ಮಂಗಳೂರು ತಾ.ಪಂ: ದಿನಾಂಕ 18-09-2024 ರಂದು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಹೇಶ್ ಕುಮಾರ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯತ್ ನರೇಗಾ ಸಿಬ್ಬಂದಿಗಳಿಗೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಮಂಗಳೂರು ತಾ.ಪಂ: ದಿನಾಂಕ 18-09-2024 ರಂದು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯಿಂದ ಗ್ರಾಮ ಪಂಚಾಯತ್ ಮಟ್ಟದ ಸಿಬ್ಬಂದಿಗಳಿಗೆ ಪಿಎಫ್ ಮಾಡುವ ಬಗ್ಗೆ, ಹಾಗೂ ಅದರ ಪ್ರಯೋಜನದ ಬಗ್ಗೆ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ದಿನಾಂಕ 12-09-2024 ರಂದು ಮಂಗಳೂರು ತಾಲೂಕಿನ ಎಕ್ಕಾರು ಗ್ರಾ. ಪಂ ನ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ಇಲ್ಲಿ ರೋಜ್ ಗಾರ್ ದಿವಸ್ ಆಯೋಜಿಸಲಾಗಿದ್ದು. ಕಾರ್ಯಕ್ರಮದಲ್ಲಿ ಐಇಸಿ ಸಂಯೋಜಕರಾದ ಶ್ರೀಮತಿ ನಿಶ್ಮಿತ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿನ ಕಾಮಗಾರಿ ಅನುಷ್ಟಾನದ ಬಗ್ಗೆ ಮಾಹಿತಿ ನೀಡಿದರು
ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಮಂಗಳೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಮಂಗಳೂರು ವತಿಯಿಂದ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರ���್ ಮಿಷನ್ (ಗ್ರಾ) ಯೋಜನೆಯ ತರಬೇತಿ ಕಾರ್ಯಕ್ರಮ ಇಂದು ಮಂಗಳೂರು ತಾ.ಪಂ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ತಾಲೂಕಿನ ನೀರುಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡಿರುವ ಕಾಮಗಾರಿಗಳನ್ನು ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು ಪರಿಶೀಲನೆ ನಡೆಸಿದರು
ದಿನಾಂಕ 25/08/2022 ರಂದು ಡಾ.ಎಂ ಆರ್ ಏಕಾಂತಪ್ಪ, ನಿರ್ದೇಶಕರು (ಆಡಳಿತ -1) ಕರ್ನಾಟಕ ಪಂ.ರಾಜ್ ಆಯುಕ್ತಾಲಯ ಇವರ ಅಧ್ಯಕ್ಷತೆಯಲ್ಲಿ ಮಂಗಳೂರು,ಉಳ್ಳಾಲ ಮತ್ತು ಮುಲ್ಕಿ ತಾಲೂಕು ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಗುಂಪು ಚರ್ಚೆ ಹಾಗೂ ಮನೆ ಭೇಟಿ ಹಿನ್ನೆಲೆ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆ ಸಿದ್ಧ ಪಡಿಸುವ ಕುರಿತು ಅಬ್ದುಲ್ ನಜೀರ್ ಸ���ಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸಂ��್ಥೆ ಮೈಸೂರು ತಂಡ ಇಂದು ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ - ಮನೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.
ಜಲಶಕ್ತಿ ಅಭಿಯಾನದ ನೋಡಲ್ ಅಧಿಕಾರಿ ಶ್ರೀ ಪಿಯೂಷ್ ರಂಜನ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಮಂಗಳೂರು ತಾಲೂಕಿನ ಗುರುಪುರ ಪಂಚಾಯತ್, ಗಂಜಿ ಮಠ ಪಂಚಾಯತ್ ವ್ಯಾಪ್ತಿಯಲ್ಲಿನ ಜಲಶಕ್ತಿಗೆ ಸಂಬಂಧಪಟ್ಟ ಕಾಮಗಾರಿಗಳ ಪರಿಶೀಲನೆ ನಡೆಸಿತು.