ಮಾನ್ಯ ಗೃಹ ಸಚಿವ @PriyankKharge ಅವರೇ ನೀವು ಹೇಳುತ್ತೀರಿ ದ್ವೇಷ ಭಾಷಣ ಮಾಡುವವರನ್ನು ಬಿಡುವುದಿಲ್ಲ ಎಂದು.. ಇಲ್ಲಿ ನಿಮ್ಮ ಇಲಾಖೆಯ ಸಿಬ್ಬಂದಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ರಿಗೆ FIR ಆದ ನಂತರ ನೋಟೀಸ್ ಕೊಡುವ ರೀತಿ ನೋಡಿ! ಉಡುಪಿ ಬೆತ್ತಲೆ ಪ್ರಕರಣದ ಆರೋಪಿ, ದ್ವೇಷ ಭಾಷಣ ಮಾಡಿದ ಆರೋಪಿಗೆ ಈ ಮಟ್ಟಿನ ಸೆಲ್ಯೂಟ್ ಹೊಡೆದು ಗೌರವ ಬೇಕಾ?
ದ್ವೇಷ ಭಾಷಣಕಾರರ ವಿರುದ್ಧದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು.
ಸಮಾಜದಲ್ಲಿ ದ್ವೇಷವನ್ನು ಪ್ರಚೋದಿಸುವ ಹೇಳಿಕೆಗಳು ಹೆಚ್ಚುತ್ತಿರುವುದು ಇನ್ನಷ್ಟು ಚಿಂತಾಜನಕ. ದ್ವೇಷ ಭಾಷಣಗಳು ಸಮಾಜದ ಏಕತೆಯನ್ನು ದುರ್ಬಲಗೊಳಿಸಿ, ಯುವಜನತೆಯ ದಿಕ್ಕುತಪ್ಪಿಸುವ ಅಪಾಯವನ್ನುಂಟುಮಾಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರಿಗೂ ಸಮುದಾಯಗಳ ವಿರುದ್ಧ ಅವಹೇಳನ ಮಾಡುವ ಹಕ್ಕಿಲ್ಲ. ಆದ್ದರಿಂದ, ಇಂತಹ ದ್ವೇಷ ಭಾಷಣಕಾರರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹ.
ಹುಬ್ಬಳ್ಳಿ ನಗರದ ವಾರ್ಡ್ ನಂ.79ರ ಎಸ್.ಎಂ. ಕೃಷ್ಣ ನಗರದಲ್ಲಿ SDPI ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲಿನ ನೇರ ದಾಳಿ. ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್ ಅವರನ್ನು ಪ್ರಶ್ನಿಸಿದ ಕಾರಣಕ್ಕೆ, ಗುಂಪೊಂದು ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಸ್ವೀಕಾರಾರ್ಹ.
ಈ ದಾಳಿಯಲ್ಲಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವುದು ಕಳವಳಕಾರಿ. ಜನರ ಪರವಾಗಿ ಧ್ವನಿ ಎತ್ತುವವರನ್ನು ಹಿಂಸೆಯಿಂದ ಮೌನಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.
ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
@HMOKarnataka @DGP_Karnataka @CPHubballi @DC_Dharwad
#Hubballi #SDPI #JusticeForSDPIWorkers #Democracy #Karnataka #StopPoliticalViolence
मैं जंतर-मंतर से सोनम वांगचुक को जबरन हटाए जाने की कड़ी निंदा करता हूँ। 21 दिनों से जारी उनके शांतिपूर्ण आमरण अनशन को बलपूर्वक समाप्त करना लोकतांत्रिक मूल्यों पर आघात है। सरकार को दमन नहीं, बल्कि संवाद के माध्यम से उनकी और प्रदर्शनकारियों की जायज़ मांगों का समाधान करना चाहिए। #SonamWangchuk #RightToProtest #Democracy #Ladakh #NEET #SDPI
ಹಾಸನದಲ್ಲಿ ನಡೆದ ಘಟನೆ: ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸ್ – ನ್ಯಾಯ ಎಲ್ಲಿದೆ..?
ಹಾಸನದಲ್ಲಿ ನಡೆದಿರುವ ಒಂದು ಅನುಮಾನಾಸ್ಪದ ಸಾವಿನ ದುರ್ಘಟನೆ ಮತ್ತೊಮ್ಮೆ ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಬಯಲಿಗೆಳೆಯುತ್ತಿದೆ. ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡ ದುಃಖದಲ್ಲಿರುವಾಗ, ಮೃತನ ತಾಯಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಶಯಾಸ್ಪದ ವ್ಯಕ್ತಿಗಳ ದೂರು ನೀಡಲು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಹೋದರೂ ಸಹ ದೂರು ದಾಖಲಿಸದೇ ಹಿಂತಿರುಗಿಸಿರುವುದು ಅತ್ಯಂತ ಖಂಡನೀಯವಾಗಿದೆ.
ನ್ಯಾಯಕ್ಕಾಗಿ ಅಲೆದಾಡುತ್ತಿರುವ ತಾಯಿಯ ನೋವು ಕೇವಲ ಒಂದು ಕುಟುಂಬದ ನೋವಲ್ಲ ಇದು ನಮ್ಮ ಕಾನೂನು ಮತ್ತು ವ್ಯವಸ್ಥೆಯ ಮೇಲೆ ಜನರ ವಿಶ್ವಾಸವನ್ನು ಕುಗ್ಗಿಸುವ ಸಂಗತಿಯಾಗಿದೆ.
ಪೊಲೀಸರು ಜನರ ರಕ್ಷಣೆಗೆ ಇರುವವರು. ಆದರೆ ಇದೇ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸುವುದು ಯಾವ ರೀತಿಯ ಕರ್ತವ್ಯ ನಿರ್ವಹಣೆ..? ಸಾಮಾನ್ಯ ನಾಗರಿಕರು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು..?
ಈ ಹಿನ್ನೆಲೆಯಲ್ಲಿ, ಮೃತನ ತಾಯಿ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಹಾಗಾಗಿ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳು @SPHassan2 ಈ ಪ್ರಕರಣವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ ತಕ್ಷಣ ದೂರು ದಾಖಲಿಸಿಕೊಂಡು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪೀಡಿತ ಕುಟುಂಬಕ್ಕೆ ನ್ಯಾಯ ದೊರಕಬೇಕೆಂದು ಆಗ್ರಹಿಸುತ್ತೇನೆ.
ಈ ವಿಷಯದಲ್ಲಿ ಮಾನ್ಯ ಗೃಹ ಸಚಿವರಾದ @PriyankKharge ರವರ ಗಮನಕ್ಕೂ ತರುತಿದ್ದೇನೆ.
@HassanPolice
ನ್ಯಾಯವು ತಡವಾದರೆ ಅದು ಅನ್ಯಾಯವಾಗುತ್ತದೆ. ಇನ್ನಷ್ಟು ವಿಳಂಬವಾಗುವುದಕ್ಕೂ ಮುನ್ನ ಕ್ರಮ ಕೈಗೊಳ್ಳಿ.
#JusticeForVictim #Hassan #PoliceAccountability #StopInjustice #Karnataka
ಸಂಘಪರಿವಾರದ ಕಾರ್ಯಕರ್ತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿ 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆಗೆ ರಾಜ್ಯ ಸಾಕ್ಷಿಯಾಗಿದೆ!
ದಿನ ಬೆಳಗಾದರೆ ಹಿಂದೂ ಹೆಣ್ಣುಮಕ್ಕಳ ಸುರಕ್ಷೆ, ಸಂಸ್ಕೃತಿ ರಕ್ಷಣೆ ಎಂದು ಬೋಧಿಸುತ್ತಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಈ ಅಪರಾಧದ ಬಗ್ಗೆ ಏಕೆ ಮೌನ?
ತನ್ನದೇ ಸಂಘಟನೆಯಲ್ಲಿನ ದೌರ್ಜನ್ಯಕ್ಕೆ ಒಳಗಾದ ಒಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸದ ಸಂಘಪರಿವಾರದ
ಹಿಂದುತ್ವದ ಕಪಟ ಬಯಲಾಗಿದೆ. ತಮ್ಮವರ ಅಪರಾಧ ಮುಚ್ಚಿಡುವುದೇ ಅವರ ನಿಜವಾದ ರಾಜಕೀಯ. ಒಂದು ಪಕ್ಷಕ್ಕೆ ಅಧಿಕಾರ ಕೊಡಿಸುವುದೇ ಇವರ ನಿಜವಾದ ಹಿಂದುತ್ವ.
ಇನ್ನೂ ಲವ ಜಿಹಾದ್ ಎಂದು ಬೊಬ್ಬೆ ಹಾಕುವ ಬಿಜೆಪಿ ಮುಖಂಡರು ಯಾವ ಬಿಲದಲ್ಲಿ ಮುಚ್ಚಿ ಕೊಂಡಿದ್ದಾರೆ ಈಗ ಯಾಕೆ ಹೋರಾಟ ಮಾಡುತ್ತಿಲ್ಲ.
ಒಂದು ಹೆಣ್ಣು ಮಗು ತನ್ನ ನೋವಿನಲ್ಲಿ “ನನ್ನ ಜೊತೆ ಯಾರೂ ಇಲ್ಲ” ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜದ ದುರಂತ.
ಸರ್ಕಾರ ಬಲಿಯಾದ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಲು ಹಿಂಜರಿಯಬಾರದು
@PriyankKharge@DgpKarnataka@DKShivakumar@CMofKarnataka@HMOKarnataka@MRiyaz_SDPI@afsarkodlipet@abduljaleelk085@moonishbantwal@Sadath_SDPI
Interacted with the media on the occasion of the formation of the Telangana State Committee of SDPI. Shared the party’s vision, organizational priorities, and commitment to strengthening democratic values, social justice, and people-centric politics in Telangana.
#SDPI #Telangana #SocialJustice #Democracy #PeopleFirst #SDPIIndia
#ಬೆಳಗಾವಿಯ ಆಜಂನಗರದ ಯುವಕರು ಕೃಷಿ ಉದ್ದೇಶಕ್ಕಾಗಿ ಖರೀದಿಸಿದ ಎತ್ತನ್ನು ರಾಯಬಾಗಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಕತಿ ಗ್ರಾಮದ ಬಳಿ 40-50 ಮಂದಿಯ ಸಂಘಟಿತ ಗೂಂಡಾಗಳ ಗುಂಪು ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಹಣ, ಮೊಬೈಲ್ ಹಾಗೂ ಎತ್ತನ್ನು ದೋಚಿ, ಯುವಕರನ್ನು ಕ್ರೂರವಾಗಿ ಹಲ್ಲೆ ಮಾಡಿರುವುದು ಕೇವಲ ದಾಳಿಯಲ್ಲ; ಇದು ಸರ್ಕಾರ ಹಾಗೂ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ. ರಾಜ್ಯದಲ್ಲಿ ಕಾನೂನಿನ ಆಳ್ವಿಕೆ ಇದೆಯೇ ಅಥವಾ ಗೂಂಡಾಗಳ ಆಳ್ವಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇಂದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.
ಯಾವ ಅಧಿಕಾರದ ಮೇಲೆ ಈ ಗೂಂಡಾಗಳು ತಲ್ವಾರ್ಗಳಂತಹ ಮಾರಕ ಆಯುಧಗಳನ್ನು ಹಿಡಿದು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ? ಇವರಿಗೆ ವಾಹನ ತಡೆದು ಪರೀಕ್ಷಿಸುವ ಅಧಿಕಾರ ನೀಡಿದವರು ಯಾರು? ನಿರಪರಾಧಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ಧೈರ್ಯ ಇವರಿಗೆ ಎಲ್ಲಿಂದ ಬರುತ್ತಿದೆ? ಈ ಸಮಾಜಘಾತುಕ ಗೂಂಡಾಗಳಿಗೆ ಕಾನೂನಿನ ಭಯವಿಲ್ಲವೇ? ಪೊಲೀಸ್ ಇಲಾಖೆ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಮೌನ ವಹಿಸಿರುವುದು ಯಾವ ಕಾರಣಕ್ಕೆ?
ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಈ ಗೂಂಡಾಗಳನ್ನು ಕೂಡಲೇ ಬಂಧಿಸಿ, ಕೊಲೆ ಯತ್ನ, ದರೋಡೆ ಹಾಗೂ ಕಾನೂನುಬಾಹಿರ ಗುಂಪು ಸೇರುವಿಕೆ ಸೇರಿದಂತೆ ಕಠಿಣ ಪ್ರಕರಣಗಳನ್ನು ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಮಾದರಿ ಶಿಕ್ಷೆಯಾಗದಿದ್ದರೆ,ಇಂತಹ ದುಷ್ಕೃತ್ಯಗಳು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.
@DgpKarnataka@COPBELAGAVI@SPBelagavi@KarnatakaCops@AddlSPBelagavi@ips_patil@IgpNr@CMofKarnataka@DKShivakumar@HMOKarnataka@PriyankKharge
ರಾಜಸ್ತಾನದ ಕೋಟಾ Taekwondo ಅಸೋಸಿಯೇಷನ್ (Regd.) ಅಧ್ಯಕ್ಷರಾಗಿ 2026–2030 ಅವಧಿಗೆ ಆಯ್ಕೆಯಾಗಿರುವ ಎಸ್ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷರಾದ #ಮುಹಮ್ಮದ್_ಶಫಿ_ರಾಜಸ್ಥಾನ್@MdShafi_SDPI ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಕ್ರೀಡಾ ಕ್ಷೇತ್ರದಲ್ಲಿ ನಿಮ್ಮ ನೇತೃತ್ವ, ದೃಷ್ಟಿಕೋನ ಮತ್ತು ಬದ್ಧತೆ ಕೋಟಾದ Taekwondo ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂಬ ವಿಶ್ವಾಸ ಇದೆ. ವಿಶೇಷವಾಗಿ ತಳಮಟ್ಟದ ಪ್ರತಿಭೆಗಳನ್ನು ಬೆಳೆಸುವುದು, ತರಬೇತಿ ಅವಕಾಶಗಳನ್ನು ವಿಸ್ತರಿಸುವುದು ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಟಗಾರರಿಗೆ ವೇದಿಕೆ ನಿರ್ಮಿಸುವ ನಿಮ್ಮ ಪ್ರಯತ್ನಗಳು ಶ್ಲಾಘನೀಯ.
ನಿಮ್ಮ ಅವಧಿಯಲ್ಲಿ ಸಂಘವು ಇನ್ನಷ್ಟು ಸಾಧನೆಗಳನ್ನು ಮಾಡಲಿ ಹಾಗೂ ಕ್ರೀಡಾಪಟುಗಳು ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ.
Heartfelt congratulations to Mohammed Shafi Rajasthan, National Vice President of SDPI, on being elected as the President of the Taekwondo Association of Kota (Regd.) for the term 2026–2030.
I am confident that your leadership, vision, and commitment in the field of sports will bring a new direction to the development of Taekwondo in Kota. Your efforts to nurture grassroots talent, expand training opportunities, and create platforms for athletes to excel at national and international levels are truly commendable.
I wish that the association achieves greater milestones during your tenure and that the players attain remarkable success.
#Taekwondo #Kota #SportsDevelopment #Leadership #SDPI #AthleteEmpowerment
ಬೆಳಗಾವಿಯ ಶಹಾಪೂರ ಕುಂತಿ ನಗರದಲ್ಲಿ ವಿದ್ಯುತ್ ಕಂಬ ಅಪಾಯಕರಿಯಾಗಿ ಬಾಗಿ ಬೀಳುವ ಹಂತದಲ್ಲಿರುವದನ್ನು ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? @thekjgeorge@CMofKarnataka@HescomHubli@osd_cmkarnataka
ಎಂ.ಕೆ.ಹುಬ್ಬಳ್ಳಿ ಸಾರ್ವಜನಿಕ ಗ್ರಂಥಾಲಯದ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ.ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು,ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿದೆ.ಹೊರಗಿನಿಂದ ಅದು ಗ್ರಂಥಾಲಯವಲ್ಲ,ಬದಲಾಗಿ ಒಂದು ಖಂಡರ್ ಮನೆಯಂತೆ ಕಾಣುತ್ತಿದೆ.
ಗ್ರಂಥಾಲಯದ ಒಳಭಾಗದಲ್ಲಿಯೂ ಓದುಗರಿಗೆ ಬೇಕಾದ ಮೂಲಭೂತ ಸೌಲಭ್ಯಗಳಿಲ್ಲ.ತಕ್ಷಣ ನೂತನ ಕಟ್ಟಡ ನಿರ್ಮಿಸಬೇಕು.
SDPI opposes the mandatory enforcement of songs carrying historical and religious sensitivities in schools and madrassas. Such coercion violates India’s secular Constitution and democratic diversity. Withdraw the order immediately. #SDPI
The illegal encroachment of 66 acres of land, originally sanctioned by the government for the welfare and benefit of Scheduled Castes (SC), Scheduled Tribes (ST), Backward Classes, and Minorities, under the name of Shantinagar Housing Cooperative Society, is a serious scam.
This land scam, estimated to be worth around ₹3000 crore, must be immediately handed over to the CBI for an impartial investigation, and strict action should be taken against those responsible.
I strongly demand that @CBIHeadquarters initiate a thorough probe and ensure justice.
#CBIInquiry #LandScam #Justice
Allahabad HC proceedings on NHRC’s role in UP madrasas raise serious concerns about mandate and overreach. Directing EOW probes without clear human rights grounds blurs lines between rights oversight and criminal process, challenging principles of justice and legal limits. #SDPI #NHRC
Happy Labour Day a tribute to the strength, dedication, and hard work of every worker who builds our society with pride.
Today, we honor the hands that shape nations, the minds that drive progress, and the spirit that never gives up.
“Every job matters, every worker deserves respect. Happy Labour Day to the real builders of our world.”
Salute to the workforce whose efforts power every success. May your hard work always be valued, your rights protected, and your future brighter.
#LabourDay #ಕಾರ್ಮಿಕರದಿನ #आंतरराष्ट्रीय_कामगार_दिन #WorkersDay #InternationalLabourDay
#WorldLabourDay