ಮಾನ್ಯ @KEA_karnataka ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಹೆಚ್. ಪ್ರಸನ್ನ ಕುಮಾರ್, ಐಎಎಸ್ ಅವರಲ್ಲಿ ನಮ್ಮ ಮನವಿ ಏನೆಂದರೆ,
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ವ್ಯಾಪ್ತಿಯ FDA ಹಾಗೂ SDA ಹುದ್ದೆಗಳ ಲಿಖಿತ ಪರೀಕ್ಷೆಗಳು ಈಗಾಗಲೇ ಯಶಸ್ವಿಯಾಗಿ ನಡೆದಿದ್ದು, ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಅಭ್ಯರ್ಥಿಗಳು ತೀವ್ರ ಆತಂಕ ಮತ್ತು ಅನಿಶ್ಚಿತತೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಆದ್ದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಅವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 708 ವಿವಿಧ ಇಲಾಖೆಗಳ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ @KEA_karnataka ವತಿಯಿಂದ ಈಗಾಗಲೇ ನಡೆಸಲಾಗಿರುವ ಎಲ್ಲಾ ಪರೀಕ್ಷೆಗಳ ಫಲಿತಾಂಶಗಳನ್ನು ಕೂಡಲೇ ಪ್ರಕಟಿಸಿ, ಅಭ್ಯರ್ಥಿಗಳ ಭರವಸೆಯನ್ನು ಉಳಿಸಿ ಮತ್ತು ನೇಮಕಾತಿ ಪ್ರಕ್ರಿಯೆಗೆ ವೇಗ ನೀಡಬೇಕೆಂದು ತಮ್ಮಲ್ಲಿ ವಿನಮ್ರವಾಗಿ ಕೋರುತ್ತೇವೆ.
ವಿದ್ಯಾರ್ಥಿಗಳ ಪರವಾಗಿ, ನ್ಯಾಯಸಮ್ಮತ ಹಾಗೂ ಶೀಘ್ರ ಕ್ರಮ ಕೈಗೊಂಡು ಫಲಿತಾಂಶ ಪ್ರಕಟಿಸುವ ಮೂಲಕ ಸಾವಿರಾರು ಅಭ್ಯರ್ಥಿಗಳ ನಿರೀಕ್ಷೆಗೆ ಸ್ಪಂದಿಸುವಂತೆ ವಿನಂತಿಸಿಕೊಳ್ಳುತ್ತೇವೆ. �
@DKShivakumar@CMofKarnataka@INCKarnataka@Sandeep98886864
@KEA_karnataka PC ಅರ್ಜಿ ಸಲ್ಲಿಸುತ್ತಿರುವಾಗ SSLC marks card ಹಾಗೂ Adhara card ಅಲ್ಲಿ ವಿದ್ಯಾರ್ಥಿಗಳ ಹೆಸರಿನ Spelling ಒಂದು change ಇದ್ರೂ Mismatch ಅಂತ ಬರುತ್ತಿದೆ ಎಂದು ಹಲವು ಅಭ್ಯರ್ಥಿಗಳು ಹೇಳುತ್ತಿದ್ದಾರೆ.
ಇದೊಂದು Logic ಇಲ್ಲದೆ ಇರೋ Software. ಮದುವೆಯಾಗಿರುವ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ತಮ್ಮ ಗಂಡನ ಹೆಸರನ್ನು ಸೇರಿಸಿರುತ್ತಾರೆ. ಇದೇ ಕಾರಣಕ್ಕೆ SSLC NAME ಹಾಗೂ ADHARA CARD ನಲ್ಲಿ MISMATCH ಎಂದು ಬರುತ್ತಿದೆ..
ಈ ವಿಷಯವನ್ನು @KEA_karnataka ಮುಖ್ಯಸ್ಥರ ಗಮನಕ್ಕೆ ಬಂದರೆ ಖಂಡಿತ ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸುವಿರಿ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ,
ಇದು kea ಅವರು ಸಿದ್ಧಪಡಿಸಿರುವ Application software ಅವರೇ ಇದನ್ನ ಸರಿಪಡಿಸಬೇಕು.
ಅರ್ಜಿ ಸಲ್ಲಿಸುವಾಗ ಉಂಟಾಗುವ ಯಾವುದೇ ತಾಂತ್ರಿಕ ಸಮಸ್ಯೆಗಳಿಗಾಗಿ @KEA_karnataka helpline ಗೆ ಕಾಲ್ ಮಾಡಿ...
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ ಎಂಬ ಆಶಾಭಾವನೆಯೊಂದಿಗೆ ವಿದ್ಯಾರ್ಥಿ ಸಮೂಹ.
@CMofKarnataka@INCKarnataka@DgpKarnataka @Nishkama_Karma1 @Defender_007_
RGUHS ( Rajiv Gandhi University of Health Sciences ) ಇಲಾಖೆಯ FDA ಮತ್ತು SDA ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಈಗಾಗಲೇ @KEA_karnataka ಮೂಲಕ ಪೂರ್ಣಗೊಂಡಿದ್ದು, ಹಲವು ತಿಂಗಳು ಕಳೆದಿವೆ ಸಾವಿರಾರು ಅಭ್ಯರ್ಥಿಗಳು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆ ಪಟ್ಟಿ (Final Selection List) ಪ್ರಕಟಣೆಯು ಪ್ರಸ್ತುತ ಯಾವ ಹಂತದಲ್ಲಿದೆ ಹಾಗೂ ದಾಖಲೆಗಳ ಪರಿಶೀಲನೆ (Document Verification) ಮತ್ತು ಅಂತಿಮ ಫಲಿತಾಂಶ ಪ್ರಕಟಿಸುವ ತಾತ್ಕಾಲಿಕ ದಿನಾಂಕ ಯಾವುದು ಎಂಬುದನ್ನು ತಿಳಿಸಲು ವಿನಂತಿಸುತ್ತೇವೆ.
ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬವಾಗಿರುವ ಕಾರಣಗಳೇನು ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡಬೇಕಾಗವಿನಂತಿಸುತ್ತೇವೆ
ಯಾವುದೇ ಆಡಳಿತಾತ್ಮಕ ಅಥವಾ ಕಾನೂನು ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಶೀಘ್ರವಾಗಿ ನಿವಾರಿಸಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ವಿನಂತಿಸುತ್ತೇವೆ. ಅಭ್ಯರ್ಥಿಗಳ ಹಿತದೃಷ್ಟಿಯಿಂದ @KEA_karnataka ಹಾಗೂ RGUHS ಈ ಕುರಿತು ಸ್ಪಷ್ಟನೆ ನೀಡಿ ಶೀಘ್ರದಲ್ಲೇ ಮುಂದಿನ ಕ್ರಮಗಳನ್ನು ಪ್ರಕಟಿಸಬೇಕು.
@KEA_karnataka ನಿಮ್ಮ ಸ್ಪಂದನೆಯ ನಿರೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು
@CMofKarnataka@DKShivakumar@INCKarnataka@PriyankKharge@suryamukundaraj
ಧನ್ಯವಾದಗಳು. :::
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸನ್ಮಾನ್ಯ ಶ್ರೀ @DKShivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು,
ನಾಡಿನ ಸಮಸ್ತ ವಿದ್ಯಾರ್ಥಿಗಳ ಪರವಾಗಿ ನಿಮಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತಾ, ನಿಮ್ಮ ಆಡಳಿತಾವಧಿಯಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿ, ಸಮೃದ್ಧಿ ಹಾಗೂ ಸುಭಿಕ್ಷತೆಯತ್ತ ಸಾಗಲಿದೆ ಎಂಬ ವಿಶ್ವಾಸವನ್ನು ನಾಡಿನ ಲಕ್ಷಾಂತರ ಯುವಜನತೆ ವ್ಯಕ್ತಪಡಿಸುತ್ತೇವೆ.
ಸನ್ಮಾನ್ಯರೇ, ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳು ವಿಳಂಬಗೊಂಡಿದ್ದು, ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಪ್ರಸ್ತುತ ಒಳಮೀಸಲಾತಿ ಹಾಗೂ ರೋಸ್ಟರ್ ಪ್ರಕ್ರಿಯೆಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, @INCKarnataka ಘೋಷಿಸಿರುವ ಹಣಕಾಸು ಅನುಮೋದನೆ ಪಡೆದ ಎಲ್ಲಾ 57,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವಂತೆ ವಿನಂತಿಸುತ್ತೇವೆ.
ವಿಶೇಷವಾಗಿ 600 PSI, 8,000 ಪೊಲೀಸ್ ಕಾನ್ಸ್ಟೇಬಲ್, 15,000 ಶಿಕ್ಷಕರ ಹುದ್ದೆಗಳು, FDA, SDA, ಭೂಮಾಪಕರ ಹುದ್ದೆಗಳು, 257 ESI ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ತುರ್ತಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಬಾಕಿ ಉಳಿದ APEX BANK ನಂತಹ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಮಾನ್ಯ @DKShivakumar ಅವರಲ್ಲಿ ರಾಜ್ಯದ ಲಕ್ಷಾಂತರ ಯುವ ಜನತೆಯ ಪರವಾಗಿ ಮನವಿ ಮಾಡುತ್ತೇವೆ,
ಯುವಜನತೆಯ ಹಿತದೃಷ್ಟಿಯಿಂದ ವಯೋಮಿತಿ ಸಡಿಲಿಕೆ ನೀಡಿ ಲಕ್ಷಾಂತರ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿರುವುದಕ್ಕಾಗಿ ವಿಶೇಷವಾಗಿ ಮಾನ್ಯ @siddaramaiah ಹಾಗೂ @INCKarnataka ಸರ್ಕಾರಕ್ಕೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನಿರಂತರವಾಗಿ ಧ್ವನಿಯಾಗಿರುವ ಮಾನ್ಯ ಶ್ರೀ @suryamukundaraj ಅವರಿಗೂ ನಮ್ಮ ಧನ್ಯವಾದಗಳು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಲು ಅವರ ವಹಿಸುತ್ತಿರುವ ಪಾತ್ರ ಶ್ಲಾಘನೀಯವಾಗಿದೆ.
ನಾಡಿನ ಯುವಜನರ ಆಶೋತ್ತರಗಳಿಗೆ ಸ್ಪಂದಿಸಿ, ಘೋಷಿತ 57,000 ಹುದ್ದೆಗಳ ಭರ್ತಿಗೆ ಆದ್ಯತೆ ನೀಡಿ ಶೀಘ್ರ ಕ್ರಮ ಕೈಗೊಳ್ಳುವಿರಿ ಎಂಬ ಆಶಾಭಾವನೆಯೊಂದಿಗೆ ಮತ್ತೊಮ್ಮೆ ನಾಡಿನ ಜವಾಬ್ದಾರಿಯುತ @CMofKarnataka ಪದವಿ ಅಲಂಕರಿಸಿರುವ ಮಾನ್ಯ @DKShivakumar ಅವರಿಗೆ ಮತ್ತೊಮ್ಮೆ ಶುಭಾಶಯಗಳನ್ನು ಲಕ್ಷಾಂತರ ಯುವಕರ ಪರವಾಗಿ ತಿಳಿಸುತ್ತೇವೆ
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ /https://t.co/WZx7YKbjsV (KSVS)
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ , ದಯವಿಟ್ಟು ತುರ್ತಾಗಿ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿ ಮತ್ತು ಆದಷ್ಟು ಬೇಗನೆ ನೇರ ನೇಮಕಾತಿ ಅಧಿಸೂಚನೆ ಆಗಲಿ.
@NswamyChalavadi
ಮಾನ್ಯ @KEA_karnataka ಅವರೇ ಪ್ರಸ್ತುತ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ನೇಮಕಾತಿ ಅಧಿಸೂಚನೆ ಹೊರಡಿಸಲು ಕಂದಾಯ ಇಲಾಖೆಯಿಂದ KEA ಗೆ ಪ್ರಸ್ತಾವನೆ ಬಂದಿದೆಯೇ?
ಪ್ರಸ್ತುತ VAO ನೇಮಕಾತಿ ಯಾವಾಗ ಹೊರಡಿಸಲಾಗುವುದು ಎಂದು ದಯವಿಟ್ಟು ತಿಳಿಸಿ.
@AKSSAofficial@KARGOVTJOBUTS @KEA @VAO
@ManjushreeN_IAS Hello madam kindly requesting you to continue the process of releasing the provisional lists of FDA and SDA posts for which document verification was already conducted .Thank you
@ManjushreeN_IAS Hello madam kindly requesting you to continue the process of releasing the provisional lists of FDA and SDA posts for which document verification was already conducted .Thank you
@Captain_Mani72 Sir plz release provisional list of FDA and SDA recruited through KEA in BDA. It will help unemployed youths like us. Already Social welfare department issued order regarding this. Thanku you sir.
ಮಾನ್ಯ @siddaramaiah ಈಗಿರುವ KPSC ಕಾರ್ಯದರ್ಶಿ ಜ್ಯೋತಿ ಮೇಡಂ ಇರುವ ತನಕ ಸ್ವಲ್ಪ ಬದಲಾವಣೆ ಕಾಣಬಹುದು ಮತ್ತೆ ಅದೇ ಸ್ಥಿತಿಗೆ ಬರುತ್ತೆ.
ಹೀಗಾಗಿ KPSC ಗೆ ಸರ್ಕಾರ ಯಾವುದೇ ಕಾರಣಕ್ಕೂ ನೇಮಕಾತಿಗಳನ್ನು KPSC ಗೆ ಕೊಡಬಾರದು ಈಗಾಗಲೇ KPSC ನಡೆಸಿರುವ KAS ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ಆರೋಪವಿದ್ದು CBI ತನಿಖೆಗೆ ನೀಡಬೇಕು.
ಉತ್ತರ ಕೊಡಿ ಸ್ವಾಮಿ ಒಂದು ವಾರ ಆಯ್ತಲ್ಲ ಎಲ್ಲಿದೆ ನೇಮಕಾತಿ❓
ನಿಮ್ ಕೈಲಿ ನೇಮಕಾತಿ ಮಾಡಕಾಗಲ್ಲ ಅಂದ್ರೆ ಸುಳ್ಳು ಭರವಸೆ ನೀಡಿದ್ದು ಏಕೆ ❓
ನೇಮಕಾತಿ ಮಾಡ್ತೀವಿ ಅಂತ ಆಸೆ ತೋರಿಸಿ ಯುವಕರಿಗೆ ಮೋಸ ಮಾಡಿದ್ದು ಏಕೆ❓
ಪದೇ ಪದೇ ಸುಳ್ಳು ಭರವಸೆ ನೀಡಿ ನೇಮಕಾತಿ ವಿಳಂಬ ಮಾಡುತ್ತಿರುವುದು ಏಕೆ❓
@AKSSAofficial@KARGOVTJOBUTS#KPSC#KEA
ಕೊಟ್ಟ ಮಾತಿನಂತೆ ನಡೆಯಲು ಸಾಧ್ಯವಿಲ್ಲ ಅಂದರೆ ನಿಮ್ದು ಯಾವ ಸೀಮೆಯ ನುಡಿದಂತೆ ನಡೆಯುವ ಸರಕಾರ ಸ್ವಾಮಿ ❓
ವಾರದಲ್ಲಿ 8000 ಪೊಲೀಸ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಮಾಡ್ತೀವಿ ಅಂತ ಭರವಸೆ ನೀಡಿ, ವಾರ ಕಳೆದರೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ.
ಸುಳ್ಳು ಭರವಸೆ ನೀಡಿ ರಾಜ್ಯದ ಯುವಕರ ಭವಿಷ್ಯ ಹಾಳು ಮಾಡುತ್ತಿರುವ @INCKarnataka
@INCKarnataka ಯುವಕರು ಇಷ್ಟು ದಿನಗಳಿಂದ ಮನವಿ ಮಾಡಿದರೂ ನೇಮಕಾತಿ ಅಧಿಸೂಚನೆ ಹೊರಡಿಸಲಿಲ್ಲ. ಈಗ GBA ಚುನಾವಣೆ ಘೋಷಣೆ ಆದ ತಕ್ಷಣ “ಎಲ್ಲ ಸಿದ್ಧತೆ ಆಗಿತ್ತು, ಆದರೆ ಎಲೆಕ್ಷನ್ ಕಾರಣದಿಂದ ತಡವಾಗಿದೆ” ಎನ್ನುವುದು ಯುವಕರಿಗೆ ನ್ಯಾಯವಲ್ಲ. @kharge@siddaramaiah ಅವರು ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಬೇಡ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ನೇಮಕಾತಿ ಅಧಿಸೂಚನೆ ಪ್ರಕಟವಾಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಯುವಕರ ಧ್ವನಿಗೆ ಸರ್ಕಾರ ಸ್ಪಂದಿಸಬೇಕು.
#RecruitmentNow #KarnatakaJobs #YouthVoice #JobNotification #KarnatakaYouth