ಇದೊಂದು ವ್ಯವಸ್ಥೆಯೊಳಗೆ ನುಸುಳಿರುವ ಕನ್ನಡ ವಿರೋಧಿಗಳ ಬೇಜವಾಬ್ದಾರಿ ಜೊತೆಗೆ ಗುಪ್ತ ಅಜೆಂಡಾದಂತೆ ಅನಿಸುತ್ತದೆ ಬಹಳ ಕಾಲದಿಂದ ಇದಕ್ಕೊಂದು ಪ್ಯಾಟರ್ನ್ ಕೂಡ ಇದೆ , ಕೆಪಿಎಸ್ಸಿ ಕೆಎಎಸ್ ಪರೀಕ್ಷೆಯನ್ನು ಮುಲಾಜಿಲ್ಲದೆ ಮರು ಪರೀಕ್ಷೆ ನಡೆಸಲೇಬೇಕು;
ಕವಿರಾಜ್ ಖ್ಯಾತ ಚಿತ್ರ ಸಾಹಿತಿ #KPSCಮೋಸ#KPSC_Mosa#KASReExam
Sir, How could you be so apathetic towards regional students?
Come on!!! You are in a responsible position. At least, you cannot speak like this.@gyanendraias16#ಅಜ್ಞಾನೇಂದ್ರ
@siddaramaiah@CMofKarnataka ಈ ಬಾರಿ ಚುನಾವಣೆಯಲ್ಲಿ ಅತಿ ಹೆಚ್ಚು ಯುವ ಸಮೂಹ ನಿಮ್ಮ ಗೆಲುವಿಗೆ ಕಾರಣವಾಗಿದೆ ;
ದಯವಿಟ್ಟು ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ಮುಂದುಡಿ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಗೌರವಿಸಿ ಯುವ ರಾಮಯ್ಯ ಎನಿಸಿಕೊಳ್ಳಿ ;
ಗೊಂದಲದಲ್ಲಿ ಪರೀಕ್ಷೆ ಬೇಡ !
#postponekas
245 CTI & 545 Civil PSI ಹುದ್ದೆಗಳ ನೇಮಕಾತಿ ಸೇರಿದಂತೆ ಈಗಾಗಲೇ ನಡೆದಿರುವ ಲಿಖಿತ ಪರೀಕ್ಷೆಗಳ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗ ಆದಷ್ಟು ಬೇಗ ಪ್ರಕಟಿಸಬೇಕು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು PC (Civil/CAR/DAR) ಹುದ್ದೆಯಿಂದ ದೂರ ಉಳಿಯುತ್ತಾರೆ. ಇದರಿಂದ ಬೇರೆಯವರಿಗೂ ಅವಕಾಶ ಸಿಗುತ್ತದೆ ಹಾಗೂ ತೇರ್ಗಡೆಯಾದವರಿಗೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ.
ಪಿ.ಸಿ. ಪರೀಕ್ಷೆಯ ಫಲಿತಾಂಶ ಮೊದಲು ಬಿಡುಗಡೆ ಆಗಿ ನಂತರ ಪಿ.ಎಸ್.ಐ ಆಗಿ ಎರಡರಲ್ಲೂ ತೇರ್ಗಡೆಯಾದವರು ಪಿ.ಸಿ. ಬಿಟ್ಟು ಪಿ.ಎಸ್.ಐ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮತ್ತೆ ಬ್ಯಾಕ್ಲಾಗ್ ಆಗಿ ಸರ್ಕಾರಕ್ಕೂ ಅಭ್ಯರ್ಥಿಗಳಿಗೂ ತೊಂದರೆಯಾಗುವುದು ಖಚಿತ.
ಒಂದು ಉದ್ಯೋಗ ಸಿಗುವುದರಿಂದ ಒಂದು ಮನೆಗೆ ಸಾಕಷ್ಟು ಆರ್ಥಿಕ ನೆರವಾಗುತ್ತದೆ, ಅಭ್ಯರ್ಥಿಯ ಭವಿಷ್ಯ ಸಧೃಡವಾಗುತ್ತದೆ. ಪರೀಕ್ಷೆ ಫಲಿತಾಂಶದ ವಿಳಂಬ, ಅನಿಶ್ಚಿತತೆ, ಅವೈಜ್ಞಾನಿಕ ವೇಳಾಪಟ್ಟಿ, ಅಭ್ಯರ್ಥಿ ಇರುವ ಊರಿಂದ ಬೇರೆ ಊರಿಗೆ ಪರೀಕ್ಷೆ ಸೆಂಟರ್ ನಿಗದಿ ಮಾಡುವುದನ್ನು ಬಿಟ್ಟು ಪರೀಕ್ಷಾರ್ಥಿಗಳ ಪರ ಆಯೋಗ ಕೆಲಸ ಮಾಡಬೇಕು.
@AksaaOfficial I @SRWORLDNEWS I @tv9kannada I
@publictvnews I @KannadaPrabha I @prajavani I
@AsianetNewsSN I
ಗೆಜಿಡೆಟ್ ಪ್ರೊಬೆಷನರಿ ಹುದ್ದೆ ವಿಚಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ [KPSC] ಪರೀಕ್ಷಾರ್ಥಿಗಳಿಗೆ ಅನ್ಯಾಯ, ಏಕಪಕ್ಷೀಯ ಧೋರಣೆ, ಆಯೋಗದ ಕೆಲ ಪಟ್ಟಭದ್ರರ ಒತ್ತಡಕ್ಕೆ ಮಣಿದು ಅಭ್ಯರ್ಥಿಗಳಿಗೆ ಮಾಡುತ್ತಿರುವ ಅನ್ಯಾಯದ ಬಗ್ಗೆ ಅನೇಕ ಪರೀಕ್ಷಾರ್ಥಿಗಳು, ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ. ತರಾತುರಿಯಲ್ಲಿ ಪರೀಕ್ಷೆ ನಡೆಸುವುದರಿಂದ ಈ ಹಿಂದೆ ನಾನು ಹೇಳಿದಂತೆ ಕಷ್ಟಪಟ್ಟು, ಉದ್ಯೋಗದಲ್ಲಿದ್ದುಕೊಂಡು ಓದಿದ ಅಭ್ಯರ್ಥಿಗಳಿಗೆ ಅನ್ಯಾಯಾಗುತ್ತದೆ.
2017-18 ನೇ ಬ್ಯಾಚಿನ ಅಭ್ಯರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಕೇವಲು ಒಂದು ತಿಂಗಳು ಮಾತ್ರ ಕೊಟ್ಟಿರುವುದು ತರವಲ್ಲ. ಈ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿರುವ ಪಠ್ಯಕ್ರಮ [syllabus] ವ್ಯಾಪ್ತಿ ಹೆಚ್ಚಾಗಿದ್ದು, ಪಠ್ಯಕ್ರಮದಲ್ಲಿರುವ ವಿಷಯಗಳ ಬಗ್ಗೆ ಸುಧೀರ್ಘ ಅಧ್ಯಯನ ಮಾಡಿದರಷ್ಟೇ ಯಶಸ್ಸು ಸಿಗುತ್ತದೆ. ಪಠ್ಯಕ್ರಮದ ಮನನ, ಪುನರ್ ಮನನ ಮಾಡುವದಕ್ಕೆ ಕಾಲಾವಕಾಶ ಬೇಕಾಗಿರುವುದು ಸಹಜ.
ಪ್ರಶ್ನೆ ಪತ್ರಿಕೆ ಈಗಾಗಲೇ ಮುದ್ರಣ ಆಗಿದೆ, ಪರೀಕ್ಷೆಯನ್ನು ಬೇಗ ಮುಗಿಸಬೇಕು ಎಂಬ ತಾಂತ್ರಿಕ ಕಾರಣಗಳನ್ನೊಡ್ಡುವುದು ತಪ್ಪು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಲೋಕಸೇವಾ ಆಯೋಗದ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ಮೇಲಾಗಿ, ವಾರದ ದಿನ ಪರೀಕ್ಷೆ ನಿಗದಿ ಮಾಡುವುದರಿಂದ ಐ.ಟಿ., ಶಿಕ್ಷಕರು, ಸರ್ಕಾರಿ ನೌಕರರು, ಇತರೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ರಜೆ ಸಿಗುವುದು ಕಷ್ಟವಾಗುತ್ತದೆ. ಭಾನುವಾರದಂದೇ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವುದು ರೂಡಿಯಲ್ಲಿದೆ. ಇದೆ ವ್ಯವಸ್ಥೆಯನ್ನು ಮುಂದುವರೆಸುವುದನ್ನು ಬಿಟ್ಟು ಸರ್ಕಾರ ಹಾಗೂ ಲೋಕಸೇವಾ ಆಯೋಗ ಈ ಪರೀಕ್ಷೆಯನ್ನು ವಾರದ ದಿನ ನಿಗದಿ ಮಾಡಿರುವುದು ಖಂಡನೀಯ ಹಾಗೂ ತರ್ಕರಹಿತವಾಗಿದೆ. ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಇದೆ ಚಿಂತೆಯಲ್ಲಿದ್ದಾರೆ. ಸರ್ಕಾರ ತನ್ನ ನಿಲುವನ್ನು ಬದಲಿಸಿ ಸದರಿ ಪರೀಕ್ಷೆಯನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಗೆ ಬದಲಿಸಿ ಆದೇಶ ಹೊರಡಿಸಲಿ.
@tv9kannada I @AsianetNewsSN I @powertvnews I
@KannadaPrabha I @prajavani I @NewsFirstKan I
@News18Kannada I @Vijayavani_Digi I @VijayaKarnataka I @CMofKarnataka I @KAssociaton I @AKSSAofficial I
#kpsc#cti ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ ಎಂಟು ತಿಂಗಳಾಗಿವೆ ಒಂದು ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಳಿಸಲು ಎಷ್ಟು ವರ್ಷಗಳು ಬೇಕು?
ನಿರುದ್ಯೋಗದಿಂದ ಅಭ್ಯರ್ಥಿಗಳ ಬದುಕು ನರಕ ಸದೃಶವಾಗಿದೆ ನಾಡಿನ ವಿದ್ಯಾರ್ಥಿಗಳ ಮೇಲೆ ಸ್ವಲ್ಪವಾದರೂ ಕನಿಕರವಿದ್ದರೆ ದಯವಿಟ್ಟು ಫಲಿತಾಂಶ ಬಿಡುಗಡೆಗೊಳಿಸಿ. @secretarykpsc@siddaramaiah
ಅವೈಜ್ಞಾನಿಕವಾದ ಪರೀಕ್ಷಾ ವೇಳಾಪಟ್ಟಿಯನ್ನು ಬದಲಿಸಿ ನಮ್ಮ ಕನ್ನಡ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿ. ತಿಂಗಳುಗಟ್ಟಲೆ ತಯಾರಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಬೇಡಿ. ಹಾಗೆಯೇ, ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನು ಕೂಡಲೇ ಬಿಡುಗಡೆ ಮಾಡಿ ಹಾಗೂ ಫಲಿತಾಂಶ ವಿಳಂಬ ಆಗಿರುವುದಕ್ಕೆ ಸೂಕ್ತ ಕಾರಣ/ಸಮಜಾಯಿಷಿ ನೀಡಿ. ಸ್ವಹಿತಾಸಕ್ತಿಗಳಿಗೆ, ರಾಜಕೀಯ ಒತ್ತಡಕ್ಕೆ ಮಣಿದು ಫಲಿತಾಂಶ ಮುಂದೂಡುವುದು ಅಭ್ಯರ್ಥಿಗಳಿಗೆ ಮಾಡುವ ಅನ್ಯಾಯ.
#PostponeKASExams
@secretarykpsc CTI ಹುದ್ದೆಗಳಿಗೆ ಪರೀಕ್ಷೆ ನಡೆದು ಸುಮಾರು 6 ತಿಂಗಳಾಗುತ್ತಾ ಬಂದರೂ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ.ಕೂಡಲೇ ಕಡ್ಡಾಯ ಕನ್ನಡ ಮತ್ತು 1:3ಮೆರಿಟ್ ಲಿಸ್ಟ್ ಅನ್ನು ಅಂಕಪಟ್ಟಿಯೊಂದಿಗೆ ಬಿಡುಗಡೆಗೊಳಿಸಿ ಹಾಗೂ LAND SURVEYOR ಹುದ್ದೆಗಳಿಗೆ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಬೇಕಾಗಿ ಕೋರುತ್ತೇವೆ.@CMofKarnataka
ಅಲ್ಲರೀ ಉಳಿದ 24 ಜಿಲ್ಲೆಯ ಜನ ಪ್ರತಿನಿಧಿಗಳು ಏನ್ ಮಾಡತ್ತಿದ್ದೀರಾ? ಅಂತ ನಾನು ಕೇಳತ್ತಿದ್ದೀನಿ, ಮುಂದಿನ ನೇಮಕಾತಿಗಳಲ್ಲಿ 371j ಹೈದರಾಬಾದ್ ಕರ್ನಾಟಕ ಮೀಸಲಾತಿ ಅನುಷ್ಠಾನ ವಿಚಾರದಲ್ಲಿ ಉಂಟಾಗುವ ಎಲ್ಲಾ ರೀತಿಯ ಗೊಂದಲಗಳಿಗೆ@ priyank Kharge ಅವರು ಮತ್ತು DPAR ಅಧಿಕಾರಿಗಳೇ ನೇರ ಹೊಣೆ ಎಂಬುದು ನದಲ್ಲಿ ಇರಲಿ..!
ದಿನಾಂಕ28-8-2023 ರಲ್ಲಿ ಅಧಿಸೂಚನೆಯಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗಳಿಗೆ 21-01-2024ರಲ್ಲಿ ಪರೀಕ್ಷೆ ನಡೆದಿರುತ್ತದೆ.ಪರೀಕ್ಷೆ ನಡೆದು 6 ತಿಂಗಳಾದರೂ 1:3 ಮೆರಿಟ್ ಲಿಸ್ಟ್ಅನ್ನು ಬಿಟ್ಟಿರುವುದಿಲ್ಲ. ಕೂಡಲೇ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ ಮತ್ತು 1:3 cti ಮೆರಿಟ್ ಲಿಸ್ಟ್ ಬಿಡುಗಡೆಗೊಳಿಸಬೇಕಾಗಿ ವಿನಂತಿ.@secretarykpsc
@secretarykpsc ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿದ್ದ ಗ್ರೂಪ್ ಬಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆ ಹಾಗೂ ಶುಲ್ಕ ಪಾವತಿಯ ಸಮಸ್ಯೆ ಎದುರಾಗಿದ್ದು ಸಾವಿರಾರು ಜನ ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದಾರೆ ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲು ಮನವಿ
@DrParameshwara@DgpKarnataka ಮಾನ್ಯರೇ @KEA_karnataka ಇಲಾಖೆಯು #PSI545 ಹುದ್ದೆಗಳಿಗೆ ಪರೀಕ್ಷೆ ನಡೆಸಿ 28/03/2024 ರಂದು ಅಂಕಪಟ್ಟಿ ಪ್ರಕಟಿಸಿ
ಅಂತಿಮ ಪಟ್ಟಿ ಪ್ರಕಟಿಸಲು ನಿಮ್ಮ ಸುಪರ್ದಿಗೆ ನೀಡಿದ್ದಾರೆ
ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ ಕೂಡಲೇ ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ
#PSI545RESULT
ರಾಜ್ಯದಲ್ಲೇ ಅತ್ಯಂತ ಬೇಜವಾಬ್ದಾರಿ ಇಲಾಖೆ ಎಂದರೆ ಅದು @KEA_karnataka VAO ಹುದ್ದೆಗಳಿಗೆ 2 ದಿನದಿಂದ ಸರ್ವರ್ ಸಮಸ್ಯೆಯಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ
ಈಗಾಗಲೇ ಇದ್ದ ಶುಲ್ಕ ಸಮಸ್ಯೆ ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ ! ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ @drmcsudhakar@CMofKarnataka
@DKShivakumar Sir "ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ? ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು KPSC ಗೆ ಕೇವಲ 90 ಹುದ್ದೆಗಳ ಭರ್ತಿಗೆ ಅನುಮೋದನೆಗೆ ಕಳಿಸಿದ್ದೀರಿ ಲಕ್ಷಾಂತರ ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗದಿಂದ ಬಳಲುತ್ತಿದ್ದಾರೆ ಈ ಕೂಡಲೇ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ