ಮಾನ್ಯರೇ, #PSI545 ನೇಮಕಾತಿಯೂ ಅಧಿಸೂಚನೆಗೊಂಡು 4 ವರ್ಷ ಕಳೆದರೂ, ಫಲಿತಾಂಶಕ್ಕಾಗಿ ರಕ್ತದಿಂದ ಪತ್ರ ಬರೆಯುವ ಮೂಲಕ ಪ್ರತಿಭಟನೆ ಮಾಡಿದರೂ ಇನ್ನೂ ಫಲಿತಾಂಶ ಬಿಡುಗಡೆಯಾಗಿಲ್ಲ. ಏನೇ ಸಮಸ್ಯೆಗಳಿದ್ದರೂ ಶೀಘ್ರ ಪರಿಹರಿಸಿ ಆದಷ್ಟು ಬೇಗನೆ ನೇಮಕಾತಿ ಆದೇಶ ಪ್ರತಿ ನೀಡಲು ಪ್ರಯತ್ನಿಸಿ. ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಿ.
PSI 545 ಫಲಿತಾಂಶಕ್ಕಾಗಿ ರಕ್ತದಿಂದ ನೂರಾರು ಪತ್ರಗಳನ್ನು ಬರೆದಿದ್ದೇವೆ
ಇನ್ನೆರಡು ಮೂರು ದಿನಗಳಲ್ಲಿ PSI 545 ಫಲಿತಾಂಶ ಬಿಡಲಿಲ್ಲ ಎಂದರೆ ಮುಂದಿನ ವಾರ ಸಾವಿರಾರು ಪತ್ರಗಳು ರಕ್ತದಿಂದ ಬರೆದು ಪ್ರತಿಭಟನೆ ಮಾಡಲಿದ್ದೇವೆ.
ಈ ಕೂಡಲೇ PSI 545 ಫಲಿತಾಂಶ ಬಿಟ್ಟು ಆದೇಶ ಪ್ರತಿ ನೀಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. @DrParameshwara@siddaramaiah@DgpKarnataka
🇮🇳ಸರ್ಕಾರಕ್ಕೆ ಬಡವರ್ಗದ ಆಕಾಂಕ್ಷಿಗಳ ಹೃದಯಪೂರ್ವಕ ಮನವಿ 🇮🇳
@kptcl_official@thekjgeorge
ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ 10ನೇ ತರಗತಿ ಅಂಕಗಳ ಶೇಕಡವಾರು ಜೇಷ್ಠತೆಯ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬಾರದು ಎಂಬುದು AKSSA ಸಂಘಟನೆಯ ಪ್ರಬಲವಾದ ಒತ್ತಾಯವಾಗಿದೆ. ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರವೇ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು ಎನ್ನುವುದು ಸಂಘಟನೆಯ ಮನವಿಯಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ನೇಮಕಾತಿ ಪ್ರಕ್ರಿಯೆ ಏಕೆಂದರೆ, ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬಡವರ್ಗದ, ತಳ ಸಮುದಾಯದ ಆಕಾಂಕ್ಷಿಗಳೇ ಹೆಚ್ಚಾಗಿ ಇದ್ದಾರೆ. ಇಂತಹ ಹುದ್ದೆಗಳು ಬಡವರ್ಗದ ಹುದ್ದೆಗಳು, ಈ ರೀತಿಯ ಹುದ್ದೆಗಳಲ್ಲಿ ನ್ಯಾಯ ಸಮ್ಮತ ನಿಯಮ, ಮಾದರಿಯನ್ನು ಅನುಸರಿಸಿದರೆ ಸಮಾಜದ ಕಟ್ಟ ಕಡೆಯ ವರ್ಗಕ್ಕೆ ನ್ಯಾಯ ಒದಗಿಸಿದಂತೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಈ ವರ್ಗದ ಯುವಕರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ.
ಜೊತೆಗೆ, ಪೊಲೀಸ್ ಪೇದೆ (constable) ಆಕಾಂಕ್ಷಿಗಳು ಕೂಡ ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳ ಸ್ಪರ್ಧಾರ್ಥಿಗಳು ಆಗಿದ್ದಾರೆ. ಒಂದು ವೇಳೆ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಪಡೆಯಲು ವಿಫಲವಾಗುವ ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆದು ತಮ್ಮ ಬಡ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಬಹುದು ಎಂಬ ಒಂದು ಸಣ್ಣ ಆಸೆಯನ್ನು ತಮ್ಮ ಮನದಲ್ಲಿ ಇರಿಸಿಕೊಂಡಿದ್ದಾರೆ.
ಈ ಕಾರಣಗಳಿಂದಾಗಿ ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕವೇ ನೇಮಕಾತಿ ಪ್ರಕ್ರಿಯೆ ಕೈಗೊಂಡು ರಾಜ್ಯದ ಬಡವರ್ಗದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ಮತ್ತು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ನಮ್ಮ ಸಂಘಟನೆಯು ಒತ್ತಾಯಿಸುತ್ತಿದೆ.
ಕೊನೆಯ ಮಾತು:- " ಬಡ ಮಕ್ಕಳ ಕಣ್ಣೀರಿನ ಶಾಪದ ಬೆಂಕಿ ಯಾವುದೇ ಸರ್ಕಾರವನ್ನು ಸುಡದೆ ಸುಮ್ಮನೆ ಬಿಡುವುದಿಲ್ಲ" ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿ.
ಧನ್ಯವಾದಗಳು 🙏
ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದಂತೆ ತಡೆಹಿಡಿದಿರುವ ಎಲ್ಲಾ ನೇಮಕಾತಿಗಳನ್ನು ಮುಂದುವರೆಸಲು ಮತ್ತು ಬಾಕಿ ಉಳಿದಿರುವ ಎಲ್ಲಾ ಹೆಚ್ಚುವರಿ ಪಟ್ಟಿಗಳನ್ನು ಪ್ರಕಟಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಲೋಕಸೇವಾ ಇಲಾಖೆಗೆ ತಕ್ಷಣ ಅಧಿಕೃತ ಪತ್ರದ ಮುಖಾಂತರ ಸೂಚಿಸಬೇಕು.@GSathyavathi@shalinirajnish
ಕೆಪಿಟಿಸಿಎಲ್ ನ ಲೈನ್ ಮ್ಯಾನ್ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನಿಶ್ ಮೇಡಂ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಸತ್ಯವತಿ ಮೇಡಂ ಅವರಿಗೂ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅಕ್ಟೋಬರ್ 21ರ ಸೋಮವಾರ ಬೆಳಗ್ಗೆ 12 ಗಂಟೆಗೆ ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿ ಬಳಿ ಬರಬೇಕೆಂದು ಮನವಿ ಮಾಡಿಕೊಳ್ಳತ್ತಿದ್ದೇವೆ.
ಧನ್ಯವಾದಗಳು 🙏 @thekjgeorge@siddaramaiah@kptcl_official
ಕೆಪಿಟಿಸಿಎಲ್ ಮತ್ತು ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂಬ ಮನವಿ. @kptcl_official@KJGeorgeOffice@siddaramaiah
💥 KPTCL ಅಭ್ಯರ್ಥಿಗಳ ಗಮನಕ್ಕೆ 💥
@KJGeorgeOffice@siddaramaiah@AKSSAofficial
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್ ಮ್ಯಾನ್ 2975 ಹುದ್ದೆಗಳನ್ನು ಎಸ್ ಎಸ್ ಎಲ್ ಸಿ ಅಂಕಗಳು ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿ ಸೂಚನೆ ಹೊರಡಿಸಲಾಗಿದೆ. ಆದರೆ ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಬೇಕೆಂದು ರಾಜ್ಯದ ಬಹುತೇಕ ಆಕಾಂಕ್ಷಿಗಳ ಬೇಡಿಕೆಯಾಗಿದೆ.
ಈ ಬಗ್ಗೆ ಈಗಾಗಲೇ ನಮ್ಮ ಸಂಘಟನೆಯಲ್ಲಿ ಆಂತರಿಕವಾಗಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಯಾವ ರೀತಿಯ ಹೋರಾಟ ಮಾಡಬೇಕೆಂಬ ಬಗ್ಗೆ ಆಕಾಂಕ್ಷಿಗಳೊಂದಿಗೆ ವಿಷಯವನ್ನು ಹಂಚಿಕೊಳ್ಳಲಾಗುವುದು. ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಎಲ್ಲಾ ಆಕಾಂಕ್ಷಿಗಳಿಗೂ ನ್ಯಾಯ ಒದಗಿಸಲು ಸಂಘಟನೆಯೂ ಬದ್ಧವಾಗಿದೆ.
ಧನ್ಯವಾದಗಳು 🙏
💥 KPTCL ಗಮನಕ್ಕೆ 💥
@kptcl_official@KJGeorgeOffice
2022 ರಲ್ಲಿ ತೆಲಂಗಾಣ ರಾಜ್ಯದಲ್ಲಿ 1000 ಜೂನಿಯರ್ ಲೈನ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆ ರಾಜ್ಯದ ವಿದ್ಯುತ್ ಪ್ರಸರಣ ನಿಗಮ ಮಂಡಳಿಯು ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮುಖಾಂತರ ಆಯ್ಕೆ ಮಾಡಿಕೊಂಡಿದೆ. ಅದೇ ರೀತಿ, ನಮ್ಮ ರಾಜ್ಯದಲ್ಲಿಯೂ ಪ್ರಸ್ತುತ ಕೆಪಿಟಿಸಿಎಲ್ ಲೈನ್ ಮ್ಯಾನ್ ನೇಮಕಾತಿಯಲ್ಲಿ ಇದೇ ಮಾದರಿಯನ್ನು ಅನುಸರಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಧನ್ಯವಾದಗಳು 🙏
@PSI402 ಸೆಪ್ಟೆಂಬರ್ 22nd ರಂದು ಯುಪಿಎಸ್ಸಿ ಮುಖ್ಯ ಪರೀಕ್ಷೆ ಇರುವುದರಿಂದ
ಮಾನ್ಯ ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ ಕೆಇಎ ನಿರ್ದೇಶಕರಿಗೂ ಪರೀಕ್ಷೆಯನ್ನ ಮುಂದೂಡಲು ಮನವಿಯನ್ನು ಮಾಡಿಕೊಂಡಿದ್ದೇವೆ, ಈ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ನಮ್ಮ ನಡೆ ಕಾನೂನು ಹೋರಾಟ ಮತ್ತು ಪ್ರತಿಭಟನೆಗೆ ಸಿದ್ದರಾಗಿದ್ದೇವೆ.@siddaramaiah
ಇದು ಕೆಪಿಎಸ್ಸಿ ಯ ಅಯೋಗ್ಯ ತನದ ಕೆಲಸ ಕಷ್ಟಪಟ್ಟು ಓದಿದ ಮಕ್ಕಳಿಗೆ ಅದರಲ್ಲೂ ಕನ್ನಡದ ಮಕ್ಕಳಿಗೆ ಮಾಡಿರುವ ದೊಡ್ಡ ಅಪರಾಧ ಕೆಪಿಎಸ್ಸಿ ಸಂಸ್ಥೆಯ ಜೊತೆ ಸರಕಾರವು ಸಹ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಪ್ರಶ್ನೆ ಪತ್ರಿಕೆ ತಯಾರಿಸಿದ ಅಧಿಕಾರಿಗಳನ್ನು ಮೊದಲು ವಜಾಗೊಳಿಸಬೇಕು ;
ಕೋಟಗಾನಹಳ್ಳಿ ರಾಮಯ್ಯ ಚಿಂತಕರು
#KPSC_Mosa#KASReExam
@kdabengaluru@prajavani ಈ ಪ್ರಶ್ನೆಗಳಿಗೆ ಉತ್ತರ ಸರಿಯಾಗಿ ಕೊಡಿಸಿ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾವಾಗದಂತೆ ನೋಡಿಕೊಳ್ಳಿ ವರದಿಯಲ್ಲಿ ಅವರ ತಮ್ಮ ಸಮರ್ಥನೆಯನ್ನು ಮಾತ್ರ ಕೊಡುತ್ತಾರೆ ಸರ್ ಅದನ್ನು ತೆಗೆದುಕೊಂಡು ಮಾಡುವುದಾದರೂ ಏನಿಲ್ಲ ಈ ಎಲ್ಲಾ ಪ್ರಶ್ನೆಗಳಿಗೆ kpscಯಿಂದ ನ್ಯಾಯ ಕೊಡಿಸಿ
@kdabengaluru@prajavani ಮುಖ್ಯಮಂತ್ರಿಗಳ ಸುತ್ತ ಇರೋ ಅಧಿಕಾರಿಗಳ ದಂಡು, ಈ ವಿಷಯನ ಅವರ ಗಮನಕ್ಕೆ ತಂದಿದ್ದಾರೋ ಇಲ್ಲವೋ ಎಂಬುದೇ ಯಕ್ಷಪ್ರಶ್ನೆ. ಈ ಅಧಿಕಾರಿಗಳ ದಂಡು ಏಳು ಸುತ್ತಿನ ಕೋಟೆ ತರ ವಾಸ್ತವಗಳು ಮುಖ್ಯಮಂತ್ರಿಗಳನ್ನ ತಲುಪದ ರೀತಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತೆ, ಸರ್ಕಾರ KPSCಯ ಕರ್ತವ್ಯ ಲೋಪಕ್ಕೆ ಉತ್ತರ ಕೊಡಲೇಬೇಕು @CMofKarnataka@INCKarnataka
@kdabengaluru@prajavani@sstangadagi, ದಯವಿಟ್ಟು KPSC KAS ಪರೀಕ್ಷೆಯ ಪತ್ರಿಕೆಯನ್ನು ತುರ್ತಾಗಿ ಪರಿಶೀಲಿಸಿ. ಕೆಪಿಎಸ್ಸಿಯು ಕನ್ನಡ ಮಾಧ್ಯಮದ ಆಕಾಂಕ್ಷಿಗಳನ್ನು ತಮ್ಮ ಅಪಕ್ವ ಅನುವಾದಗಳ ಮೂಲಕ, ಗ್ರಾಮೀಣ, ಬಡ ವಿದ್ಯಾರ್ಥಿಗಳ ಕನಸುಗಳನ್ನು ಭಗ್ನಗೊಳಿಸಿದೆ. ಕೂಡಲೇ ಕ್ರಮ ಕೈಗೊಂಡು ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.
#kas
ದಿನಾಂಕ 27/08/2024 ರಂದು ಕೆಪಿಎಸ್ಸಿಯಿಂದ ನಡೆದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಗಳ ಕನ್ನಡ ಅನುವಾದದಲ್ಲಿ ಉಂಟಾದ ಪ್ರಮಾದದ ಕುರಿತು ಹಾಗೂ ಇದಕ್ಕೆ ಕೆಪಿಎಸ್ಸಿ ಕೈಗೊಂಡ ಕ್ರಮದ ಸಂಪೂರ್ಣ ವರದಿಯನ್ನು ಮೂರು ದಿನಗಳ ಒಳಗೆ ಪ್ರಾಧಿಕಾರಕ್ಕೆ ನೀಡುವಂತೆ ಸೂಚಿಸಿ ಪತ್ರ ಬರೆಯಲಾಗಿದೆ.
@prajavani
ಲಜ್ಜೆಗೆಟ್ಟ ಕನ್ನಡ ವಿರೋಧಿಗಳು ಆಯಕಟ್ಟಿನ ಜಾಗದಲ್ಲಿ ಇರುವುದು ದುರಂತ ,ಕನ್ನಡ ಬರದಿರುವ ಜನರ ಕೈಲಿ ಪ್ರಶ್ನೆ ಪತ್ರಿಕೆ ಬರೆಯಿಸಿ ,ಪ್ರಶ್ನೆ ಪತ್ರಿಕೆಗಳಲ್ಲಿ ದೋಷಗಳನ್ನು ತುಂಬಿ ಕನ್ನಡ ಮಕ್ಕಳಿಗೆ ಮೋಸ ಮಾಡುವುದನ್ನು ಒಪ್ಪಲಾಗದು ;
ಕುಂ ವೀರಭದ್ರಪ್ಪ
#KPSCಮೋಸ#ಮರುಪರೀಕ್ಷೆನಡೆಯಲಿ#KPSC_Mosa#KASReExam
#KPSC_Mosa ಮಾನ್ಯ ಸಿದ್ದರಾಮಯ್ಯನವರೇ ಉಳ್ಳವರಿಗೆ ಮಾತ್ರನ #KPSC ಹುದ್ದೆಗಳು ಹಳ್ಳಿಗಾಡಿನಿಂದ ಬಂದ ಕನ್ನಡದ ಬಡ ಮಕ್ಕಳು ಎಲ್ಲಿಗೆ ಹೋಗಬೇಕು ಹಾಗಾದ್ರೆ, #KPSC ಯ ಪರೀಕ್ಷೆ ಮತ್ತೊಮ್ಮೆ ಮಾಡಿ ನೀವು ಕರ್ನಾಟಕದ ಹಳ್ಳಿಗಾಡಿನ ಮಕ್ಕಳ ಪರವಾಗಿ ನಿಲ್ಲದೆ ಇದ್ರೆ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಎದುರಿಸಲು ತಯಾರಾಗಿ @siddaramaiah@CMofKarnataka@DKShivakumar