ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ.
“ಒಂದು ವಾರದಲ್ಲಿ 8,000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ, ಆದರೆ ಇವತ್ತಿಗಾಗಲೇ ಮೇ 13 ಕಳೆಯುತ್ತಿದೆ.
ನಿಮ್ಮ ಕ್ಯಾಲೆಂಡರ್ ಪ್ರಕಾರ ಇನ್ನೂ ಒಂದು ವಾರ ಕಳೆದಿಲ್ವಾ? @INCKarnataka
@KKRTC_Journeys ಮಾನ್ಯರೇ
ಕಲಬುರ್ಗಿ ಇಂದ ಚಿಂಚೋಳಿ ತಾಲೂಕಿನ ಮಾರ್ಗದಲ್ಲಿ ಪ್ರಯಾಣಿಕ ಸಂಖ್ಯೆ ಜಾಸ್ತಿ ಇದ್ದು.
ಆದರೆ ಬಸ್ ಗಳ ಸಂಖ್ಯೆ ಕಡಿಮೆ ಇದೆ..
ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆ ಆಗುತ್ತದೆ ದಯವಿಟ್ಟು ಕ್ರಮವಹಿಸಿ ಇನ್ನೂ ಹೆಚ್ಚಿನ ಬಸ್ ಬಿಡಬೇಕು.... @KSRTC_Journeys
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಈ ನಿರಂಕುಶ ಧೋರಣೆ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಸಕಾಲದಲ್ಲಿ ನೇಮಕಾತಿ ಮಾಡಿದ್ದಕ್ಕಾಗಿ ಪ್ರತಿಭಟಿಸಿದವರನ್ನು ಬಂಧಿಸುವುದು ಸಂವಿಧಾನ ಬಾಹಿರ.
KPSC ಯಲ್ಲಿ ಸಾಲು ಸಾಲು ಎಡವಟ್ಟು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆಗುತ್ತಿದ್ದರೂ ಅದನ್ನು ಸರಿಪಡಿಸುವ ಬದಲಾಗಿ ಉದ್ಯೋಗಾಕಾಂಕ್ಷಿಗಳ ಸಂವಿಧಾನ ಬದ್ದ ಹಕ್ಕನ್ನು ಮೊಟಕುಗೊಳಿಸುತ್ತಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಧಾರವಾಡದಲ್ಲಿ ಬಂಧಿಸಿರುವ ಉದ್ಯೋಗಾಕಾಂಕ್ಷಿಗಳನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಹಾಗೂ ಅವರ ಮೇಲೆ ಹಾಕಿರುವ ಪ್ರಕರಣವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಹಿಂಪಡೆಯಬೇಕು.
@AKSSAofficial
ಮುಖ್ಯಮಂತ್ರಿಗಳೇ, ಉದ್ಯೋಗ ನೀಡಿ, ಇಲ್ಲವೇ ಕುರ್ಚಿ ಬಿಟ್ಟು ತೊಲಗಿ !
ಉದ್ಯೋಗ ನೇಮಕಾತಿ ನಡೆಸದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಯುವಜನತೆ ರಣಕಹಳೆ ಮೊಳಗಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕಾಂಗ್ರೆಸ್ ಸರ್ಕಾರ ಸರ್ಕಾರಿ ನೇಮಕಾತಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮೀಸಲಾತಿ ನೆಪದಲ್ಲಿ ನೇಮಕಾತಿ ಮಾಡದೇ ಇರುವುದು ಖಂಡನೀಯ. ಯುವಶಕ್ತಿಯ ಸಹನೆಯ ಕಟ್ಟೆ ಒಡೆದರೆ ಅದರ ಮುಂದೆ ಕಾಂಗ್ರೆಸ್ ಸರ್ಕಾರ ಹುಲ್ಲು ಕಡ್ಡಿಯಂತಾದೀತು ಎಚ್ಚರಿಕೆ !
#CongressFailsKarnataka
#PV/DH Eduvers: #UGCET-26 ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ಪ್ರತಿಷ್ಠಿತ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಅರಮನೆ ಮೈದಾನದಲ್ಲಿ ಆಯೋಜಿಸಿರುವ ಎಡ್ಯುವರ್ಸ್ ಶೈಕ್ಷಣಿಕ ಮೇಳವನ್ನು #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್ ಕುಮಾರ್, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ.ಸುಬ್ರಹ್ಮಣ್ಯ, ಸಿಇಒ ಕಿರಣ್ ಸೇರಿದಂತೆ ಇತರರು ಇದ್ದರು.
ಈ ಶೈಕ್ಷಣಿಕ ಮೇಳದಲ್ಲಿ ಇದೇ ಮೊದಲ ಬಾರಿಗೆ #KEA ಕೂಡ ತನ್ನ ಮಳಿಗೆ ತೆರೆದಿದ್ದು, ಅದನ್ನು ಡೆಕ್ಕನ್ ಹೆರಾಲ್ಡ್ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ.ಸುಬ್ರಹ್ಮಣ್ಯ ಉದ್ಘಾಟಿಸಿದರು.
ಯುಜಿ ಸಿಇಟಿ ಬರೆಯುವ ವಿದ್ಯಾರ್ಥಿಗಳು ತಮ್ಮ ಪೋಷಕರೊಡನೆ ಶೈಕ್ಷಣಿಕ ಮೇಳಕ್ಕೆ ಹೋದಾಗ ಕೆಇಎ ಮಳಿಗೆಗೂ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಹಾಗೂ ಸೀಟು ಹಂಚಿಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯಬಹುದು.
ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್ ನಲ್ಲಿ ಶೈಕ್ಷಣಿಕ ಮೇಳ ನಡೆಯುತ್ತಿದ್ದು, ಭಾನುವಾರ ಕೂಡ ನಡೆಯಲಿದೆ. ಅರಮನೆ ಮೈದಾನದ ನಾಲ್ಕನೇ ದ್ವಾರದ ಮೂಲಕ ಪ್ರವೇಶ ಪಡೆಯಬೇಕು.
@CMofKarnataka@drmcsudhakar@S_PrakashPatil@KEA_karnataka@DeccanHerald@prajavanionline
ಕರ್ನಾಟಕದ ಇಬ್ಬರು ಐಎಎಸ್ ಅಧಿಕಾರಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಮುಖವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ಅವರ ವರ್ಗಾವಣೆಗೆ ಭಾರೀ ವಿರೋಧ ವ್ಯಕ್ತವಾಗಿದೆ
#Karnataka#IASOfficers#TransferNews#KEA#HPrasanna
ನಿಷ್ಠಾವಂತ ಅಧಿಕಾರಿ ವರ್ಗಾವಣೆ ಬೇಡ ❌🙏🏻
KEA ನಿರ್ದೇಶಕರಾದ ಪ್ರಸನ್ನ ಸರ್ ಅವರು ಪಾರದರ್ಶಕವಾಗಿ ನೇಮಕಾತಿ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಪ್ರಸನ್ನ ಸರ್ ಅವರು KEA ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಬೇಕು, ಸರಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದೆಂದು ಮನವಿ.🙏🏻 @siddaramaiah
282 ವಾರ್ಡನ ಹುದ್ದೆಗಳ ನೇಮಕಾತಿ ಪ್ರಕ್ರಿಯ ಪ್ರಸ್ತಾವನೆಯನ್ನು "KEA" ✅ ನೀಡಬೇಕು..
KPSC ❌ Corruption, Exam & Results delays, ಇಂದ ಪ್ರಸ್ತುತ ಸುದ್ದಿಯಲಿದೆ.
ದಯವಿಟ್ಟು ನಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕೆ ತನ್ನಿ...
@SWDGoK@CMahadevappa@Captain_Mani72@PriyankKharge
ರಾಜ್ಯದಾದ್ಯಂತ ಉದ್ಯೋಗದ ಕಿಚ್ಚು ಹೆಚ್ಚುತ್ತಿದೆ. ಯುವ ಜನತೆ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.
ಉದ್ಯೋಗದ ಆಮಿಷವೊಡ್ಡಿದ್ದ ಕಾಂಗ್ರೆಸ್ ಈಗ ಸರ್ಕಾರಿ ನೇಮಕಾತಿಗಳಿಗೆ ಮೀನಾಮೇಷ ಎಣಿಸುತ್ತಿದೆ. ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ ನಾಯಕರದ್ದು ಬರೇ ಬೊಗಳೆ ಮಾತಾಗಿದೆ.
ಧಾರವಾಡದ ಬಳಿಕ ಕಲ್ಬುರ್ಗಿಯಲ್ಲಿ ಉದ್ಯೋಗದ ಹೋರಾಟ ಕಾವು ಪಡೆದುಕೊಂಡಿದೆ. ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕರೇ ನಿಮ್ಮ ಕಿತ್ತಾಟ ಬಿಟ್ಟು ಯುವಜನರ ಬೇಡಿಕೆಗಳತ್ತ ಗಮನಹರಿಸಿ.
ಬಿಟ್ಟಿ ಐಪಿಎಲ್ ಟಿಕೆಟ್ ಕೇಳುವ @INCKarnataka ನಾಯಕರಿಗೆ, ರಾಜ್ಯದ ಯುವಜನತೆಯ ಸಂಕಷ್ಟ ಅರಿವಾಗುವುದೇ?
#CongressFailsKarnataka
ಯುವಜನತೆಗೆ ಕಾಂಗ್ರೆಸ್ ಬಿಟ್ಟಿ ಗ್ಯಾರಂಟಿಗಳು ಬೇಕಿಲ್ಲ, ಉದ್ಯೋಗದ ಗ್ಯಾರಂಟಿ ಬೇಕಿದೆ.
ಚುನಾವಣಾ ಪೂರ್ವದಲ್ಲಿ ಉದ್ಯೋಗ ನೇಮಕಾತಿ, ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದ ಕಾಂಗ್ರೆಸ್ ಈಗ ಕಳೆದ ಮೂರು ವರ್ಷಗಳಿಂದ ಸಮರ್ಪಕವಾಗಿ ಉದ್ಯೋಗ ನೇಮಕಾತಿ ಮಾಡದೆ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.
#CongressFailsKarnataka
ಕೊಟ್ಟ ಮಾತು ತಪ್ಪಿರುವ ವಿಶ್ವಾಸದ್ರೋಹಿ @INCKarnataka ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಸಿಡಿದೆದ್ದಿದ್ದಾರೆ.
ಕೆಲಸ ನೀಡದ @siddaramaiah ನವರ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಯುವಕರು ಪ್ರತಿಭಟನೆ ನಡೆಸಿ, ನೇಮಕಾತಿ ಆರಂಭಿಸಲು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರೇ, ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಿ ಇಲ್ಲದಿದ್ದರೇ ಯುವಕರ ಆಕ್ರೋಶದ ಜ್ವಾಲೆಗೆ ಸರ್ಕಾರ ದಹಿಸುವುದು ಗ್ಯಾರಂಟಿ.
#CongressFailsKarnataka
ಕಳೆದ ಮೂರು ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ನಡೆಸಿಲ್ಲ. ಸರ್ಕಾರ ಪರಿಶಿಷ್ಟರ ಒಳಮೀಸಲಾತಿ ಕಗ್ಗಂಟು ಬಗೆಹರಿಸಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಬೇಕು. ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಕೇವಲ 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿರುವುದು ಸರಿಯಲ್ಲ.
- ಶ್ರೀ ಎಸ್. ವಿ. ಸಂಕನೂರು, ಪರಿಷತ್ ಸದಸ್ಯರು
#CongressFailsKarnataka
@SWDGoK 282 ವಾರ್ಡನ ಹುದ್ದೆಗಳ ನೇಮಕಾತಿ ಪ್ರಕ್ರಿಯ ಪ್ರಸ್ತಾವನೆಯನ್ನು "KEA" ✅ ನೀಡಬೇಕು..
KPSC ❌ Corruption, Exam & Results delays, ಇಂದ ಪ್ರಸ್ತುತ ಸುದ್ದಿಯಲಿದೆ.
ದಯವಿಟ್ಟು ನಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕೆ ತನ್ನಿ...
282 ವಾರ್ಡನ ಹುದ್ದೆಗಳ ನೇಮಕಾತಿ ಪ್ರಕ್ರಿಯ ಪ್ರಸ್ತಾವನೆಯನ್ನು "KEA" ✅ ನೀಡಬೇಕು..
KPSC ❌ Corruption, Exam & Results delays, ಇಂದ ಪ್ರಸ್ತುತ ಸುದ್ದಿಯಲಿದೆ.
ದಯವಿಟ್ಟು ನಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕೆ ತನ್ನಿ...
@SWDGoK@CMahadevappa@Captain_Mani72@PriyankKharge