ಮಾನ್ಯ ಮುಖ್ಯಮಂತ್ರಿಗಳ(@DKShivakumar) ಗಮನಕ್ಕೆ,
ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದರೂ ಸಂಬಂಧಪಟ್ಟ ಇಲಾಖೆಗಳು ನೇಮಕಾತಿ ಪ್ರಾಧಿಕಾರಗಳಿಗೆ ಕಳಿಸಲು ವಿಳಂಬ ಮಾಡುತ್ತಿವೆ.ದಯವಿಟ್ಟು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿ ನೇಮಕಾತಿ ಪ್ರಾಧಿಕಾರಗಳಿಗೆ ಬೇಗನೆ ಪ್ರಸ್ತಾವನೆ ಸಲ್ಲಿಸಲು
RGUHS ( Rajiv Gandhi University of Health Sciences ) ಇಲಾಖೆಯ FDA ಮತ್ತು SDA ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಈಗಾಗಲೇ @KEA_karnataka ಮೂಲಕ ಪೂರ್ಣಗೊಂಡಿದ್ದು, ಹಲವು ತಿಂಗಳು ಕಳೆದಿವೆ ಸಾವಿರಾರು ಅಭ್ಯರ್ಥಿಗಳು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆ ಪಟ್ಟಿ (Final Selection List) ಪ್ರಕಟಣೆಯು ಪ್ರಸ್ತುತ ಯಾವ ಹಂತದಲ್ಲಿದೆ ಹಾಗೂ ದಾಖಲೆಗಳ ಪರಿಶೀಲನೆ (Document Verification) ಮತ್ತು ಅಂತಿಮ ಫಲಿತಾಂಶ ಪ್ರಕಟಿಸುವ ತಾತ್ಕಾಲಿಕ ದಿನಾಂಕ ಯಾವುದು ಎಂಬುದನ್ನು ತಿಳಿಸಲು ವಿನಂತಿಸುತ್ತೇವೆ.
ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿರುವ ಕಾರಣಗಳೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕಾಗವಿನಂತಿಸುತ್ತೇವೆ
ಯಾವುದೇ ಆಡಳಿತಾತ್ಮಕ ಅಥವಾ ಕಾನೂನು ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಶೀಘ್ರವಾಗಿ ನಿವಾರಿಸಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ವಿನಂತಿಸುತ್ತೇವೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ @KEA_karnataka ಹಾಗೂ RGUHS ಈ ಕುರಿತು ಸ್ಪಷ್ಟನೆ ನೀಡಿ ಶೀಘ್ರದಲ್ಲೇ ಮುಂದಿನ ಕ್ರಮಗಳನ್ನು ಪ್ರಕಟಿಸಬೇಕು.
@KEA_karnataka ನಿಮ್ಮ ಸ್ಪಂದನೆಯ ನಿರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು
@CMofKarnataka@DKShivakumar@INCKarnataka@PriyankKharge@suryamukundaraj
ಧನ್ಯವಾದಗಳು. :::
@KEA_karnataka PC ಅರ್ಜಿ ಸಲ್ಲಿಸುತ್ತಿರುವಾಗ SSLC marks card ಹಾಗೂ Adhara card ಅಲ್ಲಿ ವಿದ್ಯಾರ್ಥಿಗಳ ಹೆಸರಿನ Spelling ಒಂದು change ಇದ್ರೂ Mismatch ಅಂತ ಬರುತ್ತಿದೆ ಎಂದು ಹಲವು ಅಭ್ಯರ್ಥಿಗಳು ಹೇಳುತ್ತಿದ್ದಾರೆ.
ಇದೊಂದು Logic ಇಲ್ಲದೆ ಇರೋ Software. ಮದುವೆಯಾಗಿರುವ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ತಮ್ಮ ಗಂಡನ ಹೆಸರನ್ನು ಸೇರಿಸಿರುತ್ತಾರೆ. ಇದೇ ಕಾರಣಕ್ಕೆ SSLC NAME ಹಾಗೂ ADHARA CARD ನಲ್ಲಿ MISMATCH ಎಂದು ಬರುತ್ತಿದೆ..
ಈ ವಿಷಯವನ್ನು @KEA_karnataka ಮುಖ್ಯಸ್ಥರ ಗಮನಕ್ಕೆ ಬಂದರೆ ಖಂಡಿತ ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸುವಿರಿ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ,
ಇದು kea ಅವರು ಸಿದ್ಧಪಡಿಸಿರುವ Application software ಅವರೇ ಇದನ್ನ ಸರಿಪಡಿಸಬೇಕು.
ಅರ್ಜಿ ಸಲ್ಲಿಸುವಾಗ ಉಂಟಾಗುವ ಯಾವುದೇ ತಾಂತ್ರಿಕ ಸಮಸ್ಯೆಗಳಿಗಾಗಿ @KEA_karnataka helpline ಗೆ ಕಾಲ್ ಮಾಡಿ...
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ ಎಂಬ ಆಶಾಭಾವನೆಯೊಂದಿಗೆ ವಿದ್ಯಾರ್ಥಿ ಸಮೂಹ.
@CMofKarnataka@INCKarnataka@DgpKarnataka @Nishkama_Karma1 @Defender_007_
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ , ದಯವಿಟ್ಟು ತುರ್ತಾಗಿ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿ ಮತ್ತು ಆದಷ್ಟು ಬೇಗನೆ ನೇರ ನೇಮಕಾತಿ ಅಧಿಸೂಚನೆ ಆಗಲಿ.
@NswamyChalavadi
ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಶಿಕ್ಷಕರ ನೇಮಕಾತಿ ಮಾಡಿಲ್ಲ ಇದನ್ನ ಖಂಡಿಸಿ ದಿನಾಂಕ 11.2.2026 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆಗೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ.@AKSSAofficial
ತಕ್ಷಣ ಜಾರಿಗೆ ತರಬೇಕಾದ ಬೇಡಿಕೆಗಳು
1. ಒಳ ಮೀಸಲಾತಿ ಸೇರಿದಂತೆ ಎಲ್ಲಾ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಪ್ರಾರಂಭಿಸಬೇಕು.
2. ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯಲ್ಲಿ SC, ST, OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 33 ವರ್ಷಗಳವರೆಗೆ ಹಾಗೂ GM ಅಭ್ಯರ್ಥಿಗಳಿಗೆ ನಿಗದಿತವಾಗಿ ಖಾಯಂಗೊಳಿಸಬೇಕು.
3. 545 PSI ಹಾಗೂ 402 PSI ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಬೇಕು. ಜೊತೆಗೆ ಪೊಲೀಸ್ ಇಲಾಖೆಯ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪ್ರಾರಂಭಿಸಬೇಕು.
4. PSTR, GPSTR, HSTR, ದೈಹಿಕ ಶಿಕ್ಷಕರು, PU ಉಪನ್ಯಾಸಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣ ಆರಂಭಿಸಬೇಕು.
5. ಎಲ್ಲಾ ನೇಮಕಾತಿಗಳಲ್ಲೂ ಭ್ರಷ್ಟಾಚಾರ ರಹಿತ, ಪಾರದರ್ಶಕ ಪ್ರಕ್ರಿಯೆಯನ್ನು ಖಚಿತಪಡಿಸಬೇಕು.
6. ಗ್ರಂಥಪಾಲಕರು ಹಾಗೂ ಸಹಾಯಕ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು.
7. ಪ್ರತಿವರ್ಷ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ಹುದ್ದೆಗಳ ನೇಮಕಾತಿ ನಡೆಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
8. ಮುಂದಿನ ಐದು ವರ್ಷಗಳ ಕಾಲ ಎಲ್ಲಾ ಇಲಾಖೆಗಳಿಗೂ ಶಾಶ್ವತ ವಯೋಮಿತಿ ಸಡಿಲಿಕೆಯನ್ನು ಖಾಯಂಗೊಳಿಸಬೇಕು.
9. ಕೇಂದ್ರ ಲೋಕಸೇವಾ ಆಯೋಗದ (UPSC) ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ಪರೀಕ್ಷಾ ಶುಲ್ಕ ವ್ಯವಸ್ಥೆಯನ್ನು ಅನ್ವಯಿಸಬೇಕು.
10. AO, AAO, Land Surveyor, Veterinary Officer ಹುದ್ದೆಗಳ ನೇಮಕಾತಿಯನ್ನು ಕೂಡಲೇ ಪ್ರಾರಂಭಿಸಬೇಕು.
11. 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪೋಸ್ಟರ್ ಬಿಂದುವನ್ನು ತಕ್ಷಣ ಅಳವಡಿಸಬೇಕು.
12. ಆರೋಗ್ಯ ಇಲಾಖೆಯಲ್ಲಿರುವ Group A, Group B, Group C ಹಾಗೂ ನರ್ಸಿಂಗ್ ಸಿಬ್ಬಂದಿಗಳ ಎಲ್ಲಾ ಬಾಕಿ ನೇಮಕಾತಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು.
13. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ UGC ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ, ಪಾರದರ್ಶಕ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಜಾರಿಗೆ ತರಬೇಕು.
ನಾಡಿನ ಯುವಶಕ್ತಿಯ ತಾಳ್ಮೆಯನ್ನು ಸರ್ಕಾರ ಪರೀಕ್ಷಿಸುತ್ತಿರುವಂತೆ ಕಾಣುತ್ತಿದೆ. ಹಗಲಿರುಳು ಶ್ರಮಪಟ್ಟು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ನಿರಂತರವಾಗಿ ಅನ್ಯಾಯ ಎಸಗುತ್ತಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳ ವಯೋಮಿತಿ ಮುಗಿದಿದ್ದು, ಅವರ ಭವಿಷ್ಯ ಅನಿಶ್ಚಿತತೆಯಲ್ಲಿ ಸಿಲುಕಿದೆ.
ಯುವಕರಿಗೆ ಉದ್ಯೋಗ ಒದಗಿಸಬೇಕಾದ ಸರ್ಕಾರ ನಿರ್ಲಕ್ಷ್ಯ ಧೋರಣೆಯಲ್ಲಿ ಕಾಲಹರಣ ಮಾಡುತ್ತಿದೆ. 2026–27 ವಿತ್ತೀಯ ವರ್ಷದ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವ ಸ್ಪಷ್ಟ ಮತ್ತು ದೃಢ ಆಶ್ವಾಸನೆಯನ್ನು ನೀಡಬೇಕು.
ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿದಲ್ಲಿ, ವಿಜಯಪುರದಿಂದ - ಬೆಂಗಳೂರಿನವರೆಗೆ “ವಿಧಾನಸೌಧ ಚಲೋ” ಪಾದಯಾತ್ರೆಯ ಮೂಲಕ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ರಾಜ್ಯದ ಮುಂದೆ ಬಯಲಿಗೆಳೆಯಬೇಕಾಗುತ್ತದೆ
ಯುವ ಶಕ್ತಿ
ದೇಶದ ಶಕ್ತಿ
@AKSSAofficial I @tv9kannada I @AsianetNewsSN I @prajavani I @News18Kannada I @publictvnews I @guaranteenews I @kanthakumarr I @KannadaRepublic I #JusticeforKPSCAspirants I #CongressFailsKarnataka I #KPSC I
ಮಾನ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೇ (@RAshokaBJP ) , ಶೇ.50ರ ಮೀಸಲಾತಿ ಅನ್ವಯ ನೇಮಕಾತಿಗೆ ಆಕ್ಷೇಪವಿಲ್ಲ: ಹೈಕೋರ್ಟ್ ಹೇಳುತ್ತಿದೆ.ಆದ್ದರಿಂದ ತಾವು ಸರ್ಕಾರಕ್ಕೆ ಒತ್ತಡ ಹಾಕಿ ಶೇ.50ರ ಮೀಸಲಾತಿ ಅನ್ವಯ ನೇರ ನೇಮಕಾತಿ ಅಧಿಸೂಚನೆ ಹೊರಡಿಸಲು , ಕಳೆದ ೨ ವರ್ಷಗಳಿಂದ ಯಾವುದೇ ನೇರ ನೇಮಕಾತಿ ಅಧಿಸೂಚನೆ ಆಗಿಲ್ಲ, (೧/೨)