@cm ನಷ್ಟ ಪರಿಹಾರ(ಮೋ.ವಾ. ಯಾ ಕಾರ್ಮಿಕ ಪರಿಹಾರದ ಕೋಷ್ಟಕ ಆಧಾರಿತ) ಪಾವತಿಗೆ ಸಂಘಟಕರೇ ಜವಾಬ್ದಾರಿಯಾಗಲಿ.
* ಕಾರ್ಯಕ್ರಮಕ್ಕೆ ಸಾರ್ವಜನಿಕ ಹೊಣೆಗಾರಿಕೆ ವಿಮಾ ಸುರಕ್ಷತಾ ಸೌಲಭ್ಯ, ನಷ್ಟ ಪರಿಹಾರ ಪಾವತಿ ಬಾಂಡ್ ಅನುಮತಿ ಪ್ರಕ್ರಿಯೆಗೆ ಕಡ್ಡಾಯ ಮಾಡಬೇಕಾಗಿದೆ.
Respected sir @DKShivakumar
We had the greatest hope from you as you were the one who bursted anti Dharmasthala propaganda. But this time you let us down. We thought you'll fight for us. But you didn't even have a minute to tweet for us.
FYI Mangaluru is part of Karnataka.
@SWRRLY@DrmMys Please consider a SPL train YPR–MAQ on Fri, 11 Sept, late evening, with a return MAQ–YPR on Mon, 14 Sept, late evening, for Ganesha Chaturthi.
Existing 3 night trains are already showing REGRET. A SPL train would greatly help passengers during the festival rush.
2026-27ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ-143 ರನ್ವಯ ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಮಗ್ರ ಆಘಾತ ಆರೈಕೆ (Trauma Care) ಸೇವೆಗಳನ್ನು ಒದಗಿಸಲು ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರ ಚಿಕಿತ್ಸಾ ಕೊಠಡಿ ಮತ್ತು ಐಸಿಯುಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನು ಪೂರೈಸಲು ಅಗತ್ಯವಿರುವ ಉಪಕರಣಗಳ ಖರೀದಿ ಪ್ರಕ್ರಿಯೆಯನ್ನು ನಡೆಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸರ್ಕಾರದ ಆದೇಶ.
@CMofKarnataka@DrParameshwara@utkhader@KarnatakaVarthe
Gave me great joy to meet our Hon’ble Union Minister for Railways Shri @AshwiniVaishnaw Ji and thank him for addressing the long-pending demand of bringing Mangaluru’s railway region under the Mysuru Division of South Western Railway.
This important administrative change will bring greater coherence to the railway administration of the region and strengthen Mangaluru’s institutional connection with Karnataka’s railway network.
ಮಂಗಳೂರನ್ನು ಉಳಿಸಿ – ಪಡೀಲ್ ಬೈಪಾಸ್ ರಾಜಕೀಯ ನಿಲ್ಲಿಸಿ, ಮಂಗಳೂರಿನ ರೈಲ್ವೆ ಸಂಪರ್ಕವನ್ನು ರಕ್ಷಿಸಿ
ಮಂಗಳೂರು ತನ್ನ ರೈಲ್ವೆ ಇತಿಹಾಸದಲ್ಲೇ ಅತ್ಯಂತ ಮಹತ್ವದ ತಿರುವಿನಲ್ಲಿ ಬಂದು ನಿಂತಿದೆ. ದಶಕಗಳಿಂದಲೂ ಕೇರಳದ ತೆಕ್ಕೆಯಲ್ಲಿದ್ದ ಮಂಗಳೂರಿನ ರೈಲ್ವೆ ಜಾಲ, ಯಾವುದೇ ಅಭಿವೃದ್ಧಿ, ಕರ್ನಾಟಕ ಹಾಗೂ ದೇಶದ ವಿವಿಧ ಭಾಗಗಳಿಗೆ ರೈಲು ಸೇವೆ ಸಿಗದೆ, ಕೇವಲ ಕ��ರಳದ ರೈಲುಗಳು ಮಂಗಳೂರಿನಿಂದ ಓಡುತ್ತಿರುವುದನ್ನು ನೋಡಿದ ಜನರು ಕರ್ನಾಟಕದ ರೈಲ್ವೆ ಜಾಲದೊಂದಿಗೆ ಸಮರ್ಪಕವಾಗಿ ಜೋಡಿಸಬೇಕು ಇದಕ್ಕೆ ಮಂಗಳೂರಿನ ರೈಲ್ವೆ ಜಾಲವನ್ನು ನೈರುತ್ಯ ರೈಲ್ವೆ ವಲ��ದ ಜೊತೆಗೆ ವಿಲೀನಗೊಳಿಸಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಲೇ ಬಂದಿದ್ದರು. ಈ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿಯು ಪಡೀಲಿನಿಂದ ಉಳ್ಳಾಲದವರೆಗಿನ ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ 2026ರ ಅಕ್ಟೋಬರ್ 1ರಂದು ಹಸ್ತಾಂತರಿಸಲು ತೆಗೆದುಕೊಂಡ ನಿರ್ಧಾರವು ಕರ್ನಾಟಕಕ್ಕೆ ದೊರೆತ ಮಹತ್ವದ ಬೆಳವಣಿಗೆಯಾಗಿದೆ. ಇದರೊಂದಿಗೆ ಎರಡು ವಲಯಗಳ ಇಂಟರ್ಚೇಂಜ್ ಪಾಯಿಂಟ್ ಪಡೀಲ್ನಿಂದ ಉಳ್���ಾಲಕ್ಕೆ ಸ್ಥಳಾಂತರಗೊಳ್ಳಲಿದ್ದು, ತೋಕೂರು ಯಥಾಪ್ರಕಾರ ಕೊಂಕಣ್ ಹಾಗೂ ನೈಋತ್ಯ ರೈಲ್ವೆ ವಲಯದ ಇಂಟರ್ಚೇಂಜ್ ಆಗಿ ಮುಂದುವರಿಯಲಿದೆ. ಈ ಆಡಳಿತಾತ್ಮಕ ಬದಲಾವಣೆಯು ಮಂಗಳೂರಿಗೆ ಹೆಚ್ಚು ಸದೃಢ ಮತ್ತು ಸಂಘಟಿತ ರೈಲ್ವೆ ವ್ಯವಸ್ಥೆಯನ್ನು ರೂಪಿಸಿಕೊಡಬಲ್ಲದು; ಆದರೆ ಇದರ ನಿಜವಾದ ಪ್ರಯೋಜನ ದೊರೆಯಬೇಕೆಂದರೆ ಮಂಗಳೂರಿನ ರೈಲ್ವೆ ಸಂಪರ್ಕವು ವಿಸ್ತರಣೆಯಾಗಬೇಕೇ ವಿನಃ ಬೈಪಾಸ್ ಆಗಬಾರದು.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡೂ ಮಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಾಗಿದೆ. ಯಾವುದೇ ಕಾರಣಕ್ಕೂ ಇವೆರಡರಲ್ಲಿ ಒಂದನ್ನು ಕಡೆಗಣಿಸುವುದಾಗಲಿ ಅಥವಾ ಬಲಿಕೊಡುವುದಾಗಲಿ ಸಲ್ಲದು. ಮಂಗಳೂರು ಸೆಂಟ್ರಲ್ ನಗರದ ಪ್ರಮುಖ ರೈಲು ನಿಲ್ದಾಣವಾಗಿದ್ದು, ಕರ್ನಾಟಕ ಹಾಗೂ ಕೊಂಕಣ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ಟರ್ಮಿನಲ್ ಆಗಿದೆ. ಮಂಗಳೂರು ಈಗ ನೈಋತ್ಯ ರೈಲ್ವೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ, ಇದು ಕರಾವಳಿ ಭಾಗದಲ್ಲಿ ಮೈಸೂರು ವಿಭಾಗದ ರೈಲುಗಳಿಗೆ ಪ್ರಮುಖ ಆರಂಭಿಕ ಹಾಗೂ ಅಂತ್ಯಗೊಳ್ಳುವ ನಿಲ್ದ���ಣವಾಗುವುದರ ಜೊತೆಗೆ, ನೈಋತ್ಯ ರೈಲ್ವೆ ವಲಯಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿ ಬೆಳೆಯಬಲ್ಲದು. ಮತ್ತೊಂದೆಡೆ ಮಂಗಳೂರು ಜಂಕ್ಷನ್, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಪ್ರಮುಖ ಜಂಕ್ಷನ್ ಹಾಗೂ ಕಾರ್ಯಾಚರಣಾ ಕೇಂದ್ರವಾಗಿದ್ದು, ಹಾಸನ–ಬೆಂಗಳೂರು ಕಾರಿಡಾರ್ನಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಮಂಗಳೂರಿಗೆ ಈ ಎರಡೂ ನಿಲ್ದಾಣಗಳೂ ಅತ್ಯಗತ್ಯ.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂ���ು ಜಂಕ್ಷನ್ ಕೇವಲ ಮಂಗಳೂರು ನಗರದ ನಿವಾಸಿಗಳಿಗಷ್ಟೇ ಸೀಮಿತವಾದ ನಿಲ್ದಾಣಗಳಲ್ಲ. ಹಾಸನ, ಮೈಸೂರು, ಬೆಂಗಳೂರು ಹಾಗೂ ಕರ್ನಾಟಕದ ಇತರೆ ಭಾಗಗಳ ಪ್ರಯಾಣಿಕರು ಮಂಗಳೂರು ಮತ್ತು ಕರಾವಳಿ ಕರ್ನಾಟಕಕ್ಕೆ ಬರುವಾಗ ಇದೇ ನಿಲ್ದಾಣಗಳನ್ನು ಬಳಸುತ್ತಾರೆ. ಬೆಂಗಳೂರು–ಮಡಗಾಂವ್ ವಂದೇ ಭಾರತ್ ರೈಲ���್ನು ಕುಣಿಗಲ್–ಪಡೀಲ್ ಬೈಪಾಸ್ ಮಾರ್ಗವಾಗಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡನ್ನೂ ಬೈಪಾಸ್ ಮಾಡಿ ಓಡಿಸಲು ಪ್ರಸ್ತಾಪಿಸಿದಾಗ ಇದು ಸ್ಪಷ್ಟವಾಗಿ ಸಾಬೀತಾಗಿತ್ತು. ಈ ಪ್ರಸ್ತಾವನೆಗೆ ಕೇವಲ ಮಂಗಳೂರಿನಿಂದ ಮಾತ್ರವಲ್ಲದೆ ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪ್ರಯಾಣಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಯಿತು. ಈ ನಿಲ್ದಾಣಗಳು ಇಡೀ ಪ್ರಾಂತ್ಯದ ಹೆಬ್ಬಾಗಿಲುಗಳೇ ಹೊರತು ಕೇವಲ ಸ್ಥಳೀಯ ನಿಲ್ದಾಣಗಳಲ್ಲ. ಅಂತಿಮವಾಗಿ ಮಂಗಳೂರನ್ನು ಬೈಪಾಸ್ ಮಾಡುವ ಆ ಪ್ರಸ್ತಾವನೆ ಜಾರಿಯಾಗಲೇ ಇಲ್ಲ.
ಮಂಗಳೂರು ಪ್ರವೇಶಿಸುವ ರೈಲುಗಳು ಎರಡರಿಂದ ಮೂರು ಗಂಟೆಗಳ ಕಾಲ ಅನಗತ್ಯ ವಿಳಂಬವನ್ನು ಎದುರಿಸುತ್ತವೆ ಎಂಬ ವಾದವನ್ನು ಸರಿಯಾಗಿ ಪರಿಶೀಲಿಸಬೇಕಾಗಿದೆ. ವಾಸ್ತವಿಕ ರೈಲು ಸಂಚಾರದ ಅಂಕಿಅಂಶಗಳು ಇಂತಹ ಸಾರಾಸಗಟು ಆರೋಪವನ್ನು ಪುಷ್ಟೀಕರಿಸುವುದಿಲ್ಲ. ದಿನಾಂಕ 01.09.2026ರಂದು, ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಎಕ್ಸ್ಪ್ರೆಸ್ ಸುರತ್ಕಲ್ನಿಂದ ಮಂಗಳೂರು ಜಂಕ್ಷನ್ ಮೂಲಕ ಬಂಟ್ವಾಳ ತಲುಪಲು ತೆಗೆದುಕೊಂಡ ಸಮಯ ಸರಿಸುಮಾರು 90 ನಿ���ಿಷಗಳು ; ಅದೇ ರೀತಿ ರೈಲು ಸಂಖ್ಯೆ 16516 ಕಾರವಾರ–ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ಸುರತ್ಕಲ್ನಿಂದ ��ಂಟ್ವಾಳಕ್ಕೆ ಅದೇ 62 ನಿಮಿಷಗಳನ್ನು ತೆಗೆದುಕೊಂಡಿದೆ. ಈ ಸಮಯದ ಲೆಕ್ಕಾಚಾರಗಳು ಮಂಗಳೂರು ಪ್ರವೇಶಿಸಿದಾಕ್ಷಣ ರೈಲುಗಳು ಗಂಟೆಗಟ್ಟಲೆ ತಡವಾಗುತ್ತವೆ ಎಂಬ ವಾದ ಸಂಪೂರ್ಣ ಸುಳ್ಳು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಒಂದು ವೇಳೆ ನಿರ್ದಿಷ್ಟ ರೈಲುಗಳು ತಡವಾಗುತ್ತಿದ್ದರೆ, ಅದಕ್ಕೆ ಕಾರಣವಾದ ನಿರ್ದಿಷ್ಟ ಅಡೆತಡೆಗಳನ್ನು ಪತ್ತೆಹಚ್ಚಿ ಕಾರ್ಯಾಚರಣೆಯನ್ನು ಸುಧಾರಿಸಬೇಕೇ ಹೊರತು, ಮಾರ್ಗದಿಂದ ಮಂಗಳೂರನ್ನೇ ಕೈಬಿಡುವುದಲ್ಲ.
ಅದೇ ರೀತಿ, ದಿನಾಂಕ ಸೆಪ್ಟೆಂಬರ್ 2,2026ರಂದು, ರ��ಲು ಸಂಖ್ಯೆ 16585 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ ಬೆಳಗ್ಗೆ ಸುಮಾರು 09:27ಕ್ಕೆ ಮಂಗಳೂರು ಜಂಕ್ಷನ್ ತಲುಪಿ, 09:48ಕ್ಕೆ ಮಂಗಳೂರು ಸೆಂಟ್ರಲ್ ಆಗಮಿಸಿ ರೈಲಿಗೆ ನೀರು ತುಂಬಿಸುವ ಪ್ರಕ್ರಿಯೆ ಮುಗಿಸಿ 10:22ಕ್ಕೆ ಸೆಂಟ್ರಲ್ನಿಂದ ನಿರ್ಗಮಿಸಿದೆ. ನಂತರ ಬೆಳಗ್ಗೆ 10:51–10:53 ಸುಮಾರಿಗೆ ಜೋಕಟ್ಟೆ ನಿಲ್ದಾಣ ತಲುಪಿದೆ . ಅಂದರೆ ಮಂಗಳೂರು ಸೆಂಟ್ರಲ್ನಿಂದ ನಿರ್ಗಮಿಸಿದ ನಂತರ ಜೋಕಟ್ಟೆ ತಲುಪಲು ತೆಗೆದುಕೊಂಡ ಸಮಯ ಕೇವಲ 29–31 ನಿಮಿಷಗಳು ಮಾತ್ರ. ಮಂಗ���ೂರು ಸೆಂಟ್ರಲ್ ಆಗಮನದಿಂದ ಹಿಡಿದು ಜೋಕಟ್ಟೆ ತಲುಪುವವರೆಗಿನ ಒಟ್ಟು ಸಮಯ ಸುಮಾರು 63–65 ನಿಮಿಷಗಳಾಗಿದ್ದು, ಇದರಲ್ಲಿ ಸುಮಾರು 34 ನಿಮಿಷಗಳು ಸೆಂಟ್ರಲ್ನಲ್ಲಿ ವಾಟರಿಂಗ್ ಮತ್ತು ಇತರೆ ಕಾರ್ಯಾಚರಣೆಯ ಅಗತ್ಯಗಳಿಗಾಗಿ ವ್ಯಯವಾಗಿತ್ತು. ಈ ವಾಸ್ತವಿಕ ಅಂಶಗಳು ರೈಲುಗಳು ಮಂಗಳೂರು ಪ್ರವೇಶಿಸಿದರೆ ಎರಡರಿಂದ ಮೂರು ಗಂಟೆ ವಿಳಂಬವಾಗುತ್ತದೆ ಎಂಬ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕುತ್ತವೆ. ಒಂದು ವೇಳೆ ನಿರ್ದಿಷ್ಟ ರೈಲು ಹೆಚ್ಚು ತಡವಾಗುತ್ತಿದ್ದರೆ, ರೈಲು ಸಂಚರಿಸುವ ಮಾರ್ಗದಲ್ಲಿರುವ ನೈಜ ಅಡೆತಡೆಗಳನ್ನು ಪತ್ತೆಹಚ್ಚಿ ಉತ್ತಮ ಯೋಜನಾ ನಿರ್ವಹಣೆ, ಸುಧಾರಿತ ಟರ್ನ್ಅರೌಂಡ್ ವ್ಯವಸ್ಥೆ, ವಾಟರಿಂಗ್ ಸೌಲಭ್ಯ, ಸಿಗ್ನಲಿಂಗ್ ಮತ್ತು ಮೂಲಸೌಕರ್ಯಗಳ ಮೂಲಕ ಪರಿಹರಿಸಬೇಕೇ ಹೊರತು, ಮಂಗಳೂರನ್ನೇ ಬೈಪಾಸ್ ಮಾಡುವುದಲ್ಲ.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಮೂಲಕ ರೈಲುಗಳು ಸಂಚರಿಸುವುದರಿಂದ ಹೆಚ್ಚಿನ ಸಮಯ ವ್ಯಯವಾಗುತ್ತದೆ ಎಂಬ ವಾದವನ್ನೇ ಒಪ್ಪಿಕೊಳ್ಳುವುದಾದರೆ, ಅದೇ ತರ್ಕವನ್ನು ಇತರ ಕಡೆಗಳಿಗೂ ಅನ್ವಯಿಸಬೇಕಲ್ಲವೇ? ಹಾಗಾದರೆ ಸಮಯ ಉಳಿತಾಯ ಮತ್ತು ಸಮಯಪಾಲನೆಯ ನೆಪವೊಡ್ಡಿ ಕೊಂಕಣ ಮಾರ್ಗದ ರೈಲುಗಳು ಕುಂದಾಪುರ, ಬೈಂದೂರು, ಉಡುಪಿ ಸೇರಿದಂತೆ ಇತರೆ ಯಾವುದೇ ನಿಲ್ದಾಣಗಳಲ್ಲೂ ನಿಲ್ಲದೆ ನಾನ್-ಸ್ಟಾಪ್ ಆಗಿ ಓಡಬೇಕೇ? ಖಂಡಿತವಾಗಿಯೂ ಇಲ್ಲ. ಆ ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲು ಸೇವೆ ಅಗತ್ಯವಿರುವುದರಿಂದಲೇ ಹಲವರು ರೈಲುಗಳಿಗೆ ನಿ��ುಗಡೆಗಳನ್ನು ನೀಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳು ಅಸ್ತಿತ್ವದಲ್ಲಿರುವುದೂ ಇಲ್ಲಿಂದ ಸಂಚರಿಸುವ ಸಾವಿರಾರು ರೈಲು ಪ್ರಯಾಣಿಕರ ಅಗತ್ಯಕ್ಕಾಗಿಯೇ. ಒಂದು ಪ್ರಮುಖ ರೈಲ್ವೆ ಕೇಂದ್ರದ ಸಂಪರ್ಕ ವ್ಯವಸ್ಥೆಗಿಂತ ರೈಲಿನ ಕೆಲವೇ ನಿಮಿಷಗಳ ಕಾರ್ಯಾಚರಣಾ ಸಮಯ ಎಂದಿಗೂ ದೊಡ್ಡದಾಗಲು ಸಾಧ್ಯವಿಲ್ಲ. ಸಮಯಪಾಲನೆಯೇ ಆದ್ಯತೆಯಾಗಿದ್ದರೆ, ವಿವಿಧ ಭಾಗಗಳ ��ೇಗda ಮಿತಿ ಹೆಚ್ಚಳ, ಆಧುನಿಕ ಸಿಗ್ನಲಿಂಗ್ ವ್ಯವಸ್ಥೆ, ವೈಜ್ಞಾನಿಕ ವೇಳಾಪಟ್ಟಿ, ಉತ್ತಮ ಟರ್ನ್ಅರೌಂಡ್ ವ್ಯವಸ್ಥೆ ಮತ್ತು ಹಳಿಗಳ ಮೂಲಸೌಕರ್ಯವನ್ನು ಸುಧಾರಿಸಬೇಕೇ ಹೊರತು ಮಂಗಳೂರನ್ನು ಬೈಪಾಸ್ ಮಾಡುವುದಲ್ಲ.
ಭಾರತೀಯ ರೈಲ್ವೆಯು ಈಗಾಗಲೇ ಹಲವಾರು ಪ್ರಮುಖ ರೈಲುಗಳನ್ನು ಮಾರ್ಗಮಧ್ಯೆ ರಿವರ್ಸಲ್ ಮಾಡಿ ಯಶಸ್ವಿಯಾಗಿ ಓಡಿಸುತ್ತಿದೆ. ರೈಲು ಸಂಖ್ಯೆ 22469/22470 ಹಜರತ್ ನಿಜಾಮುದ್ದೀನ್–ಖಜುರಾಹೊ ವಂದೇ ಭಾರತ್ ಲಲಿತ್ಪುರದಲ್ಲಿ, ರೈಲು ಸಂಖ್ಯೆ 20979/20980 ಉದಯಪುರ ಸಿಟಿ–ಆಗ್ರಾ ಕ್ಯಾಂಟ್ ವಂದೇ ಭಾರತ್ ಕೋಟಾದಲ್ಲಿ, ರೈಲು ಸಂಖ್ಯೆ 12441/12442 ಬಿಲಾಸ್ಪುರ–ನವದೆಹಲಿ ರಾಜಧಾನಿ ನಾಗ್ಪುರದಲ್ಲಿ, ರೈಲು ಸಂಖ್ಯೆ 20501/20502 ಅಗರ್ತಲಾ–ಆನಂದ್ ವಿಹಾರ್ ತೇಜಸ್ ರಾಜಧಾನಿ ಬದರ್ಪುರದಲ್ಲಿ, ರೈಲು ಸಂಖ್ಯೆ 12017/12018 ನವದೆಹಲಿ–ಡೆಹ್ರಾಡೂನ್ ಶತಾಬ್ದಿ ಸಹಾರನ್ಪುರದಲ್ಲಿ ಹಾಗೂ ರೈಲು ಸಂಖ್ಯೆ 12061/12062 ರಾಣಿ ಕಮಲಾಪತಿ–ಜಬಲ್ಪುರ ಜನ್ ಶತಾಬ್ದಿ ಇಟಾರ್ಸಿಯಲ್ಲಿ ರಿವರ್ಸಲ್ ಆಗುತ್ತವೆ. ಕಾರ್ಯಾಚರಣೆಯ ಇಂತಹ ಸವಾಲುಗಳನ್ನು ನಿಭಾಯಿಸಲು ರೈಲ್ವೆ ತಂತ್ರಜ್ಞಾನ ಮತ್ತು ಸುಧಾರಿತ ನಿರ್ವಹಣಾ ಪದ್ಧತಿಗಳನ್ನು ಬಳಸಲಾಗುತ್ತದೆಯೇ ಹೊರತು, ಜನೋಪಯೋಗಿ ಮಾರ್ಗಗಳನ್ನೇ ರದ್ದುಪಡಿಸುವುದಿಲ್ಲ.
ಇದಲ್ಲದೆ, ಪಡೀಲ್ ಎಂಬ ಹೆಸರಿನ ರೈಲು ನಿಲ್ದಾಣದ ಸುತ್ತಲೂ ಗಂಭೀರವಾದ ಗೊಂದಲಗಳನ್ನು ಸೃಷ್ಟಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿಯ ಸಂಕೀರ್ಣವಿರುವುದು ಪಡೀಲ್ ಪ್ರದೇಶದಲ್ಲಿ; ಮಂಗಳೂರು ಜಂಕ್ಷನ್ ನಿಲ್ದಾಣವು ನೂತನ ಡಿಸಿ ಕಚೇರಿಯ ಹಿಂಭಾಗದಲ್ಲೇ ಕೇವಲ 1.1 ಕಿ.ಮೀ ರಸ್ತೆ ದೂರದಲ್ಲಿದೆ. ಇನ್ನು ಪಡೀಲಿನಲ್ಲಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಮಂಗಳೂರು ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಜಂಕ್ಷನ್ ಪಾಯಿಂಟ್ ಮಂಗಳೂರು ಜಂಕ್ಷನ್ನಿಂದ ಕ��ವಲ 1.3 ಕಿ.ಮೀ ದೂರದಲ್ಲಿದೆ. ಆದರೆ, ಅಧಿಕೃತವಾಗಿ 'ಪಡೀಲ್' ಎಂದು ಕರೆಯಲ್ಪಡುವ ರೈಲ್ವೆ ನಿಲ್ದಾಣವು ಸಂಪೂರ್ಣ ಬೇರೆ ಸ್ಥಳದಲ್ಲಿದ್ದು, ಅದು ಪಡೀಲ್ ಜಂಕ್ಷನ್ ಪಾಯಿಂಟ್ನಿಂದ ಸುಮಾರು 5.5 ಕಿ.ಮೀ ಹಾಗೂ ನೂತನ ಡಿಸಿ ಕಚೇರಿಯಿಂದ ರಸ್ತೆ ಮಾರ್ಗವಾಗಿ ಸುಮಾರು 7.6 ಕಿ.ಮೀ ದೂರದಲ್ಲಿರುವ ಒಂದು ಗುಡ್ಡದ ಮೇಲಿನ ಪ್ರದೇಶದಲ್ಲಿದೆ. ಆದ್ದರಿಂದ, ಪಡೀಲ್ ಪ್ರದೇಶ, ಪಡೀಲ್ ಜಂಕ್ಷನ್ ಪಾಯಿಂಟ್ ಮತ್ತು ಪಡೀಲ್ ರೈಲ್ವೆ ನಿಲ್ದಾಣ,ಇವು ಮೂರೂ ಒಂದೇ ಅಲ್ಲ. ಪಡೀಲ್ ಹಾಗೂ ಡಿಸಿ ಕಚೇರಿ ಭಾಗಕ್ಕೆ ನಿಜವಾಗಿಯೂ ಸಂಪರ್ಕ ನೀಡುವ ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮಂಗಳೂರು ಜಂಕ್ಷನ್.
ಬೆಂಗಳೂರಿನಿಂದ ಕುಂದಾಪುರದ ಕಡೆಗೆ ಸಂಚರಿಸುವ ಬಸ್ಸುಗಳು ಮಂಗಳೂರು ನಗರವನ್ನು ಪ್ರವೇಶಿಸಿಯೇ ಮುಂದೆ ಸಾಗುತ್ತವೆ; ನಗರ ಪ್ರವೇಶದಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಕಾರಣಕ್ಕೆ ಬಸ್ಸುಗಳು ಮಂಗಳೂರನ್ನು ಬೈಪಾಸ್ ಮಾಡಬೇಕೆಂದು ಯಾರೂ ವ��ದಿಸುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ಸುಗಳು ಮಂಗಳೂರು ನಗರಕ್ಕೆ ಬರಬಹುದಾದರೆ, ರೈಲುಗಳು ಮಾತ್ರ ನಗರವನ್ನು ಏಕೆ ತಪ್ಪಿಸಬೇಕು? ಬಸ್ಸುಗಳು ಮಂಗಳೂರು ಪ್ರವೇಶಿಸಬಹುದಾದರೆ, ರೈಲುಗಳೂ ಪ್ರವೇಶಿಸಲೇಬೇಕು. ಇದು ಕೇವಲ ಚಾಲನಾ ಸಮಯದ ವಿಷಯವಲ್ಲ; ಸಾರ್ವಜನಿಕರ ಪ್ರಯಾಣದ ಹಕ್ಕಿನ ಪ್ರಶ್ನೆ.
ರೈಲು ಸಂಖ್ಯೆ 16585/16586 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ ಮಂಗಳೂರು ಸೆಂಟ್ರಲ್ನಿಂದ ಮೂಕಾಂಬಿಕಾ ರೋಡ್–ಬೈಂದೂರು ಹಾಗೂ ಕೊಂಕಣ ಭ���ಗದ ನಿಲ್ದಾಣಗಳ ಕಡೆಗೆ ಪ್ರಯಾಣಿಸುವ ಜನರಿಗೆ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಅಷ್ಟೇ ಅಲ್ಲದೆ ಸುಬ್ರಹ್ಮಣ್ಯ ಹಾಗೂ ಮಂಗಳೂರು ನಡುವೆ ಸಂಚರಿಸುವ ನಿತ್ಯ ಪ್ರಯಾಣಿಕರಿಗೂ ಉಪಕಾರಿಯಾಗಿದೆ.ಬೇರೊಂದು ಭಾಗಕ್ಕೆ ಪ್ರತ್ಯೇಕ ರೈಲು ಬೇಕಿದ್ದರೆ ಹೊಸ ರೈಲನ್ನು ಕೇಳಬೇಕೇ ಹೊರತು, ಮಂಗಳೂರನ್ನು ಸಂಪರ್ಕಿಸುವ ರೈಲನ್ನು ಕಸಿದುಕೊಳ್ಳುವುದಾಗಲಿ ಅಥವಾ ಅದರ ಮಾರ್ಗ ಬದಲಿಸುವುದಾಗಲಿ ಸರಿಯಲ್ಲ.
ಇದೇ ರೀತಿ, ರೈಲು ಸಂಖ್ಯೆ 16595/16596 ಕ್ರಾ.ಸಂ.ರಾ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲಿನ ಮಾರ್ಗವನ್ನು ಪ್ರಯಾಣಿಕರ ದೃಷ್ಟಿಕೋನದಿಂದ ಮರುಪರಿಶೀಲಿಸಬೇಕಾಗಿದೆ. ಈ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರಾತ್ರಿ ವೇಳೆ ಗಂಟೆಗಟ್ಟಲೆ ನಿಲ್ಲುತ್ತಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಮಾರ್ಗವಾಗಿ ಓಡಿಸಿ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬಹುದೇ ಎಂಬುದನ್ನು ರೈಲ್ವೆ ಇಲಾಖೆ ಪರಿಶೀಲಿಸಬೇಕು. ಪಂಚಗಂಗಾ ಎಕ್ಸ್ಪ್ರೆಸ್ ಕರಾವಳಿ ಕರ್ನಾಟಕದ ಜೀವನಾಡಿಯಾಗಬೇಕಾದರೆ ಅದನ್ನು ಮಂಗಳೂರಿನ ಮೂಲಕ ��ಡಿಸಬೇಕೆ ವಿನಃ ಮಂಗಳೂರಿನ ಸಂಪರ್ಕವನ್ನು ಕಡಿತಗೊಳಿಸಲು ದಾಳವಾಗಿ ಬಳಸಿಕೊಳ್ಳಬಾರದು.
ಹಿಂದೆ ವಿಶೇಷ ರೈಲಾಗಿ ಓಡುತ್ತಿದ್ದ, ಪ್ರಸ್ತುತ ಖಾಯಂಗೊಂಡು ರೈಲು ಸಂಖ್ಯೆ 17377/17378 ಆಗಿ ಚಲಿಸುತ್ತಿರುವ ಮಂಗಳೂರು ಸೆಂಟ್ರಲ್–ವಿಜಯಪುರ ಎಕ್ಸ್ಪ್ರೆಸ್ ಸುತ್ತ ನಡೆದ ವಿವಾದವೂ ಇದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ. ಈ ರೈಲು ವಿಶೇಷ ರೈಲಾಗಿದ್ದಾಗ, ಕರ್ನಾಟಕದ ಬಹುತೇಕ ಪ್ರದೇಶಗಳಿಗೆ ಸಂಪರ್ಕ ಒದಗಿಸುವ, ಪ್ರಯಾಣಿಕರಿಗೆ ಹೆಚ್ಚು ಉಪಕಾರಿಯಾಗಿರುವ ವಿಜಯಪುರ–ಹುಬ್ಬಳ್ಳಿ–ಅರಸೀಕ���ರೆ–ಹಾಸನ–ಮಂಗಳೂರು ಮಾರ್ಗದ ಬದಲಾಗಿ, ಹುಬ್ಬಳ್ಳಿ ಜಂಕ್ಷನ್, ಲೋಂಡಾ ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪಡೀಲ್ ಬೈಪಾಸ್ ಮೂಲಕ 'ವಿಜಯಪುರ–ಸುಬ್ರಹ್ಮಣ್ಯ ರೋಡ್' ಮಾರ್ಗವಾಗಿ ತಿರುಗಿಸಿ ಖಾಯಂಗೊಳಿಸಲು ಇದೇ ಕುಂದಾಪುರ–ಗೋವಾ ಲಾಬಿ ತೀವ್ರ ಹುನ್ನಾರ ನಡೆಸಿತ್ತು. ಅಂತಹ ಬದಲಾವಣೆಯು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳನ್ನು ಸಂಪೂರ್ಣವಾಗಿ ಬೈಪಾಸ್ ಮಾಡುವುದರ ಜೊತೆಗೆ, ಸಕಲೇಶಪುರ ಮತ್ತು ಹುಬ್ಬಳ್ಳಿ ನಡುವೆ ಇರುವ ಪ್ರದೇಶ ಹಾಗೂ ಕರಾವಳ�� ಕರ್ನಾಟಕದ ನಡುವಿನ ರೈಲು ಸಂಪರ್ಕವನ್ನೇ ಬುಡಮೇಲು ಮಾಡುತ್ತಿತ್ತು.ಈ ಪ್ರಸ್ತಾವನೆಗೆ ಮಂಗಳೂರು ಮತ್ತು ಕರ್ನಾಟಕದ ಇತರೆ ಭಾಗಗಳಿಂದ ತೀವ್ರ ವಿರೋಧ ವ್ಯಕ್ತವಾದಾಗ ಭಾರೀ ಮುಖಭಂಗ ಅನುಭವಿಸಿತು. ವಂದೇ ಭಾರತ್ ಮತ್ತು ವಿಜಯಪುರ–ಮಂಗಳೂರು ಸೆಂಟ್ರಲ್ ರೈಲುಗಳನ್ನು ಮಂಗಳೂರನ್ನು ಬೈಪಾಸ್ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಕುಂದಾಪುರ–ಗೋವಾ ಲಾಬಿ ಈಗಾಗಲೇ ಭಾರೀ ಮುಖಭಂಗ ಅನುಭವಿಸಿದೆ.
�� ಪತ್ರಿಕಾ ಲೇಖನದ ಲೇಖಕರಾಗಿರುವ ರಾಜೀವ್ ಗಾಂವ್ಕರ್ ಅವರು ಈ ಮಾರ್ಗವನ್ನು ಬೆಂಬಲಿಸುತ್ತಿರುವುದರ ಹಿಂದಿನ ಉದ್ದೇಶವನ್ನು ಯೋಚಿಸಬೇಕಾಗಿದೆ. ಹಿಂದೆ ಮಂಗಳೂರಿನ ರೈಲ್ವೆ ಬಳಕೆದಾರರು ಮತ್ತು ಹೋರಾಟಗಾರರು ರೈಲು ಸಂಖ್ಯೆ 16515/16 ಯಶವಂತಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ (ಪ್ರಸ್ತುತ ಯಶವಂತಪುರ–ಕಾರವಾರ ಎಕ್ಸ್ಪ್ರೆಸ್ ಆಗಿ ಸಂಚರಿಸುತ್ತಿರುವ) ರೈಲನ್ನು ಕಾರವಾರ ತನಕ ವಿಸ್ತರಿಸುವ ಪ್ರಯತ್ನಗಳನ್ನು ಬೆಂಬಲಿಸಿದ್ದರು. ಅಷ್ಟೇ ಅಲ್ಲದೆ, ಈ ಹಿಂದೆ ಕೇವಲ ಮಂಗಳೂರು ಸ��ಂಟ್ರಲ್ವರೆಗೆ ಮಾತ್ರ ಮೀಸಲಾಗಿದ್ದು, ನಂತರ ಕೇರಳ ಲಾಬಿಯ ಒತ್ತಡದಿಂದಾಗಿ ಕಣ್ಣೂರಿಗೆ ವಿಸ್ತರಿಸಲ್ಪಟ್ಟ ಕ್ರಾ.ಸಂ.ರಾ ಬೆಂಗಳೂರು–ಕಣ್ಣೂರು ಎಕ್ಸ್ಪ್ರೆಸ್ ರೈಲನ್ನು ಕಾರವಾರಕ್ಕೆ ಓಡಿಸಬೇಕೆಂದು ಕೋರಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು ಮಂಗಳೂರಿನ ಜನರೇ. ಅಂದು ಅದು ಕರಾವಳಿ ಕರ್ನಾಟಕದ ಸಂಪರ್ಕವನ್ನು ವಿಸ್ತರಿಸುವುದು ಮತ್ತು ಮಂಗಳೂರನ್ನು ಪ್ರಮುಖ ರೈಲ್ವೆ ಕೇಂದ್ರವನ್ನಾಗಿ ಬಲಪಡಿಸುವುದೇ ಉದ್ದೇಶ ಆಗಿತ್ತು. ಆದರೆ, ಆ ರೈಲುಗಳನ್ನು ವಿಸ್ತರಿಸುವಾದರ ಹಿಂದಿನ ಪ್ರಯತ್ನವನ್ನು ರಾಜೀವ್ ಗಾಂವ್ಕರ್ ಮರೆತು ಮಂಗಳೂರಿಗರ ಬೆನ್ನಿಗೆ ಚೂರಿ ಹಾಕಿ ಮಂಗಳೂರನ್ನು ಬೈಪಾಸ್ ಮಾಡುವ ಮಾರ್ಗವನ್ನು ಬೆಂಬಲಿಸುವುದನ್ನು ನೋಡುವಾಗ ಅವರು ಕುಂದಾಪುರ–ಗೋವಾ ಲಾಬಿಯ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿದೆ. ಕರಾವಳಿ ಕರ್ನಾಟಕದ ರೈಲ್ವೆ ಜಾಲದಲ್ಲಿ ಮಂಗಳೂರಿನ ಪಾತ್ರವನ್ನು ಬಲಪಡಿಸಲು ಈ ಹಿಂದೆ ನಡೆದ ಪ್ರಯತ್ನಗಳೊಂದ��ಗೆ ಇವರ ಇಂದಿನ ನಿಲುವನ್ನು ಹೊಂದಾಣಿಕೆ ಮಾಡಲು ಸಾಧ್ಯವೇ ಇಲ್ಲ. ಮತ್ತೊಂದು ಪ್ರದೇಶಕ್ಕೆ ರೈಲು ಅಗತ್ಯವಿದ್ದರೆ ಹೊಸ ರೈಲಿಗೆ ಬೇಡಿಕೆ ಇಡುವುದನ್ನು ಬಿಟ್ಟು ಮಂಗಳೂರಿನಲ್ಲಿ ಅಸ್ತಿತ್ವದಲ್ಲಿರುವ ಸೇವೆಯನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬೇಡಿ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಗಂಭೀರ ಅಂಶವೆಂದರೆ,ಮಂಗಳೂರನ್ನು ಬೈಪಾಸ್ ಮಾಡುವಂತೆ ಒತ್ತಾಯಿಸುವ ಮೂಲಕ ಕುಂದಾಪುರ–ಗೋವಾ ಲಾಬಿಯು, ಪರೋಕ್ಷವಾಗಿ ಕೇರಳ ಲಾಬಿಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರ��ಲು ನಿಲ್ದಾಣಗಳಲ್ಲಿ ಮತ್ತಷ್ಟು ಕೇರಳ-ಕೇಂದ್ರಿತ ರೈಲುಗಳನ್ನು ನುಸುಳಿಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುತ್ತಿದೆ; ಪರಿಣಾಮವಾಗಿ ಮಂಗಳೂರಿಗೆ ಬೇಕಾದ ಅಗತ್ಯ ರೈಲು ಸೇವೆಗಳು ಸಿಗದೆ ಹೋಗಲಿದೆ. ಇದು ಕೇರಳ, ಗೋವಾ, ಕುಂದಾಪುರ, ಉಡುಪಿ ಅಥವಾ ಇನ್ಯಾವುದೇ ಭಾಗದ ಪ್ರಯಾಣಿಕರ ಮೇಲಿನ ದ್ವೇಷವಲ್ಲ. ಮಂಗಳೂರು ಪ್ರತಿಯೊಂದು ಪ್ರದೇಶದ ರೈಲ್ವೆ ಸಂಪರ್ಕವನ್ನೂ ಮುಕ್ತವಾಗಿ ಸ್ವಾಗತಿಸುತ್ತದೆ; ಆದರೆ ಮತ್ತೊಂದು ಪ್ರದೇಶದ ಬೇಡಿಕೆಯನ್ನು ಈಡೇರಿಸಲು ಮಂಗಳೂರಿನ ಸಂಪರ್ಕ��ನ್ನು ಯಾವುದೇ ಕಾರಣಕ್ಕೂ ಬಲಿಗೊಡಬಾರದು.
ಮಂಗಳೂರನ್ನು ನೈಋತ್ಯ ರೈಲ್ವೆ ವಲಯದ ಜೊತೆಗೆ ವಿಲೀನಗೊಳಿಸುವಾಗ ಮಂಗಳೂರು ಸೆಂಟ್ರಲ್ ಅನ್ನು ಮಂಗಳೂರು ನಗರದ ಪ್ರಮುಖ ರೈಲು ನಿಲ್ದಾಣ ಹಾಗೂ ಟರ್ಮಿನಲ್ ಆಗಿ ಮತ್ತು ಮಂಗಳೂರು ಜಂಕ್ಷನ್ ಅನ್ನು ಪ್ರಮುಖ ಜಂಕ್ಷನ್ ಹಾಗೂ ಕಾರ್ಯಾಚರಣಾ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು. ಮಂಗಳೂರಿಗೆ ಹೆಚ್ಚಿನ ರೈಲುಗಳು, ಉತ್ತಮ ಮೂಲಸೌಕರ್ಯ ಮತ್ತು ವೇಗದ ಸೇವೆಗಳು ಸಿಗಬೇಕೇ ಹೊರತು, ಇರುವ ರೈಲುಗಳನ್ನು ಕಸಿದುಕೊಳ್ಳುವ ಬೈಪಾಸ್ ಪ್ರಸ್ತಾಪಗಳ��್ಲ.
ಜೊತೆಗೆ, ಮಂಗಳೂರಿಗೆ ಕ್ರಾ.ಸಂ.ರಾ ಬೆಂಗಳೂರು ಅಥವಾ ಯಶವಂತಪುರಕ್ಕೆ ಸಂಪರ್ಕ ಕಲ್ಪ��ಸುವ ಪ್ರತ್ಯೇಕ ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲು ಅತ್ಯಗತ್ಯವಾಗಿದೆ. ಬೆಂಗಳೂರು ಸಂಪರ್ಕಕ್ಕಾಗಿ ಮಂಗಳೂರಿನ ಜನರು ಇಟ್ಟಿರುವ ನ್ಯಾಯಯುತ ಬೇಡಿಕೆಗೆ ಪರಿಹಾರವೆಂದರೆ ಹೊಸದಾದ ಪ್ರತ್ಯೇಕ ರೈಲು ಸೇವೆಯೇ ಹೊರತು, ಮಂಗಳೂರಿನ ಪ್ರಯಾಣಿಕರನ್ನೇ ವಂಚಿಸುವ ಬೈಪಾಸ್ ಮಾರ್ಗವಲ್ಲ.
ಅಮೃತ್ ಭಾರತ್ 3.0 ರೈಲುಗಳ ನಿರ್ಮಾಣವು ರೈಲ್ವೆ ತಂತ್ರಜ್ಞಾನದ ಮೂಲಕ ಕಾರ್ಯಾಚರಣೆಯ ಅಡೆತಡೆಗಳನ್ನು ನಿವಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಚೆನ್ನೈನಿಂದ ಎಸಿ ಮತ್ತು ನಾನ್-ಎಸಿ ಬೋಗಿಗಳನ್ನೊಳಗೊಂಡ ಮೊದಲ ಅಮೃತ್ ಭಾರತ್ 3.0 ರೈಲು ಹೊರಬಂದಿದ್ದು, ರೈಲ್ವೆ ಮಂಡಳಿಯು ಅದರ ಮೊದಲ ಮಾರ್ಗವನ್ನು ಅಂತಿಮಗೊಳಿಸಬೇಕಿದೆ. ತಾಂತ್ರಿಕವಾಗಿ ಸಾಧ್ಯವಾದರೆ, ಇಂತಹ ಆಧುನಿಕ ರೈಲು ರೇಕ್ಗಳನ್ನು ರೈಲು ಸಂಖ್ಯೆ 16585/86 ಸರ್.ಎಂ ವಿಶೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್ಪ್ರೆಸ್ನಂತಹ ರೈಲುಗಳಿಗೆ ನಿಯೋಜಿಸುವ ಮೂಲಕ ಸಾಂಪ್ರದಾಯಿಕ ಎಂಜಿನ್ ರಿವರ್ಸಲ್ನಿಂದಾಗುವ ಸಮಯದ ಮಿತಿಯನ್ನು ನಿವಾರಿಸಬಹುದು. ರೈಲ್ವೆಯ ಸಮಸ್ಯೆಗಳನ್ನು ತಂತ್ರಜ್ಞಾನದ ಮೂಲಕ ಬಗೆಹರಿಸುವುದರ ಬದಲು ಸಮಸ್ಯೆಗಳನ್ನೇ ನೆಪವಾಗಿಸಿಕೊಂಡು ಮಂಗಳೂರನ್ನು ಬೈಪಾಸ್ ಮಾಡಲು ಹೇಳುವುದು ಸರಿಯಲ್ಲ.
ಅದೇ ಸಮಯದಲ್ಲಿ, ಕರಾವಳಿ ಕರ್ನಾಟಕದಲ್ಲಿನ ರೈಲ್ವೆ ಮೂಲಸೌಕರ್ಯಗಳ ಕೊರತೆಯನ್ನು ತುರ್ತಾಗಿ ನೀಗಿಸಬೇಕಿದೆ. ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆ (ವಾಟರಿಂಗ್), ಪಿಟ್ ಲೈನ್, ಸ್ಟೇಬ್ಲಿಂಗ್ ಲೈನ್, ನಿರ್ವಹಣಾ ಸೌಲಭ್ಯಗಳು, ಮಾರ್ಗ ಸಾಮರ್ಥ್ಯ, ಸಿಗ್ನಲಿಂಗ್, ಜೋಡಿ ಮಾರ್ಗ (ಡಬ್ಲಿಂಗ್) ಹಾಗೂ ಘಾಟಿ ವಿಭಾಗದ ಸಾಮರ್ಥ್ಯ ವೃದ್ಧಿಗೆ ತಕ್ಷಣವೇ ಬಂಡವಾಳ ಹೂಡಿಕೆಯಾಗಬೇಕು. ಮೂಲಸೌಕರ್ಯಗಳ ಕೊರತೆಯಿಂದ ರೈಲುಗಳು ತಡವಾಗುತ್ತಿದ್ದರೆ ತಕ್ಷಣ ಆ ಸೌಲಭ್ಯಗಳನ್ನು ನಿರ್ಮಿಸಬೇಕು. ರೈಲ್ವೆ ಇಲಾಖೆಯು ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸದ ಕಾರಣಕ್ಕಾಗಿ ಪ್ರಯಾಣಿಕರು ಸಂಪರ್ಕ ಕಳೆದುಕೊಳ್ಳುವಂತಾಗಬಾರದು; ಪ್ರಯಾಣಿಕರ ಹಿತಕ್ಕಾಗಿ ಮೂಲಸೌಕರ್ಯಗಳ�� ಬೆಳೆಯಬೇಕು. ಪ್ರಸ್ತುತ ಕೊಂಕಣ್ ಮಾರ್ಗದಲ್ಲಿ ಮಂಗಳೂರು-ಮಡ್ಗಾಂವ್ ನಡುವೆ ಯಾವುದೇ ರೈಲು ನಿಲ್ದಾಣದಲ್ಲಿ ನೀರು ತುಂಬಿಸುವ ವ್ಯವಸ್ಥೆ ಇಲ್ಲ. ನೀರು ತುಂಬಿಸುವ ವ್ಯವಸ್ಥೆಯನ್ನು ಒದಗಿಸಲು ಮನವಿ ಮಾಡುವ ಬದಲು ಮಂಗಳೂರಿಗೆ ತೊಡಕಾಗುವಂಥ ಪಡೀಲ್ ಬೈಪಾಸ್ ರೈಲಿನ ಬೇಡಿಕೆ ಇಡುವುದು ಸರಿಯಲ್ಲ.
ಅಂತಿಮವಾಗಿ, ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ಗಳು ಕರಾವಳಿ ಕರ್ನಾಟಕದ ರೈಲ್ವೆ ಜಾಲದ ಎರಡು ಆಧಾರ ಸ್ತಂಭಗಳು. ಇವು ಕೇವಲ ಮಂಗಳೂರಿಗಷ್ಟೇ ಅಲ್ಲದೆ ಹಾಸನ, ಮೈಸೂರು, ���ೆಂಗಳೂರು ಸೇರಿದಂತೆ ಇಡೀ ರಾಜ್ಯದ ಪ್ರಯಾಣಿಕರಿಗೂ ಪ್ರಮುಖ ರೈಲು ನಿಲ್ದಾಣಗಳಾಗಿ ಕಾರ್ಯನಿರ್ವಹಿಸುತ್ತಿದೆ. ನೈಋತ್ಯ ರೈಲ್ವೆಯಡಿಯಲ್ಲಿ ಮಂಗಳೂರು ಸೆಂಟ್ರಲ್ ಮಂಗಳೂರಿನ ಮುಖ್ಯ ರೈಲು ನಿಲ್ದಾಣವಾಗಿ ಹಾಗೂ ಕರ್ನಾಟಕ,ಕೊಂಕಣ್ ಭಾಗದ ರೈಲುಗಳು ಟರ್ಮಿನಲ್ ಆಗಿ ಬೆಳೆಯಬೇಕು ಹಾಗೂ ಮಂಗಳೂರು ಜಂಕ್ಷನ್ ದಕ್ಷಿಣ-ಉತ್ತರ ಭಾರತದ ರೈಲುಗಳಿಗೆ ಹಾಗೂ ಕೊಂಕಣ ಹಾಗೂ ಕರಾವಳಿ–ಒಳನಾಡಿನ ರೈಲು ಸಂಪರ್ಕದ ಪ್ರಮುಖ ಜಂಕ್ಷನ್ ಆಗಿ ಮುಂದುವರಿಯಬೇಕು ಅದರ ಬದಲು ಬೈಪಾಸ್ ಮಾರ್ಗಕ್ಕೆ ಬೇಕಾಗಿ ಈ ಎರಡ�� ನಿಲ್ದಾಣಗಳನ್ನು ಬಲಿ ಕೊಡಬಾರದು.
ಆದ್ದರಿಂದ, ನಾವು ಮಂಗಳೂರಿನ ಭವಿಷ್ಯದ ರೈಲ್ವೆ ಅಭಿವೃದ್ಧಿಯು ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎರಡನ್ನೂ ರಕ್ಷಿಸಿ ಬಲಪಡಿಸಲು, ಅಸ್ತಿತ್ವದಲ್ಲಿರುವ ನೇರ ರೈಲುಗಳನ್ನು ಉಳಿಸಿಕೊಂಡು, ಹೊಸ ರೈಲುಗಳು ಮತ್ತು ಮೂಲಸೌಕರ್ಯಗಳನ್ನು ಈ ಭಾಗಕ್ಕೆ ನೀಡುವುದರ ಜೊತೆಗೆ ಯಾವುದೇ ರೈಲು ಮಂಗಳೂರನ್ನು ಬೈಪಾಸ್ ಮಾಡದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ಬೇರೆ ಪ್ರದೇಶಗಳಿಗೆ ಹೆಚ್ಚಿನ ಸಂಪರ್ಕ ಬೇಕಿದ್ದರೆ ಹೊಸ ರೈಲುಗಳು, ಹೆಚ್ಚು���ರಿ ಸೇವೆಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಬದಲು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ರೈಲು ಸೇವೆಗಳಿಗೆ ಕತ್ತರಿ ಹಾಕಬಾರದು ಎಂದು ರೈಲ್ವೆ ಸಚಿವಾಲಯ, ನೈಋತ್ಯ ರೈಲ್ವೆ, ಮೈಸೂರು ವಿಭಾಗ, ಕೊಂಕಣ ರೈಲ್ವೆ ಮತ್ತು ಕರ್ನಾಟಕದ ಜನಪ್ರತಿನಿಧಿಗಳ ಬಳಿ ಆಗ್ರಹಿಸುತ್ತೇವೆ.
ಕೊನೆಯದಾಗಿ, ಮಂಗಳೂರಿಗೆ ಯಾವುದೋ ಸಣ್ಣ ಪ್ರಾದೇಶಿಕ ಲಾಬಿಯ ಹಿತಾಸಕ್ತಿಗೆ ತಕ್ಕಂತೆ ರೈಲ್ವೆ ಸಂಪರ್ಕವನ್ನು ನಿರ್ಧರಿಸಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ಮಂಗಳೂರು ಪ್ರದೇಶವೊಂದೇ ರೈಲ್ವೆ ಇಲಾಖೆಗೆ ವಾರ್ಷಿಕ ₹600 ಕೋಟಿಗೂ ಅಧಿಕ ಆದಾಯವನ್ನು ತಂದುಕೊಡುತ್ತಿದೆ. ಇದು ಈ ಭಾಗದ ಅಗಾಧ ಪ್ರಯಾಣಿಕ, ವಾಣಿಜ್ಯ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಭಾರತೀಯ ರೈಲ್ವೆಗೆ ಇಷ್ಟೊಂದು ಬೃಹತ್ ಆದಾಯವನ್ನು ನೀಡುವ ಈ ಪ್ರದೇಶಕ್ಕೆ ಅತ್ಯುತ್ತಮ ಸಂಪರ್ಕ, ಸುಧಾರಿತ ಸೌಲಭ್ಯಗಳು ಮತ್ತು ಹೆಚ್ಚಿನ ರೈಲ್ವೆ ಹೂಡಿಕೆಯನ್ನು ಕೇಳುವ ಸಂಪೂರ್ಣ ಹಕ್ಕು ಇಲ್ಲಿನ ಜನರಿಗಿದೆ.ಹೀಗಾ��ಿ ಕುಂದಾಪುರ-ಗೋವಾ ಲಾಬಿಯ ಸಲಹೆಗಳು,ನಿರ್ಧಾರಗಳು ಮಂಗಳೂರಿಗೆ ಬೇಕಿಲ್ಲ!
ಮಂಗಳೂರಿನ ಜನರು ಯಾವುದೇ ಪ್ರದೇಶದ ಸಂಪರ್ಕವನ್ನು ವಿರೋಧಿಸುವುದಿಲ್ಲ. ಆದರೆ ಮಂಗಳೂರು ನಗರಕ್ಕೆ ದ್ರೋಹ ಮಾಡಲು ಹೊರಟರೆ ಅದನ್ನು ವಿರೋಧಿಸಲು ಕೂಡ ಇಲ್ಲಿನ ಜನರಿಗೆ ಗೊತ್ತಿದೆ. ರೈಲು ಸಂಚಾರದ ವಿಷಯದಲ್ಲಿ ಮಂಗಳೂರನ್ನು ಬೈಪಾಸ್ ಮಾಡುವುದನ್ನು ನಿಲ್ಲಿಸಿ. ಮಂಗಳೂರಿಗೆ ಸೆಗಬೇಕಾದ ರೈಲುಗಳನ್ನು ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಿಗೆ ಓಡಿಸಬೇಕು ಹಾಗೂ ಈ ಎರಡು ನಿಲ್ದಾಣಗಳನ್ನು ಅಭಿವೃದ್ಧುಪಡಿಸಬೇಕು! ಇದೇ ಇಲ್ಲಿನ ಬೇಡಿಕೆ!
@RailMinIndia @AshwiniVaishnaw @VSOMANNA_BJP @CaptBrijesh @SWRRLY @KonkanRailway
@CMofKarnataka@DrParameshwara@MrKharge
ಈಗ ನಷ್ಟ ಪರಿಹಾರವನ್ನು ಜಾತ್ರೆ ಆಯೋಜಕರೇ + ಪಟಾಕಿ ಸಿಡಿಸಿದವರೇ ಪಾವತಿ ಮಾಡಬೇಕಲ್ಲ��ೇ?
*ಸಮಾರಂಭಗಳಿಗೆ ಸಾರ್ವಜನಿಕ ಹೊಣೆಗಾರಿಕೆ ವಿಮಾ ಸುರಕ್ಷತಾ ಸೌಲಭ್ಯ ಕಡ್ಡಾಯವಾಗಬೇಕಾದ ಸಮಯ.
*ಸಂಘಟಕರ ನಿರ್ಲಕ್ಷ್ಯಕ್ಕೆ ಸರಕಾರಿ ಪರಿಹಾರ ಎಷ್ಟು ಸಮಂಜಸ?
Important alert for anyone using Predmet Eye Drops by Sun Pharma
Recent reports shared by the All India Ophthalmological Society have raised concerns about contamination of certain batches with Pseudomonas aeruginosa, a bacterium that can cause serious eye infections
The reported batch numbers include
GTH1168A
GTH0439A
GTH1263A
GTH0731A
GTH0557A
GTH0556A
GTH0492A
GTH0555A
GTH0312A
GTH0258A
GTH0212A
If you have Predmet eye drops at home, check the batch number before using them
If your bottle belongs to one of the affected batches, do not use it and speak to your ophthalmologist or pharmacist about an alternative
Additional batches may still be identified as investigations continue, so keep an eye on official updates
Please share this with anyone who uses prescription eye drops
#EyeHealth #PatientSafety #Predmet #sunpharma #AIOS
ಕೇರಳದ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ ಮೈಸೂರು ವಲಯಕ್ಕೆ ಸೇರ್ಪಡೆ ಮಾಡಿರುವಂತಹದ್ದು ಅತ್ಯಂತ ಐತಿಹಾಸಿಕ ನಿರ್ಧಾರ. ರಾಜ್ಯದ ಜನತೆಯ ವಿಶೇಷವಾಗಿ ಮಂಗಳೂರು ಭಾಗದ ಜನತೆಯ 23 ವರ್ಷಗಳ ಬೇಡಿಕೆಯನ್ನು ಈಡೇರಿಸಲು ಸಹಕರಿಸಿದ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರಿಗೆ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿ���ಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
The integration of the Mangaluru railway network, previously under Kerala’s Palakkad Division, into the Mysuru Division of South Western Railway is a truly historic decision.
This fulfils the long-standing 23-year demand of the people of Karnataka, particularly the people of Mangaluru and coastal Karnataka.
Heartfelt gratitude to Hon’ble Prime Minister Shri @narendramodi Ji and Hon’ble Union Minister for Railways Shri @AshwiniVaishnaw Ji for their support and commitment in making this landmark decision a reality.
Have written to Hon’ble Chief Minister of Karnataka Shri @DKShivakumar regarding the Railway Board’s decision to bring Mangaluru under the Mysuru Division of South Western Railway from October 1, 2026.
With the Hon’ble Chief Minister of Keralam seeking reconsideration of the notified decision, I have urged the Hon’ble CM of Karnataka to convey our State’s support for its implementation.
This is not about taking a position against a neighbouring State. It is about placing Karnataka’s considered position on the railway administration and developmental requirements of Mangaluru formally before the Union Government.
I believe the people of Karnataka can reasonably expect our State Government to stand behind this long-pending demand and support its implementation.