ಚಿಕ್ಕಮಗಳೂರು ತಾಲೂಕಿನ ಹರಿಹರದಳ್ಳಿ ಗ್ರಾ ಪಂ ವ್ಯಾಪ್ತಿಯಲ್ಲಿ ನರೇಗಾ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನವನ್ನು ಹಮ್ಮಿಕೊಂಡು, ಸಾರ್ವಜನಿಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಕಾಮಗಾರಿ ಬೇಡಿಕೆಯನ್ನು ಸಂಗ್ರಹಿಸಲಾಯಿತು. ಅಭಿಯಾನದಲ್ಲಿ ಎಡಿ, ಪಿಡಿಓ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಮತ್ತು ತಾಲ್ಲೂಕು ಐಇಸಿ ಭಾಗವಹಿಸಿದ್ದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚಿಕ್ಕಮಗಳೂರು ತಾಲೂಕಿನ ಬ್ಯಾರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಂದೂರು ಗ್ರಾಮದಲ್ಲಿ ಹಳ್ಳಿ ಸಂತೆ ಕಟ್ಟೆಯನ್ನು ಅಭಿವ��ದ್ಧಿ ಪಡಿಸಲಾಗುತ್ತಿದೆ.
@MgnregsK
@CommrMGNREGSK
@gopal17krishna
ನರೇಗಾದಡಿ ರೈತರಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಾಣ
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರಿಚಿಕ್ಕಾನಹಳ್ಳಿ ಗ್ರಾಮದ ರಂಗೇಗೌಡರ ಜಮೀನಿನಿಂದ ಶಿವೇಗೌಡರ ಜಮೀನಿನವರೆಗಿನ ರಸ್ತೆಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ರೈತರಿಗೆ ಸಹಕಾ���ಿಯಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳನ್ನು ಸಹಾಯಕ ನಿರ್ದೇಶಕರು (ಗ್ರಾ ಉ)ರವರು ಪರಿಶೀಲಿಸಿದರು ....... ಪರಿಶೀಲನಾ ಸಮಯದಲ್ಲಿ ತಾಂತ್ರಿಕ ಸಂಯೋಜಕರು ತಾಂತ್ರಿಕ ಸಹಾಯಕರು ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು ಹಾಜರಿದ್ದರು...
ಚಿಕ್ಕಮಗಳೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನರೇಗಾ ಯೋಜನೆಯಡಿ ಮಹಿಳಾ ಉದ್ಯೋಗ ಸಬಲೀಕರಣ ಸಂಬಂಧಿಸಿದಂತೆ ಮಹಿಳಾ ಸ್ವಸಹಾಯ ಸಂಘದ ��ದಸ್ಯರುಗಳಿಗೆ ವಿಶೇಷ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ನರೇಗಾ ಯೋಜನೆಯಡಿ ಇರುವ ಸೌಲಭ್ಯಗಳ ಬಗ್ಗೆ , ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ನರೇಗಾ ಯೋಜನೆಯಡಿ ಸುಸಜ್ಜಿತವಾದ ವಾಲಿ ಬಾಲ್ ಸಿಂಥೆಟಿಕ್ ಆಟದ ಮೈದಾನ ನಿರ್ಮಾಣ
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಬಸ್ಕಲ್ ��್ರಾ.ಪಂ ವ್ಯಾಪ್ತಿಯ ಸ.ಹಿ.ಪ್ರಾ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಮಕ್ಕಳಿಗೆ ಸುಸಜ್ಜಿತವಾದ ಹೈಟೆಕ್ ಸಿಂಥೆಟಿಕ್ ಆಟದ ಮೈದಾನ ನಿರ್ಮಾಣ ಮಾಡಲಾಗಿದೆ.
ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿಮ್ಮ ಗ್ರಾಮ ಪಂಚಾಯತಿಗಳಲ್ಲಿ ನಡೆಯುತ್ತಿರುವ "ಜಲ ಸಂಜೀವಿನಿ" ಕ್ರಿಯಾ ಯೋಜನೆ ತಯಾರಿಕೆ ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿರಿ...
@ZP_Chikmagalur
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರೋಗ್ಯ ಕೇಂದ್ರ ದಿಂದ ಮಂಜಣ್ಣ ಮನೆಯ ವರೆಗೆ ಬಾಕ್ಸ್ ಚರಂಡಿಯನ್ನು ನರೇಗಾ ಯೋಜನೆಯಡಿ ಮಾಡಲಾಗಿದ್ದು, ನೈರ್ಮಲ್ಯ ಕಾಪಾಡುವಲ್ಲಿ ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಚಿಕ್ಕಮಗಳೂರು ತಾಲ್ಲೂಕು ಬೆಳವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳವಾಡಿ ದೊಡ್ಡಕೇರಿಯಿಂದ ಬಸವನ ಕೊಡಿ ಗ್ರಾಮದ ವರೆಗೆ ಕಾಲುವೆ ಅಭಿವೃದ್ಧಿ ಕಾಮಗಾರಿ. ಈ ಕಾಮಗಾರಿಯಿಂದ ನೀರು ಪೋಲಾಗದೆ ಮುಂದಿನ ಕೆರೆಗೆ ನೀರು ಹರಿಯುತ್ತಿದ್ದೂ ಗ್ರಾಮಸ್ಥರು ಸಂತಸ ವ್ಯಕ್ತ ಪಡಿಸಿದ್ದಾರೆ
ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು ತಾಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯತಿಯಲ್ಲಿ "ಮನೆ-ಮನೆಗೆ ಉದ್ಯೋಗ ಖಾತ್ರಿ ಅಭಿಯಾನ" ಮತ್ತು "ದೌರ್ಜನ್ಯ ಮುಕ್ತಿ ಅಭಿಯಾನ" ಹಮ್ಮಿಕೊಂಡು ನರೇಗಾ ಯೋಜನೆಯ ಬಗ್ಗೆ ಮಹಿಳೆಯರಿಗೆ, ಗ್ರಾಮಸ್ಥರಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಯೋಜನೆ ಸದ್ಭಳಕೆ ಬಗ್ಗೆ ತಿಳಿಸಿಕೊಡಲಾಯಿತು.