ಎಂಥಾ ಭ್ರಷ್ಟ ಸರ್ಕಾರಗಳು ನಮ್ಮದು, ಜನರ ತೆರಿಗೆ ಹಣ ಲೂಟಿ ಮಾಡಿ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ ಈ ರಾಷ್ಟ್ರೀಯ ಪಕ್ಷಗಳಿಗೆ ಕರ್ನಾಟಕದಲ್ಲಿ...
ಜೆಸಿಬಿ ಪಕ್ಷಗಳ ಹಿಂಬಾಲಕರೇ,
ಸ್ವಾರ್ಥಕ್ಕಾಗಿ ನಮ್ಮ ಜಾತಿ ನಾಯಕ, ನಮ್ಮ ಜಾತಿ ನಾಯಕ ಅಂಥ ಜಾತಿ ಧರ್ಮ ಹಣ ಹೆಂಡಕ್ಕೆ ಮಾರಿಕೊಂಡು ಇವತ್ತು ಏನೋ ದೊಡ್ಡ ಸಾಧನೆಗಳು ಮಾಡಿದ್ದಾರೆ ಕರ್ನಾಟಕ ಜನಕ್ಕೆ ಇವರು ಅಂತ ಹೋಗಿದ್ದಿರಲ್ಲಪ್ಪ, ನಾಳೆ ನಿಮ್ಮ ನಿಮ್ಮ ಮಕ್ಕಳ ಪರಿಸ್ಥಿತಿನೂ ಇಷ್ಟೇ...
ಈ ಜೆಸಿಬಿ ಪಕ್ಷಗಳ ಹಿಂಬಾಲಕರ ಬಿಟ್ಟು, ಮುಂದೆ ಬಾಳಿ ಬದುಕಬೇಕಾದ ನಮ್ಮ ಸ್ವಾಭಿಮಾನಿ ಕನ್ನಡ ಯುವಕರು ಎಚ್ಚೆತ್ತುಕೊಂಡರೆ ಕನ್ನಡ, ಕನ್ನಡಿಗ, ಕರ್ನಾಟಕ ಉದ್ದಾರಾಗುತ್ತದೆ...
ಕೊನೆಯದಾಗಿ ನಮ್ಮ ಕನ್ನಡದ ಯುವಕರು ಬರಿ ಉದ್ಯೋಗ ಪಡೆಯುವುದಕ್ಕೆ ಮಾತ್ರ Gen Zi ಗಳಾಗಬೇಡಿ🙏, ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಮುಂದಾಗಿ, ತಪ್ಪು ತಿಳಿಯಬೇಡಿ...
KRS ಪಕ್ಷ ಸದಾ ನಿಮ್ಮೊಂದಿಗೆ ಇರುತ್ತದೆ..
ಕೃಪೆ: ಗೌರವಾಧ್ಯಕ್ಷರಾದ ರವಿ ಕೃಷ್ಣರೆಡ್ಡಿ ಅವರ ಫೇಸ್ಬುಕ್ ನಿಂದ https://t.co/PwcnF8tJm4
ನೆನಪಿರಲಿ, ಭ್ರಷ್ಟರ ದುರಾಡಳಿತದಲ್ಲಿ ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಗುಂಪು ಸೇರುವ ಸ್ವಾತಂತ್ರ್ಯ, ಇಂತಹ ಯಾವುದೇ ಸಂವಿಧಾನದತ್ತ ಮೂಲಭೂತ ಹಕ್ಕುಗಳೂ ಇರುವುದಿಲ್ಲ. ಕುಕ್ಕರ್, ಲಿಕ್ಕರ್, ನಿಕ್ಕರ್'ಗಳ ದುರಾಸೆಗೆ ಬಲಿಯಾಗಿ, ಉನ್ಮಾದದ ವಿಚಾರಗಳಿಗೆ ಹುಚ್ಚರಾಗಿ, ನಾವು ನಮ್ಮ ಕೈಯಾರೆ ಓಟು ಹಾಕಿ ಚುನಾವಣೆಗಳಲ್ಲಿ ಅಯೋಗ್ಯರನ್ನು ಆರಿಸಿಕೊಂಡರೆ ಹೀಗಾಗದೆ ಇನ್ನೇನು ತಾನೇ ಆಗಲು ಸಾಧ್ಯ?
* 56,432 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಬೇಕು
* KPSC'ಯಲ್ಲಿ ನಡೆದಿರುವ ಅಕ್ರಮಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು
ಈ ಎರಡು ವಿಚಾರಗಳನ್ನು ಇಟ್ಟುಕೊಂಡು ಇಂದು ಏಕಾಂಗಿಯಾಗಿ ಮತ್ತು ಶಾಂತಿಯುತವಾಗಿ ಧಾರವಾಡದ DC ಕಚೇರಿಯ ಮುಂಭಾಗದ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಕುಳಿತಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಎನ್ನುವ ಯುವಕನನ್ನು ಪೊಲೀಸರು ಹೀಗೆ ಬಲಾತ್ಕಾರದಿಂದ ಎಳೆದೊಯ್ದಿದ್ದಾರೆ.
ದುರಹಂಕಾರದಿಂದ ಮೆರೆಯುತ್ತಿರುವ ಮತ್ತು ದುರಾಡಳಿತ ನೀಡುತ್ತಿರುವ ಮುಖ್ಯಮಂತ್ರಿ Siddaramaiah ಸರ್ಕಾರಕ್ಕೆ ಈ ಧರಣಿ ಕುಳಿತ ವ್ಯಕ್ತಿಯು ನಾಡಿನ ಲಕ್ಷಾಂತರ ಯುವಜನರ ನೋವು, ಅಸಹಾಯಕತೆ, ಹತಾಶೆ, ಆಕ್ರೋಶ, ಕನಸುಗಳ ಪ್ರತಿನಿಧಿ ಎಂಬ ಅರಿವಿಲ್ಲ.
ಹೀಗೆ ಹೋರಾಡಿಯೇ ನಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆಯಬೇಕು ಎಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವೆಲ್ಲಿದೆ?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಈ ಯುವಜನರ ಹೋರಾಟವನ್ನು ಮತ್ತು ಆಗ್ರಹಗಳನ್ನು ಬೆಂಬಲಿಸುತ್ತದೆ. JCB ಪಕ್ಷಗಳ ದುರಾಚಾರಗಳು ಕೊನೆಯಾಗದೆ ರಾಜ್ಯದ ಜನರ ಬದುಕು ಹಸನಾಗದು ಎಂದೂ ಈ ಸಂದರ್ಭದಲ್ಲಿ ಎಲ್ಲರಿಗೂ ನೆನಪಿಸಬಯಸುತ್ತದೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
- ರವಿ ಕೃಷ್ಣರೆಡ್ಡಿ,
ಸಂಸ್ಥಾಪಕ ಹಾಗೂ ಗೌರವಾಧ್ಯಕ್ಷ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
09-05-2026.
ನಮ್ಮ ಪೋಸ್ಟ್ ಗಳು ದಯವಿಟ್ಟು ಪ್ರತಿಯೊಬ್ಬರು ರಿಪೋಸ್ಟ್ ಮಾಡಿ, ನೀವೇ ನಮ್ಮ ನಿಜವಾದ ಐಟಿ ಸೆಲ್ ಗಳು😊👍🏼
ಕ್ಯಾಪ್ಟನ್ ಗೋಪಿನಾಥರವರಿಗೆ
ಸೈನಿಕ ಶಾಲೆಯ ಪರೀಕ್ಷೆಯನ್ನ ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.
ಆ ಸಣ್ಣ ಅವಕಾಶದಿಂದ Army ಯಲ್ಲಿ ಸೇವೆ ಸಲ್ಲಿಸಿದರಲ್ಲದೆ.
ಮುಂದೆ, Air Deccan ಎನ್ನುವ ಬೃಹತ್ ಉದ್ಯಮವನ್ನು ಕಟ್ಟಿದರು.
ಕನ್ನಡ ನೆಲದಲ್ಲಿ ಓಡಾಡುವ
ಭಾರತದ ಹೆಮ್ಮೆ ರೈಲುಗಳ
ಪರೀಕ್ಷೆಯನ್ನು ಕನ್ನಡದಲ್ಲಿ
ಕೊಟ್ಟರೆ ರೈಲ್ವೆ ಇಲಾಖೆಯ
ಗಂಟೇನೂ ಹೋಗುವುದಿಲ್ಲ.
ವೈವಿಧ್ಯತೆ ದೇಶದ ಅಸ್ಮಿತೆ.
ಕನ್ನಡ ಕಡೆಗಣನೆಯ
ದುರಹಂಕಾರಕ್ಕೆ
ಕನ್ನಡಿಗರ ಬಳಿ ಮದ್ದುಗಳಿವೆ,
ಜಾಗೃತೆ.
@prajavani
ಮಾನ್ಯ @rashtrapatibhvn ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ KAS 384 ಹುದ್ದೆಗಳಲ್ಲಿ ಹಲವು ಅಕ್ರಮಗಳ ಆರೋಪವಿದ್ದು ನೇಮಕಾತಿಯನ್ನು CBI ತನಿಖೆಗೆ ಆದೇಶಿಸುವಂತೆ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದೇವೆ
ಭ್ರಷ್ಟಾಚಾರ ಹಾಗೂ ಅಕ್ರಮಗಳಿಂದ ನೇಮಕಾತಿಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ,
ನಮ್ಮ ಮನವಿಯನ್ನು ಪರಿಗಣಿಸಿ.
ಮಾನ್ಯ @siddaramaiah ನೋಡಿ ಉತ್ತರ ಪ್ರದೇಶ ಲೋಕ ಸೇವಾ ಆಯೋಗದಂತೆ ವಾರ್ಷಿಕ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲು KPSC ಗೆ ಯಾಕೆ ಸಾಧ್ಯವಾಗುತ್ತಿಲ್ಲ
ಕರ್ನಾಟಕ ಲೋಕ ಸೇವಾ ಆಯೋಗದಲ್ಲೂ ಬೇರೆ ರಾಜ್ಯಗಳಂತೆ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಆಗಲಿ ಹಾಗೂ ಅಲ್ಲಿರುವ ಸದಸ್ಯರ ಸಂಖ್ಯೆ ಕಡಿಮೆ ಮಾಡಿ ಮಾದರಿ KPSCಯನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಿ.
ಒಂದೆಡೆ ಸರ್ಕಾರೀ ಉದ್ಯೋಗಗಳಿಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಕರ್ನಾಟಕ ಸರ್ಕಾರವು ಪೊಲೀಸರನ್ನು ದುರುಪಯೋಗಪಡಿಸಿ ಪ್ರಕರಣಗಳನ್ನು ದಾಖಲಿಸುತ್ತಿದೆ; ಮತ್ತೊಂದೆಡೆ, ಭ್ರಷ್ಟಾಚಾರದ ಮೂಲಕ ಉದ್ಯೋಗಗಳನ್ನು ಮಾರಾಟ ಮಾಡಿ ಲಕ್ಷಾಂತರ ಯುವಜನತೆಯ ಭವಿಷ್ಯವನ್ನು ಹಾಳು ಮಾಡಿದ ಕೆಪಿಎಸ್ಸಿ ಅಕ್ರಮದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ರಾಜಕೀಯ ಹಿತಾಸಕ್ತಿಗಳು ಹಾಗೂ ಭ್ರಷ್ಟಾಚಾರಿಗಳನ್ನು ಕಾಪಾಡುವುದೇ ಹೆಚ್ಚು ಪ್ರಾಮುಖ್ಯತೆ ಪಡೆದಂತಾಗಿದೆ.
#AbolishKPSC
ವಿಷಯ:- KPSC ಯಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಕೂಡಲೆ CBI ತನಿಖೆಗೆ ಕೊಡಬೇಕೆಂದು ಮತ್ತು ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೂಡಲೇ ಭರ್ತಿ ಮಾಡಬೇಕೆಂದು ಇದೆ ತಿಂಗಳು ಏಪ್ರಿಲ್/8/2026 ರಿಂದ ಧಾರವಾಡದಲ್ಲಿರುವ DC ಕಚೇರಿ ಮುಂಭಾಗ ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಅನುಮತಿ @compolhdc ಕೋರಿ.
ರೈಲ್ವೇ ಇಲಾಖೆ ಕನ್ನಡವನ್ನು ಕೈಬಿಟ್ಟು ಹಿಂದಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದಾಗ ಕಾಣೆಯಾಗಿದ್ದ ಶೋಭಾ ಕರಂದ್ಲಾಜೆ ಈಗ ಹಿಂದಿ ಪರೀಕ್ಷೆಯ ಅಂಕ ಲೆಕ್ಕಕ್ಕಿಲ್ಲ ಎಂದ ಕ್ಷಣ ಪ್ರತ್ಯಕ್ಷ.
ಎಂತ ನಾಡದ್ರೋಹಿಗಳು ಇವರೆಲ್ಲಾ...
@ShobhaBJP
ಮಾನ್ಯ@siddaramaiah KPSC ಎಂಬ ಸಂವಿಧಾನಾತ್ಮಕ ಸಂಸ್ಥೆಯಲ್ಲಿ ಭ್ರಷ್ಟರ ಹಾವಳಿ ಮಿತಿ ಮೀರಿದೆ ಇದನ್ನು ಸರಿಪಡಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೇರಬೇಕಾದ ಹುದ್ದೆಗಳನ್ನು ಕಳ್ಳ ಮಾರ್ಗದ ಮೂಲಕ ಪಡೆಯಲು ಬಯಸುವವರ ಪಾಲಾಗಲು ಬಿಡದಿರಿ,
PDO KAS ನಲ್ಲಿ ಭ್ರಷ್ಟಾಚಾರದ ಆರೋಪವಿದ್ದು CBI ತನಿಖೆಗೆ ಆದೇಶ ನೀಡಿ
Shutdown#corrupt KPSC.