆ ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಇಂತ ಆಟಗಳು ತುಂಬಾ ನೋಡಿ ಆಗಿದೆ.
ಒಂದು ದಿನದಲ್ಲಿ, ನಾಳೆ,ಅದರ ಮರುದಿನ,ಒಂದು ವಾರದಲ್ಲಿ ಅಧಿಸೂಚನೆ ಮಾಡುತ್ತೇವೆ ಈ ರೀತಿ ನಿಮ್ಮ ಜಗತ್ತಿನ ನಂಬರ್ 1 ಸುಳ್ಳು ಹೇಳಿಕೆಗಳನ್ನು ಕೇಳಿ ಈಗ ನಿಮ್ಮ ಮಾತುಗಳನ್ನು ನಂಬುವರು ಒಬ್ಬರು ಇಲ್ಲ ಇಲ್ಲಿ.