ಪ್ರತಿದಿನ ಬೆಳಿಗ್ಗೆ 6:30 ಗಂಟೆಯಿಂದಲೇ ಬಾರ್ ತೆರೆಯಲಾಗುತ್ತಿದೆ ಎಂಬ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಬಾರ್ ಆಡಳಿತಕ್ಕೆ ಕಠಿಣ ಎಚ್ಚರಿಕೆ ನೀಡಲಾಗಿದ್ದು, ನಿಗದಿತ ಸಮಯಕ್ಕೂ ಮುನ್ನ ಬಾರ್ ತೆರೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಬ್ರಿಟಿಷರು ಉದ್ಘಾಟಿಸಿದ್ದ ಸುರಂಗ, ಸೇತುವೆಗಳು ಇನ್ನೂ ಇವೆ. ಏಳು ತಿಂಗಳ ಹಿಂದೆ ಉದ್ಘಾಟಿಸಿದ ಸುರಂಗ ಮಾರ್ಗ ನಾಶವಾಗುತ್ತದೆ ಜೊತೆಗೆ ಜನರ ಏಳು ಸಾವಿರ ಕೋಟಿ ತೆರಿಗೆ ಹಣವೂ ಹೋಯಿತು. ಈ ಸೌಭಾಗ್ಯಕ್ಕೆ ನಾವು ಕೊಟ್ಟ ಹೆಸರು "ವಿಕಾಸ". ಅದೂ ಅಮೃತಕಾಲದ ವಿಕಾಸ
ನೇಮಕಾತಿಗಾಗಿ ಮಾಡಿರುವ ಹೋರಾಟದಿಂದ ನನ್ನ ಆರೋಗ್ಯ ಸಮಸ್ಯೆ ಹಾಳಾಗಿರಬಹುದು ಆದರೆ ಇಂದು ಲಕ್ಷಾಂತರ ಅಭ್ಯರ್ಥಿಗಳಿಗೆ ಅನುಕೂಲಕರವಾಗಿದೆ ಇಂದು ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿ ಇನ್ನು ಸಾಕಷ್ಟು ಬದಲಾವಣೆಗೆ ಸ್ಪೂರ್ತಿದಾಯಕವಾಗಿದೆ 🙏❤️
ಅವರ ಮಕ್ಕಳು ಮೊಮ್ಮಕ್ಕಳು ಫಾರಿನ್ ಗೆ ಹೋಗ್ತಾರೆ ಫಾರಿನ್ ನಲ್ಲಿ ಓದುತ್ತಾರೆ ಫಾರಿನ್ ನಲ್ಲಿ ದೊಡ್ಡ ಉದ್ಯಮಗಳು ಮಾಡುತ್ತಾರೆ ಐಷಾರಾಮಿ ಕಾರಿನಲ್ಲಿ ತಿರುಗುತ್ತಾರೆ,ಅವಿವೇಕಿಗಳು ದೇಶ ಅಪಾಯದಲ್ಲಿ ಇದೆ ಅಂತ ಬೀದಿಯಲ್ಲಿ ಹೋರಾಟ ಮಾಡಿ, ಕೇಸ್ ಹಾಕಿಸಿಕೊಳ್ಳಿ.
ಕನ್ನಡಿಗರು ತಮ್ಮ ತಮ್ಮ ಮಕ್ಕಳಿಗೆ ಸ್ವಲ್ಪ ಸ್ವಾಭಿಮಾನದಿಂದ, ಎಚ್ಚರದಿಂದ ಬೆಳೆಸಿ 🙏
Once a district under severe drought. Now a district heading towards prosperity.
Watch Bijapur transforming in to a modern district.
Thanks to remarkable work done by @MBPatil sir.
ಭಾರತದ ಎಲೆಕ್ಟ್ರಾನಿಕ್ಸ್ ಭವಿಷ್ಯಕ್ಕೆ ಬಸವನಾಡಿನ ಕೊಡುಗೆಯ ಭವ್ಯ ಆರಂಭ.
ಕಳೆದ ಐದಾರು ವರ್ಷಗಳಿಂದ ಸಾರ್ವಜನಿಕವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದನ್ನು ನಿಲ್ಲಿಸಿರುವ ನಟ ಗಣೇಶ ಅವರು ಮೊನ್ನೆ ಅವರ ಸ್ವಂತ ನಿರ್ಮಾಣದ ತುಳು ಮತ್ತು ಕನ್ನಡ ಚಿತ್ರ "ಪಿಚ್ಚರ್" ಪತ್ರಿಕಾಗೋಷ್ಠಿಯ ನಂತರ ಕೆಲವು ಪತ್ರಕರ್ತರೊಂದಿಗೆ ಅನೌಪಚಾರಿಕವಾಗಿ ಮಾತುಕತೆಗೆ ಕುಳಿತರು. ಕನ್ನಡ ಚಿತ್ರರಂಗದ ಪರಿಸ್ಥಿತಿ ಬಗ್ಗೆ ಸ್ವಲ್ಪ ಹೊತ್ತು ಗಂಭೀರ ಚರ್ಚೆಯಾಯಿತು.
ಗಣೇಶ್ ಅವರ ಮಾತುಗಳಲ್ಲಿ ಸ್ಪಷ್ಟತೆ ಮತ್ತು ಕನ್ನಡ ಚಿತ್ರರಂಗ ಮತ್ತೆ ಗೆಲುವಿನ ದಾರಿಗೆ ಬರಬೇಕು ಎಂಬ ಕಾಳಜಿ ಇತ್ತು. ತಮ್ಮ ಕೈ ಮೀರಿದ ಕಾರಣಗಳಿಂದ ಕೃಷ್ಣಂ ಪ್ರಾಣಯ ಸಕಿ ಅಂತಾ ಹಿಟ್ ಚಿತ್ರದ ಎರಡು ವರ್ಷಗಳ ನಂತರವೂ ಹೊಸ ಚಿತ್ರ ಬಿಡುಗಡೆಯಾಗದಿರುವುದಕ್ಕೆ ಬೇಸರವಿತ್ತು. 2026 ರಲ್ಲೇ ಪಿನಾಕ ಮತ್ತು ಬೃಂದವಿಹಾರಿ ಎರಡು ಚಿತ್ರಗಳನ್ನು ಬಿಡುಗಡೆ ಮಾಡಲು ಪಣತೊಟ್ಟಿದ್ದಾರೆ.
ವರ್ಷದ ಮಿಕ್ಕಿರುವ ಆರು ತಿಂಗಳುಗಳಲ್ಲಿ ಕನ್ನಡದಲ್ಲಿ ಒಂದು ಬಹಳ ದೊಡ್ಡ ಹಿಟ್ ಬಂದೇ ಬರುತ್ತೆ ಅನ್ನುವ ವಿಶ್ವಾಸ ವ್ಯಕ್ತಪಡಿಸಿದರು. "ಅದು ನನ್ನದೇ ಸಿನಿಮಾ ಆಗುತ್ತೆ ಅಂತ ಹೇಳ್ತಿಲ್ಲ. ಕನ್ನಡಕ್ಕೆ ಒಂದು ದೊಡ್ಡ ಹಿಟ್ ಬರುವ ಸಮಯ ಬಂದಿದೆ," ಎಂದರು. ಇನ್ನಿಬ್ಬರು ನಾಯಕ ನಟರ ಜೊತೆ ವೈಯಕ್ತಿಕವಾಗಿ ಮಾತನಾಡಿ ಒಬ್ಬೊಬ್ಬರು ವರ್ಷಕ್ಕೆ ಎರಡು ಚಿತ್ರಗಳನ್ನು ಬಿಡುಗಡೆ ಮಾಡುವುದರ ಬಗ್ಗೆ ಚರ್ಚಿಸಿದೆ ಎಂದು ತಿಳಿಸಿದರು. ನಾಯಕನಟರುಗಳು ಪರಸ್ಪರ ಮಾತನಾಡಿಕೊಂಡು ಚಿತ್ರಗಳನ್ನು ಸರದಿಯಲ್ಲಿ ಬಿಡುಗಡೆ ಮಾಡುವುದರ ಬಗ್ಗೆ ಸುಳಿವು ಕೊಟ್ಟರು.
ಇತ್ತೀಚಿನ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ನಿರಾಸದಾಯಕ ಪ್ರತಿಕ್ರಿಯೆಗೆ ಅವರು ಕೊಟ್ಟ ಕಾರಣ, "ಸಿನಿಮಾ ನೋಡುವ ಹ್ಯಾಬಿಟ್ ಪ್ರೇಕ್ಷಕರಲ್ಲಿ ಕಡಿಮೆಯಾಗದಂತೆ ಸತತವಾಗಿ ಒಳ್ಳೆಯ ಸಿನಿಮಾಗಳನ್ನು ಕೊಡಬೇಕು. ಅದು ನಮ್ಮಲ್ಲಿ ಬ್ರೇಕ್ ಆಗಿದೆ. ತಿಂಗಳಿಗೊಂದಾದರೂ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ತೆರೆ ಕಾಣಬೇಕು. ಆ ರೀತಿಯ ಪ್ರಯತ್ನ ನಡೆದಿದೆ."
ಅವರಿಗೆ ಇಂದು ಹುಟ್ಟು ಹಬ್ಬದ ಶುಭ ಹಾರೈಕೆಗಳು💛❤️ @Official_Ganesh
ಕನ್ನಡ ಉಳಿಸಬೇಕು ಕನ್ನಡ ಉಳಿಸಬೇಕು ಅನ್ನೋದಿಲ್ಲ, ಆದಷ್ಟು ಕನ್ನಡ ಕಡ್ಡಾಯವಾಗಿ ಬಳಸಿದರೆ ಸಾಕು 💪💪💪
ಮಗಳಿಗೆ **"ಸಿರಿಗನ್ನಡ"** ಎಂದು ಹೆಸರಿಟ್ಟು ಕನ್ನಡದ ಮೇಲಿನ ತಮ್ಮ ಅಪಾರ ಅಭಿಮಾನವನ್ನು ಅನಾವರಣಗೊಳಿಸಿದ ಬೆಳಗಾವಿ ಜಿಲ್ಲೆಯಬೈಲಹೊಂಗಲಿನ ದಂಪತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾಷೆಯ ಮೇಲಿನ ಪ್ರೀತಿ ಕೇವಲ ಮಾತುಗಳಲ್ಲಿ ಅಲ್ಲ, ಮುಂದಿನ ಪೀಳಿಗೆಯ ಹೆಸರಿನಲ್ಲಿಯೂ ಜೀವಂತವಾಗಿರಬೇಕು ಎಂಬ ಸಂದೇಶವನ್ನು ಈ ಕುಟುಂಬ ನೀಡಿದೆ. ಕನ್ನಡದ ಸಿರಿವಂತಿಕೆ, ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಹೆಮ್ಮೆಯಿಂದ ಸಾರುವ ಈ ಕಾರ್ಯ ನಿಜಕ್ಕೂ ಮಾದರಿಯಾಗಿದೆ...
ಚೋಳರಿಗಿಂತ 500 ವರ್ಷಗಳ ಮುಂಚೆ, ಕನ್ನಡಿಗ ಇಮ್ಮಡಿ ಪುಲಿಕೇಶಿ ನೂರು ಹಡಗುಗಳೊಂದಿಗೆ ಈಗಿನ ಮಹಾರಾಷ್ಟ್ರದಲ್ಲಿ ನೌಕಾ ಯುದ್ಧ ಮಾಡಿದ ಸಾಕ್ಷಿ ಪತ್ತೆಯಾಗಿದೆ. ಭಾರತೀಯ ನೌಕಾದಳದ ಪಿತಾಮಹ ಚಾಲುಕ್ಯ ಚಕ್ರೇಶ್ವರ, ಕನ್ನಡ ಕುಲತಿಲಕ ಇಮ್ಮಡಿ ಪುಲಿಕೇಶಿ 💛❤️